ದಾವಣಗೆರೆ ನಗರದಲ್ಲೊಂದು ಮಳೆಗಾಗಿ ಪ್ರಾರ್ಥಿಸಿ ವಿಶೇಷ ಸಂತೆಯೊಂದು ನಡೆಯುತ್ತದೆ. ಅದ್ಹೇನೋ ಪವಾಡವೋ ಐದು ವಾರ ಸಂತೆ ಕಳೆಯುವಷ್ಟರಲ್ಲಿ ಮಳೆ ಬರುತ್ತದೆ.
ವರದಿ : ವರದರಾಜ್, ಏಷ್ಯಾನೆಟ್ ಸುವರ್ಣನ್ಯೂಸ್
ದಾವಣಗೆರೆ (ಜು:2) ಮಳೆಗಾಗಿ ರೈತ ಮುಗಿಲು ನೋಡುತ್ತಿದ್ದು ಮಳೆಗಾಗಿ ರೈತರು ಸಾರ್ವಜನಿಕರು ದೇವರ ಮೊರೆ ಹೋಗಿದ್ದಾರೆ. ದಾವಣಗೆರೆ ನಗರದಲ್ಲೊಂದು ಮಳೆಗಾಗಿ ಪ್ರಾರ್ಥಿಸಿ ವಿಶೇಷ ಸಂತೆಯೊಂದು ನಡೆಯುತ್ತದೆ. ದಾವಣಗೆರೆ ನಗರದೇವತೆ ದೇವಸ್ಥಾನದ ಸುತ್ತ ಭಾನುವಾರದ ವಾರದ ಸಂತೆ ನಡೆದ್ರೆ ಮಳೆ ಬರುತ್ತದೆ ಎಂಬುದು ಸಾಂಪ್ರದಾಯಿಕ ನಂಬಿಕೆ. ಅದರಂತೆ ವ್ಯಾಪಾರಿಗಳು ದೇವಾಲಯದ ಸುತ್ತಮುತ್ತ ಅಂಗಡಿ ಮುಂಗಟ್ಟುಗಳನ್ನು ಹಾಕಿಕೊಂಡು ವ್ಯಾಪಾರ ಮಾಡುತ್ತಾರೆ. ಅದ್ಹೇನೋ ಪವಾಡವೋ ಐದು ವಾರ ಸಂತೆ ಕಳೆಯುವಷ್ಟರಲ್ಲಿ ಮಳೆ ಬರುತ್ತದೆ.
undefined
ವಿಜಯಪುರದಲ್ಲೊಂದು ಅಚ್ಚರಿ, ಮಳೆಗಾಗಿ ತಾಮ್ರದ ಬಿಂದಿಗೆ ಬಳಿ ಭವಿಷ್ಯ ಕೇಳಿದ ಜನ, ಕಾರ್ಣಿಕ
ಬರ ಕ್ಷಾಮದ ಲಕ್ಷಣಗಳಿದ್ದು ಇನ್ನೇನು ಮಳೆ ಹೋಯಿತು ಎಂದು ರೈತರು ತಲೆಮೇಲೆ ಕೈಹೊತ್ತಾಗ. ದಾವಣಗೆರೆ ದುಗ್ಗಮ್ಮನ ಪೇಟೆಯಲ್ಲಿ ವಾರದ ಸಂತೆ ನಡೆಸಿದ್ರೆ ಮಳೆ ಕಟ್ಟಿಟ್ಟ ಬುತ್ತಿ.. ಎಂಬ ನಂಬಿಕೆ ದಾವಣಗೆರೆಯಲ್ಲಿ ಬೇರೂರಿದೆ. ದೇವಾಲಯದ ಮುಂದಿನ ಮೈದಾನದಲ್ಲಿ ಎಸ್ ಕೆ ಪಿ ರೋಡ್ ನಲ್ಲಿ ಸಂತೆ ನಡೆದ್ರೆ ಮಳೆ ಖಚಿತ ಎನ್ನುವ ನಂಬಿಕೆ ಇದೆ. ಪ್ರತಿಭಾನುವಾರ ಕಾಯಿಪೇಟೆ ಮೈದಾನದಲ್ಲಿ ನಡೆಯುವ ವಾರದ ಸಂತೆ ರಾಜ್ಯ ಪ್ರಸಿದ್ಧಿ. ವಿವಿಧ ಜಿಲ್ಲೆಗಳ ವ್ಯಾಪಾರಿಗಳು ಈ ಸಂತೆಗೆ ಮಳಿಗೆ ಹಾಕಿ ವ್ಯಾಪಾರ ಮಾಡುತ್ತಾರೆ. ದಾವಣಗೆರೆ ಮಹಾನಗರ ಪಾಲಿಕೆಗೆ ಸಾರ್ವಜನಿಕರೇ ಒಂದು ಮನವಿ ಕೊಟ್ಟು ವಾರದ ಸಂತೆ ಸ್ಥಳ ಬದಲಾಯಿಸಿ ದುಗ್ಗಮ್ಮದ ದೇವಸ್ಥಾನದ ಬೀದಿಯಲ್ಲಿ ಮಾಡಿ ಎನ್ನುತ್ತಾರೆ ಬಾಬುರಾವ್ ಪವಾರ್.
ನಗರ ದೇವತೆ ದುಗ್ಗಮ್ಮ ದೇವಿಯ ಸುತ್ತ ಸಂತೆ ಏರ್ಪಡಿಸುತ್ತಾರೆ. ಅದರಂತೆ ತರಕಾರಿ ದಿನಸಿ ದಿನಬಳಕೆ ವಸ್ತುಗಳ ಅಂಗಡಿಗಳನ್ನು ದೇವಾಲಯ ಬೀದಿಯಲ್ಲಿ ಹಾಕುತ್ತಾರೆ.ದೂರದ ಹಳ್ಳಿ ಹಳ್ಳಿಗಳಿಂದ ವ್ಯಾಪಾರಸ್ಥರು ಬಂದು ಸಂತೆಗೆ ಅಂಗಡಿ ಹಾಕುತ್ತಾರೆ.ನಾಡಿಗೆ ಒಳಿತಾಗಲಿ ದಾವಣಗೆರೆಗೆ ಮಳೆ ಬರಲಿ ಎಂದು ಅಂಗಡಿ ಹಾಕುತ್ತಾರೆ. ನಗರ ದೇವತೆ ನೆಲಸಿದ ನಂತರ ಅನಾಧಿ ಕಾಲದಿಂದಲು ಬರ ಕ್ಷಾಮದಂತಹ ಪರಿಸ್ಥಿತಿಯಲ್ಲಿ ವಾರದ ಸಂತೆಯನ್ನು ದೇವಸ್ಥಾನದ ಆವರಣದಲ್ಲಿ ಹಾಕುತ್ತಾರೆ. ಸಂತೆ ಏರ್ಪಡಿಸಿದ ನಂತರ ಮಳೆ ಬಂದೇ ಬರುತ್ತದೆ.ಮೊದಲ ದಿನದ ಸಂತೆ ಬಳಿಕ ಕಾಕತಾಳೀಯ ಅಥವಾ ಪವಾಡ ವೆಂಬಂತೆ ಮಧ್ಯಾಹ್ನವೇ ಮಳೆ ಸುರಿದಿದೆ ಎನ್ನುತ್ತಾರೆ ವ್ಯಾಪಾರಸ್ಥರಾದ ಗಂಗಮ್ಮ ಕಾಳೀಬಾಯಿ.
ಯುರೋಪ್‌ನಲ್ಲಿ ಕ್ರೈಸ್ತ ಧರ್ಮದ ಮೇಲಿನ ನಂಬಿಕೆ ಕ್ಷೀಣ, ನೈಟ್‌ಕ್ಲಬ್ ಆಗಿ ಬದಲಾಗುತ್ತಿದೆ
ವಾರದ ಸಂತೆ ಬದಲಾವಣೆಯಾಗದಿದ್ದರಿಂದ ಕೆಲ ವ್ಯಾಪಾರಿಗಳಿಗೆ ವ್ಯಾಪಾರ ಕಡಿಮೆ ಆಗುತ್ತದೆ. ಆದ್ರೆ ಅವರೆಲ್ಲಾ ದೇವರ ಕಾರ್ಯ ,ಮಳೆ ಬಂದು ಸಮೃದ್ಧಿ ನೆಲಸಲಿ ಎಂದು ದೇವರ ಕಮಿಟಿಯವರು ಮಾಡುತ್ತಿರುವ ಕೆಲಸಕ್ಕೆ ನಮ್ಮದೊಂದು ಸೇವೆ ಎನ್ನುತ್ತಾರೆ. ದೇವಸ್ಥಾನದ ಬಳಿ ವಾರದ ಸಂತೆ ಎಂಬುದನ್ನು ದಾವಣಗೆರೆ ಮಹಾನಗರಯಿಂದಲೇ ಪ್ರಕಟಣೆ ಹೊರಡಿಸಲಾಗುತ್ತದೆ. ಇದನ್ನು ನೋಡಿದ ಸಾರ್ವಜನಿಕರು ದೇವಿ ಸಂತೆ ಎಂದೆ ಅಲ್ಲಿಗೆ ಬಂದು ವ್ಯಾಪಾರ ಮಾಡುತ್ತಾರೆ. ಇಷ್ಟು ವರ್ಷಗಳಲ್ಲಿ ಈ ವಾರದ ಸಂತೆ ಮುಕ್ತಾಯವಾಗುವುದರಲ್ಲಿ ಸಮೃದ್ಧ ಮಳೆ ಬಂದಿರುವುದಕ್ಕೆ ಹಲವು ಸಾಕ್ಷಿಗಳಿಗೆ. ಅದಕ್ಕಾಗಿ ಮಳೆಗಾಗಿ ವಾರದ ಸಂತೆ ದಾವಣಗೆರೆಯಲ್ಲಿ ಸಂಪ್ರದಾಯವಾಗಿ ಮುಂದುವರಿದಿದೆ.