ಶನಿದೇವನ ಕೋಪದಿಂದ ಕೆಲಸದಲ್ಲಿ ಅಡಚಣೆ; ಈ ವಿಧಾನಗಳಿಂದ ನಿಮ್ಮ ಸಂಕಷ್ಟ ದೂರ..!

By Sushma Hegde  |  First Published Jul 25, 2023, 3:26 PM IST

ವೈದಿಕ ಜ್ಯೋತಿಷ್ಯದಲ್ಲಿ ಶನಿ ದೇವನನ್ನು ನ್ಯಾಯದ ದೇವರು ಎಂದು ಪರಿಗಣಿಸಲಾಗುತ್ತದೆ. ಶನಿ ದೇವರ ನಿಯಮಿತ ಆರಾಧನೆಯು ಯಶಸ್ಸಿನ ಅಡೆತಡೆಗಳನ್ನು ನಿವಾರಿಸುತ್ತದೆ. ಶನಿಯು ಭಕ್ತರ ಶ್ರಮ ಮತ್ತು ಶ್ರದ್ಧೆಯ ಫಲವನ್ನು ಖಂಡಿತವಾಗಿ ನೀಡುತ್ತಾನೆ. ಈ ಕುರಿತು ಇಲ್ಲಿದೆ ಮಾಹಿತಿ.


ವೈದಿಕ ಜ್ಯೋತಿಷ್ಯದಲ್ಲಿ ಶನಿ ದೇವನನ್ನು ನ್ಯಾಯದ ದೇವರು ಎಂದು ಪರಿಗಣಿಸಲಾಗುತ್ತದೆ. ಶನಿ ದೇವರ ನಿಯಮಿತ ಆರಾಧನೆಯು ಯಶಸ್ಸಿನ ಅಡೆತಡೆಗಳನ್ನು ನಿವಾರಿಸುತ್ತದೆ. ಶನಿಯು ಭಕ್ತರ ಶ್ರಮ ಮತ್ತು ಶ್ರದ್ಧೆ (Diligence) ಯ ಫಲವನ್ನು ಖಂಡಿತವಾಗಿ ನೀಡುತ್ತಾನೆ. ಈ ಕುರಿತು ಇಲ್ಲಿದೆ ಮಾಹಿತಿ.

ವೈದಿಕ ಜ್ಯೋತಿಷ್ಯದಲ್ಲಿ ಶನಿಯನ್ನು ವೃತ್ತಿ ಜೀವನದ ಮೇಲೆ ಪ್ರಭಾವ ಬೀರುವ ಪ್ರಮುಖ ಗ್ರಹವೆಂದು ಪರಿಗಣಿಸಲಾಗಿದೆ. ಶನಿಯನ್ನು ಕರ್ಮದ ಲಾಭದಾಯಕ ಗ್ರಹವೆಂದು ಪರಿಗಣಿಸಲಾಗಿದೆ. ಶನಿಗ್ರಹದ ಅಶುಭ ಪರಿಣಾಮಗಳಿಂದ ನೀವು ಉದ್ಯೋಗ  (employment) ಪಡೆಯುವಲ್ಲಿ ತೊಂದರೆ ಅನುಭವಿಸುತ್ತಿದ್ದರೆ, ಶನಿಯು ಕೆಲವು ಕ್ರಮಗಳಿಂದ ಸಂತುಷ್ಟರಾಗಬಹುದು. ಇದು ಕಠಿಣ ಪರಿಶ್ರಮ, ಶಿಸ್ತು ಮತ್ತು ನಿರ್ಣಯದ ಹಾದಿಯಲ್ಲಿ ಬರುವ ಅಡೆತಡೆಗಳನ್ನು ತೊಡೆದು ಹಾಕಲು ಸಹಾಯ ಮಾಡುತ್ತದೆ.

Tap to resize

Latest Videos

ನಿತ್ಯವೂ ಶನಿದೇವನ ಆರಾಧನೆ ಮಾಡಿ

ನಿತ್ಯವೂ ಶನಿದೇವನ ಆರಾಧನೆ ಮಾಡುವುದರಿಂದ ಉದ್ಯೋಗ (employment) ದಲ್ಲಿ ಇರುವ ಅಡೆತಡೆಗಳು ನಿವಾರಣೆಯಾಗುತ್ತದೆ. ಶನಿವಾರದಂದು ಶನಿ ದೇವಸ್ಥಾನದಲ್ಲಿ ಎಳ್ಳು ಎಣ್ಣೆಯ ದೀಪವನ್ನು ಬೆಳಗಿಸಿ ಮತ್ತು ಓಂ ಶಾನ ಶನೈಶ್ಚರಾಯ ನಮಃ ಎಂಬ ಮಂತ್ರಗಳನ್ನು ಪಠಿಸುವುದರಿಂದ ಶನಿದೇವನು ಪ್ರಸನ್ನನಾಗುತ್ತಾನೆ ಮತ್ತು ಕಾರ್ಯ ಕ್ಷೇತ್ರದಲ್ಲಿ ಪ್ರಗತಿಗೆ ಅವಕಾಶಗಳನ್ನು ಒದಗಿಸುತ್ತಾನೆ ಎಂದು ನಂಬಲಾಗಿದೆ.

ಹನುಮಾನ್‌ ಚಾಲೀಸ್‌ ಓದಿ

ಹನುಮಾನ್‌ ಚಾಲಿಸ್‌  (Hanuman Chalice) ಪ್ರತಿದಿನ ಓದುವುದು ಉದ್ಯೋಗ ಸಂಬಂಧಿತ ಸಮಸ್ಯೆಗಳನ್ನು ತೊಡೆದುಹಾಕಲು ಸಹಾಯ ಮಾಡುತ್ತದೆ. ಭಗವಾನ್‌ ಹನುಮಂತನನ್ನು ಶ್ರೀರಾಮನ ಪರಮ ಭಕ್ತನೆಂದು ಪರಿಗಣಿಸಲಾಗಿದೆ. ಅವರ ಮಾರ್ಗದಿಂದ ಅಡೆತಡೆಗಳನ್ನು ತೆಗೆದುಹಾಕಲು ಮತ್ತು ಯಶಸ್ಸನ್ನು ತರಲು ಜನರಿಗೆ ಸಹಾಯ ಮಾಡುತ್ತಾರೆ. ಶನಿವಾರ (Saturday) ದಂದು ಹನುಮಾನ್‌ ಚಾಲೀಸ್‌ ಓದುವುದು ವಿಶೇಷ ಫಲಿತಾಂಶವನ್ನು ನೀಡುತ್ತದೆ. ಇದರಿಂದ ಉದ್ಯೋಗದಲ್ಲಿ ಬರುವ ಸವಾಲುಗಳನ್ನು ಎದುರಿಸುವ ಧೈರ್ಯ ಮತ್ತು ಶಕ್ತಿ ದೊರೆಯುತ್ತದೆ.

ಧನಯೋಗದಿಂದ ಇವರಿಗೆ ಅದೃಷ್ಟ; ಹರಿದು ಬರಲಿದೆ ಹಣದ ಹೊಳೆ..!

 

ನೀಲಿ ಮಣಿ ಧರಿಸಿ

ವೈದಿಕ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ನೀಲಿ ಮಣಿ ಧರಿಸುವುದು ಕೆಲಸದಲ್ಲಿನ ಅಡೆತಡೆಗಳನ್ನು ತೆಗೆದು ಹಾಕಲು ಸಹಾಯ ಮಾಡುತ್ತದೆ. ಆದಾಗ್ಯೂ ನೀಲಿ ಮಣಿ ಧರಿಸುವ ಮೊದಲು ಜ್ಯೋತಿಷ್ಯ ಸಲಹೆಯನ್ನು ತೆಗೆದುಕೊಳ್ಳಿ. ಶುಕ್ಲ ಪಕ್ಷದ ಶನಿವಾರದಂದು ಮಧ್ಯದ ಬೆರಳಿಗೆ ನೀಲಿ ಮಣಿ (blue bead) ಯನ್ನು ಧರಿಸುವುದರಿಂದ ಶನಿದೇವನು ವೃತ್ತಿಜೀವನದ ಮೇಲೆ ಧನಾತ್ಮಕ ಪರಿಣಾಮ ಬೀರುತ್ತಾನೆ.

ಶನಿ ಮಂತ್ರ

ಶನಿದೇವನ ದೇವಸ್ಥಾನ (temple) ದಲ್ಲಿ ಶನಿ ಮಂತ್ರವನ್ನು ಜಪಿಸಿ, ಶನಿಯನ್ನು ಮಂತ್ರದ ಮೂಲಕ ಪೂಜೆ ಮಾಡುವುದರಿಂದ ಶನಿ ದೇವನು ಸಂತೋಷವಾಗಿ ವೃತ್ತಿ ಜೀವನದಲ್ಲಿ ಪ್ರಗತಿಗೆ ಸಹಾಯವಾಗುತ್ತದೆ. 

ದಾನ

ಶನಿ ಗ್ರಹವನ್ನು ನ್ಯಾಯ ಮತ್ತು ಕ್ರಿಯೆಯ ದೇವರು ಎಂದು ಪರಿಗಣಿಸಲಾಗುತ್ತದೆ. ಧರ್ಮಕಾರ್ಯಗಳನ್ನು ಮಾಡುವುದರಿಂದ ಶನಿಯ ಅಶುಭ ಫಲಗಳು ಕಡಿಮೆಯಾಗುತ್ತದೆ. ಬಟ್ಟೆ, ಹಣ, ಅನ್ನ ಮತ್ತು ಇತ್ಯಾದಿಗಳ ದಾನದಿಂದ ವೃತ್ತಿ ಜೀವನ (career life) ದಲ್ಲಿ ಯಶಸ್ಸು ಸಿಗುತ್ತದೆ.

ಅಕ್ಟೋಬರ್‌ವರೆಗೆ 6 ರಾಶಿಯವರಿಗೆ ರಾಹುವಿನ ವಕ್ರ ದೃಷ್ಟಿ; ಪ್ರತಿ ಹೆಜ್ಜೆಯಲ್ಲೂ ಸವಾಲು..!

 

ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣ ನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.

click me!