ವಿಷ್ಣುವಿನ ಅವತಾರಗಳು ಹಾಗೂ ವಿಷ್ಣುವಿಗೆ ಸಂಬಂಧಪಟ್ಟ ಎಲ್ಲ ಪುರಾಣದ ಕತೆಗಳನ್ನು ಬಿಂಬಿಸುವ ದಶಾವತಾರ ದೇವಾಲಯದ ವಿಶೇಷತೆಗಳು ಇಲ್ಲಿವೆ.
ರಾಮನ ದೇವಾಲಯಕ್ಕೆ ಹೋಗುತ್ತೇವೆ, ಕೃಷ್ಣನ ದೇವಾಲಯ ನೋಡಿದ್ದೇವೆ, ವಿಷ್ಣುವಿನ ದೇವಾಲಯವನ್ನೂ ನೋಡಿದ್ದೇವೆ. ಆದರೆ, ವಿಷ್ಣುವಿನ ಎಲ್ಲ ಅವತಾರಗಳೂ ಒಂದೇ ದೇವಾಲಯದಲ್ಲಿರುವುದನ್ನು ನೋಡಿದ್ದೀರಾ? ಇಂಥದೊಂದು ವಿಶಿಷ್ಠ ದೇವಾಲಯವೇ ದಶಾವತಾರ ದೇವಾಲಯ. ಇದು ಉತ್ತರ ಪ್ರದೇಶದ ಡಿಯೋಗರ್‌ನಲ್ಲಿದೆ. ಈ ದೇವಾಲಯದಲ್ಲಿ ವಿಷ್ಣುವಿನ ಹತ್ತು ಅವತಾರಗಳಷ್ಟೇ ಅಲ್ಲದೇ ಇನ್ನೂ ಹಲವು ವಿಶೇಷತೆಗಳಿವೆ.
ಬ್ರಹ್ಮ ಈ ಲೋಕದ ನಿರ್ಮಾತೃವಾದರೆ, ಶಿವ ಇದರ ನಾಶ ಶಕ್ತಿ ಇರುವವನು. ಆದರೆ ವಿಷ್ಣುವಿನ ಕೆಲಸ ಈ ಲೋಕವನ್ನ ರಕ್ಷಿಸುವುದು. ಆತ ಎಂದಿಗೂ ನಿದ್ದೆ ಮಾಡುವುದಿಲ್ಲ. ರಕ್ಷಣೆಯ ಹೊಣೆ ಕಾರಣಕ್ಕೆ ಲೋಕದಲ್ಲಿ ಅಧರ್ಮ ಹೆಚ್ಚಿದಾಗಲೆಲ್ಲ ನಾನು ಒಂದಿಲ್ಲೊಂದು ಅವತಾರದಲ್ಲಿ ಬಂದು ಮತ್ತೆ ಧರ್ಮ ಸಂಸ್ಥಾಪನೆ ಮಾಡುವುದಾಗಿ ಭಗವದ್ಗೀತೆಯಲ್ಲಿ ಕೃಷ್ಣ ಹೇಳಿದ್ದಾನೆ. ಅಂತೆಯೇ ವಿಷ್ಣುವು ಇದುವರೆಗೂ 10 ಅವತಾರಗಳನ್ನೆತ್ತಿ ಬಂದಿರುವುದು ನಮಗೆಲ್ಲ ಗೊತ್ತೇ ಇದೆ.
ಗುಪ್ತರ ಶೈಲಿ
1500 ವರ್ಷಗಳಷ್ಟು ಹಳೆಯ ಈ ದೇವಸ್ಥಾನವನ್ನು ಗುಪ್ತರ ಕಾಲದಲ್ಲಿ ನಿರ್ಮಿಸಲಾಗಿದೆ. ಇದರ ವಾಸ್ತುಶಿಲ್ಪ(architecture)ವೆಲ್ಲವು ಗುಪ್ತ(Gupta) ಶೈಲಿಯಲ್ಲೇ ಇದೆ. ಗುಪ್ತರ ಕಾಲದಲ್ಲಿ ನಿರ್ಮಾಣವಾಗಿ ಮುಸ್ಲಿಂ ರಾಜರ ಆಡಳಿತದಲ್ಲಾದ ತಲ್ಲಣಗಳನ್ನು ತಾಳಿಕೊಂಡು ಇಂದಿಗೂ ನಿಂತಿರುವುದು ಈ ದೇವಾಲಯದ ಹೆಗ್ಗಳಿಕೆ. ವಿಷ್ಣುಧರ್ಮೋತ್ತರ ಪುರಾಣದಲ್ಲಿ ಬರುವ ಸರ್ವತೋಭದ್ರ ದೇವಾಲಯದಂತೆಯೇ ಈ ದೇವಾಲಯವನ್ನು ನಿರ್ಮಿಸಲಾಗಿರುವುದು ವಿಶೇಷ.
Char Dham Yatra: ಮೋಕ್ಷದ ಹಾದಿ ಚಾರ್‌ಧಾಮ್ ಯಾತ್ರೆ
ಮುಂಚೆಯೆಲ್ಲ ಒಂದು ದೇವಾಲಯ ಒಂದೇ ದೇವರಿಗೆ ಮೀಸಲಿರುತ್ತಿತ್ತು. ಈ ದೇವಾಲಯ ಕೂಡಾ ಅದಕ್ಕೊಂದು ಉದಾಹರಣೆ. ಇದು ವಿಷ್ಣುವಿಗಾಗಿಯೇ ಮೀಸಲಾದ ದೇವಾಲಯ. ಕಲ್ಲು ಹಾಗೂ ಇಟ್ಟಿಗೆ ಬಳಸಿ ದೇವಾಲಯ ಕಟ್ಟಲಾಗಿದೆ. ಗರ್ಭಗುಡಿಯ ಬಾಗಿಲಲ್ಲಿ ಸುತ್ತಿಕೊಂಡ ಸರ್ಪದ ಮೇಲೆ ಮಲಗಿರುವ ವಿಷ್ಣುವಿನ ಮೂರ್ತಿಯಿದೆ. ಅಷ್ಟೇ ಏಕೆ, ದೇವಾಲಯದ ಕೆತ್ತನೆಗಳೆಲ್ಲವೂ ವಿಷ್ಣುವಿಗೆ ಸಂಬಂಧಿಸಿದ ಕತೆಗಳನ್ನೇ ನೆನಪು ಮಾಡುತ್ತವೆ. ವೈಷ್ಣವ ಮತದವರಿಗೆ ಸರ್ವಶ್ರೇಷ್ಠ ದೇವಾಲಯ ಇದಾಗಿದೆ.
ಇತಿಹಾಸ(History)
ಈ ದೇವಾಲಯವನ್ನು ಕ್ಯಾಪ್ಟನ್ ಚಾರ್ಲ್ಸ್ ಸ್ತ್ರಹಾನ್ ಕಂಡು ಹಿಡಿದನೆನ್ನಲಾಗುತ್ತದೆ. ಪುರಾತತ್ವಶಾಸ್ತ್ರಜ್ಞ(archilogist) ಕನ್ನಿಂಗ್‌ಹ್ಯಾಂ ಇದಕ್ಕೆ ದಶಾವತಾರ ದೇವಾಲಯ ಎಂಬ ಹೆಸರು ನೀಡಿದರು. ಇದು ಉತ್ತರ ಭಾರತದಲ್ಲೇ ಮೊದಲ ಪಂಚಯತನ ಶೈಲಿಯ ದೇವಾಲಯವಾಗಿದೆ. ಅಷ್ಟೇ ಅಲ್ಲ, ಶಿಖರವನ್ನು ಹೊಂದಿದ ಮೊದಲ ಉತ್ತರ ಭಾರತದ ದೇವಾಲಯವಾಗಿದೆ. ಆದರೆ, ಈಗ ಈ ಶಿಖರ ಭಾಗವೆಲ್ಲ ಶಿಥಿಲಗೊಂಡು ಬಹುತೇಕ ನಾಶವಾಗಿದೆ. ಮುಖ್ಯ ಗರ್ಭಗುಡಿಯಲ್ಲಿದ್ದ ವಿಗ್ರಹ ಈಗ ಕಳೆದು ಹೋಗಿದೆ.
Temple of Bangalore: ಬೆಂಗ್ಳೂರಲ್ಲೂ ಹಿಂಗೆಲ್ಲ ಇದ್ಯಾ ಅನ್ಸೋಂಥ ದೇವಾಲಯಗಳಿವು..
ವಿಶೇಷತೆ
ಈ ದೇವಾಲಯದ ವಿಶೇಷವೆಂದರೆ, ಉದಯ ಸೂರ್ಯನ ಕಿರಣಗಳು ನೇರವಾಗಿ ಗರ್ಭಗುಡಿಯ ಮುಖ್ಯದೇವರಿಗೆ ಬೀಳುವಂತೆ ಕಟ್ಟಲಾಗಿದೆ. ಇಲ್ಲಿನ ಗರ್ಭಗುಡಿಗೆ ಪ್ರವೇಶಿಸುವ ಎರಡೂ ಬದಿಯಲ್ಲಿ ಗಂಗೆ(Ganga) ಹಾಗೂ ಯಮುನೆ(Yamuna) ದೇವತೆಯರು ನಿಂತಿರುವಂತೆ ಕಲ್ಲಿನ ಕೆತ್ತನೆಯಿದೆ. ಮತ್ತೊಂದು ಬದಿಯಲ್ಲಿ ಗಜೇಂದ್ರ ಮೋಕ್ಷ, ನರ ನಾರಾಯಣ ತಪಸ್ಸು ಮಾಡುತ್ತಿರುವುದು, ಶೇಷನ ಮೇಲೆ ಮಲಗಿರುವ ವಿಷ್ಣುವನ್ನು ಕೂಡಾ ಕಾಣಬಹುದಾಗಿದೆ.
ಇದಲ್ಲದೆ ವಿಷ್ಣುವಿನ ಹತ್ತು ಅವತಾರಗಳಾದ ಮತ್ಸ್ಯ, ಕೂರ್ಮ, ವರಾಹ, ನರಸಿಂಹ, ವಾಮನ, ಪರಶುರಾಮ, ರಾಮ (Rama), ಕೃಷ್ಣ, ಬುದ್ಧ, ಕಲ್ಕಿಯ ಮೂರ್ತಿಗಳು ಇಲ್ಲಿವೆ.
ಅವತಾರಗಳ ಬಗ್ಗೆ..
ವಿಷ್ಣುವಿನ ಮೊದಲ ನಾಲ್ಕು ಅವತಾರಗಳಾದ ಮತ್ಸ್ಯ, ಕೂರ್ಮ, ವರಾಹ, ನರಸಿಂಹ ಸತ್ಯ ಯುಗದಲ್ಲಿ ನಡೆದದ್ದು. ಇದನ್ನು ಸುವರ್ಣಯುಗ ಎಂದೂ ಹೇಳಲಾಗುತ್ತದೆ. ವಿಷ್ಣುವಿನ ಮುಂದಿನ ಮೂರು ಅವತಾರಗಳಾದ ವಾಮನ, ಪರಶುರಾಮ, ರಾಮ ತ್ರೇತಾ ಯುಗದಲ್ಲಿ ಕಾಣಿಸಿಕೊಂಡರು. ವಿಷ್ಣುವಿನ ಎಂಟನೇ ಮತ್ತು ಒಂಬತ್ತನೇ ಅವತಾರಗಳಾದ ಕೃಷ್ಣ ಮತ್ತು ಬುದ್ಧ ದ್ವಾಪರ ಯುಗದಲ್ಲಿ ಕಾಣಿಸಿಕೊಂಡರು. ವಿಷ್ಣುವಿನ ಹತ್ತನೇ ಅವತಾರ ಕಲ್ಕಿಯು ಕಲಿಯುಗದಲ್ಲಿ ಕಾಣಿಸಿಕೊಂಡನು.