Trustworthy Zodiac Signs: ಈ ರಾಶಿಯವರನ್ನು ನೀವು ಕಣ್ಣು ಮುಚ್ಚಿ ನಂಬಬಹುದು

By Suvarna NewsFirst Published Dec 11, 2021, 12:58 PM IST
Highlights

ನಮ್ಮ ಜೀವನದಲ್ಲಿ ಕೆಲವರ ಬಳಿ ಮಾತ್ರ ನಮ್ಮ ಅತೀ ದೊಡ್ಡ ರಹಸ್ಯಗಳನ್ನು ಹಂಚಿಕೊಳ್ಳಬಹುದು. ನಮ್ಮ ಹಣಕಾಸಿನ ವಿಚಾರ ಹೇಳಿಕೊಳ್ಳಬಹುದು, ಅಷ್ಟೇ ಏಕೆ, ನಮ್ಮ ಒಡವೆ, ಹಣವನ್ನೂ ಇವರನ್ನು ನಂಬಿ ಕೊಟ್ಟು ಎಲ್ಲಾದರೂ ಹೋಗಿ ಬರಬಹುದು. ಅಂಥ ನಂಬಿಕಸ್ಥರು ಯಾವ ರಾಶಿಯವರಾಗಿರುತ್ತಾರೆ ಗೊತ್ತಾ?
 

ನಮ್ಮ ಗೆಳೆಯರ ಬಳಗ ದೊಡ್ಡದೇ ಇದ್ದರೂ, ಸಣ್ಣದಾದರೂ, ಬದುಕಿನಲ್ಲಿ ಬಹಳ ನಂಬಿಕೆಯನ್ನಿಡಬಹುದಾದವರು ಕಡಿಮೆಯೇ. ತೀರಾ ಹತ್ತಿರದವರಿಂದಲೇ ಆಗಾಗ ನಂಬಿಕೆ ಧ್ರೋಹವಾಗಿ ಮನಸ್ಸು ಮುರಿದು ಹೋಗುವುದಿದೆ. ವ್ಯಕ್ತಿ ಪರಿಚಯವಾಗುವಾಗ ಅವರು ನಂಬಿಕೆಗೆ ಅರ್ಹರೋ ಅಲ್ಲವೋ ಎಂದು ತಿಳಿಯಲು ಇರುವ ಸುಲಭ ವಿಧಾನ ಎಂದರೆ ಅವರ ರಾಶಿ ಯಾವುದೆಂದು ತಿಳಿದುಕೊಳ್ಳುವುದು. ಏಕೆಂದರೆ, ಕೆಲ ರಾಶಿಯವರ ಹುಟ್ಟು ಗುಣದಲ್ಲೇ ನಂಬಿಕಸ್ಥ(trustworthy) ಪಟ್ಟ ಇರುತ್ತದೆ. 

ಕರ್ಕಾಟಕ(Cancer)
ಕಟಕ ರಾಶಿಯವರು ತಮ್ಮ ಬದುಕಿನ ಪ್ರಮುಖ ವ್ಯಕ್ತಿಗಳಿಗೆ ಎಷ್ಟು ಹೊಂದಿಕೊಂಡಿರುತ್ತಾರೆಂದರೆ, ಅವರಿಗಾಗಿ ಏನೂ ಮಾಡಲು ಸಿದ್ಧರಾಗಿರುತ್ತಾರೆ. ಅದಕ್ಕೇ, ನಿಮ್ಮನ್ನು ಇಷ್ಟ ಪಡುವ, ನಿಮಗೆ ಕಾಳಜಿ ವಹಿಸುವ ಕಟಕ ರಾಶಿಯವರು ನಿಮಗೆ ಮೋಸ ಮಾಡಲು ಸಾಧ್ಯವೇ ಇಲ್ಲ. ಇವರ ಭಾವನಾತ್ಮಕ ಬುದ್ಧಿಶಕ್ತಿ(EQ) ಹೆಚ್ಚಿದ್ದು, ಯಾವುದೇ ವಿಷಯದ ಬಗ್ಗೆ ಬಹು ಬೇಗ ಸರಿ ತಪ್ಪನ್ನು ಗುರುತಿಸಿಬಿಡುತ್ತಾರೆ. ಇವರ ಅತಿ ಸೂಕ್ಷ್ಮ (sensitive) ಸ್ವಭಾವದಿಂದಾಗಿ ಕೆಲವೊಮ್ಮೆ ನಂಬಬಹುದೇ ಎಂದು ಅನುಮಾನಿಸುವಂತಾಗುತ್ತದೆ. ಆದರೆ, ಯಾವ ಗಡಿ ದಾಟಬಹುದು, ಯಾವುದನ್ನು ದಾಟಬಾರದು ಎಂದು ಚೆನ್ನಾಗಿ ಅರ್ಥ ಮಾಡಿಕೊಳ್ಳುವ ಇವರು ನಿಮ್ಮ ರಹಸ್ಯವನ್ನಾಗಲೀ, ವಸ್ತುವನ್ನಾಗಲೀ ಜೋಪಾನ ಮಾಡುತ್ತಾರೆ. 

Marriage Horoscope 2022: ಈ ರಾಶಿಗಳಿಗೆ ಕೂಡಿ ಬರಲಿದೆ ಕಂಕಣ

ವೃಶ್ಚಿಕ(Scorpio)
ಮತ್ತೊಬ್ಬರನ್ನು ಸುಲಭವಾಗಿ ನಂಬದ ಗುಣ ವೃಶ್ಚಿಕ ರಾಶಿಯವರದು. ಹಾಗಿದ್ದೂ ಜನರು ಇವರ ಬಳಿಯೇ ಬಂದು ತಮ್ಮ ರಹಸ್ಯ(secrets)ಗಳನ್ನೆಲ್ಲ ಹೇಳಿಕೊಳ್ಳುವುದು ಹೆಚ್ಚು. ತನ್ನ ಸುತ್ತಮುತ್ತಲಿನವರೆಲ್ಲರ ಸೀಕ್ರೆಟ್‌ಗಳು ಈ ರಾಶಿಯವರ ಬಳಿ ಭದ್ರವಾಗಿರುತ್ತವೆ. ಇವರು ಬೇಗ ತಾಳ್ಮೆ(patience)ಗೆಡುತ್ತಾರೆ. ಆದರೆ, ಅಂಥ ಸಂದರ್ಭದಲ್ಲೂ ಸೀಕ್ರೆಟ್ ಬಿಟ್ಟು ಕೊಡುವುದಿಲ್ಲ. ಏಕೆಂದರೆ, ಅದರಿಂದ ಮುಂದಾಗಬಹುದಾದ ಪರಿಣಾಮಗಳ ಕಲ್ಪನೆ ಇವರಲ್ಲಿರುತ್ತದೆ. 

ಮಕರ(Capricorn)
ಮಕರ ರಾಶಿಯವರು ಉಳಿದೆಲ್ಲ ರಾಶಿಗಳಿಗಿಂತಲೂ ಹೆಚ್ಚು ಪ್ರಾಮಾಣಿಕರು, ನಂಬಿಕಸ್ಥರು. ಯಾವುದನ್ನಾದರೂ ರಹಸ್ಯವಾಗಿಡಲು ಹೇಳಿದರೆ, ಜಪ್ಪಯ್ಯಾ ಎಂದರು ಬಾಯಿ ಬಿಡಲಾರರು ಇವರು. ಒಬ್ಬರಿಗೆ ಕೊಟ್ಟ ಮಾತು ಅಪ್ಪಿತಪ್ಪಿಯೂ ತಪ್ಪಲಾರರು. ಆದರ್ಶಗಳ ಗಡಿ ಹಾಕಿಕೊಂಡು ಬದುಕುವವರಿವರು. ತಾವು ಸರಿಯಾದದ್ದನ್ನು ಮಾಡುವಾಗ ಮಾತ್ರ ಇವರು ಖುಷಿಯಾಗಿರುತ್ತಾರೆ. ಬೆಲೆ ಬಾಳುವ ವಸ್ತುಗಳು ಪರರಿಗೆ ಸೇರಿದ್ದನ್ನು ನೋಡಿಕೊಳ್ಳಲು ಕೊಟ್ಟರೆ, ಸ್ವಂತದ್ದಕ್ಕಿಂತಲೂ ಹೆಚ್ಚು ಜೋಪಾನ ಮಾಡುವ ಗುಣ ಇವರದು. ಏಕೆಂದರೆ ಇನ್ನೊಬ್ಬರಿಂದ ಒಂದೇ ಒಂದು ಕೆಟ್ಟ ಮಾತು ಕೇಳಿಸಿಕೊಳ್ಳಲು ಇವರು ಬಯಸುವುದಿಲ್ಲ. 

Astrological Remedies: ತಡ ವಿವಾಹಕ್ಕೆ ಕೆಲ ಪರಿಹಾರಗಳು

ಕನ್ಯಾ(Virgo)
ಕನ್ಯಾ ರಾಶಿಯವರು ಸದಾ ತಮ್ಮ ಸುತ್ತಲಿರುವವರ ಒಳಿತಿನ ಬಗ್ಗೆಯೇ ಯೋಚಿಸುವವರು. ತಾವು ಪ್ರೀತಿಸುವವರಿಗೆ ಒಳಿತಾಗುವುದು ಎಂದರೆ ಏನು ಬೇಕಾದರೂ ಮಾಡುವವರಿವರು. ನಿಮ್ಮ ಬಗ್ಗೆ ಅವರಿಗೆ ಅಂಥ ಪ್ರೀತಿ ಇಲ್ಲದಿದ್ದರೆ ಮಾತ್ರ ಅವರು ವಿಚಿತ್ರವಾಗಿ ಆಡುತ್ತಾರೆ ಎಂದು ನಿಮಗನಿಸಬಹುದು. ಇವರು ಪರ್ಫೆಕ್ಷನಿಸ್ಟ್‌ಗಳು. ಯಾವುದೇ ರೀತಿಯ ಸಹಾಯವನ್ನು ಆಪ್ತರು ಕೇಳಿದರೂ ಮಾಡುವವರು. ನಿಮ್ಮ ಪ್ರೀತಿಪಾತ್ರರಲ್ಲಿ ಕನ್ಯಾ ರಾಶಿಯವರಿದ್ದರೆ ಹೆಚ್ಚೇನೂ ಯೋಚಿಸದೆ ನೀವವರನ್ನು ನಂಬಬಹುದು. 

ಕುಂಭ(Aquarius)
ತಮಗೇನಾದರೂ ಬೇಕು ಎಂದಾಗ ಅದನ್ನು ಪಡೆಯಲು ಸ್ವಭಾವದ ಹೊರಗೆ ಹೋಗುವ ಧೈರ್ಯ ತೋರುವವರು ಇವರು. ಸ್ನೇಹಿತರಿಗೆ(friends) ಅತಿ ನಂಬಿಗೆಯವರಾಗಬಲ್ಲರು. ಇವರು ಬಹಳ ಸೆಲೆಕ್ಟಿವ್ ಆಗಿದ್ದು, ಎಲ್ಲರನ್ನೂ ಹತ್ತಿರ ಬಿಟ್ಟುಕೊಳ್ಳಲಾರರು. ಆದರೆ, ಅವರ ಸರ್ಕಲ್‌ನೊಳಗೆ ಹೋದವರಿಗೆ ಮಾತ್ರ ಇವರು ನಂಬಿಕೆಯ ಸ್ನೇಹಿತರು. ಅವರು ನಿಮ್ಮ ವಿಷಯದಲ್ಲಿ ಸ್ನೇಹವಾಗಿ ನಡೆದುಕೊಳ್ಳುತ್ತಿದ್ದಾರೆ ಎಂದರೆ ಅವರ ಬಳಿ ಖಂಡಿತಾ ನಿಮ್ಮ ಸೀಕ್ರೆಟ್ಸ್ ಹಂಚಿಕೊಳ್ಳಬಹುದು. 

ವೃಷಭ(Taurus)
ಸದಾ ರಿಯಲಿಸ್ಟಿಕ್ ಆಗಿರುವವರಿವರು. ಹಟಮಾರಿ(stubborn) ಸ್ವಭಾವದವರಾದರೂ ತುಂಬಾ ಪ್ರೀತಿಯನ್ನೂ ಹೊಂದಿದವರು. ಹಾಗಾಗಿ, ಇವರ ಬಳಿ ಆರಾಮಾಗಿ ನಿಮ್ಮ ಮನಸ್ಸು ಬಿಚ್ಚಿಡಬಹುದು. ಇವರು ಅತ್ಯುತ್ತಮ ಕೇಳುಗರು. ಮತ್ತೊಬ್ಬರ ರಹಸ್ಯಗಳನ್ನು ಬೀಗ ಜಡಿದು ಭದ್ರವಾಗಿಡುವವರು. 

click me!