Name Astrology: ಈ ಅಕ್ಷರಗಳ ಹೆಸರಿನವರು ಉತ್ತಮ ಪತಿಯಾಗಬಲ್ಲರು

By Suvarna News  |  First Published Feb 26, 2022, 11:19 AM IST

ಮಗು ಹುಟ್ಟಿದಾಗ ಅದು ಜನಿಸಿದ ಸಮಯಕ್ಕೆ ಅನುಗುಣವಾಗಿ ಜ್ಯೋತಿಷಿಗಳು ಯಾವ ಅಕ್ಷರದಿಂದ ಹೆಸರಿಟ್ಟರೆ ಉತ್ತಮ ಎಂಬುದನ್ನು ಹೇಳುತ್ತಾರೆ. ಹೀಗಾಗಿ ಹೆಸರು ಆರಂಭವಾಗುವ ಅಕ್ಷರವನ್ನಿಟ್ಟುಕೊಂಡು ವ್ಯಕ್ತಿಯು ಸಂಬಂಧವನ್ನು ಹೇಗೆ ನಡೆಸಿಕೊಂಡು ಹೋಗುತ್ತಾನೆ ಎಂದು ಹೇಳಬಹುದು. 


ಮಗು ಜನಿಸಿದಾಗ ಅದು ಹುಟ್ಟಿದ ನಕ್ಷತ್ರ, ಸಮಯ ನೋಡಿಕೊಂಡು ಜ್ಯೋತಿಷಿಗಳು ಯಾವ ಅಕ್ಷರದ ಹೆಸರಿಟ್ಟರೆ ಮಗುವಿಗೆ ಒಳಿತಾಗುತ್ತದೆ ಎಂಬುದನ್ನು ಹೇಳುತ್ತಾರೆ. ಅಂದರೆ ವ್ಯಕ್ತಿಯ ಹೆಸರು ಆ ವ್ಯಕ್ತಿಯ ವ್ಯಕ್ತಿತ್ವದ ಮೇಲೆ ಪರಿಣಾಮ ಬೀರುತ್ತದೆ. ಕೆಲ ಉತ್ತಮ ನಕ್ಷತ್ರ, ಸಮಯದಲ್ಲಿ ಹುಟ್ಟಿದವರಿಗೆ ಕೆಲ ಅಕ್ಷರಗಳು ಹೆಸರಿಗಾಗಿ ಸಿಗುತ್ತವೆ. ಹೀಗಾಗಿ, ವ್ಯಕ್ತಿಯ ಹೆಸರನ್ನು ಕೇಳಿಯೇ ಆತನ ಬಗ್ಗೆ ಹೇಳಬಹುದು. 

ಪ್ರತಿ ಹುಡುಗಿಗೂ ತನ್ನ ಜೀವನ ಸಂಗಾತಿಯಾಗುವವನು ತನ್ನನ್ನು ತುಂಬಾ ಪ್ರೀತಿಸಬೇಕು, ತನ್ನ ಸಂತೋಷ(happiness)ಕ್ಕೆ ಕಾರಣವಾಗಬೇಕು ಎಂಬ ಆಸೆಯಿರುತ್ತದೆ. ಇದಕ್ಕೆ ಸರಿಯಾಗಿ ಕೆಲ ಅಕ್ಷರದಿಂದ ಹೆಸರು ಶುರುವಾಗುವ ಯುವಕರು ಪತ್ನಿಯನ್ನು ತುಂಬಾ ಪ್ರೀತಿಸುತ್ತಾರೆ, ಕಾಳಜಿ ಮಾಡುತ್ತಾರೆ, ಗೌರವಿಸುತ್ತಾರೆ ಜೊತೆಗೆ, ಪತ್ನಿಗೆ ಎಲ್ಲ ವಿಷಯಗಳಲ್ಲೂ, ಕೆಲಸ ಕಾರ್ಯಗಳಲ್ಲೂ ಬೆಂಬಲ ನೀಡುತ್ತಾರೆ. ಪತ್ನಿಯ ಕಣ್ಣಲ್ಲಿ ನೀರು ಬರದ ಹಾಗೆ ನೋಡಿಕೊಳ್ಳುತ್ತಾರೆ. ಕಣ್ಣಲ್ಲಿ ಕಣ್ಣಿಟ್ಟು ಕಾಪಾಡುತ್ತಾರೆ. ಈಗ ಸಂಬಂಧದ ವಿಷಯಕ್ಕೆ ಬಂದರೆ ಅತ್ಯುತ್ತಮ ಪತಿಯಾಗುವವರ ಹೆಸರಿನ ಮೊದಲ ಅಕ್ಷರ ಯಾವುದೆಲ್ಲ ಇರುತ್ತದೆ ಎಂಬುದನ್ನು ನೋಡೋಣ. 

Tap to resize

Latest Videos

undefined

ಡಿ- ಪತ್ನಿಯನ್ನು ಕಾಳಜಿ ಮಾಡುವವರು 
ಡಿ ಅಕ್ಷರದಿಂದ ಹೆಸರು ಆರಂಭವಾಗುವ ಯುವಕರು ಪತ್ನಿ(wife)ಯೊಂದಿಗೆ ಹೆಚ್ಚು ಹೆಚ್ಚು ಸಮಯ ಕಳೆಯಲು ಬಯಸುತ್ತಾರೆ. ಬದುಕಿನ ದೊಡ್ಡ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಪತ್ನಿಯನ್ನು ಕೇಳಿಯೇ ಮುಂದುವರಿಯುತ್ತಾರೆ. ಅವರು ಬಹಳ ಕಾಳಜಿ(very caring) ಸ್ವಭಾವದವರು. ಹೃದಯ ಸ್ವಚ್ಛವಾಗಿದ್ದು, ಪತ್ನಿಯ ಎಲ್ಲ ಕನಸುಗಳನ್ನೂ ಈಡೇರಿಸಬೇಕೆಂದು ಬಯಸುತ್ತಾರೆ. ಇವರ ಪತ್ನಿ(Wife) ಬೇಸರದಲ್ಲಿದ್ದರೆ (Sad) ಅದರಿಂದ ಹೊರ ತಂದು ಅವರನ್ನು ಖುಷಿಪಡಿಸುವ ಕಲೆ ಇವರಿಗೆ ತಿಳಿದಿರುತ್ತದೆ. 

Mars Transit: ಮಂಗಳ ಗೋಚಾರದಿಂದ ಈ ನಾಲ್ಕು ರಾಶಿಗೆ ಲಾಟ್ರಿ

ಎ- ಪತ್ನಿಯನ್ನು ಗೌರವಿಸುವವರು(Respect the spouse)
ಎ ಲೆಟರ್‌ನಿಂದ ಹೆಸರು ಆರಂಭವಾಗುವ ಹುಡುಗರು ಪತ್ನಿಯನ್ನು ತುಂಬಾ ಪ್ರೀತಿಸುತ್ತಾರೆ. ಆಕೆಯ ಎಲ್ಲ ಅಗತ್ಯಗಳನ್ನು ನೋಡಿಕೊಳ್ಳುತ್ತಾರೆ. ಸಮಾಜದಲ್ಲಿ ಪತ್ನಿಯ ಗೌರವಕ್ಕೆ ಎಲ್ಲಿಯೂ ಧಕ್ಕೆ ಬರದಂತೆ ನೋಡಿಕೊಳ್ಳುತ್ತಾರೆ. ಸಂಬಂಧದ ಸಿಹಿಯನ್ನು ಉಳಿಸಿಕೊಳ್ಳಲು ತಾವೇ ಸೋಲುತ್ತಾರೆ. ಇಂಥ ವ್ಯಕ್ತಿಗಳ ವೈವಾಹಿಕ ಬದುಕು ತುಂಬಾ ಚೆನ್ನಾಗಿರುತ್ತದೆ. 

ಎನ್- ಪತ್ನಿಗೆ ಎಲ್ಲ ಕೆಲಸಗಳಲ್ಲಿ ಬೆಂಬಲ
ಎನ್ ಅಕ್ಷರದಿಂದ ಹೆಸರು ಆರಂಭವಾಗುವ ಹುಡುಗರು ಬಹಳ ಸಪೋರ್ಟಿವ್. ಪತ್ನಿ ತೆಗೆದುಕೊಳ್ಳುವ ಎಂಥದೇ ನಿರ್ಧಾರದ ಹಿಂದೆಯೂ ಅಚಲವಾಗಿ ನಿಲ್ಲುತ್ತಾರೆ. ಆಕೆಯನ್ನು ಪ್ರೋತ್ಸಾಹಿಸುತ್ತಾರೆ. ಅವಳಿಗಾಗಿ ಯಾವುದೇ ರೀತಿಯ ಸಮಸ್ಯೆ(trouble) ಎದುರಿಸಲು ಸಿದ್ಧರಿರುತ್ತಾರೆ. ಎಲ್ಲ ಸಂತೋಷವನ್ನೂ ಪತ್ನಿಗೆ ಮೊಗೆದು ಕೊಟ್ಟು ಅವಳ ಖುಷಿಯಲ್ಲಿ ತಮ್ಮ ಖುಷಿ ಅರಸುತ್ತಾರೆ. ಎಲ್ಲ ವಿಷಯಗಳಲ್ಲೂ ಮೊದಲು ಪತ್ನಿಯ ಖುಷಿಯ ಬಗ್ಗೆ  ಚಿಂತಿಸುತ್ತಾರೆ. ಎನ್‌ನಿಂದ ಹೆಸರು ಆರಂಭವಾಗೋ ಹುಡುಗರು ಬೆಸ್ಟ್ ಹಸ್ಬೆಂಡ್(best husband) ಎಂಬುದರಲ್ಲಿ ಅನುಮಾನವಿಲ್ಲ. 

Festive Tips: ಶಿವರಾತ್ರಿಯಂದು ಈ ರುದ್ರಾಕ್ಷಿ ಧರಿಸಿ, ವೃತ್ತಿ ಕ್ಷೇತ್ರದಲ್ಲಿ ಯಶಸ್ಸು ನಿಮ್ಮದೇ!

ಪಿ- ಪತ್ನಿ ಮೇಲೆ ಅಪಾರ ಪ್ರೀತಿ
ಪಿ ಅಕ್ಷರದಿಂದ ಹೆಸರು ಆರಂಭವಾಗುವ ಹುಡುಗರದು ಮೃದು ಸ್ವಭಾವ(soft nature). ಪತ್ನಿ ಎಷ್ಟೇ ಕೋಪ ತೋರಿದರೂ ಈತ ಶಾಂತವಾಗಿಯೇ ಇರಬಲ್ಲ. ಪತ್ನಿಯ ಎಲ್ಲ ಗುಣಾವಗುಣಗಳನ್ನೂ ಪ್ರೀತಿಸುವ ಈತ, ಆಕೆ ನೋವಲ್ಲಿರುವುದನ್ನು ನೋಡಲಾರ. ಪತ್ನಿ ಹೇಗಿದ್ದರೂ ಆಕೆಯನ್ನು ತುಂಬಾ ಇಷ್ಟ ಪಡುತ್ತಾನೆ. ಎಲ್ಲವನ್ನೂ ಮಾತಿನಲ್ಲಿ ಹೇಳದಿದ್ದರೂ ಕೃತಿಯಲ್ಲಿ ತೋರಿಸಿಕೊಳ್ಳುತ್ತಾನೆ. ಇವರ ಪತ್ನಿ ತಪ್ಪು ಮಾಡಿದರೂ ಸಹ ಅದನ್ನು ಮನಸ್ಸಿನಲ್ಲಿಟ್ಟುಕೊಳ್ಳದೆ ಕ್ಷಮಿಸುವ  ಗುಣ ಇವರದ್ದಾಗಿರುತ್ತದೆ. 

ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳ ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.

click me!