
ಪ್ರತಿದಿನವೂ ಸಾವಿರಾರು ಭಕ್ತರನ್ನು ತನ್ನತ ಸೆಳೆಯುವ ಪುರಿ ಜಗನ್ನಾಥ ಧಾಮವೂ ಅಪರೂಪದ ಅಚ್ಚರಿಯ ಘಟನೆಗೆ ಸಾಕ್ಷಿಯಾಗಿದ್ದು, ಅದರ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಹಾಗಿದ್ರೆ ಅದೇನು ಅಂತ ನೋಡೋಣ ಬನ್ನಿ.
ಸಾಮಾನ್ಯವಾಗಿ ಆಂಜನೇಯನ ವಂಶಜರಾದ ವಾನರರಿಗೂ ಶ್ರೀರಾಮನಿಗೂ ಅವಿನಾಭಾವ ಸಂಬಂಧವಿದೆ. ಶ್ರೀರಾಮ ಹಾಗೂ ಆಂಜನೇಯನ ತೀರ್ಥ ಕ್ಷೇತ್ರಗಳಲ್ಲಿ ಎಲ್ಲೆಡೆಯೂ ಈ ವಾನರ ಸೇನೆಯೇ ಇರುತ್ತದೆ. ಶ್ರೀರಾಮನಿಗೂ ಈ ವಾನರರಿಗೂ ಅವಿನಾಭಾವ ಸಂಬಂಧ ಇದೆ ಅನ್ನುವುದಕ್ಕೆ ಹಲವು ಘಟನೆಗಳು ಸಾಕ್ಷಿಯಾಗುತ್ತಲೇ ಇವೆ. ಅದೇ ರೀತಿ ಇಲ್ಲೊಂದು ಕಡೆ ಕೋತಿಯೊಂದು ಶ್ರೀರಾಮನ ಪ್ರತಿಮೆಯ ಮಡಿಲಲ್ಲಿ ಮಲಗಿ ವಿಶ್ರಾಂತಿ ತೆಗೆದುಕೊಳ್ಳುತ್ತಿರುವ ವೀಡಿಯೋವೊಂದು ಈಗ ಸಾಕಷ್ಟು ವೈರಲ್ ಆಗಿದೆ. ಅಂದಹಾಗೆ ಈ ಘಟನೆ ನಡೆದಿರುವುದು ಪುರಿಯ ಜಗನ್ನಾಥ ಧಾಮದಲ್ಲಿ
ಇಲ್ಲಿನ ದೇಗುಲವೊಂದರ ದ್ವಾರದ ಮೇಲ್ಭಾಗದಲ್ಲಿ ಶ್ರೀರಾಮ ಸೀತೆಯ ಜೊತೆ ವಾನರರು ಇರುವ ಪ್ರತಿಮೆಯನ್ನು ನಿರ್ಮಿಸಲಾಗಿದೆ. ಈ ಪ್ರತಿಮೆಯಲ್ಲಿ ರಾಮ ಹಾಗೂ ಸೀತೆ ಕುಳಿತ ಸ್ಥಿತಿಯಲ್ಲಿದೆ. ಅಕ್ಕಪಕ್ಕದಲ್ಲಿ ಹಲವು ಪ್ರತಿಮೆಗಳೂ ಇವೆ. ಇಲ್ಲಿ ಶ್ರೀರಾಮನ ಪ್ರತಿಮೆಯ ಮೇಲೆ ಕೋತಿಯೊಂದು ಮಗುವಿನಂತೆ ಮಲಗಿ ನಿದ್ದೆಗೆ ಜಾರಿದೆ. ಇದನ್ನು ಅಲ್ಲಿನ ಸ್ಥಳೀಯರು ಯಾರೋ ರೆಕಾರ್ಡ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. ಈ ವೀಡಿಯೊ ಈಗ ಸಖತ್ ವೈರಲ್ ಆಗಿದ್ದು, ಅನೇಕರು ಶ್ರೀರಾಮನ ಮಡಿಲಲ್ಲಿ ಮಗುವಿನಂತೆ ಮಲಗಿದ ವಾನರನನ್ನು ನೋಡಿ ಭಾವುಕರಾಗಿದ್ದಾರೆ. ಅಲ್ಲೇ ಹಲವು ರೀತಿಯಲ್ಲಿ ಕಾಮೆಂಟ್ ಮಾಡಿದ್ದಾರೆ.
ಸಹೋದರನಿಗೆ ತ್ರೇತಾಯುಗ ನೆನಪಾದಂತಿದೆ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಇದು ಇಡೀ ವಿಶ್ವದಲ್ಲೇ ಅತ್ಯಂತ ಸುರಕ್ಷಿತವಾಗಿರುವಂತಹ ಮಡಿಲು ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಆತನಿಗೆ ವಿಶ್ರಾಂತಿ ಪಡೆಯಲು ಸಾಕಷ್ಟು ಸ್ಥಳವಿತ್ತು. ಆದರೆ ಆತ ಏಕೆ ಶ್ರೀರಾಮನ ಮಡಿಲನ್ನೇ ಆಯ್ಕೆ ಮಾಡಿಕೊಂಡ ಎಂದು ಮತ್ತೆ ಕೆಲವರು ಕೇಳಿದ್ದಾರೆ. ಇದೆಂಥಾ ಸುಂದರ ದೃಶ್ಯ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಆತನಿಗೆ ಸೀತೆಯ ಮಡಿಲಲ್ಲೂ ಮಲಗಬಹುದಿತ್ತು. ಆದರೆ ಆತ ಶ್ರೀರಾಮನನ್ನೇ ಆಯ್ಕೆ ಮಾಡಿಕೊಂಡ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಇದು ರಾಮ ಹಾಗೂ ಆಂಜನೇಯನ ನಡುವಿನ ಪ್ರೀತಿಯನ್ನು ತೋರಿಸುತ್ತದೆ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ.
ಒಟ್ಟಿನಲ್ಲಿ ಈ ವೀಡಿಯೋ ರಾಮ ಹಾಗೂ ಆಂಜನೇಯ ಭಕ್ತರನ್ನು ಭಾವುಕರನ್ನಾಗಿಸಿದ್ದು, ಅನೇಕರು ಈ ವೀಡಿಯೋಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ವೀಡಿಯೋ ನೋಡಿ ನಿಮಗೇನನಿಸಿತು ಕಾಮೆಂಟ್ ಮಾಡಿ...
ಈ ಅಪರೂಪದ ವೀಡಿಯೋ ಇಲ್ಲಿದೆ ನೋಡಿ
ಮ್ಯಾಂಗೋ ಜ್ಯೂಸ್‌ಗಾಗಿ ಮೊಬೈಲ್ ಕಸಿದು ಡೀಲ್ ಮಾಡಿದ ಕೋತಿ: ವೀಡಿಯೋ ಸಖತ್ ವೈರಲ್
ಸಾಮಾನ್ಯವಾಗಿ ಬಹುತೇಕ ಎಲ್ಲಾ ತೀರ್ಥಕ್ಷೇತ್ರಗಳಲ್ಲಿ ಪ್ರವಾಸಿ ತಾಣಗಳಲ್ಲಿ ಕೋತಿಗಳ ಹಾವಳಿ ವಿಪರೀತವಾಗಿರುತ್ತದೆ. ಅಲ್ಲಿಗೆ ಬರುವ ಪ್ರವಾಸಿಗರು ಈ ಕೋತಿಗಳ ಕಾರಣಕ್ಕೆ ಭಯದಿಂದ ಓಡಾಡುತ್ತಾರೆ. ಕೋತಿಗಳು ಪ್ರವಾಸಿಗರ ಕೈಯಲ್ಲಿದ್ದ ಕಂಡ ಕಂಡ ವಸ್ತುಗಳನ್ನು ಕಸಿದು ಕಾಣದಂತೆ ಮಾಯವಾಗಿ ಬಿಡುತ್ತವೆ ಇದರಿಂದ ಪ್ರವಾಸಿಗರು ಪರದಾಡುವಂತಾಗುತ್ತದೆ. ಕೆಲವೊಮ್ಮೆ ಕೋತಿಗಳು ಪ್ರವಾಸಿಗರ ಸ್ಮಾರ್ಟ್‌ಫೋನ್ ಮೇಲೂ ಕನ್ನ ಹಾಕಿ ಕೈಯಿಂದ ಕಸಿದುಕೊಂಡು ಓಡಿ ಬಿಡುತ್ತವೆ. ಅದೇ ರೀತಿ ಈಗ ಇಲ್ಲೊಂದು ಕಡೆ ಕೋತಿಯೊಂದು ವ್ಯಕ್ತಿಯ ಮೊಬೈಲ್ ಕಸಿದು ಪರಾರಿಯಾಗಿದ್ದು, ಸೀದಾ ಹೋಗಿ ಕಟ್ಟಡವೇರಿ ಕುಳಿತುಕೊಂಡಿದೆ. ಇದರಿಂದ ಮೊಬೈಲ್ ಕಳೆದುಕೊಂಡ ಯುವಕನೋರ್ವ ಕಂಗಾಲಾಗಿದ್ದು, ಕೋತಿಯ ಕೈಯಲ್ಲಿರುವ ಮೊಬೈಲ್ ವಾಪಸ್ ಪಡೆಯಲು ಹರ ಸಾಹಸ ಮಾಡಿದ್ದಾನೆ. ಬಳಿಕ ಜ್ಯೂಸ್ ಪ್ಯಾಕೇಟ್ ನೀಡಿ ತನ್ನ ಮೊಬೈಲನ್ನು ವಾಪಸ್ ಪಡೆದಿದ್ದಾನೆ. ಈ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.