ತಿರುಪತಿಯ 'ನಾನ್‌ವೆಜ್‌..' ಪ್ರಸಾದ ತಿಂದ ಪಾಪ ಕಾಡ್ತಿದ್ಯಾ? ದೈವಜ್ಞ ಸೋಮಯಾಜಿ ಪರಿಹಾರ ಹೇಳಿದ್ದಾರೆ ನೋಡಿ..

By Santosh Naik  |  First Published Sep 21, 2024, 8:18 PM IST

ತಿರುಪತಿ ಲಡ್ಡುವಿನಲ್ಲಿ ದನದ ಕೊಬ್ಬು ಬಳಕೆಯಾಗಿರುವ ವಿಚಾರದ ಬೆನ್ನಲ್ಲೇ, ಈ ಪ್ರಸಾದ ಸೇವಿಸಿದ ಭಕ್ತರ ಪಾಪ ಪರಿಹಾರಕ್ಕೆ ದೈವಜ್ಞ ಸೋಮಯಾಜಿ ಪರಿಹಾರ ಸೂಚಿಸಿದ್ದಾರೆ. ಪಂಚಗವ್ಯ ಸೇವನೆ ಅಥವಾ ತೀರ್ಥಸ್ನಾನದ ಮೂಲಕ ಪರಿಹಾರ ಕಂಡುಕೊಳ್ಳಬಹುದು ಎಂದು ಅವರು ತಿಳಿಸಿದ್ದಾರೆ.


ಬೆಂಗಳೂರು (ಸೆ.21): ಒಂದಂತೂ ಸತ್ಯ. ರಾಜಕಾರಣಿಗಳೆಲ್ಲಾ ಸೇರಿ ತಿರುಪತಿಯ ಭಕ್ತರ ನಂಬಿಕೆಗಳ ಮೇಲೆ ದೊಡ್ಡ ಮಟ್ಟದ ಗದಾಪ್ರಹಾರ ಮಾಡಿದ್ದಾರೆ. ತಿರುಪತಿಯಲ್ಲಿ ತಿಮ್ಮಪ್ಪನ ದರ್ಶನ ಮಾಡಿ ಪವಿತ್ರ ಲಡ್ಡು ಪ್ರಸಾದವನ್ನು ಸೇವಿಸುತ್ತಿದ್ದ ಭಕ್ತಾದಿಗಳ ನಂಬಿಕೆಗೆ ದ್ರೋಹ ಎಸಗುವ ಕಾರ್ಯವಾಗಿದೆ. ಭಾರತದದಲ್ಲಿ ಮಾಂಸಾಹಾರಿ ಹಿಂದುಗಳಿದ್ದರೂ, ದನದ ಮಾಂಸವನ್ನು ತಿನ್ನುವವರು ಇಲ್ಲವೇ ಇಲ್ಲ ಎನ್ನಬಹುದು. ಆದರೆ, ತಿರುಪತಿಯಲ್ಲಿ ಲಡ್ಡು ಮಾಡಲು ಬಳಕೆ ಮಾಡಲಾಗುತ್ತಿದ್ದ ತುಪ್ಪದಲ್ಲಿ ದನದ ಕೊಬ್ಬು, ಹಂದಿ ಕೊಬ್ಬು ಹಾಗೂ ಮೀನೆಣ್ಣೆಯ ಅಂಶಗಳಿವೆ ಎನ್ನುವುದು ಲ್ಯಾಬ್‌ ರಿಪೋರ್ಟ್‌ನಲ್ಲಿ ಪತ್ತೆಯಾಗಿದೆ. ಇದರ ಬೆನ್ನಲ್ಲಿಯೇ ಟಿಟಿಡಿ ಕೂಡ ತಮ್ಮಿಂದ ತಪ್ಪಾಗಿದೆ ಅನ್ನೋದನ್ನ ತಿಳಿಸಿದೆ. ವೈಎಸ್‌ಆರ್‌ ಕಾಂಗ್ರೆಸ್‌ನ ಜಗನ್‌ ಮೋಹನ್‌ ರೆಡ್ಡಿ ಹಾಗೂ ಆಂಧ್ರ ಸಿಎಂ ಟಿಡಿಪಿಯ ಚಂದ್ರಬಾಬು ನಾಯ್ಡು ನಡುವೆ ಇದೇ ವಿಚಾರವಾಗಿ ರಾಜಕಾರಣ ತಾರಕಕ್ಕೇರಿದೆ. ಈ ನಡುವೆ ತಿರುಪತಿಯ ನಾನ್‌ವೆಜ್ ಪ್ರಸಾದ ತಿಂದ ಪಾಪಪ್ರಜ್ಞೆ ಮಾತ್ರ ಭಕ್ತಾದಿಗಳಲ್ಲಿ ಕಾಡಿದೆ. ಹಾಗಿದ್ದರೆ, ಈ ನಾನ್‌ವೆಜ್‌ ಪ್ರಸಾದ ತಿಂದವರು ಪಾಪ ಪರಿಹಾರಕ್ಕೆ ಏನು ಮಾಡಬೇಕು ಅನ್ನೋದರ  ಬಗ್ಗೆ ದೈವಜ್ಞ ಸೋಮಯಾಜಿ ಮಾತನಾಡಿದ್ದಾರೆ.

ದನದ ಕೊಬ್ಬು ಮಿಶ್ರಿತ ಪ್ರಸಾದ ತಿಂದವರು ಪಾಪ ಪರಿಹಾರಕ್ಕೆ ಏನು ಮಾಡಬೇಕು: ತಿಮ್ಮಪ್ಪನ ಭಕ್ತರು ಯಾವುದೇ ಅತಂಕಕ್ಕೆ ಒಳಗಾಗುವುದು ಬೇಕಿಲ್ಲ. ಇದು ಗೊತ್ತಿಲ್ಲದೆ ಆಗಿರುವಂಥ ಪ್ರಮಾದ ಎಂದು ದೈವಜ್ಞ ಸೋಮಯಾಜಿ ಹೇಳಿದ್ದಾರೆ. ಯಾರಿಗೂ ಕೂಡಾ ತಾವು ತಿಂದ ತಿರುಪತಿ ಪ್ರಸಾದದಲ್ಲಿ ದನದ ಕೊಬ್ಬು, ಹಂದಿಯ ಕೊಬ್ಬಿನ ಅಂಶ, ಮೀನಿನ ಎಣ್ಣೆಗಳಂತಹ ʻಪ್ರಸಾದದಲ್ಲಿ ಅಪವಿತ್ರʼ ಎಂದು ನಂಬಿರುವ ವಸ್ತಗಳಿವೆ ಎನ್ನುವುದು ಗೊತ್ತಿಲ್ಲ. ಇದರಿಂದಾಗಿ ಯಾವುದೇ ಭಕ್ತರಿಗೆ ಇದರ ಪಾಪವೂ ಅಂಟೋದಿಲ್ಲ. ದೋಷ ಕೂಡ ತಾಗುವುದಿಲ್ಲ. ದನದ ಕೊಬ್ಬು ಮಿಶ್ರಿತ ಲಡ್ಡು ತಿಂದ ಕಾರಣಕ್ಕೆ ಪಾಪಪ್ರಜ್ಞೆಯಿಂದ ನರಳಬೇಕಾದ ಅಗತ್ಯವಿಲ್ಲ ಎಂದಿದ್ದಾರೆ.

Tap to resize

Latest Videos

undefined

ಹಾಗಿದ್ದರೂ ನಿಮಗೆ ಪಾಪಪ್ರಜ್ಞೆ ಕಾಡುತ್ತಿದ್ದರೆ ಪಂಚಗವ್ಯ ಸೇವಿಸುವ ಮೂಲಕ ಇದರಿಂದ ಹೊರಬನ್ನಿ ಎಂದಿದ್ದಾರೆ. ಪಂಚಗವ್ಯ ಎಂದರೆ ಹಸುವಿನ ಗಂಜಲ (ಗೋಮೂತ್ರ), ಸಗಣಿ, ಮೊಸರು, ತುಪ್ಪ ಹಾಗೂ ಹಾಲು ಬಳಸಿ ಮಾಡಿರುವ ಪವಿತ್ರ ತೀರ್ಥ. ವೇದ ಮಂತ್ರ ಗೊತ್ತಿದ್ದರೆ, ವೇದ ಮಂತ್ರವನ್ನು ಪಠಣೆ ಮಾಡುತ್ತಾ ದರ್ಬೆಯನ್ನು ಬಳಸಿ ಮಾಡಲಾಗಿರುವ ಈ ಪಂಚಗವ್ಯವನ್ನು ಸೇವಿಸಬೇಕು. ಇನ್ನು ವೇದ ಮಂತ್ರ ಗೊತ್ತಿಲ್ಲದೇ ಇರುವವರು ತಮ್ಮ ಇಷ್ಟದೇವರು ಅಥವಾ ಕುಲದೇವರ ಧ್ಯಾನ ಮಾಡುತ್ತಾ ಇದನ್ನು ಸೇವಿಸಬೇಕು. ಅಲ್ಲಿಗೆ ನಿಮ್ಮ ಪಾಪ ಪರಿಹಾರ ಎಂದಿದ್ದಾರೆ.

ತಿರುಪತಿ ಲಾಡು ತಯಾರಿಸಲು ದನದ ಕೊಬ್ಬು, ಮೀನೆಣ್ಣೆ ಬಳಕೆ, ಟೆಸ್ಟ್‌ ರಿಪೋರ್ಟ್‌ನಿಂದ ದೃಢ!

ತೀರ್ಥಸ್ನಾನದ ಆಯ್ಕೆಯೂ ಇದೆ: ಹಾಗೇನಾದರೂ ಇದೆಲ್ಲ ಮಾಡೋಕೆ ಸಾಧ್ಯವಾಗದೇ ಇರುವವರು ತೀರ್ಥಸ್ನಾನ ಮಾಡಿ ಪರಿಹಾರ ಕಂಡುಕೊಳ್ಳಬಹುದು. ರಾಜ್ಯದಲ್ಲಿಯೇ ಹಲವು ಪವಿತ್ರ ನದಿಗು ಹರಿಯುತ್ತದೆ. ಅವುಗಳನ್ನು ಸ್ನಾನ ಮಾಡುವ ಮೂಲಕ ಅಥವಾ ಖೂಷ್ಮಾಂಡ ಹೋಮ ಮಾಡುವುದರ ಮೂಲಕವೂ ಶುದ್ದಿಯಾಗಬಹುದು ಎಂದು ಸೋಮಯಾಜಿ ತಿಳಿಸಿದ್ದಾರೆ. ಅಚಾತುರ್ಯದಿಂದ ಆಗಿರುವ ಪ್ರಮಾದವಾಗಿದ್ದರೆ, ಗೊತ್ತಿಲ್ಲದೆ ಆಗಿರುವ ತಪ್ಪಾಗಿದ್ದರೆ ಏನೂ ಆಗಲ್ಲ. ಆದರೆ ಉದ್ದೇಶಪೂರ್ವಕವಾಗಿಯೇ ಮಾಡಿದ್ದರೆ, ಧಾರ್ಮಿಕ ನಂಬಿಕೆಗಳನ್ನು ಘಾಸಿ ಮಾಡುವುದಕ್ಕೋಸ್ಕರವೇ ಈ ಕೃತ್ಯ ಎಸಗಿದ್ದರೆ ಆ ಪಾಪಕ್ಕೆ ಕ್ಷಮೆ ಇಲ್ಲ ಎಂದು ದೈವಜ್ಞ ಸೋಮಯಾಜಿ ಹಾಗೂ ಹಲವು ಧಾರ್ಮಿಕ ನಾಯಕರು ಹೇಳಿದ್ದಾರೆ.

History Of Tirupati Laddu: 308 ವರ್ಷಗಳ ಇತಿಹಾಸದ ತಿರುಪತಿ ಲಡ್ಡುವಿಗೆ ಇದೆಂಥಾ ಅಪಚಾರ!

click me!