Shabarimala: ಅಯ್ಯಪ್ಪ ಸ್ವಾಮಿಗೆ 20,000 ತುಪ್ಪ ತುಂಬಿದ ತೆಂಗಿನಕಾಯಿ ನೀಡಿದ ಬೆಂಗಳೂರು ಭಕ್ತ!

By Suvarna News  |  First Published Jan 6, 2022, 6:01 PM IST

ಶಬರಿಮಲೆ ಅಯ್ಯಪ್ಪನಿಗೆ ತುಪ್ಪಾಭಿಷೇಕ ಎಂದರೆ ಪ್ರೀತಿ. ಈತನ ಭಕ್ತರೊಬ್ಬರು ಈಗ 20,000 ತುಪ್ಪ ತುಂಬಿದ ಕಾಯಿಗಳನ್ನು ಹರಕೆಯಾಗಿ ಸಲ್ಲಿಸಿದ್ದಾರೆ. 


ಶಬರಿಮಲೆ(Sabrimala) ಅಯ್ಯಪ್ಪ ಸ್ವಾಮಿಗೆ ನೆಯ್ಯಾಭಿಷೇಕ ಮಾಡಲು ಬರೋಬ್ಬರಿ 20,000 ತುಪ್ಪ ತುಂಬಿದ ಕಾಯಿಗಳನ್ನು ದೇವಾಲಯಕ್ಕೆ ಕಾಣಿಕೆಯಾಗಿ ನೀಡಿರುವ ಭಕ್ತರೊಬ್ಬರು ಈ ಸಂಬಂಧ ಇತಿಹಾಸ ಸೃಷ್ಟಿಸಿದ್ದಾರೆ. 

ಬೆಂಗಳೂರು(Bengaluru) ಮೂಲದ ಮಲೆಯಾಳಿ ಉದ್ಯಮಿ ವಿಷ್ಣು ಶರಣ್ ಭಟ್ ಅಯ್ಯಪ್ಪನಿಗೆ ಈ ಮಟ್ಟದ ತೆಂಗಿನಕಾಯಿ ಹಾಗೂ ತುಪ್ಪ ನೀಡಿದ ಭಕ್ತರು. ಬುಧವಾರ ಅಯ್ಯಪ್ಪ ಸ್ವಾಮಿಗೆ 20,000 ತುಪ್ಪದ ಕಾಯಿಗಳ ಹರಕೆ ಸಲ್ಲಿಸಲಾಯಿತು. ಇವರು 18,001 ಕಾಯಿಗಳಿಂದ ನೆಯ್ಯಾಭಿಷೇಕ ಮಾಡುವುದಾಗಿ ಹೇಳಿದ್ದಾದರೂ, 20,000 ತುಪ್ಪದ ಕಾಯಿಗಳು(coconuts) ರೆಡಿ ಇದ್ದಿದ್ದರಿಂದ ಅಷ್ಟನ್ನೂ ಸಮರ್ಪಿಸಲಾಯಿತು. 

ಇದಕ್ಕಾಗಿ ವಿಷ್ಣು ಭಟ್ ಅವರು ಶಬರಿಮಲೆ ಆಡಳಿತ ಮಂಡಳಿ ಟ್ರಾವಂಕೋರ್ ದೇವಸ್ವಂ ಮಂಡಳಿಗೆ 18 ಲಕ್ಷ ರುಪಾಯಿ ಹಣವನ್ನು ನೀಡಿದ್ದಾರೆ. ಈ ಸಂದರ್ಭದಲ್ಲಿ ಭಟ್ ಅವರು ಸ್ಥಳದಲ್ಲಿ ಹಾಜರಿಲ್ಲದಿದ್ದರೂ ಅವರ ಸ್ನೇಹಿತರು, ಕುಟುಂಬಸ್ಥರು ದೇವಾಲಯದಲ್ಲಿ ಹಾಜರಿದ್ದರು. ಈ ಸಂದರ್ಭದಲ್ಲಿ ಸ್ವಾಮಿಯೇ ಶರಣಂ ಅಯ್ಯಪ್ಪ ಎಂಬ ಘೋಷಗಳು ದೇವಾಲಯದಲ್ಲಿ ಮೊಳಗಿವೆ.

ಈ ನೆಯ್ಯಾಭಿಷೇಕಕ್ಕಾಗಿ 2280 ಕೆಜಿ ತುಪ್ಪ ಹಾಗೂ 7.5 ಟನ್ ತೆಂಗಿನ ಕಾಯಿಯನ್ನು ಬಳಸಲಾಗಿದೆ. ಸುಮಾರು 10 ಜನ ಅರ್ಚಕರು ಸೇರಿ ಹಗಲೂ ರಾತ್ರಿಯೆನ್ನದೆ ಈ 20,000 ಕಾಯಿಗಳಿಗೆ ತುಪ್ಪ(Ghee) ತುಂಬುವ ಕೆಲಸ ಮಾಡಿದ್ದಾರೆ. ಇಲ್ಲಿನ ಆಡಳಿತಾಧಿಕಾರಿ ಹೇಳುವ ಪ್ರಕಾರ ಇದೇ ಮೊದಲ ಬಾರಿಗೆ ಈ ಮಟ್ಟದ ನೆಯ್ಯಾಭಿಷೇಕ ಅಯ್ಯಪ್ಪನಿಗೆ ನಡೆದಿದೆ. ಇದೊಂದು ಇತಿಹಾಸವನ್ನೇ ಸೃಷ್ಟಿಸಿದೆ.

Bad Luck: ಈ 2 ರಾಶಿಯವರು ಮರೆತೂ ಕಪ್ಪು ದಾರವನ್ನು ಕಟ್ಟಿಸಿಕೊಳ್ಳಬಾರದು!

Tap to resize

Latest Videos

ಏನಿದು ನೆಯ್ಯಾಭಿಷೇಕ(neyyabhishekam)?
ನೆಯ್ಯಾಭಿಷೇಕ ಎಂದರೆ ದೇವರ ವಿಗ್ರಹಕ್ಕೆ ತುಪ್ಪದ ಅಭಿಷೇಕ ಮಾಡುವುದು. ಇದು ಅಯ್ಯಪ್ಪನಿಗೆ ಅಚ್ಚುಮೆಚ್ಚು. ಇಲ್ಲಿಗೆ ಮಾಲೆ ಹಾಕಿ ಬರುವ ಪ್ರತಿಯೊಬ್ಬರೂ ತುಪ್ಪದ ಅಭಿಷೇಕ ಮಾಡಿಸುತ್ತಾರೆ. ಈ ಪೂಜೆಗೆ ಬೇಕಾದ ತುಪ್ಪವನ್ನು ತೆಂಗಿನ ಕಾಯಿಯೊಳಗೆ ತುಂಬಿ ಬಳಸಲಾಗುತ್ತದೆ. 

ಅಯ್ಯಪ್ಪನ ಮಾಲೆ ಧರಿಸುವ ಭಕ್ತರ ಇರುಮುಡಿಯಲ್ಲಿ ಒಂದು ಗಂಟಿನಲ್ಲಿ ಅಕ್ಕಿ ಇದ್ದರೆ ಮತ್ತೊಂದರಲ್ಲಿ ತುಪ್ಪದ ಕಾಯಿ ಇರುತ್ತದೆ. ಭೂಮಿಯಲ್ಲಿ ಸಿಗುವ ಪದಾರ್ಥಗಳಲ್ಲೇ ಅತಿ ಶುದ್ಧವಾದದ್ದು ಕಾಯಿ ಎಂಬ ನಂಬಿಕೆಯಿದೆ. ತೆಂಗಿನಕಾಯಿಯು ಶುದ್ಧತೆಯ ಸಂಕೇತ. ಅದರಲ್ಲಿರುವ ಹಳೆಯ ನೀರನ್ನು ಹೊರ ಹಾಕಿ ತುಪ್ಪ ತುಂಬಲಾಗುತ್ತದೆ. ಮನಸ್ಸಿನಲ್ಲಿರುವ ಹಳೆಯದನ್ನು ತೆಗೆದು ಹೊಸತನ್ನು ತುಂಬುವ ಪ್ರತೀಕವಾಗಿ ಈ ತುಪ್ಪದ ಗಂಟನ್ನು ಅಯ್ಯಪ್ಪ ಭಕ್ತರು ತಲೆ ಮೇಲೆ ಹೊತ್ತು ಸಾಗುತ್ತಾರೆ. 

Personality Traits and Zodiacs: ಈ 4 ರಾಶಿಯ ಪುರುಷರು ಸಂಬಂಧವನ್ನು ಕಂಟ್ರೋಲ್ ಮಾಡ ಬಯಸುತ್ತಾರೆ!

ಯಾರು ಈ ಅಯ್ಯಪ್ಪ(Ayyappa)?
ಅಯ್ಯಪ್ಪನು ಹರಿ ಹರ ಸುತ. ಅಂದರೆ, ವಿಷ್ಣುವು ಹೆಣ್ಣಿನ ರೂಪ ಧರಿಸಿದಾಗ ಆ ರೂಪವನ್ನು ನೋಡಿ ಶಿವನು ಮೋಹಿತನಾಗುತ್ತಾನೆ. ಅವರಿಬ್ಬರಿಗೆ ಜನಿಸಿದ ಮಗುವೇ ಅಯ್ಯಪ್ಪ. ಮಹಿಷಾಸುರನ ವಧೆಯ ನಂತರ ಆತನ ತಂಗಿ ಮಹಿಷಿಯು ಅಣ್ಣನ ಕೊಲೆಗೆ ಪ್ರತೀಕಾರ ಪಡೆಯಲು ತಪಸ್ಸು ಮಾಡಿ ಬ್ರಹ್ಮನನ್ನು ಒಲಿಸಿಕೊಳ್ಳುತ್ತಾಳೆ. ಇಬ್ಬರು ಗಂಡಸರಿಗೆ ಮಕ್ಕಳಾಗುವುದಿಲ್ಲ ಎಂಬ ಕಾರಣದಿಂದ, ತಾನು ಅಮರಳಾಗುವ ಆಸೆಯಿಂದ ಹರಿ ಹರನ ಪುತ್ರನ ಹೊರತಾಗಿ ತನಗೆ ಯಾರಿಂದಲೂ ಸಾವು ಬರಬಾರದೆಂದು ವರ ಪಡೆಯುತ್ತಾಳೆ. ಇವಳ ಆರ್ಭಟ ಅಳಿಸಲು ವಿಷ್ಣುವು ಹೆಣ್ಣಿನ ರೂಪ ತಾಳಿ ಶಿವನ ಜೊತೆ ಸೇರುತ್ತಾನೆ. ಇವರಿಗೆ ಹುಟ್ಟಿದ ಮಗುವನ್ನು ಪಂದಳದ ರಾಜ ರಾಜಶೇಖರ ಸಾಕುತ್ತಾನೆ. ಇದೇ ಮಗು ಮುಂದೆ ಮಹಿಷಿಯ ಸಂಹಾರ ಮಾಡುತ್ತದೆ. 

click me!