ವಾರದ 'ಈ ಮೂರು' ದಿನ ಉಗುರು & ಕೂದಲು ಕತ್ತರಿಸಿದರೆ ದುರಾದೃಷ್ಟ ನಿಮ್ಮ ಬೆನ್ನು ಹತ್ತಲಿದೆ..!

By Sushma Hegde  |  First Published Jun 29, 2023, 4:47 PM IST

ಹಿಂದೂ ಧರ್ಮ (Hinduism) ದಲ್ಲಿ ಅನೇಕ ಹಳೆಯ ಸಂಪ್ರದಾಯಗಳು ಇವೆ. ಅದನ್ನು ಜನರು ಇನ್ನೂ ಕುರುಡಾಗಿ ಅನುಸರಿಸುತ್ತಾರೆ. ಈ ಸಂಪ್ರದಾಯದಲ್ಲಿ ಉಗುರು ಕತ್ತರಿಸುವ ದಿನದ ಬಗ್ಗೆ ನಂಬಿಕೆ ಇದೆ. ಈ ಕುರಿತು ಇಲ್ಲಿದೆ ಒಂದಷ್ಟು ಮಾಹಿತಿ.


ಹಿಂದೂ ಧರ್ಮ (Hinduism) ದಲ್ಲಿ ಅನೇಕ ಹಳೆಯ ಸಂಪ್ರದಾಯಗಳು ಇವೆ. ಅದನ್ನು ಜನರು ಇನ್ನೂ ಕುರುಡಾಗಿ ಅನುಸರಿಸುತ್ತಾರೆ. ಈ ಸಂಪ್ರದಾಯದಲ್ಲಿ ಉಗುರು ಕತ್ತರಿಸುವ ದಿನದ ಬಗ್ಗೆ ನಂಬಿಕೆ ಇದೆ. ಈ ಕುರಿತು ಇಲ್ಲಿದೆ ಒಂದಷ್ಟು ಮಾಹಿತಿ.

ಮಂಗಳವಾರ ಮತ್ತು ಗುರುವಾರ  (Thursday) ಹಾಗೂ ಶನಿವಾರ ಕೂದಲು (hair)  ಮತ್ತು ಉಗುರುಗಳನ್ನು ಕತ್ತರಿಸಬಾರದು ಎಂದು ನಾವು ಕೇಳಿದ್ದೇವೆ. ಆದರೆ ಇದರ ಹಿಂದಿನ ನಿಜವಾದ ಕಾರಣವೇನು ಎಂಬುದು ಹೆಚ್ಚಿನ ಜನರಿಗೆ ಗೊತ್ತಿಲ್ಲ. ಇಂದು ನಾವು ಅದರ ಧಾರ್ಮಿಕ  (Religious) ಮತ್ತು ವೈಜ್ಞಾನಿಕ ಕಾರಣಗಳನ್ನು ತಿಳಿಸಲಿದ್ದೇವೆ.

Latest Videos

undefined


 ಧಾರ್ಮಿಕ ಕಾರಣಗಳು

ಇದರ ಹಿಂದೆ ಹಲವು ಧಾರ್ಮಿಕ ಕಾರಣಗಳಿವೆ. ಮಂಗಳವಾರ, ಶನಿವಾರ ಮತ್ತು ಗುರುವಾರದಂದು ಉಗುರು ಅಥವಾ ಕೂದಲನ್ನು ಕತ್ತರಿಸುವುದು ದೇವರ ಕೋಪ (anger) ಕ್ಕೆ ಗುರಿಯಾಗುತ್ತದೆ ಎಂದು ನಂಬಲಾಗಿದೆ. ನಂಬಿಕೆಯ ಪ್ರಕಾರ, ಶನಿವಾರದಂದು ಉಗುರು (nail)  ಗಳನ್ನು ಕತ್ತರಿಸುವುದು ಜೀವನವನ್ನು ಕಡಿಮೆ ಮಾಡುತ್ತದೆ. ಗುರುವಾರ ಉಗುರುಗಳನ್ನು ಕತ್ತರಿಸುವುದು ಶಿಕ್ಷಣಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ತರುತ್ತದೆ. ಮಂಗಳವಾರ ಉಗುರುಗಳನ್ನು ಕತ್ತರಿಸುವುದರಿಂದ ರಕ್ತ ಸಂಬಂಧಿ ಕಾಯಿಲೆ (disease) ಗಳು ಬರುತ್ತವೆ. ಅದಕ್ಕಾಗಿಯೇ ಈ ದಿನ ಉಗುರು ಕತ್ತರಿಸುವುದನ್ನು ನಿಷೇಧಿಸಲಾಗಿದೆ. ಉಳಿದ ವಾರದಲ್ಲಿ ಉಗುರುಗಳನ್ನು ಕತ್ತರಿಸಲು ಯಾವುದೇ ತೊಂದರೆ ಇಲ್ಲ.

ವೈಜ್ಞಾನಿಕ ಕಾರಣ

ನಾವು ವೈಜ್ಞಾನಿಕ ಕಾರಣದ ಬಗ್ಗೆ ಮಾತನಾಡಿದರೆ, ಮಂಗಳವಾರ, ಶನಿವಾರ ಮತ್ತು ಗುರುವಾರ  ಅನೇಕ ರೀತಿಯ ಶಕ್ತಿ (energy) ಗಳು ಮಾನವ ದೇಹದ ಸೂಕ್ಷ್ಮ ಭಾಗಗಳ ಮೇಲೆ ವಿಶೇಷ ಪರಿಣಾಮ ಬೀರುತ್ತವೆ. ಆದ್ದರಿಂದ ಈ ದಿನಗಳಲ್ಲಿ ಉಗುರುಗಳನ್ನು ಕತ್ತರಿಸದಂತೆ ಸಲಹೆ  (advice) ನೀಡಲಾಗುತ್ತದೆ.

ರಾತ್ರಿ ದಿಂಬಿನ ಬಳಿ ಈ ವಸ್ತು ಇಡಿ; ಉತ್ತಮ ನಿದ್ರೆ, ಸಂಪತ್ತು ಪಡೆಯಿರಿ...

 

ಜ್ಯೋತಿಷ್ಯ ಶಾಸ್ತ್ರ (Astrology) ದ ಪ್ರಕಾರ ವಾರದ ವಿವಿಧ ದಿನಗಳಲ್ಲಿ ಉಗುರುಗಳನ್ನು ಕತ್ತರಿಸುವ ಸಾಧಕ-ಬಾಧಕಗಳನ್ನು ತಿಳಿಯೋಣ.

ಸೋಮವಾರ

ಸೋಮವಾರ (Monday) ದಂದು ಉಗುರುಗಳನ್ನು ಕತ್ತರಿಸಿದರೆ ದೈಹಿಕ (physical) ವಾಗಿ ಆರೋಗ್ಯ (health) ವಾಗಿರುವುದರ ಜೊತೆಗೆ ಮೂಡ್ ಕೂಡ ಚೆನ್ನಾಗಿರುತ್ತದೆ.

ಮಂಗಳವಾರ

ಮಂಗಳವಾರದಂದು ಉಗುರುಗಳನ್ನು ಕತ್ತರಿಸುವುದರಿಂದ ಸಾಲ (loan) ದ ತೊಂದರೆಗಳು ದೂರವಾಗುತ್ತವೆ ಮತ್ತು ತಲೆಯಿಂದ ಸಾಲದ ಹೊರೆ ದೂರವಾಗುತ್ತದೆ.

ಬುಧವಾರ

ಈ ದಿನದಂದು ಉಗುರುಗಳನ್ನು ಕತ್ತರಿಸುವುದರಿಂದ ಉದ್ಯೋಗ (employment)  ಮತ್ತು ಪ್ರಗತಿಯ ಜೊತೆಗೆ ಹಣವೂ ಬರುತ್ತದೆ .

ಗುರುವಾರ

ಈ ದಿನ ನಿಮ್ಮ ಉಗುರು (nail) ಗಳನ್ನು ಕತ್ತರಿಸಿದರೆ, ಮನೆಯಲ್ಲಿನ ಪ್ರತಿಕೂಲ ಮತ್ತು ಅಶುಭ ಘಟನೆ (ominous incident) ಗಳು ದೂರವಾಗುತ್ತವೆ.

ಶುಕ್ರವಾರ

ಈ ದಿನ ನಿಮ್ಮ ಉಗುರುಗಳನ್ನು ಕತ್ತರಿಸಿದರೆ, ಆಪ್ತ ಸ್ನೇಹಿತರು  (friends) ಅಥವಾ ಕುಟುಂಬವನ್ನು ಭೇಟಿ ಮಾಡಲು ನೀವು ದೂರ ಪ್ರಯಾಣ (travel) ಮಾಡಬೇಕಾಗುತ್ತದೆ.

ಇವರು 'ವೈರಿ'ಗಳಿಗಿಂತ ಡೇಂಜರ್: ಇಂತವರಿಂದ ದೂರ ಇರಿ ಅಂತಾರೆ ಚಾಣಕ್ಯರು..!

 

ಶನಿವಾರ

ಶನಿವಾರ (Saturday) ದಂದು ಉಗುರುಗಳನ್ನು ಕತ್ತರಿಸಬಾರದು. ಮಾನಸಿಕ ಆರೋಗ್ಯ (Mental health) ದುರ್ಬಲವಾಗುತ್ತದೆ.

ಭಾನುವಾರ

ನೀವು ಭಾನುವಾರ (Sunday) ಉಗುರುಗಳನ್ನು ಕತ್ತರಿಸಿದರೆ, ಅದು ನಿಮ್ಮ ಕೆಲಸಕ್ಕೆ ಅಡ್ಡಿಯಾಗುತ್ತದೆ ಮತ್ತು ನಿಮ್ಮ ಸಮಯ (time) ವನ್ನು ವ್ಯರ್ಥ ಮಾಡುತ್ತದೆ.


ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣ ನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.

click me!