ಲಕ್ಷ್ಮಿ ಒಲಿದ್ರೆ ಸಂಪತ್ತು, ಮುನಿದ್ರೆ ಆಪತ್ತು. ಲಕ್ಷ್ಮಿ ಒಲಿಸಿಕೊಳ್ಳಲು ನಾನಾ ಕಸರತ್ತು ಮಾಡ್ಲೇಬೇಕು. ದೀಪಾವಳಿ ಇದಕ್ಕೆ ಸೂಕ್ತ ಸಮಯ. ಕೆಲ ಉಪಾಯದ ಮೂಲಕ ಲಕ್ಷ್ಮಿ ಮನೆಗೆ ಬರುವಂತೆ ನೀವು ಮಾಡಬಹುದು.
ದೀಪಾವಳಿಯ ಅಮವಾಸ್ಯೆಯಂದು ಸಂಪತ್ತಿನ ದೇವತೆ ಲಕ್ಷ್ಮಿ ಪೂಜೆ ನಡೆಯುತ್ತದೆ. ಈ ಬಾರಿ ಅಮವಾಸ್ಯೆ ದಿನ ಸೂರ್ಯ ಗ್ರಹಣ ಬಂದಿರುವ ಕಾರಣ ಸೋಮವಾರ ಅಂದ್ರೆ ಅಕ್ಟೋಬರ್ 24ರ ಸಂಜೆ ಲಕ್ಷ್ಮಿ ಪೂಜೆ ಮಾಡಲಾಗ್ತಿದೆ. ಲಕ್ಷ್ಮಿ ಅಂದ್ರೆ ಸಂಪತ್ತು. ಆಕೆ ವಿಷ್ಣುವಿನ ಪತ್ನಿ. ಸಮುದ್ರ ಮಂಥನದ ವೇಳೆ ಹುಟ್ಟಿದ ದೇವತೆ. ಆಕೆಯ ಕೃಪೆ ಇಲ್ಲವೆಂದ್ರೆ ಮನೆ ಬರಿದು. ಹೊತ್ತಿನ ಊಟಕ್ಕೆ ಪರದಾಡುವ ಸ್ಥಿತಿ ನಿರ್ಮಾಣವಾಗುತ್ತದೆ. ಹಾಗಾಗಿಯೇ ಪ್ರತಿಯೊಬ್ಬರೂ ಲಕ್ಷ್ಮಿ ಆಶೀರ್ವಾದಪಡೆಯಲು ಪ್ರಯತ್ನ ನಡೆಸುತ್ತಾರೆ. ಲಕ್ಷ್ಮಿ ಪೂಜೆಯನ್ನು ಭಯ –ಭಕ್ತಿಯಿಂದ ಮಾಡುತ್ತಾರೆ. ಪ್ರತಿ ವರ್ಷ, ಎಲ್ಲರ ಮನೆಗಳಲ್ಲಿ, ಕಚೇರಿಯಲ್ಲಿ ಹಾಗೆ ಅಂಗಡಿಗಳಲ್ಲಿ ಲಕ್ಷ್ಮಿ ಪೂಜೆ ನಡೆಯುತ್ತದೆ. ಮುಂದಿನ ವರ್ಷ ಸಂಪತ್ತು ದುಪ್ಪಟ್ಟಾಗ್ಲಿ ಎಂದು ಜನರು ದೇವಿಯನ್ನು ಪ್ರಾರ್ಥನೆ ಮಾಡ್ತಾರೆ. ಲಕ್ಷ್ಮಿ ಪೂಜೆಗೆ ಅದರದೇ ಆದ ವಿಧಿ ವಿಧಾನಗಳಿವೆ. ಹಾಗೆಯೇ ಆಕೆಗೆ ಇಷ್ಟವಾದ ಕೆಲ ವಸ್ತುಗಳನ್ನು ಪೂಜೆ ಮಾಡಲಾಗುತ್ತದೆ. ಅನಾದಿಕಾಲದಿಂದಲೂ ಲಕ್ಷ್ಮಿ ಪೂಜೆ ವೇಳೆ ಕೆಲ ವಸ್ತುಗಳನ್ನು ಬಳಸಲಾಗ್ತಿದೆ. ಹಾಗೆಯೇ ಕೆಲವು ಕೆಲಸಗಳನ್ನು ಅವಶ್ಯಕವಾಗಿ ಮಾಡಲಾಗುತ್ತದೆ. ಹಾಗೆ ಮಾಡಿದ್ರೆ ಮಾತ್ರ ಲಕ್ಷ್ಮಿ ಕೃಪೆ ತೋರುತ್ತಾಳೆ ಎಂಬ ನಂಬಿಕೆಯಿದೆ.
ಲಕ್ಷ್ಮಿ (Lakshmi) ಪೂಜೆಯ ಸಂಜೆ ಉಂಡೆ, ಮೊಸರು ಮತ್ತು ಸಿಂಧೂರವನ್ನು ಅಶ್ವತ್ಥ ಮರದ ಬೇರಿನ ಬಳಿ ಇರಿಸಿ, ಅಲ್ಲಿ ಒಂದು ದೀಪವನ್ನು ಬೆಳಗಬೇಕು. ಇದ್ರಿಂದ ಆದಾಯದಲ್ಲಿ ಹೆಚ್ಚಳವಾಗುತ್ತದೆ.
ದೀಪಾವಳಿ (Diwali) ಪೂಜೆಯ ನಂತರ ಶಂಖ ನಾದ ಮೊಳಗಬೇಕು. ಹೀಗೆ ಮಾಡುವುದರಿಂದ ಮನೆಯ ಬಡತನ ದೂರವಾಗುತ್ತದೆ. ಮನೆಯಲ್ಲಿ ಸದಾ ಲಕ್ಷ್ಮಿ ನೆಲೆಸ್ತಾಳೆ.
ದೀಪಾವಳಿಯ ರಾತ್ರಿ ತಿಜೋರಿಗೆ ಗೂಬೆ (Owl) ಯ ಚಿತ್ರವನ್ನು ಅಂಟಿಸಬೇಕು. ಗೂಬೆ ಚಿತ್ರ ತ್ರಿಜೋರಿ ಮೇಲಿದ್ದರೆ ಲಕ್ಷ್ಮಿ ಅಲ್ಲಿಯೇ ವಾಸ ಮಾಡ್ತಾಳೆ ಎಂಬ ನಂಬಿಕೆಯಿದೆ.
ಲಕ್ಷ್ಮಿ ದೇವಿಯ ಪೂಜೆ ವೇಳೆ ತಟ್ಟೆಯಲ್ಲಿ ಗೋಮತಿ ಚಕ್ರವನ್ನು ಇರಿಸಬೇಕು. ಲಕ್ಷ್ಮಿ ಪೂಜೆ ನಂತ್ರ ಗೋಮತಿ ಚಕ್ರದ ಪೂಜೆ ಮಾಡಬೇಕು. ನಂತ್ರ ಗೋಮತಿ ಚಕ್ರವನ್ನು ಕಪಾಟಿನಲ್ಲಿ ಇಡಬೇಕು. ಇದ್ರಿಂದ ಸಂಪತ್ತು ವೃದ್ಧಿಯಾಗುತ್ತದೆ.
ದೀಪಾವಳಿ ಪೂಜೆ ಮಾಡುವ ವೇಳೆ ನೀವು ಲಕ್ಷ್ಮಿ, ಗಣೇಶ ಯಂತ್ರವನ್ನು ಕೂಡ ಪೂಜೆ ಮಾಡಬಹುದು. ಹಾಗೆಯೇ ಶ್ರೀ ಯಂತ್ರ ಮತ್ತು ಕುಬೇರ ಯಂತ್ರಕ್ಕೆ ಕೂಡ ಪೂಜೆ ಮಾಡಬೇಕು. ಇದ್ರಿಂದ ಮನೆಯಲ್ಲಿ ಎಂದೂ ಹಣದ ಸಮಸ್ಯೆ ಎದುರಾಗುವುದಿಲ್ಲ.
ದೀಪಾವಳಿ ಲಕ್ಷ್ಮಿ ಪೂಜೆ ವೇಳೆ 11 ಹಳದಿ ಕವಡೆಯನ್ನು ನೀವು ದೇವಿಗೆ ಅರ್ಪಿಸಬೇಕು. ಪೂಜೆ ನಂತ್ರ ಈ ಕವಡೆಯನ್ನು ನೀವು ಕೆಂಪು ಬಟ್ಟೆಯಲ್ಲಿ ಕಟ್ಟಿ ಕಪಾಟಿನಲ್ಲಿ ಸುರಕ್ಷಿತವಾಗಿ ಇಡಬೇಕು. ಹೀಗೆ ಮಾಡಿದ್ರೂ ಆರ್ಥಿಕ ವೃದ್ಧಿಯನ್ನು ನೀವು ನೋಡಬಹುದು.
ದೀಪಾವಳಿ ದಿನ ನೀವು ಲಕ್ಷ್ಮಿ ದೇವಸ್ಥಾನಕ್ಕೆ ಹೋಗುವುದ್ರಿಂದ ಶುಭ ಫಲ ನಿಮಗೆ ಸಿಗುತ್ತದೆ. ನೀವು ಲಕ್ಷ್ಮಿ ದೇವಸ್ಥಾನದಲ್ಲಿ ಲಕ್ಷ್ಮಿಗೆ ಕೆಂಪು ಸೀರೆಯನ್ನು ಅರ್ಪಿಸಬೇಕು. ವಿಷ್ಣು ಹಾಗೂ ಲಕ್ಷ್ಮಿ ಇರುವ ದೇವಸ್ಥಾನಕ್ಕೆ ಹೋದ್ರೆ ಹೆಚ್ಚು ಮಂಗಳಕರವೆಂದು ನಂಬಲಾಗಿದೆ.
ವಾಸ್ತು ಶಾಸ್ತ್ರದ ಪ್ರಕಾರ, ಉಗುರಿನ ಮೇಲೆ ಬಿಳಿ ಚುಕ್ಕೆ ಶುಭ ಸಂಕೇತ ನೀಡುತ್ತೆ!
ಲಕ್ಷ್ಮಿ ಪೂಜೆ ದಿನದಂದು ಒಂದು ವೀಳ್ಯದೆಲೆಯ ಮೇಲೆ ಕುಂಕುಮವನ್ನು ಹಾಕಿ ಅದರ ಮೇಲೆ ಲಡ್ಡುಗಳನ್ನು ಇಟ್ಟು ಹನುಮಂತನಿಗೆ ಅರ್ಪಿಸಿ. ಇದು ಆದಾಯದ ಅಡೆತಡೆಯನ್ನು ನಿವಾರಿಸುತ್ತದೆ.
ಲಕ್ಷ್ಮಿ ಪೂಜೆ ಮಾಡಿದ ಮಧ್ಯರಾತ್ರಿ ನೀವು ಮನೆಯಲ್ಲಿ ಗಂಟೆ ಬಾರಿಸಬೇಕು. ಹೀಗೆ ಮಾಡಿದ್ರೆ ನಕಾರಾತ್ಮಕ ಶಕ್ತಿ ನಾಶವಾಗುತ್ತದೆ. ಬಡತನ ನಿಮ್ಮಿಂದ ದೂರ ಓಡುತ್ತದೆ.
ಲಕ್ಷ್ಮಿ ಪೂಜೆ ವೇಳೆ ನೀವು ಬೆಳ್ಳಿ ಬಟ್ಟಲನ್ನು (Silver Vessel) ಬಳಸಿ. ಬೆಳ್ಳಿ ಬಟ್ಟಲಿಗೆ ಕರ್ಪೂರವನ್ನು ಹಾಕಿ ಆರತಿ ಮಾಡೋದ್ರಿಂದ ಲಕ್ಷ್ಮಿ ಆಶೀರ್ವಾದ (Blessing) ನಿಮಗೆ ಸದಾ ಇರುತ್ತದೆ.
Social Belief : ಅಂತ್ಯಸಂಸ್ಕಾರದ ವೇಳೆ ಬಿಳಿ ಬಟ್ಟೆ ಧರಿಸುವುದ್ಯಾಕೆ?
ದೀಪಾವಳಿ ದಿನ ನೀವು ದೇವಸ್ಥಾನಕ್ಕೆ ಹೋಗಿ ಪೊರಕೆ (Groom Stick) ದಾನ ಮಾಡಿದ್ರೆ ಸಂಪತ್ತು ಹೆಚ್ಚಾಗುತ್ತದೆ.