Swapna Shastra : ಕನಸಿನಲ್ಲಿ ಹನುಮಂತ ಬಂದ್ರೆ ಶುಭವಾ?

By Suvarna NewsFirst Published Feb 28, 2023, 4:02 PM IST
Highlights

ರಾತ್ರಿ ಬೀಳುವ ಕನಸುಗಳು ಅದ್ರಲ್ಲೂ ಬೆಳಗಿನ ಜಾವ ಬೀಳುವ ಸ್ವಪ್ನ ಸತ್ಯವಾಗುತ್ತೆ ಎಂಬ ನಂಬಿಕೆಯಿದೆ. ಬೆಳಗಿನ ಜಾವ ಬಿದ್ದ ಕನಸನ್ನು ಕೆಲವರು ಗಂಭೀರವಾಗಿ ಪರಿಗಣಿಸ್ತಾರೆ. ನಿಮ್ಮ ಕನಸಿನಲ್ಲಿ ಹನುಮಂತ ವಿವಿಧ ರೂಪದಲ್ಲಿ ಕಾಣಿಸಿಕೊಂಡ್ರೆ ಏನು ಅರ್ಥ ಅನ್ನೋದನ್ನು ನಾವಿಂದು ಹೇಳ್ತೇವೆ.
 

ಕನಸನ್ನು ನಿಯಂತ್ರಿಸಲು ಯಾರಿಂದಲೂ ಸಾಧ್ಯವಿಲ್ಲ. ನಾವು ರಾತ್ರಿ ಅನೇಕ ರೀತಿಯ ಕನಸನ್ನು ಕಾಣ್ತೇವೆ. ನಾವು ಊಹಿಸಿಕೊಳ್ಳದ ಸ್ಥಳ, ವ್ಯಕ್ತಿಗಳು ನಮ್ಮ ಕನಸಿನಲ್ಲಿ ಬಂದು ಹೋಗ್ತಾರೆ. ಎಲ್ಲ ಕನಸುಗಳು ಮಧುರವಾಗಿರುವುದಿಲ್ಲ. ಕೆಲ ಕನಸುಗಳು ಭಯಾನಕವಾಗಿರುತ್ತವೆ. ಬೆಳಿಗ್ಗೆ ಎದ್ದ ನಂತ್ರವೂ ಕೆಲ ಸ್ವಪ್ನ ನಮ್ಮನ್ನು ಕಾಡಿದ್ರೆ ಮತ್ತೆ ಕೆಲವು ಮರೆತು ಹೋಗಿರುತ್ತದೆ. ನನಗ್ಯಾಕೆ ಈ ಕನಸು ಬಿತ್ತು ಎಂದು ನಾವು ಚಿಂತಿಸೋದಿದೆ. 

ಸ್ವಪ್ನ (Dream) ಶಾಸ್ತ್ರದ ಪ್ರಕಾರ, ನಮ್ಮ ಕನಸು ಸಖಾಸುಮ್ಮನೆ ಬರೋದಿಲ್ಲ. ಪ್ರತಿಯೊಂದು ಕನಸಿಗೂ ಒಂದೊಂದು ಅರ್ಥವಿದೆ. ಪ್ರತಿ ಕನಸು ನಮ್ಮ ಮುಂದಿನ ಭವಿಷ್ಯ (Future) ದೊಂದಿಗೆ ಸಂಬಂಧಗಳನ್ನು ಹೊಂದಿದೆ. ಕೆಲ ಕನಸು ಶುಭ ಮತ್ತು ಕೆಲವು ಅಶುಭ ಫಲವನ್ನು ನೀಡುತ್ತವೆ. ನಮ್ಮ ಕನಸಿನಲ್ಲಿ ಬರೀ ವ್ಯಕ್ತಿಗಳು, ವಸ್ತುಗಳ, ಸ್ಥಳಗಳು ಮಾತ್ರವಲ್ಲ ದೇವರು (God), ದೇವಸ್ಥಾನ (Temple) ಗಳು ಕಾಣಿಸಿಕೊಳ್ತವೆ. ಹನುಮಂತನನ್ನು ಚಿರಂಜೀವಿ ಎಂದು ನಂಬಲಾಗಿದೆ. ಮಂಗಳವಾರ ಹನುಮಂತ (Hanuman) ನಿಗೆ ಮೀಸಲು. ಈ ಹನುಮಂತ ಕೂಡ ನಮ್ಮ ಸ್ವಪ್ನದಲ್ಲಿ ಬರೋದಿದೆ. ಬೆಳಿಗ್ಗೆ ಹನುಮಂತ ನಮ್ಮ ಕನಸಿನಲ್ಲಿ ಬಂದ್ರೆ ಅದನ್ನು ಮಂಗಳಕರವೆಂದು ನಂಬಲಾಗಿದೆ. ನಾವಿಂದು ನಮ್ಮ ಕನಸಿನಲ್ಲಿ ರಾಮ (Rama) ನ ಭಂಟ ಹನುಮಂತನ ದರ್ಶನವಾದ್ರೆ ಏನೆಲ್ಲ ಅರ್ಥ ಎಂಬುದನ್ನು ನಿಮಗೆ ತಿಳಿಸ್ತೇವೆ.

Latest Videos

ಮಹಿಳೆಯರೇ ಸೇರಿ ಆಚರಿಸುವ ATTUKAL PONGALA 2023.. ಏನೀ ಆಚರಣೆಯ ಹಿನ್ನೆಲೆ?

ಕನಸಿನಲ್ಲಿ ಹನುಮ ಬಂದ್ರೆ ಮಂಗಳವೇ? :
ಹನುಮಂತನ ಪ್ರತಿಮೆ (Statue)  : ಕನಸಿನಲ್ಲಿ ಹನುಮಂತನ ಪ್ರತಿಮೆಯನ್ನು ನೀವು ನೋಡಿದ್ರೆ ಇದು ತುಂಬಾ ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಶೀಘ್ರದಲ್ಲೇ ನಿಮಗೆ ಯಶಸ್ಸು ಸಿಗುತ್ತದೆ ಎಂಬುದನ್ನು ಇದು ಸೂಚಿಸುತ್ತದೆ. ಕಾನೂನು ವಿಷಯಗಳಲ್ಲಿ ನೀವು ಕೋರ್ಟ್ ಗೆ ಅಲೆಯುತ್ತಿದ್ದರೆ ಅದ್ರಲ್ಲಿ ನಿಮಗೆ ಶೀಘ್ರವೇ ಗೆಲುವು ಸಿಗುತ್ತದೆ ಎಂಬುದನ್ನು ಇದು ಸೂಚಿಸುತ್ತದೆ. ಇಂಥ ಕನಸು ಬಿದ್ರೆ ಇದು ಅದೃಷ್ಟವೆಂದು ನಂಬಲಾಗುತ್ತದೆ. 

ಕನಸಿನಲ್ಲಿ ಪಂಚಮುಖಿ ಹನುಮಂತನ ದರ್ಶನ : ನಿಮ್ಮ ಕನಸಿನಲ್ಲಿ ಪಂಚಮುಖಿ ಹನುಮಂತನ ದರ್ಶನವಾದ್ರೆ ಇದು ಶುಭ ಸಂಕೇತ. ಶೀಘ್ರದಲ್ಲೇ ನಿಮ್ಮ ಎಲ್ಲಾ ಆಸೆಗಳು ಈಡೇರುತ್ತವೆ ಎಂದು ಭಾವಿಸಬಹುದು. ನಿಮ್ಮ ಶತ್ರುಗಳ ನಾಶವಾಗಲಿದ್ದು, ಹನುಮಂತನ ಜೊತೆಗೆ ನಿಮಗೆ ಭಗವಂತ ವಿಷ್ಣುವಿನ ವಿಶೇಷ ಆಶೀರ್ವಾದ ಸಿಗುತ್ತದೆ ಎಂಬುದನ್ನು ಇದು ಸೂಚಿಸುತ್ತದೆ. 

ಉಗ್ರ ರೂಪದ ಹನುಮಂತ : ನಿಮ್ಮ ಕನಸಿನಲ್ಲಿ ಉಗ್ರ ರೂಪದಲ್ಲಿರುವ ಹನುಮಂತ ನಿಮ್ಮ ಕಣ್ಣಿಗೆ ಕಂಡ್ರೆ ನೀವು ಯಾವುದೋ ತಪ್ಪು ಮಾಡಿದ್ದೀರಿ ಎಂದೇ ಅರ್ಥ. ಇಂಥ ಕನಸು ಬಿದ್ರೆ ನೀವು ತಕ್ಷಣ ಹನುಮಂತನ ಕ್ಷಮೆಯಾಚಿಸುವ ಜೊತೆಗೆ ತಪ್ಪನ್ನು ತಿದ್ದಿಕೊಳ್ಳಿ. 

ಬಾಲ ಹನುಮಂತ : ನಿಮ್ಮ ಸ್ವಪ್ನದಲ್ಲಿ ಬಾಲ ಹನುಮಂತನ ದರ್ಶನವಾದ್ರೆ ಶೀಘ್ರದಲ್ಲೇ ನೀವು ಕೆಲಸದ ಕ್ಷೇತ್ರದಲ್ಲಿ ಹೊಸ ಸ್ಥಾನ ಲಭಿಸಲಿದೆ ಎಂಬ ಸೂಚನೆ. ಇಲ್ಲವೆ ನಿಮ್ಮ ಹೊಸ ಯೋಜನೆ ಯಶಸ್ವಿಯಾಗಲಿದೆ ಎಂಬ ಸಂಕೇತ. ನೀವು ಕೆಲಸದಲ್ಲಿ ಜಯ ಸಾಧಿಸುತ್ತೀರಿ ಎಂಬುದನ್ನು ಇದು ಸೂಚಿಸುತ್ತದೆ. 

ಹನುಮಂತನ ಪೂಜೆ : ಸ್ವಪ್ನದಲ್ಲಿ ನೀವು ಹನುಮಂತನ ಪೂಜೆ ಮಾಡಿ, ಪ್ರಸಾದ ಸ್ವೀಕರಿಸಿದಂತೆ ಕಂಡ್ರೆ ಖುಷಿಯಾಗಿ. ಯಾಕೆಂದ್ರೆ ಆದಷ್ಟು ಬೇಗ ನಿಮ್ಮ ಎಲ್ಲಾ ಕಾರ್ಯಗಳು ಪೂರ್ಣಗೊಳ್ಳುತ್ತವೆ. ಆಧ್ಯಾತ್ಮಿಕ ಜಗತ್ತಿನಲ್ಲೂ ನಿಮಗೆ ಏಳ್ಗೆಯಾಗುತ್ತದೆ ಎಂಬುದನ್ನು ಇದು ಸೂಚಿಸುತ್ತದೆ.

Holi 2023: ಈ ಹೋಳಿ ಹಬ್ಬದಲ್ಲಿ ನಿಮ್ಮ ರಾಶಿಗೆ ತಕ್ಕ ಬಣ್ಣ ಬಳಸಿ, ಅದೃಷ್ಟ ಹೆಚ್ಚಿಸಿ..

ಕೋತಿ ಕಾಣಿಸಿಕೊಂಡ್ರೆ ಏನು ಅರ್ಥ? : ಕೋತಿಯನ್ನು ಹನುಮಂತನ ರೂಪವೆಂದು ನಂಬಲಾಗುತ್ತದೆ. ನಿಮ್ಮ ಕನಸಿನಲ್ಲಿ ಎರಡು ಕೋತಿಗಳನ್ನು ಕಂಡರೆ, ಹನುಮಂತನ ನಿಮಗೆ ಆಶೀರ್ವಾದ ಮಾಡಿದ್ದಾನೆ ಎಂದು ಅರ್ಥಮಾಡಿಕೊಳ್ಳಿ. ಆತನ ಕೃಪೆಯಿಂದ ನಿಮ್ಮ ಎಲ್ಲಾ ಕೆಲಸಗಳು ನೆರವೇರುತ್ತವೆ.
 

click me!