Dream Interpretation: ಕನಸಲ್ಲಿ ಮಲ ಕಂಡ್ರೆ ಕೈ ತುಂಬಾ ಹಣ ಬರುತ್ತಾ?

By Suvarna News  |  First Published Dec 29, 2021, 12:25 PM IST

ಎಲ್ಲರೂ ಕನಸು ಕಾಣ್ತಾರೆ. ತಮಗೆ ಕನಸೇ ಬೀಳೋದಿಲ್ಲ ಎನ್ನೋರಿಗೂ ಕನಸು(dream) ಬೀಳುತ್ತಲೇ ಇರುತ್ತೆ. ಅವುಗಳಲ್ಲಿ ನೀವು ನಿರೀಕ್ಷೆಯೇ ಮಾಡದಿರುವಂಥ ಸನ್ನಿವೇಶಗಳು, ಯೋಚಿಸಿಯೇ ಇರದಂಥ ವಸ್ತುಗಳು, ಮನುಷ್ಯರು ಎಲ್ಲರೂ ಬರುತ್ತಿರುತ್ತಾರೆ. ಇವಕ್ಕೆಲ್ಲ ತಜ್ಞರು ಅರ್ಥ ಹೇಳುತ್ತಾರೆ. ಪದೇ ಪದೆ ಕನಸಿನಲ್ಲಿ ಮಲ ಕಾಣಿಸಿಕೊಂಡರೆ ಏನರ್ಥ?


ಸುಸ್ಸೂಗೆ ಅರ್ಜೆಂಟ್ ಅಂಥ ಪಬ್ಲಿಕ್ ಟಾಯ್ಲೆಟ್‌ಗೆ ಓಡ್ತೀರಿ, ಅಲ್ಲಿ ನೋಡಿದ್ರೆ ಕಾಲಿಡೋಕೆ ಆಗದಂತೆ ಮಲ ತುಂಬಿರುತ್ತೆ, ದೊಡ್ಡ ಫಂಕ್ಷನ್‌ಗೆ ಚೆನ್ನಾಗಿ ಸಿಂಗರಿಸಿಕೊಂಡು ಹೋಗ್ತೀರಿ, ಎಲ್ಲರೆದುರು ಮಗು ನಿಮ್ಮ ರೇಶ್ಮೆ ಸೀರೆ ಮೇಲೆ ಕಕ್ಕ ಮಾಡುತ್ತೆ! ದೇವಸ್ಥಾನಕ್ಕೆ ಹೊರಟಿರುತ್ತೀರಿ, ದಾರಿಯಲ್ಲಿ ಮಲವನ್ನು ಮೆಟ್ಟಿ ಬಿಡುತ್ತೀರಿ.. ಇಂಥ ಹಲವು ಕಸಿವಿಸಿಗಳು ಕನಸುಗಳಾಗಿ ಬಹುತೇಕರಿಗೆ ಬೀಳುತ್ತಲೇ ಇರುತ್ತವೆ...

ಕನಸುಗಳೇ ವಿಚಿತ್ರ. ನಿಮಗೆ ಗೊತ್ತಾ,  ಹೇಳಿಕೊಳ್ಳಲೇ ಮುಜುಗರವೆನಿಸುವಂಥ ಇಂಥ ಕನಸುಗಳು ಅತಿ ಸಾಮಾನ್ಯ. ಬಹುತೇಕರಿಗೆ ಬೀಳುವ ಟಾಪ್ 10 ಕನಸುಗಳಲ್ಲಿ ಈ ಮಲ ಕಾಣಿಸುವುದು ಕೂಡಾ ಇದೆ. ಹೀಗೆ ಕನಸಿನಲ್ಲಿ ಮಲ(poop) ಕಂಡರೆ, ಇಂಥ ಕನಸುಗಳು ಪದೇ ಪದೆ ಬಿದ್ದರ ಏನರ್ಥ ಗೊತ್ತಾ?

Zodiacs And Food Habits: ವೃಷಭಕ್ಕೆ ಅಡುಗೆ ಮಾಡೋದಿಷ್ಟ, ಕನ್ಯಾ ರಾಶಿಗೆ ತಿನ್ನೋದಿಷ್ಟ, ನಿಮಗೇನಿಷ್ಟ?

Latest Videos

ಒಂದು ವೇಳೆ ನಿಮ್ಮ ಜೀರ್ಣ ಕ್ರಿಯೆ ಸರಿಯಾಗಿ ಆಗುತ್ತಿಲ್ಲವಾದರೆ, ಅಂಥ ಸಂದರ್ಭದಲ್ಲಿ ಮಲದ ಕುರಿತ ಕನಸು ಬಿದ್ದರೆ ಅದಕ್ಕೆ ಬೇರಾವ ಅರ್ಥವೂ ಇಲ್ಲ. ಹೊಟ್ಟೆ ಸರಿಯಿಲ್ಲ ಎಂದಷ್ಟೇ ಅರ್ಥ. ಆದರೆ, ಮಲದ ಕುರಿತ ಕನಸು ಬಿದ್ದು ಎಚ್ಚರಾಗುತ್ತದೆ. ಆದರೆ ನಿಮಗೆ ಟಾಯ್ಲೆಟ್‌ಗೆ ಹೋಗುವ ಅವಸರವೇನೂ ಇಲ್ಲದಿದ್ದಾಗ ಮಾತ್ರ ಆ ಕನಸಿಗೆ ಆಳವಾದ ಅರ್ಥವಿರಬಹುದು. ಮಲಕ್ಕೆ ಸಂಬಂಧಿಸಿದ ಕನಸುಗಳನ್ನು ಹಲವು ರೀತಿಯಲ್ಲಿ ಅರ್ಥೈಸಲಾಗುತ್ತದೆ. ಹಾಗಾದರೆ ಏನು ಕನಸು ಬಿದ್ದರೆ ಏನರ್ಥ ನೋಡೋಣ.

  • ಮಲದ ಕುರಿತ ಕನಸು ಬಿದ್ದರೆ ನೀವು ಬಹಳ ಒತ್ತಡವನ್ನು ಅನುಭವಿಸುತ್ತಿದ್ದೀರಿ ಎಂದರ್ಥ. ಅದೇ ಗಲೀಜನ್ನು ಮುಟ್ಟುವಂತೆ ಕನಸಿನಲ್ಲಿ ಕಂಡರೆ, ಬದುಕಿನಲ್ಲಿ ಅತಿ ಸವಾಲಾದ ಅನುಭವವೊಂದರಲ್ಲಿ ಕಳೆದು ಹೋಗುವ ಭಯ ನಿಮ್ಮನ್ನು ಕಾಡುತ್ತಿರಬಹುದು. ಅದು ಈ ಕನಸಿನ ರೂಪದಲ್ಲಿ ಹೊರ ಬರುತ್ತಿರಬಹುದು. 
  • ಮತ್ತೊಂದೆಡೆ, ಮಲದ ಕುರಿತ ಕನಸು ನಿಮ್ಮ ತಪ್ಪಿತಸ್ಥ ಭಾವನೆಯ ಸೂಚಕವಾಗಿರಬಹುದು. ಮಲವನ್ನು ತಾಕುವಂತೆ ಕನಸು ಬಿದ್ದರೆ, ನಿಮ್ಮ ಬಗ್ಗೆ ನಿಮ್ಮಲ್ಲೇ ಹುಟ್ಟಿರುವ ಅಸಹ್ಯ, ನೀವು ಕೆಟ್ಟಾ ಕೊಳಕ(dirty person)ರೆಂಬ ಭಾವನೆ ಕಾರಣವಿರಬಹುದು. ನೀವೇ ಮಲ ವಿಸರ್ಜಿಸುತ್ತಿರುವಂತೆ ಕನಸು ಬಿದ್ದರೆ, ಯಾವುದೋ ಅಪರಾಧೀ ಚಟುವಟಿಕೆಯಲ್ಲಿ ಸಿಕ್ಕಿಕೊಂಡು ಹೊರ ಬರಲಾರದೆ ಒದ್ದಾಡುತ್ತಿರುವ ನಿಮ್ಮ ಮನಸ್ಸಿನ ಪ್ರತಿಬಿಂಬ ಅದಾಗಿರಬಹುದು ಎಂದು ಅರ್ಥೈಸಲಾಗುತ್ತದೆ. 
  • ಸಾರ್ವಜನಿಕ ಸ್ಥಳದಲ್ಲಿ ಮಲ ವಿಸರ್ಜನೆ(Pooping in public) ಎಂದರೆ ಎಂಥವರಿಗೂ ಅವಮಾನಕಾರಿ ಹಾಗೂ ಅಸಹ್ಯ. ಆದರೆ, ಕನಸಿನಲ್ಲಿ ಅದೇ ಬಿದ್ದರೆ ಏನು ತಾನೇ ಮಾಡಲಾದೀತು? ಇದರರ್ಥ ನೀವು ನಕಾರಾತ್ಮಕ ಯೋಚನೆ ಬಿಟ್ಟು ಹೊಸ ಅವಕಾಶಗಳಿಗೆ ತೆರೆದುಕೊಳ್ಳಲು ಸಿದ್ಧರಾಗಿದ್ದೀರಿ ಎಂದು. 
  • ಇದಂತೂ ಬಹಳ ಕಾಮನ್. ಮಲ ವಿಸರ್ಜನೆಗಾಗಿ ಸಾರ್ವಜನಿಕ ಶೌಚಾಲಯ(public toilet) ಬಳಸುತ್ತಿರುತ್ತೀರಿ. ಆಗ ಅಪರಿಚಿತರೆಲ್ಲ ನಿಮ್ಮನ್ನೇ ನೋಡುತ್ತಿರುತ್ತಾರೆ, ಇದ್ದಕ್ಕಿದ್ದಂತೆ ಅಲ್ಲಿ ಬಾಗಿಲೇ ಇಲ್ಲ ಎಂಬುದು ತಿಳಿದು ಆತಂಕವಾಗುತ್ತದೆ. ಇಂಥ ಕನಸು ಬೀಲುತ್ತಿದೆ ಎಂದರೆ ನೀವು ಪದೇ ಪದೆ ನಿಮ್ಮನ್ನು ಇತರರೊಂದಿಗೆ ಹೋಲಿಸಿಕೊಳ್ಳುತ್ತಿದ್ದೀರಿ ಎಂದರ್ಥ. 
  • ಸಾರ್ವಜನಿಕ ಶೌಚಾಲಯಕ್ಕೆ ಹೋದಾಗ ಅಲ್ಲಿ ಮಲವೇ ತುಂಬಿ ಹೋಗಿ ಅಸಹ್ಯ ಹುಟ್ಟಿಸುವಂತೆ ಕನಸು ಬಿದ್ದರೆ, ಅದರರ್ಥ ಮನಸ್ಸಿನಲ್ಲಿ ನಕಾರಾತ್ಮಕ ಯೋಚನೆಗಳು ಹೆಚ್ಚಿವೆ, ಅವನ್ನು ಕೂಡಲೇ ಹೊರ ಹಾಕಬೇಕು ಎಂದು. 
  • ಕೆಲವೊಮ್ಮೆ ಕನಸಿನಲ್ಲಿ ಶೌಚಾಲಯಕ್ಕೆ ಹೋಗಿರುತ್ತೀರಿ. ಆದರೆ ಮಲಬದ್ಧತೆಯ ಕಾಟದಿಂದ ಒದ್ದಾಡುತ್ತೀರಿ. ಹೀಗೆ ಕನಸು ಬಿದ್ದರೆ ಅದರರ್ಥ ನಿಮ್ಮ ಸೃಜನಶೀಲತೆಗೆ ಹಲವು ತಡೆಗಳು ಎದುರಾಗಿವೆ ಅಥವಾ ಅವನ್ನು ನೀವು ಬಳಸುತ್ತಿಲ್ಲ ಎಂದು. ಇಲ್ಲವೇ ದೇಹಕ್ಕೆ ನಾರಿನಂಶ(fiber) ಕೊರತೆಯಾಗಿದೆ ಎಂದೂ ದೇಹ ಕನಸುಗಳ ಮೂಲಕ ಹೇಳುತ್ತಿರಬಹುದು. ಮತ್ತೊಂದು ಅರ್ಥವೆಂದರೆ, ನೀವು ನಿಮ್ಮ ಭಾವನೆ(emotions)ಗಳನ್ನು ಹೇಳಿಕೊಳ್ಳದೆ ಒದ್ದಾಡುತ್ತಿದ್ದೀರಿ. ಕೂಡಲೇ ಅವನ್ನು ಒಂದಲ್ಲ ಒಂದು ರೀತಿಯಲ್ಲಿ ಹೊರ ಹಾಕಬೇಕೆಂದು. 

    Zodiacs and nature: ಈ ರಾಶಿಯವರು ಸಿಂಗಲ್ ಆಗಿರೋದೇ ಒಳ್ಳೇದು. ಯಾಕೆ ಗೊತ್ತಾ?

ಇದೆಲ್ಲ ಸೈಕಾಲಜಿಯಾಯಿತು, ಧಾರ್ಮಿಕ ರೀತಿಯಲ್ಲಿ ಅರ್ಥ ಹುಡುಕಿದರೆ, ಕನಸಿನಲ್ಲಿ ಮಲ ಕಾಣಿಸಿಕೊಂಡರೆ ಸಧ್ಯದಲ್ಲೇ ಹಣಕ್ಕೆ ಸಂಬಂಧಿಸಿದಂತೆ ಸಿಹಿ ಸುದ್ದಿಯೊಂದು ಕಿವಿಗೆ ಬೀಳಲಿದೆ ಎಂಬ ಸೂಚನೆ ಎಂದೂ ಭಾವಿಸಲಾಗುತ್ತದೆ. 

ಅಂದರೆ, ನಿಮ್ಮ ಮನಸ್ಥಿತಿ ಬಗ್ಗೆ ನಿಮಗೇ ಸರಿಯಾಗಿ ತಿಳಿಯಲು ಮಲದ ಕನಸಿನ ಅರ್ಥ ಹುಡುಕುವುದು ಮುಖ್ಯ. 

click me!