ಮಾದಪ್ಪನ ಸನ್ನಿಧಿಯಲ್ಲಿ ಶಿವರಾತ್ರಿ ಆಚರಣೆಗೆ ಪಾದಯಾತ್ರೆ ಮೂಲಕ ಆಗಮಿಸುತ್ತಿದೆ ಭಕ್ತರ ದಂಡು!

Published : Feb 22, 2025, 06:57 PM ISTUpdated : Feb 22, 2025, 07:03 PM IST
ಮಾದಪ್ಪನ ಸನ್ನಿಧಿಯಲ್ಲಿ ಶಿವರಾತ್ರಿ ಆಚರಣೆಗೆ ಪಾದಯಾತ್ರೆ ಮೂಲಕ ಆಗಮಿಸುತ್ತಿದೆ ಭಕ್ತರ ದಂಡು!

ಸಾರಾಂಶ

ಏಳು ಮಲೆ… ಎಪ್ಪತ್ತೇಳು ಮಲೆಗಳ ಒಡೆಯ ಮಹದೇಶ್ವರ ಕೋಟ್ಯಂತರ ಮಂದಿ ಭಕ್ತರ ಆರಾಧ್ಯದೈವ. ಮಾದಪ್ಪನ ಸನ್ನಿದಿಯಲ್ಲಿ ಶ್ರದ್ಧಾ ಭಕ್ತಿಯಿಂದ ಶಿವರಾತ್ರಿ ಆಚರಣೆ ಮಾಡುವುದೆಂದೆರೆ ಭಕ್ತರಿಗೆ ಎಲ್ಲಿಲ್ಲದ ಉತ್ಸಾಹ. 

ವರದಿ: ಪುಟ್ಟರಾಜು. ಆರ್.ಸಿ, ಏಷಿಯಾನೆಟ್ ಸುವರ್ಣ ನ್ಯೂಸ್, ಚಾಮರಾಜನಗರ.

ಚಾಮರಾಜನಗರ (ಫೆ.22): ಏಳು ಮಲೆ… ಎಪ್ಪತ್ತೇಳು ಮಲೆಗಳ ಒಡೆಯ ಮಹದೇಶ್ವರ ಕೋಟ್ಯಂತರ ಮಂದಿ ಭಕ್ತರ ಆರಾಧ್ಯದೈವ. ಮಾದಪ್ಪನ ಸನ್ನಿದಿಯಲ್ಲಿ ಶ್ರದ್ಧಾ ಭಕ್ತಿಯಿಂದ ಶಿವರಾತ್ರಿ ಆಚರಣೆ ಮಾಡುವುದೆಂದೆರೆ ಭಕ್ತರಿಗೆ ಎಲ್ಲಿಲ್ಲದ ಉತ್ಸಾಹ. ಹಾಗಾಗಿಯೇ ಸಹಸ್ರಾರು ಮಂದಿ ಭಕ್ತರು ಕಲ್ಲು ಮುಳ್ಳುಗಳ ಹಾದಿಯಲ್ಲಿ ಕಾಡುಮೇಡು ಸುತ್ತಿ ಕಾಲ್ನಡಿಗೆಯಲ್ಲಿ ಬೆಟ್ಟದತ್ತ ಧಾವಿಸುತ್ತಿದ್ದಾರೆ. ಜೀವದ ಹಂಗು ತೊರೆದು ಕಾವೇರಿ ನದಿ  ದಾಟಿ  ಮಾದಪ್ಪನ  ಸನ್ನಿಧಿಗೆ  ದಾಂಗುಡಿ  ಇಡುತ್ತಿದ್ದಾರೆ. ಈ ಕುರಿತು ಒಂದು ಸ್ಟೋರಿ ಇಲ್ಲಿದೆ ನೋಡಿ.

ಮಲೆಮಹದೇಶ್ವರ  ಬೆಟ್ಟ.. ದಕ್ಷಿಣ  ಭಾರತದ  ಪ್ರಸಿದ್ದ  ಯಾತ್ರಾ  ಸ್ಥಳ.  ಎಪ್ಪತ್ತೇಳು ಬೆಟ್ಟಗಳ ನಡುವೆ ನೆಲೆಸಿರುವ ಮಹದೇಶ್ವರ.. ಕೋಟ್ಯಂತರ ಭಕ್ತರ ಆರಾಧ್ಯದೈವ.  ಪ್ರತಿವರ್ಷದಂತೆ   ಈ ವರ್ಷವೂ ಶ್ರದ್ದಾಭಕ್ತಿಯಿಂದ  ಶಿವರಾತ್ರಿ ಆಚರಣೆಗೆ ಮಹದೇಶ್ವರ ಬೆಟ್ಟ ಸಜ್ಜಾಗಿದೆ. ಮಾದಪ್ಪನ ಸನ್ನಿಧಿಯಲ್ಲಿ ಶಿವರಾತ್ರಿ ಆಚರಣೆ ಮಾಡುವುದೆಂದರೆ ಭಕ್ತರಿಗೆ ಎಲ್ಲಿಲ್ಲದ ಉತ್ಸಾಹ. ಹಾಗಾಗಿ  ಫೆಬ್ರುವರಿ 26 ರಂದು ರಂದು ನಡೆಯುವ ಮಹಾಶಿವರಾತ್ರಿಗೆ ಇಂದಿನದಲೇ ಮಲೆ ಮಹದೇಶ್ವರ ಬೆಟ್ಟದತ್ತ  ಭಕ್ತ ಸಾಗರ ಹರಿದುಬರುತ್ತಿದೆ. ವಯಸ್ಸಿನ ಬೇಧವಿಲ್ಲದೆ ಮಹಿಳೆಯರು ಮಕ್ಕಳೆನ್ನದೆ ಸಹಸ್ರಾರು ಭಕ್ತರು ಕಾಲ್ನಡಿಗೆಯಲ್ಲೆ ಬರತೊಡಗಿದ್ದಾರೆ. ಕೋಲಾರ ಬೆಂಗಳೂರು, ರಾಮನಗರ, ಚನ್ನಪಟ್ಟಣ,ಕನಕಪುರ, ಹಲಗೂರು, ಮಳವಳ್ಳಿ, ಮಂಡ್ಯ ಹೀಗೆ ನಾನಾ ಕಡೆಯಿಂದ ಕಾಡು ಮೇಡು ಸುತ್ತಿ ಭಕ್ತರು ಮಾದಪ್ಪನ ಬೆಟ್ಟದತ್ತ ಧಾವಿಸುತ್ತಿದ್ದಾರೆ.  

ಜೀವಭಯ ಲೆಕ್ಕಿಸದೆ ಚಾಮರಾಜನಗರ ಜಿಲ್ಲೆಯ ಗಡಿ ಭಾಗದಲ್ಲಿ ಹರಿಯುವ ಕಾವೇರಿ ನದಿ ದಾಟಿ ಆಗಮಿಸುತ್ತಿದ್ದಾರೆ.  ನೀರಿನ ಸೆಳೆತ ಇರುವುದರಿಂದ ನದಿಯ ಎರಡೂ ದಡಗಳಿಗೆ ಹಗ್ಗ ಕಟ್ಟಿ ಹಗ್ಗ ಹಿಡಿದು ನದಿ ದಾಟಿ ಸಹಸ್ರಾರು ಭಕ್ತರು ಮಾದಪ್ಪನ ಸನ್ನಿಧಿಗೆ ಬರತೊಡಗಿದ್ದಾರೆ ನದಿ ದಾಟಿ ದಟ್ಟ ಅರಣ್ಯದ ನಡುವೆ ನಡೆದು ಬಂದರೂ ಮಹದೇಶ್ವರನ ಕೃಪೆಯಿಂದಾಗಿ ತಮಗೆ ಯಾವುದೇ ಪ್ರಾಣಿಗಳಿಂದ ತೊಂದರೆಯಾಗಿಲ್ಲ. ಮಾದಪ್ಪನ ದ್ಯಾನ ಮಾಡುತ್ತಾ ಬರುವುದರಿಂದ ಎಷ್ಟೇ ದೂರ ನಡೆದರೂ ಯಾವುದೇ ರೀತಿಯ ದಣಿವೂ ಆಗುತ್ತಿಲ್ಲ ಎನ್ನುತ್ತಾರೆ ಭಕ್ತರು. ಹೀಗೆ ಕಾಲ್ನಡಿಗೆಯಲ್ಲಿ ಧಣಿದು ಬರುವ ಭಕ್ತರಿಗೆ ಹನೂರು ತಾಲೋಕಿನ ನಾನಾ ಕಡೆ ಆಯಾ ಗ್ರಾಮಸ್ಥರು ಊಟ ತಿಂಡಿ ಕುಡಿಯುವ ನೀರಿನ ವ್ಯವಸ್ಥೆ, ನೆರಳಿನ ಸೌಲಭ್ಯ ಕಲ್ಪಿಸಿದ್ದಾರೆ. 

ಬಂಡೀಪುರದಲ್ಲಿ ಫಾಸ್ಟ್‌ಟ್ಯಾಗ್ ಮೂಲಕ ಹಸಿರು ಸುಂಕ ವಸೂಲಿ: ನಗದಿನ ಬದಲು ಡಿಜಿಟಲ್ ಮೂಲಕ ಹಣ ವಸೂಲಿ!

ಭಕ್ತರ ಸೇವೆ ಮಾಡಿದರೆ ಮಾದಪ್ಪನ ಸೇವೆ ಮಾಡಿದಂತೆ ಎಂಬ ಭಾವನೆಯಿಂದ  ಕಾಲ್ನಡಿಗೆಯಲ್ಲಿ ಬರುವ ಭಕ್ತರಿಗೆ ದಾರಿಯುದ್ದಕ್ಕೂ ರೈತರು ಊಟ ತಿಂಡಿ ಅಷ್ಟೇ ಅಲ್ಲದೆ ಕುಡಿಯುವ ನೀರು, ಮಜ್ಜಿಗೆ, ಪಾನಕ, ತಂಪು ಪಾನೀಯಗಳನ್ನು ನೀಡಿ ಭಕ್ತರ ಧಣಿವಾರಿಸುತ್ತಿದ್ದಾರೆ ಕೆಎಸ್ಆರ್ಟಿಸಿ ಬಸ್ನಲ್ಲಿ ಉಚಿತ ಪ್ರಯಾಣದ ಸೌಲಭ್ಯ ಇದ್ದರೂ ಲೆಕ್ಕಿಸದೆ ಮಹಿಳೆಯರು ಕಾಲ್ನಡಿಗೆಯಲ್ಲಿ ಮಾದಪ್ಪನ ದರ್ಶನಕ್ಕೆ ಬರುತ್ತಿದ್ದಾರೆ. ಹೀಗೆ ಬರುವಂತಹ ಭಕ್ತಾಧಿಗಳ ರಕ್ಷಣೆ ದೃಷ್ಠಿಯಿಂದ ರಾತ್ರಿ ವೇಳೆ ಕಾಡುಪ್ರಾಣಿಗಳ ದಾಳಿ ಸಂಭವವಿರುವಿದರಿಂದ ರಾತ್ರಿ ಸಮಯದಲ್ಲಿ ಆರು ಗಂಟೆಯ ನಂತರ ತಾಳಬೆಟ್ಟದಿಂದ ಮಹದೇಶ್ವರ ಬೆಟ್ಟಕ್ಕೆ ಪಾದಯಾತ್ರೆ ನಿಷೇದಿಸಲಾಗಿದೆ.

PREV
click me!

Recommended Stories

ಜನವರಿಯಲ್ಲಿ 7 ರಾಶಿಗೆ ಅದೃಷ್ಟ ಬಾಗಿಲು ಓಪನ್, ಸಂಪತ್ತು ಪಕ್ಕಾ
ಇಂದು ರಾತ್ರಿ ಚಂದ್ರ ರಾಶಿ ಬದಲು, ಈ 3 ರಾಶಿಗೆ ಸಂಪತ್ತಿನಿಂದ ಶ್ರೀಮಂತಿಕೆ ಯೋಗ, 3 ಶಕ್ತಿಶಾಲಿ ರಾಜಯೋಗ