
ಮೈಸೂರು: ಕಾಲಘಟ್ಟದಲ್ಲಿ ಕಳೆದು ಹೋಯಿತೆಂದೇ ಭಾವಿಸಲಾಗಿದ್ದ, ಸಾವಿರ ವರ್ಷಗಳ ನಂತರ, ಮೂಲಭೂತ ಸೋಮನಾಥ ಜ್ಯೋತಿರ್ಲಿಂಗದ ಪವಿತ್ರ ಅವಶೇಷಗಳು ಈಗ ಮತ್ತೆ ಪ್ರತ್ಯಕ್ಷವಾಗಿವೆ. ಇದು ಐತಿಹಾಸಿಕವಾದ , ಅವಿಸ್ಮರಣೀಯವಾದ ಕ್ಷಣ. ಲಿಂಗಗಳ ರೂಪದಲ್ಲಿ ಮಾಡಲಾದ ಈ ದಿವ್ಯ ಅವಶೇಷಗಳನ್ನು ಮೈಸೂರು ನಗರಿಗೆ ತರಲಾಗುವುದು.
ಮಂಗಳವಾರ ಮೇ 6, 2025 ಸಂಜೆ 6 ಗಂಟೆಯಿಂದ ಜೆ.ಎಸ್.ಎಸ್ ಆಯುರ್ವೇದ ಕಾಲೇಜಿನ ಪಕ್ಕದಲ್ಲಿರುವ ಆರ್ಟ್ ಆಫ್ ಲಿವಿಂಗ್ ನ ಆಶ್ರಮದಲ್ಲಿ ಭಕ್ತರು ಬಂದು ಸೋಮನಾಥನ ದಿವ್ಯ ದರ್ಶನ ಪಡೆದು, ದೈವೀ ಕಂಪನಗಳನ್ನು ಅನುಭವಿಸಬಹುದಾಗಿದೆ. ಪ್ರವೇಶವು ಸಾರ್ವಜನಿಕವಾಗಿ ತೆರೇಯಲಾಗಿದೆ. ದರ್ಶನದ ನಂತರ ಪ್ರಸಾದ ವಿನಿಯೋಗವನ್ನು ಮಾಡಲಾಗುವುದು.
1026 ಸಿಇಯಲ್ಲಿ ಸೋಮನಾಥನ ದೇವಸ್ಥಾನವನ್ನು ಮಹ್ಮೂದ್ ಘಜ್ನಿಯು ಘೋರವಾಗಿ ನಾಶ ಮಾಡಿದ ನಂತರ ಈ ಅವಶೇಷಗಳನ್ನು ಕೆಲವು ಅಗ್ನಿಹೋತ್ರಿ ಬ್ರಾಹ್ಮಣರು ಮೂಲಭೂತ ಸೋಮನಾಥ ಲಿಂಗದ ಅವಶೇಷಗಳನ್ನು ತಮ್ಮೊಡನೆ ಹೊತ್ತುಕೊಂಡು ತಮಿಳುನಾಡಿಗೆ , ಅದನ್ನು ಸಾವಿರ ವರ್ಷಗಳವರೆಗೆ ಗೌಪ್ಯವಾಗಿ ರಕ್ಷಿಸಿದರು. ಪೀಳಿಗೆಯಿಂದ ಪೀಳಿಗೆಯವರೆಗೆ ಅತ್ಯಂತ ಭಕ್ತಿಯಿಂದ ಪಂಡಿತ ಸೀತಾರಾಮ ಶಾಸ್ತ್ರಿಯವರ ಕುಟುಂಬವು ಸೋಮನಾಥನ ಪವಿತ್ರ ಅವಶೇಷಗಳನ್ನು ರಕ್ಷಿಸುತ್ತಾ ಬಂದರು.
ಕಂಚಿ ಶಂಕರಾಚಾರ್ಯರು ಶಾಸ್ತ್ರಿಗಳಿಗೆ, " ಬೆಂಗಳೂರಿನಲ್ಲಿರುವ ಗುರುದೇವ್ ಶ್ರೀ ಶ್ರೀ ರವಿಶಂಕರರ ಬಳಿಗೆ ಅದನ್ನು ತೆಗೆದುಕೊಂಡು ಹೋಗು. ಅವರು ನಿನಗೆ ಸಹಾಯ ಮಾಡುತ್ತಾರೆ" ಎಂದು ನಿರ್ದೇಶನವನ್ನು ನೀಡಿದರು. ಈಗ ಮೈಸೂರಿನ ನಿವಾಸಿಗಳು ಅನಂತ ಶಕ್ತಿಯನ್ನು, ಶುದ್ಧತೆಯನ್ನು, ಆಶೀರ್ವಾದದ ಬಲವನ್ನು ಹೊತ್ತಿರುವ ಈ ದಿವ್ಯ ಲಿಂಗಗಳ ದಿವ್ಯ ಸಾನ್ನಿಧ್ಯವನ್ನು ಅನುಭವಿಸಬಹುದು.
ಈ ವರ್ಷ ಜನವರಿ 2025ರಲ್ಲಿ ಜನವರಿಯಲ್ಲಿ ಪವಿತ್ರ ಜ್ಯೋತಿರ್ಲಿಂಗವನ್ನು ಆರ್ಟ್ ಆಫ್ ಲಿವಿಂಗ್ ಇಂಟರ್‌ನ್ಯಾಷನಲ್ ಕೇಂದ್ರದಲ್ಲಿ ಸಾವಿರಾರು ಭಕ್ತರ ಸಮ್ಮುಖದಲ್ಲಿ ಗುರುದೇವರು ಅದನ್ನು ಅನಾವರಣ ಮಾಡಿದರು. ಗುರುದೇವರು ಲಿಂಗವನ್ನು ಕೈಯಲ್ಲಿ ಹಿಡಿದು ಅದರ ಅದ್ಭುತ ಅಯಸ್ಕಾಂತ ಶಕ್ತಿಯನ್ನು ಎಲ್ಲರಿಗೂ ಪ್ರದರ್ಶನ ಮಾಡಿ ತೋರಿಸಿದರು.
1000 ವರ್ಷ ಹಳೆಯ ಸೋಮನಾಥ ಜ್ಯೋತಿರ್ಲಿಂಗದ ಕುರಿತು 2007ರಲ್ಲಿ ನಡೆಸಿದ ಭೌಗೋಳಿಕ ಅಧ್ಯಯನ ನಡೆಸಲಾಯಿತು. ಈ ಲಿಂಗದಲ್ಲಿ ಸಾಮಾನ್ಯ ಭೌತಿಕಶಾಸ್ತ್ರಕ್ಕೆ ನಿಲುಕದ ಅಯಸ್ಕಾಂತಿಯ ಗುಣ ಹೊಂದಿದೆ ಎಂಬುದು ಪತ್ತೆಯಾಗಿತ್ತು.
ಈ ಮಹಾ ಶಿವರಾತ್ರಿಯಂದು ಆಶ್ರಮದಲ್ಲಿ ಎಲ್ಲಾ ಭಕ್ತರಿಗೆ ಅಪರೂಪದ ಅವಕಾಶವನ್ನು ಒದಗಿಸಲಾಗಿತ್ತು. ಬೆಂಗಳೂರಿನ ಆರ್ಟ್ ಆಫ್ ಲಿವಿಂಗ್ ಆಶ್ರಮಕ್ಕೆ ಭೇಟಿ ನೀಡಿ ಜ್ಯೋತಿರ್ಲಿಂಗ ಕಣ್ತುಂಬಿಕೊಂಡಿದ್ದರು. ಈ ಈ ಅವಕಾಶ ಮೈಸೂರಿನ ಜನರಿಗೆ ಒದಲಾಗಿದೆ.