Zodiac Sign: ಕನ್ಯಾ ರಾಶಿಯ ಮಹಿಳೆಯರು ಈ ತಪ್ಪು ಮಾಡೋದು ಕಾಮನ್

By Suvarna News  |  First Published Nov 3, 2022, 5:46 PM IST

ಕನ್ಯಾ ರಾಶಿಯ ಮಹಿಳೆಯರು ಸಾಕಷ್ಟು ಉತ್ತಮ ಗುಣಗಳನ್ನು ಹೊಂದಿದ್ದರೂ ತಮ್ಮ ಕೆಲವು ತಪ್ಪುಗಳಿಂದಾಗಿ ಕಿರಿಕಿರಿ ಮೂಡಿಸಬಲ್ಲರು. ಚಿಕ್ಕಪುಟ್ಟ ವಿಷಯಗಳಿಗೂ ತಲೆಕೆಡಿಸಿಕೊಳ್ಳುತ್ತ, ಸಂಗಾತಿಯನ್ನು ಟೀಕಿಸುತ್ತ ಸಂಬಂಧವನ್ನು ಕೆಡಿಸಿಕೊಳ್ಳಬಲ್ಲರು. 
 


ನಾವೆಲ್ಲರೂ ಒಂದಿಲ್ಲೊಂದು ತಪ್ಪುಗಳನ್ನು ಮಾಡುತ್ತಲೇ ಇರುತ್ತೇವೆ. ಒಮ್ಮೊಮ್ಮೆ ಹೊಸ ತಪ್ಪುಗಳನ್ನು ಮಾಡಬಹುದು, ಕೆಲವು ತಪ್ಪುಗಳನ್ನು ಮತ್ತೆ ಮತ್ತೆ ಮಾಡುತ್ತಲೇ ಇರಬಹುದು. ಸಂಬಂಧದಲ್ಲೂ ಅಷ್ಟೆ. ಇವತ್ತು “ನಾಳೆ ಹೀಗಿರಬಾರದುʼ ಎಂದುಕೊಂಡರೆ ನಾಳೆಯೂ ಮತ್ತದೇ ಪುನವಾರ್ತನೆಯಾಗುತ್ತದೆ. ಅಂದರೆ, ಇವೆಲ್ಲ ನಮ್ಮ ಸ್ವಭಾವ. ತೀರ ಸಂಪೂರ್ಣವಾಗಿ ಎಲ್ಲವನ್ನೂ ಬಿಟ್ಟುಬಿಡಲು ಸಾಧ್ಯವಾಗುವುದಿಲ್ಲ. ನಮ್ಮ ರಾಶಿಗಳ ಆಧಾರದ ಮೇಲೆ ಕೆಲವು ಸ್ವಭಾವಗಳು ನಿಶ್ಚಯವಾಗುತ್ತವೆ ಎನ್ನುವುದು ಎಲ್ಲರಿಗೂ ತಿಳಿದ ಸಂಗತಿ. ಎಲ್ಲರೂ ಮಾಡುವಂತೆಯೇ ಕನ್ಯಾ ರಾಶಿಯವರು ಸಹ ಕೆಲವು ತಪ್ಪುಗಳನ್ನು ಮಾಡುತ್ತಾರೆ. ತಮ್ಮನ್ನು ತಾವು ಭಾರೀ ಗ್ರೇಟ್‌ ಎಂದುಕೊಳ್ಳುವ ಕನ್ಯಾ ರಾಶಿಯ ಮಹಿಳೆಯರು ಸಹ ಸಂಬಂಧದಲ್ಲಿ ಕೆಲವು ತಪ್ಪುಗಳನ್ನು ಮಾಡುತ್ತಲೇ ಇರುತ್ತಾರೆ. ಭೂಮಿ ತತ್ವದ ಈ ರಾಶಿಯ ಮಹಿಳೆಯರು ಸೂಕ್ಷ್ಮ ಸ್ವಭಾವ ಹೊಂದಿದ್ದಾಗ್ಯೂ ತಮ್ಮ ಅಭದ್ರತೆ ಗುಣದಿಂದಾಗಿ ಕೆಲವು ಬಾರಿ ಪೊಸೆಸಿವ್‌ ಆಗಿ, ಅಸೂಯೆ ಹೊಂದಿದವರಾಗಿ, ಅತಿಯಾಗಿ ವಿಮರ್ಶೆ ಮಾಡುವವರಾಗಿ ಬದಲಾಗುತ್ತಾರೆ. ಹೀಗಾಗಿ, ತಮ್ಮ ಸಂಗಾತಿಯನ್ನು ಪದೇ ಪದೆ ಸಂಕಟಕ್ಕೆ ದೂಡುತ್ತಾರೆ. ತಮ್ಮ ಸಂಗಾತಿಯ ಭಾವನಾತ್ಮಕ ಅಗತ್ಯವನ್ನು ಪರಿಗಣಿಸದೇ ಸಂಬಂಧವನ್ನು ಕಲ್ಲಿನಂತೆ ವರ್ತಿಸುತ್ತಾರೆ. ಸಾಕಷ್ಟು ಉತ್ತಮ ಗುಣಗಳನ್ನು ಹೊಂದಿದ್ದರೂ ಎಲ್ಲರೂ ಇವರನ್ನು ಇಷ್ಟಪಡುವುದಿಲ್ಲ. ಹೀಗಾಗಿ, ಇವರ ಸಂಭಾವ್ಯ ತಪ್ಪುಗಳನ್ನು ಅರಿತುಕೊಂಡರೆ ಈ ರಾಶಿಯ ಮಹಿಳೆಯರೊಂದಿಗೆ ಏಗುವುದು ಸುಲಭವಾಗುತ್ತದೆ.

•    ವಿಪರೀತ ಚುರುಕು (Sharp) ಜತೆಗೆ ಸಲಹೆ (Advice)
ಧನಾತ್ಮಕ ವಿಮರ್ಶೆ (Positive Criticism) ಎಲ್ಲರಿಗೂ ಬೇಕಾಗುವಂಥದ್ದು. ಅದನ್ನು ಕನ್ಯಾ (Virgo) ರಾಶಿಯ ಮಹಿಳೆಯರು ಸುಲಭವಾಗಿ ಮಾಡುತ್ತಾರೆ. ಹಾಗೆಯೇ, ರಚನಾತ್ಮಕ ಎನಿಸುವಂತಹ ಸಲಹೆಗಳನ್ನೂ ನೀಡುತ್ತಾರೆ. ಆದರೆ, ಎದುರಿಗಿರುವವರ ಭಾವನೆಗಳನ್ನು ಅರ್ಥೈಸಿಕೊಳ್ಳದೆ ಕೆಲವೊಮ್ಮೆ ತೀರ ಒರಟಾಗಿ ವಿಮರ್ಶೆ ಮಾಡಿಬಿಡುತ್ತಾರೆ. ಹೀಗಾಗಿ, ಅವರು ತಾವಾಡುವ ಸಲಹೆ, ಮಾತುಗಳ ಬಗ್ಗೆ ಸ್ವಲ್ಪ ಎಚ್ಚರದಿಂದ ಇದ್ದರೆ ಉತ್ತಮ. 

Tap to resize

Latest Videos

ಈ Zodiac Sign ರೀತಿ ಎಲ್ರಿಗೂ ಸ್ಫೂರ್ತಿ ತುಂಬೋದು ಸಾಧ್ಯವೇ ಇಲ್ಲ

•    ಅತಿಯಾದ ಚಿಂತನೆ (Overthinking)
ಇನ್ನೊಬ್ಬರನ್ನು ಸೂಕ್ಷ್ಮವಾಗಿ ಗಮನಿಸುವುದು ಕನ್ಯಾ ರಾಶಿಯವರ ಶಕ್ತಿ. ಯಾವುದೇ ಸನ್ನಿವೇಶವನ್ನಾದರೂ ಚೆನ್ನಾಗಿ ವಿಮರ್ಶೆ ಮಾಡುತ್ತಾರೆ. ಆದರೆ, ತಮ್ಮ ವಿಪರೀತ ಚಿಂತನಾ ಕ್ರಮದಿಂದಾಗಿ ಇಲ್ಲಿಯೂ ಸಹ ಅವರು ಮಿತಿ ಹಾಕಿಕೊಳ್ಳುವುದು ಉತ್ತಮ. ಇತರರ ಭಾವನೆಗಳನ್ನು (Emotions) ಅರಿಯದೇ ಘಾಸಿಗೊಳಿಸುತ್ತಾರೆ.

•    ಚಿಕ್ಕಪುಟ್ಟ ಸಂಗತಿಗಳಿಗೂ ಬೆಲೆ
ಚಿಕ್ಕಪುಟ್ಟ ಸಂಗತಿಗಳನ್ನೂ ಗಮನಿಸಿ, ಅವುಗಳ ಬಗ್ಗೆ ಟೀಕೆ ಮಾಡಲು ಹಿಂದೇಟು ಹಾಕುವುದಿಲ್ಲ. ಇನ್ನೊಬ್ಬರು ಮಾಡುವ ಕೆಲಸಗಳಲ್ಲಿರುವ ಅಪರಿಪಕ್ವತೆಯನ್ನು (Imperfection) ಚೆನ್ನಾಗಿ ಗುರುತಿಸಿ ಅದನ್ನು ಮುಖಕ್ಕೆ ಹೊಡೆದಂತೆ ಹೇಳುತ್ತಾರೆ. 

ಯಾವ ರಾಶಿಯವರಿಗೆ ಯಾವ ಉದ್ಯೋಗ ಬೆಸ್ಟ್? ಇಲ್ಲಿದೆ ಲಿಸ್ಟ್

•    ದಿನಚರಿಯಲ್ಲಿ ಬಂಧಿ
ಕನ್ಯಾ ರಾಶಿಯ ಮಹಿಳೆಯರು ತಮ್ಮದೇ ದಿನಚರಿಯಲ್ಲಿ ಬಂಧಿಯಾಗುತ್ತಾರೆ. ಒಂದು ದಿನವೂ ಆ ದಿನಚರಿ ತಪ್ಪಿಸಲು ಇಷ್ಟಪಡುವುದಿಲ್ಲ. 

•    ಸಹಾಯ (Help) ಯಾಚಿಸದಿರುವುದು
ಕನ್ಯಾ ರಾಶಿಯ ಜನ “ಕೊಡುವʼವರಾಗಿರುತ್ತಾರೆ. ವಿಶಿಷ್ಟ ಸಂಗಾತಿ (Partner) ಎನಿಸುತ್ತಾರೆ. ಆದರೆ, ಸಂಬಂಧದಲ್ಲಿ ಕೊಡುವುದು ಮತ್ತು ತೆಗೆದುಕೊಳ್ಳುವುದರಲ್ಲೂ ಒಂದು ಸಮತೋಲನ ಬೇಕಾಗುತ್ತದೆ. ಇವರು ತಮಗೇನಾದರೂ ಬೇಕಾದರೆ ಅದನ್ನು ಕೇಳಲು ಹಿಂದೇಟು ಹಾಕುತ್ತಾರೆ. ಈ ಗುಣದಿಂದಾಗಿ ಭಾವನಾತ್ಮಕವಾಗಿ ಕಷ್ಟ ಅನುಭವಿಸುತ್ತಾರೆ. 

•    ಸಂಬಂಧಕ್ಕಿಂತ (Relation) ಕೆಲಸಕ್ಕೆ (Profession) ಆದ್ಯತೆ
ವೃತ್ತಿಯ ಬಗ್ಗೆ ಹೆಚ್ಚು ಬದ್ಧತೆ ಹೊಂದಿರುವ ಕನ್ಯಾ ರಾಶಿಯ ಮಹಿಳೆಯರು ಯಾವತ್ತೂ ತಮ್ಮ ಕೆಲಸಕ್ಕೆ ಆದ್ಯತೆ ನೀಡುತ್ತಾರೆ. ಅಪಾರ ಪ್ರಾಕ್ಟಿಕಲ್‌ (Practical) ಮನಸ್ಸು ಹೊಂದಿರುವುದರಿಂದ ಸಂಬಂಧಕ್ಕಿಂತ ತಮ್ಮ ಕೆಲಸಕಾರ್ಯಗಳಿಗೆ ಆದ್ಯತೆ ನೀಡುತ್ತಾರೆ. ಈ ಗುಣದಿಂದಾಗಿ ಸಂಬಂಧದಲ್ಲಿ ಒಂದು ದೂರ ಅಥವಾ ಭಾವನಾತ್ಮಕ ಕೊರತೆ ಉಳಿಸಿಕೊಂಡುಬಿಡುತ್ತಾರೆ. 

•    ಬೇಗ ಕಿರಿಕಿರಿ (Irritation)
ಸಮಸ್ಯೆ ಪರಿಹರಿಸುವಾಗ ಬೇಗ ಕಿರಿಕಿರಿಗೆ ಒಳಗಾಗುತ್ತಾರೆ. ಸ್ವಲ್ಪವೂ ತಾಳ್ಮೆ ತೋರುವುದಿಲ್ಲ. ಬದಲಿಗೆ, ತಮ್ಮ ಸಂಗಾತಿಯನ್ನು ಸಿಕ್ಕಾಪಟ್ಟೆ ಟೀಕೆ ಮಾಡುವ ಮೂಲಕ ಅವರನ್ನು ಸಹ ಕಿರಿಕಿರಿಗೆ ತಳ್ಳುತ್ತಲೇ ಇರುತ್ತಾರೆ. ಸಂಗಾತಿಯಿಂದ ಪರಿಪೂರ್ಣತೆ (Perfection) ಬಯಸುತ್ತಾರೆ. 

click me!