Astrology Tips : ಸತ್ತ ಚೇಳು ಮನೆಯಲ್ಲಿ ಕಂಡ್ರೆ ಶುಭವಾ? ಅಶುಭವಾ?

By Suvarna NewsFirst Published Nov 4, 2022, 1:19 PM IST
Highlights

ಚೇಳು ನೋಡಿದ್ರೆ ಮೈ ಜುಮ್ ಎನ್ನಿಸುತ್ತೆ. ಅದು ಕಚ್ಚಿದ್ರೆ ನೋವು ಅನುಭವಿಸೋದು ಕಷ್ಟ. ಈ ಚೇಳಿಗೂ ಶಾಸ್ತ್ರದಲ್ಲಿ ಮಹತ್ವದ ಸ್ಥಾನವಿದೆ. ಸತ್ತ ಚೇಳಿರಲಿ, ಜೀವಂತ ಚೇಳಿರಲಿ ಅವು ಕೂಡ ಭವಿಷ್ಯದ ಬಗ್ಗೆ ಮುನ್ಸೂಚನೆ ನೀಡುತ್ತವೆ.
 

ಎಲ್ಲ ಋತುವಿನಲ್ಲೂ ಒಂದೊಂದು ರೀತಿಯ ಕೀಟಗಳು ಕಾಣಿಸಿಕೊಳ್ಳುತ್ತವೆ. ಮನೆ ಹೊರಗೆ ಮಾತ್ರವಲ್ಲ ಮನೆಯೊಳಗೂ ಕಾಣಿಸಿಕೊಳ್ಳುವ ಕೀಟಗಳಲ್ಲಿ ಚೇಳು ಕೂಡ ಒಂದು. ಸಾಮಾನ್ಯವಾಗಿ ಚೇಳು, ತಂಪಾದ, ಶೀತದ ಪ್ರದೇಶಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ಮನೆಯ ಬಾಗಿಲು ಸಂದಿ, ಸಿಂಕ್ ಅಕ್ಕಪಕ್ಕ, ಬಾತ್ ರೂಮಿನ ಮೂಲೆ ಹೀಗೆ ಎಲ್ಲೆಂದರಲ್ಲಿ ನಿಮಗೆ ಚೇಳು ಸಿಗಬಹುದು. ಹಳ್ಳಿಗಳಲ್ಲಿ ಈ ಚೇಳಿನ ಕಾಟ ಹೆಚ್ಚು. ಈ ಚೇಳು (Centipede)  ಭಯ ಹುಟ್ಟಿಸುವಂತಿರುತ್ತದೆ. ನೂರಾರು ಕಾಲುಗಳನ್ನು ಹೊಂದಿರುವ ಚೇಳು, ವಿಷಕಾರಿ (Poison) ಕೂಡ. ಕೆಲ ಜಾತಿಯ ಚೇಳು ಕಚ್ಚಿದ್ರೆ ಸಾವಿನ ಅಪಾಯವಿರುತ್ತದೆ. ಇನ್ನು ಕೆಲ ಚೇಳುಗಳು ವಿಪರೀತ ನೋವು (pain) ನೀಡುತ್ತವೆ. ಮನೆಯಲ್ಲಿ ಕಾಣಿಸಿಕೊಳ್ಳುವ ಚೇಳನ್ನು ಜನರು ಒಂದು ಸಾಯಿಸ್ತಾರೆ ಇಲ್ಲವೆ ಮನೆಯಿಂದ ಹೊರ ಹಾಕುವ ಪ್ರಯತ್ನ ನಡೆಸ್ತಾರೆ. ಜ್ಯೋತಿಷ್ಯ ಶಾಸ್ತ್ರದಲ್ಲೂ ಈ ಚೇಳಿಗೆ ವಿಶೇಷ ಮಹತ್ವವಿದೆ. 

ಮನೆಯಲ್ಲಿ ಯಾವ, ಯಾವ ದಿನ ಚೇಳು ಕಾಣಿಸಿಕೊಂಡಿದೆ ಎಂಬುದರಿಂದ ಹಿಡಿದು ಸತ್ತ ಚೇಳಿನವರೆಗೆ ಯಾವುದು ಶುಭ ಹಾಗೂ ಯಾವುದು ಅಶುಭ ಎಂಬುದನ್ನು ಶಾಸ್ತ್ರಗಳಲ್ಲಿ ಹೇಳಲಾಗುತ್ತದೆ. 

Latest Videos

ಫೆಂಗ್ ಶೂಯಿ ಒಂಟೆ ನಿಮ್ಮೊಟ್ಟಿಗಿದ್ದರೆ ಅದೃಷ್ಟ ಖುಲಾಯಿಸೋದ್ರಲ್ಲಿ ಇಲ್ಲ ಅನುಮಾನ

ರಾಹು (Rahu )ವನ್ನು ಪ್ರತಿನಿಧಿಸುತ್ತೆ ಚೇಳು : ಚೇಳು, ರಾಹುವನ್ನು ಪ್ರತಿನಿಧಿಸುತ್ತದೆ ಎಂದು ಶಾಸ್ತ್ರದಲ್ಲಿ ಹೇಳಲಾಗಿದೆ. ರಾಹು ಒಂದು ನಿಗೂಢ ಗ್ರಹ. ಇದನ್ನು ನೆರಳಿನ ಗ್ರಹ ಎಂದೂ ಕರೆಯಲಾಗುತ್ತದೆ.  ಈ ಗ್ರಹ ಸಾಕಷ್ಟು ಶಕ್ತಿಯನ್ನು ಹೊಂದಿದೆ. ಭಿಕ್ಷುಕನನ್ನು ಶ್ರೀಮಂತನನ್ನಾಗಿ ಮಾಡುವ ಹಾಗೇ ಶ್ರೀಮಂತನನ್ನು ಭಿಕ್ಷುಕನನ್ನಾಗಿ ಮಾಡುವ ಶಕ್ತಿಯನ್ನು ರಾಹು ಹೊಂದಿದ್ದಾನೆ.  ಸಂಪತ್ತು, ಸಂತೋಷ ಮತ್ತು ಸಮೃದ್ಧಿ ಎಲ್ಲವೂ ರಾಹುಗೆ ಸಂಬಂಧಿಸಿದೆ. ಅನೇಕ ಬಾರಿ ಅಷ್ಟ ಲಕ್ಷ್ಮಿಗಳ ಮನೆ ಪ್ರವೇಶಕ್ಕೆ ರಾಹು ಕಾರಣನಾಗಿರುತ್ತಾನೆ. ರಾಹುವನ್ನು ಪ್ರತಿನಿಧಿಸುವ ಚೇಳು ಜೀವಂತವಾಗಿರಲಿ ಅಥವಾ ಸತ್ತಿರಲಿ ಹಿಂದೂ ಧರ್ಮಗ್ರಂಥಗಳಲ್ಲಿ ಇದಕ್ಕೆ ಮಹತ್ವವಿದೆ.    

ನಿಮಗೆ ಬರಲಿರುವ ಅನಾಹುತ ತಪ್ಪಿದ ಸಂಕೇತ : ಒಂದ್ವೇಳೆ ನೀವು ಚೇಳನ್ನು ತಿಳಿಯದೆ ತುಳಿದು ಸಾಯಿಸಿದ್ದರೆ ನಿಮಗೆ ಬರಲಿದ್ದ ದೊಡ್ಡ ಅನಾಹುತ ತಪ್ಪಿದೆ ಎಂಬ ಸೂಚನೆಯಾಗಿದೆ. ಚೇಳು ಸತ್ತರೆ ಒಳ್ಳೆಯದು ಎನ್ನುವ ಕಾರಣಕ್ಕೆ ಉದ್ದೇಶ ಪೂರ್ವಕವಾಗಿ ಅದನ್ನು ತುಳಿಯಲು ಹೋಗ್ಬೇಡಿ. ಚೇಳು ವಿಷಕಾರಿಯಾಗಿದ್ದು, ಕಚ್ಚಿದ್ರೆ ಅಪಾಯ ನಿಶ್ಚಿತ. 

ಮನೆಯ ಮುಖ್ಯ ದ್ವಾರದಲ್ಲಿ ಸತ್ತ ಚೇಳು ಬಿದ್ದಿದ್ದರೆ ಏನು ಸೂಚನೆ ? : ಮನೆಯ ಮುಖ್ಯ ದ್ವಾರದ ಮೇಲೆ ಸತ್ತ ಚೇಳು ಬಿದ್ದಿರುವುದು ನಿಮ್ಮ ಕಣ್ಣಿಗೆ ಕಂಡರೆ ಅದು ಸಹ ಶುಭ ಸಂಕೇತವಾಗಿದೆ. ಕೆಲವು ವಿಪತ್ತು ಮನೆಯಿಂದ ಹೊರಗೆ ಹೋಯ್ತು ಎಂಬ ಸೂಚನೆಯನ್ನು ಇದು ನೀಡುತ್ತದೆ.  

ದಾನಗಳಲ್ಲೇ ಮಹಾದಾನ ಗೋದಾನ, 7 ತಲೆಮಾರಿಗೆ ಪುಣ್ಯ ತರುವ ದಾನ

ದೇವರ ಮನೆಯಲ್ಲಿ ಸತ್ತ ಚೇಳು ಬಿದ್ದಿದ್ದರೆ ಏನು ಅರ್ಥ? :  ದೇವರ ಮನೆಯಲ್ಲಿ ಸತ್ತ ಚೇಳು ಬಿದ್ದಿದ್ದರೆ ಇದು ಕೂಡ ಶುಭ ಸಂಕೇತವಾಗಿದೆ. ಯಾವುದೇ ನಕಾರಾತ್ಮಕ ಶಕ್ತಿ ನಿಮ್ಮ ಮನೆ ಅಥವಾ ನಿಮ್ಮ ಜೀವನವನ್ನು ಪ್ರವೇಶಿಸುವುದಿಲ್ಲ ಎಂಬುದನ್ನು ಇದು ಸೂಚಿಸುತ್ತದೆ.  

ಉದ್ದೇಶ ಪೂರ್ವಕವಾಗಿ ಚೇಳನ್ನು ಕೊಲ್ಲೋದು ಎಷ್ಟು ಸರಿ ? : ಚೇಳು ವಿಷಕಾರಿ. ಹಾಗಾಗಿ ಅದನ್ನು ಕೊಲ್ಲಲು ಬಹುತೇಕರು ಮುಂದಾಗ್ತಾರೆ. ಆದ್ರೆ ಶಾಸ್ತ್ರಗಳಲ್ಲಿ ಇದನ್ನು ಶುಭವೆಂದು ಪರಿಗಣಿಸುವುದಿಲ್ಲ. ಜಾತಕದಲ್ಲಿ ರಾಹು ದುರ್ಬಲನಾಗಿದ್ದರೆ ನಾವು ಅಹಂಕಾರಿಯಾಗಿ ವರ್ತಿಸುತ್ತೇವೆ. ದುರಂಹಾಕ ನಮ್ಮನ್ನು ನಾಶ ಮಾಡುತ್ತದೆ. ಸಂತೋಷ ಹಾಳಾಗುತ್ತದೆ. ಮನೆಯಲ್ಲಿ ನೆಮ್ಮದಿ ನಾಶವಾಗುತ್ತದೆ. 
ಕೆಲವರು ಚೇಳನ್ನು ಲಕ್ಷ್ಮಿಗೆ ಹೋಲಿಸುತ್ತಾರೆ. ಶುಕ್ರವಾರ ಮನೆಗೆ ಬಂದ ಚೇಳನ್ನು ಕೊಂದ್ರೆ ಲಕ್ಷ್ಮಿ ಕೋಪಗೊಂಡು ಮನೆಯಿಂದ ಹೊರಗೆ ಹೋಗ್ತಾಳೆ ಎನ್ನಲಾಗುತ್ತದೆ. 

ಕನಸಿನಲ್ಲಿ ಸತ್ತ ಚೇಳು : ಕನಸಿನಲ್ಲಿ ಚೇಳು ಸತ್ತಂತೆ ಕಂಡ್ರೂ ಒಳ್ಳೆಯದಲ್ಲ. ಕನಸಿನಲ್ಲಿ ಯಾವುದೇ ಪ್ರಾಣಿ ಸತ್ತಿರುವುದನ್ನು ನೋಡಬಾರದು. ಇದ್ರಿಂದ ಜೀವನದಲ್ಲಿ ಕೆಲ ತೊಂದರೆ ಎದುರಾಗುತ್ತದೆ.
 

click me!