Weekly Love Horoscope: ಈ ರಾಶಿಯವರ ಲವ್ ಮ್ಯಾರೇಜ್‌ಗೆ ಗ್ರೀನ್ ಸಿಗ್ನಲ್ ಸಿಗಲಿದೆ..!

Published : Jul 02, 2023, 08:00 AM IST
Weekly Love Horoscope: ಈ ರಾಶಿಯವರ ಲವ್ ಮ್ಯಾರೇಜ್‌ಗೆ ಗ್ರೀನ್ ಸಿಗ್ನಲ್ ಸಿಗಲಿದೆ..!

ಸಾರಾಂಶ

ಈ ವಾರ ನಿಮ್ಮ ರಾಶಿಗೆ ಅನುಗುಣವಾಗಿ ಪ್ರೀತಿ ಹಾಗೂ ದಾಂಪತ್ಯ ಜೀವನದ ಹೇಗಿರಲಿದೆ? ಪ್ರೀಯಿಯಲ್ಲಿ ಯಾವ ಪ್ರಮುಖ ನಿರ್ಧಾರಗಳನ್ನು ನೀವು ಮಾಡಬಹುದು? 03 ಜುಲೈ‌ನಿಂದ 9 ಜುಲೈ 2023ರವರೆಗೆ ನಿಮ್ ಪ್ರೀತಿ ಭವಿಷ್ಯ ಹೀಗಿರಲಿದೆ ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ.

ಮೇಷ(Aries): ಈ ವಾರ ನೀವು ಪ್ರೀತಿಯ ಸಂಗಾತಿಯೊಂದಿಗೆ ಸಮಯ ಕಳೆಯುತ್ತೀರಿ. ಈ ಮೂಲಕ ಜೀವನದ ತೊಂದರೆಗಳನ್ನು ಮರೆತುಬಿಡುತ್ತೀರಿ. ನಿಮ್ಮ ಪ್ರೀತಿಯ ಸಂಗಾತಿಯು ನಿಮ್ಮನ್ನು ಸಂಪೂರ್ಣವಾಗಿ ಅರ್ಥಮಾಡಿಕೊಳ್ಳುತ್ತಾರೆ. ಈ ಸಮಯದಲ್ಲಿ ನಿಮ್ಮ ಪ್ರೇಮ ಜೀವನವು ಉತ್ತುಂಗಕ್ಕೇರುತ್ತದೆ. ನಿಮ್ಮ ಪ್ರೀತಿಯ ಸಂಗಾತಿಯೊಂದಿಗೆ ಆತ್ಮೀಯ ಕ್ಷಣಗಳನ್ನು ಕಳೆಯಲು ಸಹ ಅವಕಾಶವನ್ನು ಪಡೆಯಿರಿ. 

ವೃಷಭ(Taurus): ಈ ವಾರ ನಿಮ್ಮ ಪ್ರೇಮಿಯೊಂದಿಗೆ ನಿಮ್ಮ ಸಂಬಂಧವನ್ನು ಸುಧಾರಿಸಿ. ನೀವು ಅವರಿಗೆ ಒಂದು ಸಸ್ಯವನ್ನು ಉಡುಗೊರೆಯಾಗಿ ನೀಡಬಹುದು. ಇದರಿಂದ ನಿಮ್ಮಿಬ್ಬರ ನಡುವಿನ ಅಂತರ ದೂರಾಗಬಹುದು. ಆ ಸಸ್ಯದ ರೀತಿಯಲ್ಲಿ ನಿಮ್ಮಿಬ್ಬರ ಸಂಬಂಧವೂ ಬೆಳೆಯುತ್ತದೆ. ನಿಮ್ಮ ವಿವಾಹಿತರ ಬಗ್ಗೆ ಮಾತ್ರ ಯೋಚಿಸಿ.

ಮಿಥುನ(Gemini): ನಿಮ್ಮ ಮತ್ತು ನಿಮ್ಮ ಸಂಗಾಯಿಯ ನಡುವೆ ಪ್ರೀತಿಯ ಸಂಬಂಧ ಗಟ್ಟಿಯಾಗಲಿದೆ. ನೀವು ಎಲ್ಲಾ ಸಮಸ್ಯೆಗಳನ್ನು ಜಯಿಸಲು ಸಾಧ್ಯವಾಗುತ್ತದೆ. ನಿಮ್ಮ ಸಂಗಾತಿ ಜತೆ ಸುಂದರ ಸಮಯ ಕಳೆಯಲು ಅವಕಾಶ ಸಿಗಲಿದೆ. ವೈವಾಹಿಕ ಜೀವನಕ್ಕೆ ಸಂಬಂಧಿಸಿದ ಅನೇಕ ಸುಂದರ ವಿಷಯಗಳು ಕೇಳಿ ಬರಲಿವೆ. ಈ ವಾರ ನೀವು ಭಾವನಾತ್ಮಕವಾಗುವುದನ್ನು ತಡೆಯಲು ನಿಮಗೆ ಸಾಧ್ಯವಾಗುವುದಿಲ್ಲ.

ಕಟಕ(Cancer): ಈ ವಾರ ಗ್ರಹಗಳ ಶುಭ ಸಂಯೋಜನೆಯಿಂದಾಗಿ ಪ್ರೇಮವಿವಾಹದ ಸಾಧ್ಯತೆಗಳಿವೆ. ಈ ವಾರ ನಿಮಗೆ ಮತ್ತು ನಿಮ್ಮ ಪ್ರೀತಿಗೆ ತುಂಬಾ ಒಳ್ಳೆಯದು ಹಾಗೂ
ಜೀವನವು ಪ್ರೀತಿಯಿಂದ ಮುಂದುವರಿಯುತ್ತದೆ. ಇಡೀ ವಾರದಲ್ಲಿ ನಿಮ್ ಹಾಗೂ ಸಂಗಾತಿಯ ನಡುವೆ ಯಾವುದೇ ಗೊಂದಲಗಳು ಬರುವುದಿಲ್ಲ.  ನೀವು ನಿಮ್ಮ ಸಂಗಾತಿಯೊಂದಿಗೆ ಉತ್ತಮ ಸಮಯವನ್ನು ಕಳೆಯಬಹುದು.

ಈ 7 ವಾಸ್ತು ಟಿಪ್ಸ್ ಫಾಲೋ ಮಾಡಿ; ವೃತ್ತಿ ಜೀವನದಲ್ಲಿ ನೀವೇ ಬಾಸ್..!

 

ಸಿಂಹ(Leo): ಶುಕ್ರ ಗ್ರಹ ಇರುವುದರಿಂದ ಈ ವಾರ ನಿಮ್ಮ ಪ್ರೇಮ ಜೀವನದಲ್ಲಿ ಉತ್ತಮ ಬದಲಾವಣೆಗಳನ್ನು ಕಾಣುವಿರಿ. ನಿಮ್ಮ ಪ್ರೀತಿಯ ಸಂಗಾತಿಯ ಮುಂದೆ ನೀವಾಡುವ ಮಾತುಗಳು ಅವರಿಗೆ ತುಂಬಾ ಸಂತೋಷವನ್ನು ನೀಡುತ್ತವೆ. ಪ್ರೀತಿಯ ಸಂಗಾತಿಯನ್ನು ಮೆಚ್ಚಿಸಲು ಅವರನ್ನು ಕೆಲವು ಸುಂದರವಾದ ಸ್ಥಳಕ್ಕೆ ಕರೆದೊಯ್ಯಿರಿ. ಇತ್ತೀಚೆಗೆ ಮದುವೆಯಾದ ಈ ರಾಶಿಯವರು ತಮ್ಮ ಸಂಗಾತಿಯೊಂದಿಗೆ ಸುಂದರವಾದ ಸ್ಥಳಕ್ಕೆ ಹೋಗಬಹುದು. ಈ ಸಮಯದಲ್ಲಿ ನಿಮ್ಮ ಸಂಗಾತಿಯೊಂದಿಗಿನ ನಿಮ್ಮ ನಿಕಟತೆ ಹೆಚ್ಚಾಗುತ್ತದೆ.

ಕನ್ಯಾ(Virgo): ಈ ವಾರ ನೀವು ನಿಮ್ಮ ಪ್ರೀತಿಪಾತ್ರರನ್ನು ತುಂಬಾ ಮಿಸ್ ಮಾಡಿಕೊಳ್ಳುವಿರಿ. ಆದರೆ ಬಿಡುವಿಲ್ಲದ ಕೆಲಸದ ಕಾರಣ ಅವರನ್ನು ಭೇಟಿಯಾಗಲು ಸಾಧ್ಯವಾಗುವುದಿಲ್ಲ. ನಿಮ್ಮ ವೈವಾಹಿಕ ಜೀವನವು ಈ ವಾರ ಕಲಹದ ಮೂಲಕ ಸಾಗಬಹುದು. ಅದರ ಹೊರತಾಗಿಯೂ ನಿಮ್ಮ ಸಂಗಾತಿಯೊಂದಿಗಿನ ಪ್ರತಿ ವಿವಾದವನ್ನು ಪರಿಹರಿಸುವ ಬದಲು, ಸಂದರ್ಭ ಬರುವವರೆಗೂ ನೀವು ಕಾಯುತ್ತೀರಿ.

ತುಲಾ(Libra):  ನಿಮ್ಮ ಇಚ್ಛೆಗೆ ವಿರುದ್ಧವಾಗಿ ನೀವು ಅನೇಕ ಕೆಲಸಗಳನ್ನು ಮಾಡುತ್ತಿದ್ದೀರಿ ಎಂದು ಈ ವಾರ ನೀವು ಅರಿತುಕೊಳ್ಳುತ್ತೀರಿ. ನೀವು ನಿಮ್ಮ ಸ್ವಭಾವವನ್ನು ಸುಧಾರಿಸಬೇಕು ಮತ್ತು ನಿಮ್ಮ ಪ್ರೇಮಿಗೆ ಗುಲಾಮರಂತೆ ವರ್ತಿಸುವುದನ್ನು ತಪ್ಪಿಸಬೇಕು. ಪ್ರೀತಿಯ ಸಂಬಂಧದಲ್ಲಿ ಈ ವಾರ ನಿಮ್ಮ ಬಗ್ಗೆ ನಿಮ್ಮ ಮನಸ್ಸಿನಲ್ಲಿ ಕೆಲವು ಪ್ರಶ್ನೆಗಳು ಕಾಡಲಿವೆ.

ವೃಶ್ಚಿಕ(Scorpio): ಪ್ರೇಮ ಜೀವನದಲ್ಲಿ ಪರಸ್ಪರ ನಂಬಿಕೆಯನ್ನು ಬಲಪಡಿಸುವ ಇದು ಉತ್ತಮ ಸಮಯ. ಏಕೆಂದರೆ ಈ ಸಮಯದಲ್ಲಿ ನಿಮ್ಮ ಸಂಗಾತಿಯು ನಿಮ್ಮ ಮುಂದೆ ತಮ್ಮ ಮನಸಿನ ಮಾತು ಹೇಳಬಹುದು. ಅವರ ಜೀವನಕ್ಕೆ ಸಂಬಂಧಿಸಿದ ಅನೇಕ ರಹಸ್ಯಗಳನ್ನು ತಿಳಿದುಕೊಳ್ಳುವ ಅವಕಾಶವನ್ನು ನೀವು ಪಡೆಯಬಹುದು.

ಧನುಸ್ಸು(Sagittarius): ಪ್ರೀತಿಯಲ್ಲಿರುವ ಈ ರಾಶಿಚಕ್ರದ ಜನರು ರೋಮ್ಯಾಂಟಿಕ್ ಆಗಿರಲು ಇದು ಉತ್ತಮ ಅವಕಾಶ. ಈ ಸಮಯದಲ್ಲಿ ನಿಮ್ಮ ಸಂಗಾತಿಯೊಂದಿಗೆ ನಿಮ್ಮ ಹೃದಯದ ಮಾತು ಹಂಚಿಕೊಳ್ಳುವ ಅವಕಾಶ ಸಿಗಲಿದೆ. 

ಮಕರ(Capricorn):  ಈ ವಾರ ನಿಮ್ಮ ಪ್ರೀತಿಪಾತ್ರರು ನಿಮ್ಮಿಂದ ಅನೇಕ ಅನಗತ್ಯ ಬೇಡಿಕೆಗಳನ್ನು ಕೇಳಬಹುದು. ಅವರೊಂದಿಗೆ ಈ ವಿಷಯದ ಬಗ್ಗೆ ಅಗತ್ಯ ಮಾತುಕತೆಗಳನ್ನು ನಡೆಸಿ. ಈ ವಾರ ಸಂಗಾತಿಯು ನಿಮ್ಮನ್ನು ನಿಂದಿಸಬಹುದು. ಇದರಿಂದಾಗಿ ನೀವು ಅವರೊಂದಿಗೆ ಜಗಳ ಆಡಬಹುದು. ಅಂತಹ ಒಂದು
ಪರಿಸ್ಥಿತಿಯಲ್ಲಿ ನೀವು ತಾಳ್ಮೆಯಿಂದ ಇರಲು ಪ್ರಯತ್ನಿಸಿ.

ಶನಿವಾರ ಈ ಸರಳ ಪರಿಹಾರ ಮಾಡಿ; ಶನಿದೇವನು ನಿಮಗೆ ಶುಭ ತರುವನು..!

ಕುಂಭ(Aquarius): ಈ ವಾರ ಪ್ರೀತಿಯಲ್ಲಿ ಬೀಳುವ ಜನರು ಪ್ರೀತಿಗಾಗಿ ಎಲ್ಲ ರಿತಿಯ ಅನೇಕ ಪ್ರಯತ್ನ ಮಾಡುತ್ತಾರೆ. ತಮ್ಮ ಪ್ರೇಮಿಗಳಿಗೆ ಹೆಚ್ಚಿನ ಪ್ರೀತಿಯನ್ನು ತೋರಿಸುತ್ತಾರೆ. ನಿಮ್ಮ ಸಂಗಾತಿಗಾಗಿ ಸಮಯ ಮೀಸಲಿಡುವಿರಿ. ಈ ವಾರ ನಿಮ್ಮೊಂದಿಗೆ ಅನೇಕ ಘಟನೆಗಳು ಸಂಭವಿಸುತ್ತವೆ. ಆಗ ನೀವು ಎಲ್ಲವನ್ನೂ ಅನುಭವಿಸುವಿರಿ. ಮದುವೆಯ ಸಮಯದಲ್ಲಿ ಮಾಡಿದ ಭರವಸೆಗಳು ನಿಜ ಆಗಲಿವೆ.

ಮೀನ(Pisces): ನೀವು ಯಾರನ್ನಾದರೂ ನಿಜವಾಗಿಯೂ ಪ್ರೀತಿಸುತ್ತಿದ್ದರೆ, ಈ ವಾರ ನಿಮಗೆ ಪ್ರೀತಿ ಸಿಗುವ ಸಾಧ್ಯತೆ ಇದೆ. ಮತ್ತೊಂದೆಡೆ ನೀವು ಇನ್ನೂ ಒಂಟಿಯಾಗಿದ್ದರೆ, ನಿಮಗೆ ಸಂಗಾತಿ ಭೇಟಿಯಾಗುವ ಅವಕಾಶ ಸಿಗಲಿದೆ. ಕುಟುಂಬ ಸದಸ್ಯರ ಸಹಾಯದಿಂದ ಈ ರಾಶಿಚಕ್ರದ ವಿವಾಹಿತರ ಜೀವನವು ಚೆನ್ನಾಗಿ ಇರುತ್ತದೆ. ಈ ವಾರ ಸಾಕಷ್ಟು ಅನುಕೂಲಕರವಾಗಿದೆ. ನಿಮ್ಮ ಮಗುವಿನ ಕಡೆಯಿಂದ ಕೆಲವು ರೀತಿಯ ಒಳ್ಳೆಯ ಸುದ್ದಿ ಸಿಗಲಿದೆ.

PREV
Read more Articles on
click me!

Recommended Stories

ನೀವು ಕೂಡ ಬಿಸಿ ಬಿಸಿ ಕಾವಲಿ ಮೇಲೆ ತಣ್ಣೀರು ಹಾಕ್ತೀರಾ? ಎಲ್ಲಾ ಬರ್ಬಾದ್ ಆಗುತ್ತೆ ಹುಷಾರ್!
ಬ್ರಹ್ಮಮುಹೂರ್ತದಲ್ಲಿ ಎದ್ದು ಈ ಕೆಲಸ ಮಾಡಿ… ನಿಮ್ಮ ಜೀವನ ಬದಲಾಗುತ್ತೆ!