ಕೆಲವೊಮ್ಮೆ ಕಾರಣವಿಲ್ಲದೆ ದಂಪತಿ ಮಧ್ಯೆ ಕಿತ್ತಾಟ ಶುರುವಾಗಿರುತ್ತೆ. ಎಷ್ಟು ಗಳಿಸಿದ್ರೂ ಕೈ ನಲ್ಲಿ ಹಣ ನಿಲ್ಲುವುದಿಲ್ಲ. ಎಲ್ಲವೂ ಇದ್ದರೂ ಏನೂ ಕಳೆದುಕೊಂಡ ನೋವು,ಒತ್ತಡ ಮನೆ ಮಾಡಿರುತ್ತದೆ. ಇದಕ್ಕೆ ವೈದ್ಯರ ಬಳಿ ಮದ್ದಿಲ್ಲ. ಮನೆಯ ಬೆಡ್ ರೂಮ್ ಸಮಸ್ಯೆಗೆ ಪರಿಹಾರವಾಗಬಲ್ಲದು.
ಪತಿ-ಪತ್ನಿ ನಡುವೆ ಪ್ರೀತಿಯನ್ನು ಕಾಪಾಡಿಕೊಳ್ಳಲು ವಾಸ್ತು ಶಾಸ್ತ್ರದಲ್ಲಿ ಹಲವು ನಿಯಮಗಳನ್ನು ಹೇಳಲಾಗಿದೆ. ಅದರಲ್ಲೂ ದಂಪತಿ ಬೆಡ್ ರೂಮ್ ವಿಶೇಷ ಮಹತ್ವ ಪಡೆಯುತ್ತದೆ. ಸಾಮಾನ್ಯವಾಗಿ ಮಲಗುವ ಕೋಣೆ ಪ್ರತಿಯೊಬ್ಬ ಮನುಷ್ಯನಿಗೆ ವಿಶೇಷ ಸ್ಥಳವಾಗಿದೆ. ಸುದೀರ್ಘ ದಿನದ ಆಯಾಸದ ನಂತರ, ವಿಶ್ರಾಂತಿ ಈ ಕೋಣೆಯಲ್ಲಿ ಸಿಗುತ್ತದೆ. ಬೆಡ್ ರೂಮ್ ಗೆ ಬರ್ತಿದ್ದಂತೆ ಮನಸ್ಸು ರಿಲ್ಯಾಕ್ಸ್ ಆಗಿ,ಸುಖ ನಿದ್ರೆ ಬರಬೇಕು. ಒತ್ತಡವನ್ನು ಮತ್ತಷ್ಟು ಹೆಚ್ಚಿಸುವಂತಿರಬಾರದು. ದಂಪತಿಗೆ ಬೆಡ್ ರೂಮ್ ಕೇವಲ ವಿಶ್ರಾಂತಿ ನೀಡುವ ಜಾಗವಾಗಿರುವುದಿಲ್ಲ. ತಮ್ಮ ಸಂಗಾತಿಯೊಂದಿಗೆ ತಮ್ಮ ಸಂತೋಷದ ಕ್ಷಣಗಳನ್ನು ಕಳೆಯುವ ಸ್ಥಳವಾಗಿರುತ್ತದೆ. ಆದರೆ ಹಲವು ಬಾರಿ ಗೊತ್ತಿದ್ದೋ ಗೊತ್ತಿಲ್ಲದೆಯೋ ಕೆಲವು ವಸ್ತುಗಳನ್ನು ತಮ್ಮ ಬೆಡ್ ರೂಮ್ ನಲ್ಲಿ ಇಟ್ಟುಕೊಳ್ಳುತ್ತಾರೆ. ಅದು ಅವರ ದಾಂಪತ್ಯ ಜೀವನದಲ್ಲಿ ತೊಂದರೆಗೆ ಕಾರಣವಾಗುತ್ತದೆ. ಈ ವಸ್ತುಗಳಿಂದ ವಾಸ್ತು ದೋಷಗಳು ಉಂಟಾಗುತ್ತವೆ. ಜೀವನದಲ್ಲಿ ಅನೇಕ ಸಮಸ್ಯೆಗಳನ್ನು ತರುತ್ತವೆ. ಪತಿ ಪತ್ನಿಯರ ಸಂಬಂಧದಲ್ಲಿ ಬಿರುಕು ಮೂಡಿಸುತ್ತದೆ. ಇದಲ್ಲದೆ, ಈ ವಸ್ತುಗಳು ಹಣಕಾಸಿನ ಸಮಸ್ಯೆಗೆ ಕಾರಣವಾಗುತ್ತವೆ. ವಾಸ್ತು ಶಾಸ್ತ್ರದ ಪ್ರಕಾರ ಮಲಗುವ ಕೋಣೆಯಲ್ಲಿ ಯಾವ ವಸ್ತುಗಳನ್ನು ಇಡಬಾರದು ಎಂಬುದನ್ನು ನೋಡೋಣ.
ಕಸದ ಬುಟ್ಟಿ : ವಾಸ್ತು ಪ್ರಕಾರ, ಮಲಗುವ ಕೋಣೆಯಲ್ಲಿ ಕಸದ ಬುಟ್ಟಿಯನ್ನು ಇಡಬಾರದು. ಅನೇಕರು ಮಲಗುವ ಕೋಣೆಯಲ್ಲಿ ಡಸ್ಟ್ ಬಿನ್ ಹಾಗೂ ಪೊರಕೆಯನ್ನು ಇಡುತ್ತಾರೆ. ಇದು ವಾಸ್ತುದೋಷಕ್ಕೆ ಕಾರಣವಾಗುತ್ತದೆ. ಈ ವಸ್ತುಗಳನ್ನು ಮಲಗುವ ಕೋಣೆಯಲ್ಲಿ ಇಡುವುದರಿಂದ ಕೋಣೆಯಲ್ಲಿ ನಕಾರಾತ್ಮಕ ಶಕ್ತಿ ಹರಡುತ್ತದೆ.ಮನೆಯಲ್ಲಿ ಆರ್ಥಿಕ ತೊಂದರೆ ಎದುರಾಗುತ್ತದೆ. ಇದು ಮಾನಸಿಕ ಒತ್ತಡವನ್ನು ಹೆಚ್ಚಿಸುತ್ತದೆ. ಹಾಗಾಗಿ ಸಾಧ್ಯವಾದಷ್ಟು ಮಲಗುವ ಕೋಣೆಯಿಂದ ಡಸ್ಟ್ ಬಿನ್ ಮತ್ತು ಪೊರಕೆಯನ್ನು ಇಡಬೇಡಿ.
undefined
Name Astrology : ಈ 5 ಅಕ್ಷರದ ಹುಡುಗಿಯರು ಶೀಘ್ರದಲ್ಲೇ ಹುಡುಗರ ಹೃದಯ ಗೆಲ್ಲುತ್ತಾರೆ !
ಮುಳ್ಳಿನ ಗಿಡಗಳು : ಬೆಡ್ ರೂಮ್ ಸೌಂದರ್ಯ ಹೆಚ್ಚಿಸಲು ಗಿಡಗಳನ್ನು ಇಡುವವರಿದ್ದಾರೆ. ಹಸಿರು ಗಿಡಗಳು ಮನಸ್ಸಿಗೆ ಮುದ ನೀಡುತ್ತವೆ ಎಂಬ ಕಾರಣಕ್ಕೆ ಬೆಡ್ ರೂಮಿನಲ್ಲಿ ಗಿಡ ಬೆಳೆಸುತ್ತಾರೆ. ವಾಸ್ತು ಶಾಸ್ತ್ರದ ಪ್ರಕಾರ ಮಲಗುವ ಕೋಣೆಯಲ್ಲಿ ಮರೆತ ಮುಳ್ಳು ಅಥವಾ ಚೂಪಾದ ಎಲೆಗಳಿರುವ ಗಿಡಗಳನ್ನು ಇಡಬಾರದು. ಮುಳ್ಳಿನ ಗಿಡವನ್ನು ಕೋಣೆಯಲ್ಲಿಟ್ಟರೆ ನಕಾರಾತ್ಮಕ ಶಕ್ತಿ ಹೆಚ್ಚುತ್ತದೆ. ಮುಳ್ಳಿನ ಗಿಡಗಳನ್ನು ಬೆಡ್ ರೂಮಿನಲ್ಲಿ ಇಡುವುದ್ರಿಂದ ಆರ್ಥಿಕ ನಷ್ಟ ಅನುಭವಿಸಬೇಕಾಗುತ್ತದೆ.
ಹಾಳಾದ ಎಲೆಕ್ಟ್ರಾನಿಕ್ ವಸ್ತುಗಳು : ವಾಸ್ತು ಪ್ರಕಾರ, ಯಾವುದೇ ರೀತಿಯ ಹಾಳಾದ ಎಲೆಕ್ಟ್ರಾನಿಕ್ ವಸ್ತುಗಳನ್ನು ಮಲಗುವ ಕೋಣೆಯಲ್ಲಿ ಇಡಬಾರದು. ಮಲಗುವ ಕೋಣೆಯಲ್ಲಿ ಅಂತಹ ವಸ್ತುಗಳು ಇದ್ದರೆ, ತಕ್ಷಣ ಅವುಗಳನ್ನು ತೆಗೆದುಹಾಕಿ. ಏಕೆಂದರೆ ಶುಕ್ರ ಮತ್ತು ರಾಹು ಅಪಾಯಕಾರಿ ದೋಷಗಳನ್ನು ಸೃಷ್ಟಿಸುತ್ತಾರೆ. ಇದರಿಂದ ಮಾನಸಿಕ ಒತ್ತಡ ಹೆಚ್ಚುತ್ತದೆ. ಇದರೊಂದಿಗೆ ನಿದ್ರಾಹೀನತೆಯ ಸಮಸ್ಯೆಯೂ ಕಾಣಿಸಿಕೊಳ್ಳುತ್ತದೆ.
ಕಪ್ಪು ಬಣ್ಣದ ಬೆಡ್ ಶೀಟ್ : ಬಣ್ಣ ಬಣ್ಣದ ಬೆಡ್ ಶೀಟ್ ಎಲ್ಲರ ಗಮನ ಸೆಳೆಯುತ್ತದೆ. ತಮಗಿಷ್ಟವಾದ ಬಣ್ಣದ ಬೆಡ್ ಶೀಟ್, ಚಾದರವನ್ನು ಜನರು ಬಳಸುತ್ತಾರೆ. ಆದ್ರೆ ವಾಸ್ತು ಶಾಸ್ತ್ರದ ಪ್ರಕಾರ, ಮಲಗುವ ಕೋಣೆ ಶುಕ್ರ ಗ್ರಹದ ಸ್ಥಳವಾಗಿದೆ. ಶುಕ್ರ ಕಪ್ಪು ಬಣ್ಣವನ್ನು ದ್ವೇಷಿಸುತ್ತಾನೆ. ಅಂತಹ ಪರಿಸ್ಥಿತಿಯಲ್ಲಿ, ಮಲಗುವ ಕೋಣೆಯಲ್ಲಿ ತಪ್ಪಾಗಿಯೂ ಕಪ್ಪು ಬೆಡ್ ಶೀಟ್ ಬಳಸಬಾರದು. ಶುಕ್ರನ ಪ್ರಭಾವದಿಂದ ಜೀವನದುದ್ದಕ್ಕೂ ಹಣದ ಸಮಸ್ಯೆ ಎದುರಿಸಬೇಕಾಗುತ್ತದೆ.
ಅತ್ತೆ-ಸೊಸೆ ಜಗಳ ಹೆಚ್ಚಾಗಿದ್ರೆ ಈ Vaastu Tips ಪಾಲಿಸಿ ನೋಡಿ..
ತಾಜ್ ಮಹಲ್ ಫೋಟೋ : ತಾಜ್ ಮಹಲ್ ಪ್ರೀತಿಯ ಸಂಕೇತ. ಪ್ರೀತಿ ಪಾತ್ರರಿಗೆ ತಾಜ್ ಮಹಲ್ ಫೋಟೋವನ್ನು ಉಡುಗೊರೆ ಕೊಡುತ್ತೇವೆ. ವಾಸ್ತು ಶಾಸ್ತ್ರದ ಪ್ರಕಾರ, ಮಲಗುವ ಕೋಣೆಯಲ್ಲಿ ತಾಜ್ ಮಹಲ್ ಫೋಟೋವನ್ನು ಹಾಕಬಾರದು. ತಾಜ್ ಮಹಲ್ ಫೋಟೋ ಅಥವಾ ಶೋಪೀಸ್ ಸಂಬಂಧ ಹಾಳು ಮಾಡುತ್ತದೆ.