ಶ್ರೀ ಮೇಲ್ ಮರುವತ್ತುರು ಆಧಿಪರಾಶಕ್ತಿ ಶಕ್ತಿ ಅಪಾರ. ತಮಿಳುನಾಡಿನ ದೇವಸ್ಥಾನದಲ್ಲಿ ಗುರುಗಳು ಹಾಡು ಹೇಳಿದರೆ ದೇವಸ್ಥಾನದ ಒಳಗಡೆ ಗಂಟೆ ಭಾರಿಸುತ್ತಿತ್ತು. ಗುರುಗಳು ಹಾಗೂ ಆ ತಾಯಿಯ ಶಕ್ತಿ ಅಷ್ಟು ದೊಡ್ಡದ್ದು ಎಂದ ದೇವಸ್ಥಾನದ ಅಧ್ಯಕ್ಷ ಮುತ್ತಯ್ಯ.
ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು
ಚಿಕ್ಕಮಗಳೂರು(ಜ.04): ಇಡೀ ದೇಶದಲ್ಲೇ ಇರುವ ಏಕೈಕ ದೇವಸ್ಥಾನವಾಗಿರೋ ತಮಿಳುನಾಡಿನ ಓಂ ಶಕ್ತಿ ದೇವಸ್ಥಾನಕ್ಕೆ ಚಿಕ್ಕಮಗಳೂರು ನಗರದಲ್ಲಿ ಸಾವಿರಾರು ಜನ ಇರುಮುಡಿ ಹೊತ್ತು ದೇವಸ್ಥಾನಕ್ಕೆ ಹೊರಟಿದ್ದಾರೆ. ಇಂದು(ಬುಧವಾರ) ನಗರದ ಮಾರ್ಕೆಟ್ ರಸ್ತೆಯಲ್ಲಿ ಇರುಮುಡಿ ಕಾರ್ಯಕ್ರಮ ಹಮ್ಮಿಕೊಂಡಿದ್ದು ಸಾವಿರಾರು ಇರುಮುಡಿ ಧರಿಸಿದ್ದಾರೆ.
ಇದೇ ವೇಳೆ, ದೇವಸ್ಥಾನದ ಅಧ್ಯಕ್ಷ ಮುತ್ತಯ್ಯ ಮಾತನಾಡಿ, ಶ್ರೀ ಮೇಲ್ ಮರುವತ್ತುರು ಆಧಿಪರಾಶಕ್ತಿ ಶಕ್ತಿ ಅಪಾರ. ತಮಿಳುನಾಡಿನ ದೇವಸ್ಥಾನದಲ್ಲಿ ಗುರುಗಳು ಹಾಡು ಹೇಳಿದರೆ ದೇವಸ್ಥಾನದ ಒಳಗಡೆ ಗಂಟೆ ಭಾರಿಸುತ್ತಿತ್ತು. ಗುರುಗಳು ಹಾಗೂ ಆ ತಾಯಿಯ ಶಕ್ತಿ ಅಷ್ಟು ದೊಡ್ಡದ್ದು ಎಂದರು.
Tirupati: ಒಂದೇ ದಿನದಲ್ಲಿ ಹತ್ತಿರತ್ತಿರ 8 ಕೋಟಿ ರೂ. ಹುಂಡಿ ಹಣ ಕಂಡ ತಿರುಪತಿ!
ಇಂದು ನಗರದ ಓಂ ಶಕ್ತಿ ದೇಗುಲದಲ್ಲಿ ಸಂಭ್ರಮದ ಹಿರುಮುಡಿ ಕಾರ್ಯಕ್ರಮ ನಡೆದಿದ್ದು, ಓಂ ಶಕ್ತಿ ಅಮ್ಮನವರ ದೇವಾಲಯದಲ್ಲಿ 35ನೇ ವರ್ಷದ ತೈಪೂಜಾ ಕಾರ್ಯಕ್ರಮದ ಅಂಗವಾಗಿ ಹಿರುಮುಡಿ ಹಾಗೂ ಅನ್ನಸಂತರ್ಪಣೆಯೂ ನಡೆದಿದ್ದು ಸಾವಿರಾರು ಭಕ್ತರು ಪಾಲ್ಗೊಂಡು ತಾಯಿ ಕೃಪೆಗೆ ಪಾತ್ರರಾಗಿದ್ದಾರೆ.
ದೇಶಕ್ಕೆ ಮತ್ತು ಚಿಕ್ಕಮಗಳೂರು ಜನತೆಗೆ ಒಳ್ಳೆಯದಾಗಲೆಂದು ವಿಶೇಷವಾಗಿ ಓಂ ಶಕ್ತಿ ಅಮ್ಮನವರ ಪೂಜಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಭಕ್ತಾದಿಗಳು ಉತ್ತಮ ರೀತಿಯಲ್ಲಿ ಶ್ರದ್ಧಾ ಭಕ್ತಿಯಿಂದ ಪೂಜೆ ಸಲ್ಲಿಸಿ, ದೇವರ ದರ್ಶನವನ್ನು ಮಾಡಲಿದ್ದಾರೆ ಎಂದರು. ಇಂದು ಹಿರುಮುಡಿ ಹಾಗೂ ಅನ್ನಸಂತರ್ಪಣೆ ಕಾರ್ಯಕ್ರಮ ಬಹಳಷ್ಟು ಅದ್ಧೂರಿಯಿಂದ ನಡೆದಿದ್ದು. ಹೋಮ, ಹವನಗಳ ಮೂಲಕ ಹಿರುಮುಡಿ ಕಾರ್ಯಕ್ರಮವನ್ನ ಸಾಂಪ್ರದಾಯಿಕವಾಗಿ ಆಚರಿಸಲಾಗಿದೆ ಎಂದರು.