Numerology Today: ಹಳೆ ವಿಷಯ ಕೆದಕಿದರೆ ಮನಸ್ತಾಪ ತಪ್ಪಿದ್ದಲ್ಲ!

Published : Jun 17, 2022, 06:47 AM IST
Numerology Today: ಹಳೆ ವಿಷಯ ಕೆದಕಿದರೆ ಮನಸ್ತಾಪ ತಪ್ಪಿದ್ದಲ್ಲ!

ಸಾರಾಂಶ

ಸಂಖ್ಯಾ ಶಾಸ್ತ್ರದ ಪ್ರಕಾರ ನಿಮ್ಮ ಈ ದಿನದ ಭವಿಷ್ಯವೇನು ಎಂಬುದನ್ನು ತಿಳಿಯಿರಿ. ನಿಮ್ಮ ಸಂಖ್ಯೆ ಯಾವುದೆಂಬುದನ್ನು ಕಂಡುಕೊಳ್ಳಲು, ನಿಮ್ಮ ಜನ್ಮ ದಿನಾಂಕದ ಅಂಕೆಗಳನ್ನು ಸೇರಿಸಿ. ಉದಾಹರಣೆಗೆ ನಿಮ್ಮ ಜನ್ಮ ದಿನಾಂಕ 23 ಆಗಿದ್ದರೆ 2 + 3 = 5. 5 ನಿಮ್ಮ ಸಂಖ್ಯೆಯಾಗಿರುತ್ತದೆ. ಈಗ ನೀವು ಸಂಖ್ಯೆ 5ರ ಮೇಲೆ ನಿಮ್ಮ ಸಂಖ್ಯಾಶಾಸ್ತ್ರ(Numerology)ದ ಮುನ್ಸೂಚನೆಯನ್ನು ಪರಿಶೀಲಿಸಬೇಕು. 

ಸಂಖ್ಯೆ 1 (ಯಾವುದೇ ತಿಂಗಳ 1, 10, 19 ಮತ್ತು 28 ರಂದು ಜನಿಸಿದ ಜನರು)
ಕೌಶಲ್ಯದ ಮೂಲಕ ನಿರೀಕ್ಷೆಗಿಂತ ಹೆಚ್ಚಿನ ಪ್ರಯೋಜನ ಪಡೆಯುವಿರಿ. ಹತ್ತಿರದ ಸಂಬಂಧಿಯಿಂದ ಒಳ್ಳೆಯ ಸುದ್ದಿ ಬರಬಹುದು. ನಕಾರಾತ್ಮಕ ಚಟುವಟಿಕೆ ಹೊಂದಿರುವ ಜನರಿಂದ ದೂರವಿರಿ. ಮನೆಯ ಯಾವುದೇ ಸದಸ್ಯರ ಆರೋಗ್ಯದ ಪರಿಸ್ಥಿತಿಯಿಂದ ನಿಮ್ಮ ಪ್ರಮುಖ ಕಾರ್ಯಗಳನ್ನು ತಪ್ಪಿಸಬೇಕಾಗಬಹುದು. ಕೋಪವನ್ನು ನಿಯಂತ್ರಿಸಿ. ನೀವು ಮಾಧ್ಯಮ ಅಥವಾ ಫೋನ್ ಮೂಲಕ ಪ್ರಮುಖ ಒಪ್ಪಂದಗಳನ್ನು ಪಡೆಯಬಹುದು. ಕುಟುಂಬದ ಸದಸ್ಯರ ನಡುವೆ ಸರಿಯಾದ ಹೊಂದಾಣಿಕೆಯು ಮನೆಯಲ್ಲಿ ಧನಾತ್ಮಕ ಶಕ್ತಿ ತರುತ್ತದೆ. ಹಾರ್ಮೋನ್ ಸಂಬಂಧಿತ ಅಸ್ವಸ್ಥತೆಗಳು ಹೆಚ್ಚಾಗಬಹುದು.

ಸಂಖ್ಯೆ 2 (ಯಾವುದೇ ತಿಂಗಳ 2, 11, 20 ಅಥವಾ 29 ರಂದು ಜನಿಸಿದ ಜನರು)
ನೀವು ಆಸ್ತಿ ಅಥವಾ ವಾಹನ ಖರೀದಿಸಲು ಅಥವಾ ಮಾರಾಟ ಮಾಡಲು ಯೋಜಿಸುತ್ತಿದ್ದರೆ ಅದನ್ನು ಕಾರ್ಯಗತಗೊಳಿಸಲು ಇದು ಉತ್ತಮ ಸಮಯ. ಕೈಗೊಂಡಿರುವ ಕೆಲಸವು ವೇಗ ಪಡೆಯುತ್ತದೆ. ಸಾಮಾಜಿಕ ಅಥವಾ ರಾಜಕೀಯ ಚಟುವಟಿಕೆಗಳಲ್ಲಿಯೂ ಆಸಕ್ತಿ ಹೊಂದಿರುತ್ತೀರಿ. ಚಾಲನೆ ಮಾಡುವಾಗ ಜಾಗರೂಕರಾಗಿರಿ. ಸೋಮಾರಿತನ ಮತ್ತು ಅತಿಯಾದ ಚಿಂತನೆಯಿಂದ ಪ್ರಮುಖ ಒಪ್ಪಂದ ಕಳೆದುಕೊಳ್ಳುವಿರಿ. ವೃತ್ತಿಪರ ಚಟುವಟಿಕೆಗಳಿಗೆ ಸ್ವಲ್ಪ ವಿವೇಕ ಮತ್ತು ಎಚ್ಚರಿಕೆ ಬೇಕಾಗುತ್ತದೆ. ಕೆಮ್ಮು, ಜ್ವರ ಮತ್ತು ಅಲರ್ಜಿಯ ಸಮಸ್ಯೆಗಳಿರುತ್ತವೆ.

ಸಂಖ್ಯೆ 3 (ಯಾವುದೇ ತಿಂಗಳ 3, 12, 21, 30 ರಂದು ಜನಿಸಿದ ಜನರು)
ಹಳೆಯ ನಕಾರಾತ್ಮಕ ವಿಷಯಗಳು ವರ್ತಮಾನದಲ್ಲಿ ಪ್ರಾಬಲ್ಯ ಸಾಧಿಸಲು ಬಿಡಬೇಡಿ. ಹಾಗೆ ಮಾಡುವುದರಿಂದ ಸಂಬಂಧಿಕರೊಂದಿಗಿನ ನಿಮ್ಮ ಸಂಬಂಧ ಹಾಳಾಗುತ್ತದೆ. ಇಂದು ಯಾವುದೇ ಸಾಲದ ವ್ಯವಹಾರಗಳನ್ನು ಮಾಡಬೇಡಿ. ವಿದ್ಯಾರ್ಥಿಗಳು ತಮ್ಮ ಅಧ್ಯಯನದ ಬಗ್ಗೆ ನಿರ್ಲಕ್ಷ್ಯ ತೋರಬಾರದು. ಅತಿಯಾದ ಪರಿಶ್ರಮವು ಕಾಲುಗಳಲ್ಲಿ ನೋವು ಮತ್ತು ಊತವನ್ನು ಉಂಟುಮಾಡುತ್ತದೆ.

ಶನಿ ದೋಷವಿದ್ರೆ ನಿಮ್ಮಲ್ಲಿ ಈ ಸಮಸ್ಯೆಗಳು ಕಂಡು ಬರುತ್ತೆ!

ಸಂಖ್ಯೆ 4 (ಯಾವುದೇ ತಿಂಗಳ 4, 13, 22 ಅಥವಾ 31 ರಂದು ಜನಿಸಿದ ಜನರು)
ಯಾವುದೇ ಸರ್ಕಾರಿ ಕೆಲಸಗಳು ಸ್ಥಗಿತಗೊಳ್ಳುವುದು. ಯುವಕರು ತಮ್ಮ ಕೆಲಸದ ಬದಲು ಮೋಜಿನಲ್ಲೇ ಕಾಲ ಕಳೆಯುತ್ತಾರೆ. ಅವರು ತಮ್ಮ ಗುರಿಯಿಂದ ವಿಮುಖರಾಗಬಹುದು. ಯಾವುದೇ ರೀತಿಯ ಹಣದ ವ್ಯವಹಾರದಲ್ಲಿ ಎಚ್ಚರಿಕೆ ವಹಿಸಿ. ನೀವು ಹಣಕಾಸಿನ ತೊಂದರೆಯಲ್ಲಿ ಸಿಲುಕಿಕೊಳ್ಳುತ್ತೀರಿ. ನಿಮ್ಮ ಕೆಲಸದ ಗುಣಮಟ್ಟವನ್ನು ಉತ್ತಮವಾಗಿ ನಿರ್ವಹಿಸುವ ಅಗತ್ಯವಿದೆ. ಪತಿ-ಪತ್ನಿಯ ನಡುವೆ ಕಲಹಗಳು ಉಂಟಾಗಬಹುದು. 

ಸಂಖ್ಯೆ 5 (ಯಾವುದೇ ತಿಂಗಳ 5, 14, 23 ರಂದು ಜನಿಸಿದ ಜನರು)
ನಿಮ್ಮ ಆಸಕ್ತಿಗಳಿಗೆ ಸಂಬಂಧಿಸಿದ ಚಟುವಟಿಕೆಗಳಲ್ಲಿ ಸ್ವಲ್ಪ ಸಮಯ ಕಳೆಯಿರಿ; ಇದು ನಿಮಗೆ ತಾಜಾತನ ನೀಡುತ್ತದೆ. ವಿದ್ಯಾರ್ಥಿಗಳು ವಿದೇಶಗಳಿಗೆ ಸಂಬಂಧಿಸಿದ ಯಾವುದೇ ಪ್ರಕ್ರಿಯೆಗಳನ್ನು ಪ್ರಾರಂಭಿಸಬಹುದು. ವಾಹನ ಚಲಾಯಿಸುವಾಗ ಸಂಚಾರಿ ನಿಯಮಗಳ ಬಗ್ಗೆ ಗಮನ ಹರಿಸಿ, ಇಲ್ಲದಿದ್ದರೆ ನೀವು ಕಾನೂನು ಪ್ರಕರಣದಲ್ಲಿ ಭಾಗಿಯಾಗಬಹುದು. ಹಣ ಬಂದಷ್ಟೇ ವೇಗವಾಗಿ ಖಾಲಿಯಾಗುತ್ತದೆ. ಹತಾಶೆ ಮತ್ತು ನಕಾರಾತ್ಮಕ ಆಲೋಚನೆಗಳು ಮನಸ್ಸಿನಲ್ಲಿ ಬರಲು ಬಿಡಬೇಡಿ. ಯಾವುದೇ ಸದಸ್ಯರ ಕಾರಣದಿಂದಾಗಿ ಕುಟುಂಬ ಜೀವನದಲ್ಲಿ ಒತ್ತಡ ಉಂಟಾಗಬಹುದು. 

ಸಂಖ್ಯೆ 6 (ಯಾವುದೇ ತಿಂಗಳ 6, 15 ಅಥವಾ 24 ರಂದು ಜನಿಸಿದ ಜನರು)
ಯಶಸ್ಸು ನಿಮಗೆ ಶಾಂತಿ ತರುತ್ತದೆ. ಮನೆಯನ್ನು ನವೀಕರಿಸುವ ಮತ್ತು ಅಲಂಕರಿಸುವ ಯೋಜನೆ ಇರುತ್ತದೆ. ಮನೆಯಲ್ಲಿ ಹೆಚ್ಚು ಸಮಯ ಕಳೆಯುವುದರಿಂದ ನಿಮ್ಮ ಪ್ರಮುಖ ಕಾರ್ಯಗಳು ನಿಲ್ಲಬಹುದು. ವ್ಯಾಪಾರ ಚಟುವಟಿಕೆಗಳಿಗೆ ಹೆಚ್ಚಿನ ಗಮನ ನೀಡುವ ಅಗತ್ಯವಿದೆ. ಕೌಟುಂಬಿಕ ವಾತಾವರಣ ಸಂತೋಷವಾಗಿರಬಹುದು. ಮಿತವಾಗಿ ತಿನ್ನಿರಿ.

ಸಂಖ್ಯೆ 7 (ಯಾವುದೇ ತಿಂಗಳ 7, 16 ಮತ್ತು 25 ರಂದು ಜನಿಸಿದ ಜನರು)
ಮಕ್ಕಳ ವಿದ್ಯಾಭ್ಯಾಸಕ್ಕೆ ಸಂಬಂಧಿಸಿದ ಕೆಲವು ಪ್ರಯೋಜನಕಾರಿ ಯೋಜನೆಗಳು ಕಾರ್ಯರೂಪಕ್ಕೆ ಬರಲಿದ್ದು, ಇದರಿಂದ ಮಕ್ಕಳಲ್ಲಿ ಆತ್ಮವಿಶ್ವಾಸ ಹೆಚ್ಚುತ್ತದೆ. ಅತಿಥಿಗಳ ಆಗಮನದಿಂದ ಮನೆಯಲ್ಲಿ ಆಹ್ಲಾದಕರ ವಾತಾವರಣವಿರುತ್ತದೆ. ಯಶಸ್ಸು ಅಹಂಕಾರಕ್ಕೆ ಕಾರಣವಾಗಬಹುದು. ಎಚ್ಚರ ವಹಿಸಿ. ವ್ಯಾಪಾರ ಕ್ಷೇತ್ರದಲ್ಲಿ ಹೊಸ ಉದ್ಯೋಗ ಆರಂಭವಾಗಲಿದೆ. ಮನೆ ಮತ್ತು ವ್ಯವಹಾರದಲ್ಲಿ ಸರಿಯಾದ ಸಮನ್ವಯವನ್ನು ಕಾಪಾಡಿಕೊಳ್ಳುವುದು ಸಂತೋಷದ ವಾತಾವರಣವನ್ನು ಸೃಷ್ಟಿಸುತ್ತದೆ.

ಸಂಖ್ಯೆ 8 (ಯಾವುದೇ ತಿಂಗಳ 8, 17 ಮತ್ತು 26 ರಂದು ಜನಿಸಿದ ಜನರು)
ಪ್ರಮುಖ ವಿಷಯಗಳ ಕುರಿತು ಚರ್ಚೆ ನಡೆಯಲಿದೆ. ವೈಯಕ್ತಿಕ ಸಂಬಂಧಗಳಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಿ. ಆಸ್ತಿಯನ್ನು ಮಾರಾಟ ಮಾಡಲು ಅಥವಾ ಖರೀದಿಸಲು ನಡೆಯುತ್ತಿರುವ ಪ್ರಕ್ರಿಯೆಯಿದ್ದರೆ, ಸಮಯವು ಸರಿಯಾಗಿದೆ. ಒತ್ತಡದ ಬದಲು ತಾಳ್ಮೆಯಿಂದ ಇರಬೇಕಾದ ಸಮಯ ಇದು. ಸಂತಾನದ ಯಾವ ಆಶೆಯೂ ಈಡೇರದೆ ಮನಸ್ಸು ನಿರಾಶೆಗೊಳ್ಳಲಿದೆ. ವೈಯಕ್ತಿಕ ಕಾರಣಗಳಿಗಾಗಿ ನೀವು ವ್ಯವಹಾರದ ಮೇಲೆ ಗಮನ ಕೇಂದ್ರೀಕರಿಸಲು ಸಾಧ್ಯವಾಗುವುದಿಲ್ಲ. ಸಣ್ಣಪುಟ್ಟ ವಿಷಯಗಳಿಗೆ ಪತಿ-ಪತ್ನಿಯರ ನಡುವೆ ಜಗಳ ಉಂಟಾಗಬಹುದು. 

Palmistry: ಹೆಬ್ಬೆರಳು ಹೇಳುವ ವ್ಯಕ್ತಿತ್ವ, ನಿಮ್ಮ Thumb ಏನನ್ನುತ್ತೆ?

ಸಂಖ್ಯೆ 9 (ಯಾವುದೇ ತಿಂಗಳ 9, 18 ಮತ್ತು 27 ರಂದು ಜನಿಸಿದ ಜನರು)
ನಿಮ್ಮ ಪ್ರತಿಭೆ ಮತ್ತು ಬೌದ್ಧಿಕ ಸಾಮರ್ಥ್ಯದ ಆಧಾರದ ಮೇಲೆ ಇಂದು ನೀವು ಕೆಲ ನಿರ್ಧಾರಗಳನ್ನು ತೆಗೆದುಕೊಳ್ಳುತ್ತೀರಿ. ಅದು ನಿಮಗೆ ಮನೆಯಲ್ಲಿ ಮತ್ತು ಸಮಾಜದಲ್ಲಿ ಪ್ರಶಂಸೆಯನ್ನು ತರುತ್ತದೆ. ಹಳೆಯ ನಕಾರಾತ್ಮಕ ಮಾತುಗಳು ವರ್ತಮಾನದ ಮೇಲೆ ಪರಿಣಾಮ ಬೀರಲು ಬಿಡಬೇಡಿ. ಇದು ನಿಮ್ಮ ಸಂಬಂಧವನ್ನು ಹದಗೆಡಿಸಬಹುದು. ನಿಮ್ಮ ಬಗ್ಗೆ ವಿಶೇಷ ಮಾಹಿತಿಯನ್ನು ಅಪರಿಚಿತರಿಗೆ ನೀಡಬೇಡಿ. ವ್ಯಾಪಾರ ಚಟುವಟಿಕೆಗಳು ಸ್ವಲ್ಪ ನಿಧಾನವಾಗಬಹುದು. ಸಂಗಾತಿಯ ಸಹಕಾರವು ನಿಮ್ಮ ಸ್ಥೈರ್ಯ ಮತ್ತು ಆತ್ಮವಿಶ್ವಾಸವನ್ನು ಕಾಪಾಡುತ್ತದೆ.

PREV
Read more Articles on
click me!

Recommended Stories

ಮೆಹಂದಿ ಗಿಡ ಪೂಜಿಸಿದರೆ ಇಷ್ಟೆಲ್ಲಾ ಲಾಭವಿದೆಯೇ?: ಪೂಜೆಗೆ ಇದೇ ಸರಿಯಾದ ದಿನ!
ಈ 3 ರಾಶಿಯ ಪುರುಷರಿಗೆ ಶ್ರೀಮಂತ ಹೆಣ್ಮಕ್ಕಳನ್ನು ಮದುವೆಯಾಗುವ ಅದೃಷ್ಟ ಇದೆ