Ugadi 2022 ಯಾವಾಗ? ಶುಭಮುಹೂರ್ತ ಮತ್ತು ಪ್ರಾಮುಖ್ಯತೆ ಏನು?

By Suvarna NewsFirst Published Mar 26, 2022, 11:57 AM IST
Highlights

ಪ್ಲವನಾಮ ಸಂವತ್ಸರವು ಕೊನೆಯಾಗುತ್ತಿರುವ ಸಂದರ್ಭದಲ್ಲಿ, ಶುಭಕೃತ್ ಸಂವತ್ಸರ ಹೊಸ್ತಿಲ್ಲಲಿದೆ. ಈ ಬಾರಿ ಯುಗಾದಿಯ ಮುಹೂರ್ತವೇನು, ವೈಶಿಷ್ಠ್ಯವೇನು ನೋಡೋಣ. 

ಕಳೆದೆರಡು ವರ್ಷಗಳ ಯುಗಾದಿ(Ugadi)ಗೆ ಕೊರೋನಾ ಮಂಕು ಬಡಿದಿತ್ತು. ಆದರೆ, ಈ ಬಾರಿ, ಅವೆಲ್ಲವನ್ನು ಜಯಿಸಿದ ಹಿಗ್ಗಿನೊಂದಿಗೆ ಸಂಭ್ರಮದ ಯುಗಾದಿ ಆಚರಣೆಗೆ ಜನ ಕಾತರರಾಗಿದ್ದಾರೆ. ಹಾಗಾಗಿ ಈ ಯುಗಾದಿ ಬಹಳ ವಿಶೇಷವಾಗಿದೆ. ಯುಗಾದಿ ಎಂದರೆ ಹಿಂದೂಗಳಿಗೆ ಹೊಸ ವರ್ಷ. ಹೊಸ ಚಿಗುರು, ಹೊಸ ಜೀವನಕ್ಕೆ ಯುಗಾದಿ ಆದಿ. ಭಾರತದಾದ್ಯಂತ ಯುಗಾದಿ ಸಂಭ್ರಮದ ಆಚರಣೆ ಕಾಣುತ್ತದೆ. ಅದರಲ್ಲೂ ಕರ್ನಾಟಕ(Karnataka), ಆಂಧ್ರಪ್ರದೇಶ(Andhra Pradesh), ತೆಲಂಗಾಣ(Telangana)ದಲ್ಲಿ ಈ ಹೊಸ ವರ್ಷ ಆಚರಣೆ ಬಲು ಜೋರು. ಇಲ್ಲೆಲ್ಲ ನಾವು ಚಂದ್ರಮಾನ ಯುಗಾದಿ ಆಚರಸುತ್ತೇವೆ. ತಮಿಳುನಾಡು, ಕೇರಳ, ಉತ್ತರ ಭಾರತದ ಕೆಲ ರಾಜ್ಯಗಳಲ್ಲಿ ಸೌರಮಾನ ಯುಗಾದಿ ಆಚರಣೆ ನಡೆಯುತ್ತದೆ.

ಕರ್ನಾಟಕದಲ್ಲಿ ಯುಗಾದಿ ಎಂದು ಕರೆಯಲ್ಪಡುವ ಈ ಹಬ್ಬಕ್ಕೆ ಮಹಾರಾಷ್ಟ್ರದಲ್ಲಿ ಗುಡಿಪಡ್ವಾ ಎನ್ನಲಾಗುತ್ತದೆ. ಉತ್ತರ ಭಾರತದಲ್ಲಿ ಭೈಸಾಖಿ ಎನ್ನಲಾಗುತ್ತದೆ. ನವ ಸಂವತ್ಸರವೊಂದು ಆರಂಭವಾಗುವ ಕಾಲಘಟ್ಟಕ್ಕೆ ಹತ್ತಿರದಲ್ಲಿದ್ದೇವೆ. ಈ ವರ್ಷ ಯುಗಾದಿ ಹಬ್ಬ ಯಾವಾಗ, ಯಾವ ಸಂವತ್ಸರ ಆರಂಭವಾಗುತ್ತದೆ, ಹಬ್ಬದ ವಿಶೇಷತೆಗಳೇನು ಎಲ್ಲ ವಿಚಾರಗಳನ್ನು ವಿವರಿಸುತ್ತೇವೆ ಬನ್ನಿ. 

ಪ್ರತಿಪಾದ ತಿಥಿಯ ಸಮಯ(Pratipada Tithi Timings)
ಸಂಸ್ಕತ ಪದ ಯುಗಾದಿ ಎಂದರೆ ಯುಗದ ಆದಿ. ಯುಗಾದಿಯನ್ನು ಚೈತ್ರ ಶುಕ್ಲ ಪ್ರತಿಪಾದದ ದಿನ ಆಚರಿಸಲಾಗುತ್ತದೆ. ಅಂದರೆ ಚೈತ್ರ ಶುದ್ಧ ಪಾಡ್ಯಮಿಯಂದು ಹಬ್ಬ ಆಚರಿಸುತ್ತೇವೆ. 
ಈ ಬಾರಿ ಯುಗಾದಿಯು ಏಪ್ರಿಲ್ 1, 2022 ರ ಬೆಳಗ್ಗೆ 11:53 AMಗೆ ಪ್ರಾರಂಭವಾಗುತ್ತದೆ. ಏಪ್ರಿಲ್ 02, 2022 ರ ಬೆಳಗ್ಗೆ 11:58ಕ್ಕೆ ಕೊನೆಗೊಳ್ಳುತ್ತದೆ. ಈ ಬಾರಿ ಶುಭಕೃತ್ ನಾಮ ಸಂವತ್ಸರ ಆರಂಭವಾಗುತ್ತದೆ. 
ಯುಗಾದಿಯನ್ನು ಎದಿರುಗೊಳ್ಳಲು ಈಗಾಗಲೇ ಜನ ಸಿದ್ಧತೆಯಲ್ಲಿ ತೊಡಗಿದ್ದು, ಮನೆಯ ಸ್ವಚ್ಛತೆ, ಹೊಸ ಬಟ್ಟೆಗಳ ಖರೀದಿಯಲ್ಲಿ ತೊಡಗಿದ್ದಾರೆ. ಅಡುಗೆಗೆ ಬೇಕಾದ ದಿನಸಿ ಸಾಮಗ್ರಿಗಳನ್ನು ಖರೀದಿಸಿಟ್ಟುಕೊಳ್ಳುತ್ತಿದ್ದಾರೆ. 

Married Life: ವೈವಾಹಿಕ ಜೀವನ ಚೆನ್ನಾಗಿರಬೇಕೆ? ಈ ವಾಸ್ತು ಟಿಪ್ಸ್ ಅನುಸರಿಸಿ

ಪುರಾಣ ಕತೆಗಳು
ಹಿಂದೂ ಪುರಾಣಗಳಲ್ಲಿ ಯುಗಾದಿ ಆಚರಣೆ ಸಂಬಂಧ ಹಲವಾರು ಕತೆಗಳಿವೆ. ಅದರಲ್ಲೊಂದು, ಇದೇ ದಿನ ಬ್ರಹ್ಮ(Lord Brahma) ಈ ಜಗತ್ತಿನ ಸೃಷ್ಟಿಕ್ರಿಯೆ ಆರಂಭಿಸಿದ್ದು ಎಂಬುದು. ಹೆಸರಿಗೂ ಕೂಡಾ ಇದು ಹೊಂದುತ್ತದೆಯಲ್ಲವೇ? ವಸಂತ ಋತುವಿನ ಆರಂಭದಲ್ಲಿ ಬರುವ ಈ ಹಬ್ಬ ವಾರದ ಯಾವ ದಿನ ಬರುತ್ತದೋ, ಆ ದಿನದ ಅಧಿಪತಿಯೇ ವರ್ಷವಿಡೀ ಅಧಿಪತ್ಯ ವಹಿಸುತ್ತಾನೆ. ಈ ಬಾರಿ ಶನಿವಾರ ಯುಗಾದಿ ಬರುತ್ತಿರುವುದರಿಂದ ಶನಿ ದೇವ(saturn)ನು ಈ ನವ ಸಂವತ್ಸರದ ಅಧಿಪತಿಯಾಗಿರಲಿದ್ದಾನೆ. 

ಯುಗಾದಿಯ ದಿನ ಜನರು ಸೂರ್ಯೋದಯಕ್ಕೆ ಮುನ್ನ ಎದ್ದು ಮನೆಯ ಎದುರು ರಂಗೋಲಿ ಹಾಕಿ, ಬಾಗಿಲುಗಳನ್ನು ತಳಿರು ತೋರಣಗಳಿಂದ ಸಿಂಗರಿಸುತ್ತಾರೆ. ಹೀಗೆ ಮಾವಿನೆಲೆಗಳಿಂದ ಸಿಂಗರಿಸುವುದರ ಹಿಂದೆಯೂ ಕತೆಯಿದೆ.
ಶಿವನ ಮಕ್ಕಳಾದ ಕಾರ್ತಿಕೇಯ ಹಾಗೂ ಗಣೇಶರಿಬ್ಬರಿಗೂ ಮಾವಿನ ಹಣ್ಣುಗಳೆಂದರೆ ಇಷ್ಟ. ಕಾರ್ತಿಕೇಯನು ಜನರಿಗೆ ಯುಗಾದಿ ದಿನ ಮನೆಯನ್ನು ಮಾವಿನೆಲೆಗಳಿಂದ ಸಿಂಗರಿಸಿದರೆ ಅದಿಂದ ಉತ್ತಮ ಇಳುವರಿಯನ್ನೂ, ಸಮೃದ್ಧಿಯನ್ನೂ ಪಡೆಯಬಹುದಾಗಿ ಹೇಳಿದ ಎನ್ನಲಾಗುತ್ತದೆ. ನಂತರ ಜನರು ತಮ್ಮಿಷ್ಟದ ದೇವರಲ್ಲಿ ಪ್ರಾರ್ಥಿಸಿ, ಇಡೀ ವರ್ಷ ಚೆನ್ನಾಗಿರುವಂತೆ ಕೋರುತ್ತಾರೆ. ಯುಗಾದಿಯ ದಿನ ಪಂಚಾಂಗ ಓದುವ ವಾಡಿಕೆ ಇದೆ. 

ವೃತ್ತಿ ಯಶ ಪಡೆವ ಅದೃಷ್ಟವಂತೆಯರ ಹೆಸರು ಈ ಅಕ್ಷರದಿಂದ ಪ್ರಾರಂಭವಾಗುತ್ತದೆ!

ಬೇವು ಬೆಲ್ಲ
ಯುಗಾದಿಯ ದಿನ ಬೇವು ಬೆಲ್ಲ ತಿನ್ನುವುದು ವಾಡಿಕೆ. ಅಂದರೆ ಜೀವನದ ಸಿಹಿಕಹಿಗಳೆರಡನ್ನೂ ಸಮಾನವಾಗಿ ಸ್ವೀಕರಿಸುವ ಮನೋಭಾವ ಬೆಳೆಸಿಕೊಳ್ಳುವಂತೆ ಈ ಆಚರಣೆ ಪಾಠ ಮಾಡುತ್ತದೆ. 

ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳ ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.

click me!