ದೇವ ಉತ್ಥಾನ ಏಕಾದಶಿ ಉಪವಾಸವು ಮೋಕ್ಷವನ್ನು ನೀಡುತ್ತದೆ. ಈ ಏಕಾದಶಿಯ ಹಿನ್ನೆಲೆ ಕತೆಯೇನು? ಎಲ್ಲ ಏಕಾದಶಿಗಿಂತ ಇದು ಶ್ರೇಷ್ಠವೆನ್ನಲು ಕಾರಣವೇನು?
ಏಕಾದಶಿ ಉಪವಾಸವನ್ನು ಹಿಂದೂ ಧರ್ಮದಲ್ಲಿ ಬಹಳ ಮುಖ್ಯವೆಂದು ಪರಿಗಣಿಸಲಾಗುತ್ತದೆ. ಎಲ್ಲಾ ಏಕಾದಶಿಗಳಲ್ಲಿ ದೇವ ಉತ್ಥಾನ ಏಕಾದಶಿಗೆ ವಿಶೇಷ ಮಹತ್ವವಿದೆ. ಏಕೆಂದರೆ ಈ ದಿನ ಶ್ರೀ ಹರಿಯು ನಾಲ್ಕು ತಿಂಗಳ ನಂತರ ಯೋಗ ನಿದ್ರೆಯಿಂದ ಎಚ್ಚರಗೊಳ್ಳುತ್ತಾನೆ ಮತ್ತು ಚಾತುರ್ಮಾಸವು ಕೊನೆಗೊಳ್ಳುತ್ತದೆ. ದೇವ ಉತ್ಥಾನ ಏಕಾದಶಿಯು ಈ ವರ್ಷ 4ನೇ ನವೆಂಬರ್ 2022ರಂದು ಬರುತ್ತಿದೆ.
ಈ ದಿನ, ಶ್ರೀ ಹರಿಯ ರೂಪದಲ್ಲಿ ಶಾಲಿಗ್ರಾಮ ಮತ್ತು ತುಳಸಿ ವಿವಾಹದ ನಂತರ, ಖಂಡಿತವಾಗಿಯೂ ಕಥೆಯನ್ನು ಕೇಳಬೇಕು. ದೇವ ಉತ್ಥಾನ ಏಕಾದಶಿ ಉಪವಾಸವನ್ನು ಆಚರಿಸುವುದರಿಂದ ಮೋಕ್ಷ ಪ್ರಾಪ್ತಿಯಾಗುತ್ತದೆ ಎಂದು ನಂಬಲಾಗಿದೆ. ಸಾವಿನ ನಂತರ, ವ್ಯಕ್ತಿಯು ವೈಕುಂಠಧಾಮಕ್ಕೆ ಹೋಗುತ್ತಾನೆ. ಏಕಾದಶಿಯ ಮಹತ್ವವನ್ನು ಶ್ರೀಕೃಷ್ಣನೇ ಯುಧಿಷ್ಠಿರನಿಗೆ ಹೇಳಿದ್ದ. ದೇವ ಉತ್ಥಾನ ಏಕಾದಶಿಯಂದು ಪ್ರದೋಷಕಾಲದಲ್ಲಿ ಕಬ್ಬಿನ ಮಂದಿರವನ್ನು ಮಾಡಿ ಶ್ರೀಹರಿಯ ರೂಪದಲ್ಲಿ ಶಾಲಿಗ್ರಾಮ ಮತ್ತು ತುಳಸಿಯ ವಿವಾಹದ ನಂತರ ಕಥಾನಕವನ್ನು ಖಂಡಿತವಾಗಿ ಕೇಳಬೇಕು, ಅದನ್ನು ಕೇಳಿದರೆ ಪಾಪ ಕರ್ಮವು ಕೊನೆಗೊಳ್ಳುತ್ತದೆ ಎಂದು ಹೇಳಲಾಗುತ್ತದೆ. ದೇವ ಉತ್ಥಾನ ಏಕಾದಶಿ ಉಪವಾಸದ ಕಥೆಯನ್ನು ತಿಳಿಯೋಣ.
ದೇವ ಉತ್ಥಾನ ಏಕಾದಶಿ 2022 ಮುಹೂರ್ತ
ಕಾರ್ತಿಕ ಶುಕ್ಲ ದೇವ ಉಥನಿ ಏಕಾದಶಿ ದಿನಾಂಕ ಪ್ರಾರಂಭ - 3ನೇ ನವೆಂಬರ್ 2022, 7.30pm
ಕಾರ್ತಿಕ ಶುಕ್ಲ ಏಕಾದಶಿ ದಿನಾಂಕ ಅಂತ್ಯ - 4 ನವೆಂಬರ್ 2022, 06.08 pm
ದೇವ ಉತ್ಥಾನ ಏಕಾದಶಿ ಉಪವಾಸ ಸಮಯ - 06.39 am - 08.52 am (5 ನವೆಂಬರ್ 2022)
ದೇವರನ್ನು ಪೂಜಿಸುವಾಗ ಅನುಸರಿಸಲೇಬೇಕಾದ 15 ನಿಯಮಗಳು..
ದೇವ ಉತ್ಥಾನ ಏಕಾದಶಿ ಕಥೆ
ದಂತಕಥೆಯ ಪ್ರಕಾರ, ಒಂದಾನೊಂದು ಕಾಲದಲ್ಲಿ ರಾಜ್ಯವೊಂದರಲ್ಲಿ ರಾಜನ ಆದೇಶದ ಮೇರೆಗೆ ಏಕಾದಶಿಯ ದಿನದಂದು, ಜನರಿಂದ ಹಿಡಿದು ಪ್ರಾಣಿಗಳವರೆಗೆ ಯಾರೂ ಆಹಾರವನ್ನು ತೆಗೆದುಕೊಳ್ಳುತ್ತಿರಲಿಲ್ಲ. ಹಾಗೆಯೇ ಯಾರೂ ಆಹಾರವನ್ನು ಮಾರುತ್ತಿರಲಿಲ್ಲ. ವಿಷ್ಣುವು ರಾಜನನ್ನು ಪರೀಕ್ಷಿಸಲು ಸೌಂದರ್ಯವತಿ ರೂಪ ತೆಗೆದುಕೊಂಡು ರಸ್ತೆಬದಿಯಲ್ಲಿ ಕುಳಿತನು. ರಾಜನು ಹಾದುಹೋದಾಗ, ಸುಂದರಿಯನ್ನು ಇಲ್ಲಿ ಕುಳಿತಿರುವ ಕಾರಣವನ್ನು ಕೇಳಿದನು. ಈ ಜಗತ್ತಿನಲ್ಲಿ ತನಗೆ ಯಾರೂ ಇಲ್ಲ, ತಾನು ನಿರ್ಗತಿಕಳು ಎಂದು ಮಹಿಳೆ ಹೇಳಿದಳು. ರಾಜನು ಅವಳ ನೋಟದಿಂದ ಆಕರ್ಷಿತನಾದನು ಮತ್ತು ನೀನು ನನ್ನ ರಾಣಿಯಾಗಿ ಅರಮನೆಗೆ ಬಾ ಎಂದು ಹೇಳಿದನು.
ಸುಂದರಿಯು ರಾಜನ ಕೋರಿಕೆಯನ್ನು ಒಪ್ಪಿಕೊಂಡಳು. ಆದರೆ ಇದಕ್ಕಾಗಿ ರಾಜನು ಇಡೀ ಸಾಮ್ರಾಜ್ಯದ ಹಕ್ಕನ್ನು ತನಗೆ ಹಸ್ತಾಂತರಿಸಬೇಕು ಮತ್ತು ಅವಳು ಏನು ಹೇಳಿದರೂ, ಮಾಡಿದರೂ ಅದನ್ನು ಪಾಲಿಸಬೇಕು ಎಂದು ಷರತ್ತು ಹಾಕಿದಳು. ರಾಜನು ಷರತ್ತನ್ನು ಒಪ್ಪಿಕೊಂಡನು. ಮರುದಿನ, ಏಕಾದಶಿಯಂದು, ಸುಂದರಿ ಉಳಿದ ದಿನಗಳಂತೆ ಮಾರುಕಟ್ಟೆಗಳಲ್ಲಿ ಆಹಾರವನ್ನು ಮಾರಾಟ ಮಾಡಲು ಆದೇಶಿಸಿದಳು. ಮಾಂಸಾಹಾರ ತಿನ್ನುವಂತೆ ರಾಜನನ್ನು ಒತ್ತಾಯಿಸಿದಳು. ಇಂದು ಏಕಾದಶಿಯ ಉಪವಾಸದ ಸಮಯದಲ್ಲಿ ನಾನು ಹಣ್ಣುಗಳನ್ನು ಮಾತ್ರ ತೆಗೆದುಕೊಳ್ಳುತ್ತೇನೆ ಎಂದು ರಾಜನು ಹೇಳಿದನು. ಆಗ ಸುಂದರಿಯು, ಕೊಟ್ಟ ಮಾತಿನಂತೆ ನಡೆಯಬೇಕು. ಇಲ್ಲದಿದ್ದರೆ ನಾನು ಹಿರಿಯ ರಾಜಕುಮಾರನ ತಲೆಯನ್ನು ಕತ್ತರಿಸುತ್ತೇನೆ ಎಂದು ಹೇಳಿದಳು.
Blowing a Conch: ಶಂಖ ಊದೋದ್ರಿಂದ ಸಿಗೋ 6 ಆರೋಗ್ಯ ಲಾಭಗಳು
ರಾಜ ವಿಷ್ಣುವಿನ ಪರೀಕ್ಷೆಯಲ್ಲಿ ಉತ್ತೀರ್ಣನಾದ
ರಾಜನು ತನ್ನ ಪರಿಸ್ಥಿತಿಯನ್ನು ಹಿರಿಯ ರಾಣಿಗೆ ಹೇಳಿದನು. ಹಿರಿಯ ರಾಣಿ ರಾಜನಿಗೆ ಸುಂದರಿಗೆ ಕೊಟ್ಟ ಮಾತು ಉಳಿಸಿಕೊಳ್ಳಲು ಹೇಳಿ ತನ್ನ ಮಗನ ಶಿರಚ್ಛೇದ ಮಾಡಲು ಒಪ್ಪಿದಳು. ರಾಜಕುಮಾರ ಕೂಡ ತಂದೆಯನ್ನು ಧರ್ಮವನ್ನು ಬಿಡಬೇಡಿ ಎಂದು ಕೇಳಿದನು ಮತ್ತು ಸಂತೋಷದಿಂದ ತನ್ನ ತಲೆಯನ್ನು ತ್ಯಾಗ ಮಾಡಲು ಒಪ್ಪಿದನು. ರಾಜನು ಹತಾಶನಾಗಿದ್ದನು ಮತ್ತು ತಾನು ಉಪವಾಸ ಬಿಡಲಾರೆ ಎಂದು ಹೇಳಿ ರಾಜಕುಮಾರನ ತಲೆಯನ್ನು ನೀಡಲು ಒಪ್ಪಿಕೊಂಡನು.
ಆಗ ವಿಷ್ಣುವು ರಾಜನಿಗೆ ತನ್ನ ನಿಜರೂಪ ದರ್ಶನ ಮಾಡಿಸಿ, ಇದು ನಿನ್ನ ಪರೀಕ್ಷೆ ಮತ್ತು ನೀನು ಅದರಲ್ಲಿ ಪಾಸಾಗಿದ್ದೀಯ ಎಂದು ಹೇಳಿದನು. ನಂತರ ರಾಜನಿಗೆ ಆಯಸ್ಸು ಪೂರ್ತಿ ಆಡಳಿತ ಮಾಡಲು ಬಿಟ್ಟು, ಆಯಸ್ಸು ತುಂಬಿದ ಬಳಿಕ ಮೋಕ್ಷ ಕರುಣಿಸಿದನು.