ರಣಭಯಂಕರ ಕುಜ ದೋಷದಿಂದ ತತ್ತರಿಸಿದ್ದೀರಾ? ಜ್ಯೋತಿಷ್ಯ ಪರಿಹಾರವೇನು

By Suvarna NewsFirst Published Jun 29, 2023, 4:37 PM IST
Highlights

ಶನಿಯಷ್ಟು ಅಲ್ಲದೇ ಹೋದರೂ ಕುಜ ಜನರಲ್ಲಿ ಭಯ ಹುಟ್ಟಿಸೋದು ಸಹಜ. ಈ ಗ್ರಹ ಮದುವೆಗೂ ಅಡ್ಡಿ ಮಾಡೋದು ಕಾಮನ್. ಅಂಥ ಗ್ರಹ ದೋಷಕ್ಕೇನು ಜ್ಯೋತಿಷ್ಯ ಪರಿಹಾರ?

- ಶ್ರೀಕಂಠ ಶಾಸ್ತ್ರಿ, ಏಷ್ಯಾನೆಟ್ ಸುವರ್ಣ ನ್ಯೂಸ್

ಕುಜ ಅವನ ಹೆಸರು ಕೇಳಿದ್ರೆ ಸಾಕು ಭಯವಾಗತ್ತೆ. ಕುಜನ ದೃಷ್ಟಿ ಸರ್ವವನ್ನೂ ಭಂಗ ಮಾಡಿಬಿಡತ್ತೆ ಅಂತಾರೆ. ಮದುವೆ ವಿಚಾರಗಳಲ್ಲಿ ಕುಜ ದೋಷ ಕಾಡಿದಷ್ಟು ಮತ್ತೊಂದು ಗ್ರಹ ಕಾಡಿಲ್ಲ. ಅಷ್ಟು ರಣಭಯಂಕರ ಈ ಕುಜ. ಕುಜನ ಸ್ವಭಾವವೇ ಹಾಗೆ ಅಂತಾರೆ ಪ್ರಸಿದ್ಧ ಶಾಸ್ತ್ರಜ್ಞ ವರಾಹಮಿಹಿರ.

Latest Videos

ಆತ ಬರೆದ ಬೃಹಜ್ಜಾತಕದಲ್ಲಿ ಉಲ್ಲೇಖಿಸಿದಂತೆ ಅವನು 'ಕ್ರೂರದೃಕ್ ತರುಣ ಮೂರ್ತಿ: ಉದಾರ: ಪೈತ್ತಿಕ:' ಎಂದು ವಿವರಿಸಿದ್ದಾನೆ. ಕ್ರೂರದೃಕ್ ಅವನ ನೋಟವೇ ಕ್ರೂರವಂತೆ. ಬೆಂಕಿ ದೃಷ್ಟಿ ಅಂತ ಪರಿಗಣಿಸುತ್ತಾರೆ. ಇಂಥ ಕುಜ ಜಾತಕದಲ್ಲಿ ಯಾವ ಸ್ಥಾನದಲ್ಲಿ ನಿಂತು ಯಾವ ಭಾವವನ್ನು ನೋಡುತ್ತಾನೋ, ಆ ಭಾವಗಳನ್ನು ದಹಿಸಿಬಿಡುತ್ತಾನೆ ಎಂಬುದು ಶಾಸ್ತ್ರವಚನ. ವಸ್ತುತ: ಕುಜ ತಾನು ಇರುವ ಸ್ಥಾನದಿಂದ ನಾಲ್ಕನೇ, ಏಳನೇ ಹಾಗೂ ಎಂಟನೇ ಮನೆಗಳನ್ನು ನೋಡುವ ಸಾಮರ್ಥ್ಯವಿದೆ. ಉದಾಹರಣೆಗೆ ನಿಮ್ಮ ಜಾತಕದಲ್ಲಿ ಮಿಥುನ ರಾಶಿಯಲ್ಲಿ ಕುಜನಿದ್ದರೆ ಅಲ್ಲಿಂದ ನಾಲ್ಕನೇ ಮನೆಯಾದ ಕನ್ಯಾ ರಾಶಿಯನ್ನೂ ಅಲ್ಲಿಂದ ಏಳನೇ ಮನೆಯಾದ ಧನಸ್ಸು ರಾಶಿಯನ್ನೂ ಹಾಗೂ ಅಲ್ಲಿಂದ ಎಂಟನೇ ಮನೆಯಾದ ಮಕರ ರಾಶಿಯನ್ನೂ ನೋಡುವ ಸಾಮರ್ಥ್ಯ ಕುಜನಿಗಿರುತ್ತದೆ. ಹೀಗಿದ್ದಾನೆ ನಿಮ್ಮ ಜಾತಕದಲ್ಲಿ ಕನ್ಯಾ, ಧನಸ್ಸು ಹಾಗೂ ಮಕರ ರಾಶಿಗಳು ಲಗ್ನದಿಂದ ಯಾವ ಭಾವವಾಗಿರುತ್ತದೋ ಆ ಭಾವ ನಷ್ಟವಾಗುತ್ತದೆ ಎಂದು ಅರ್ಥೈಸಬೇಕು. ಅಂತೂ ಕುಜನ ದೃಷ್ಟಿಯೇ ಬರೆ ಎಳೆಯುತ್ತದೆ ಎಂಬುದು ಸತ್ಯ. ಅಷ್ಟೇ ಅಲ್ಲದೆ ಕುಜ ಗ್ರಹ ಸ್ವಭಾವತ: ಕೆಲವು ಪೀಡೆಗಳನ್ನುಂಟುಮಾಡ್ತಾನೆ. ಅತಿಯಾದ ದಾಹ, ಕುಷ್ಠ ರೋಗ, ಜ್ವರ (Fever), ಪಿತ್ತ ಸಂಬಂಧಿ ತೊಡಕುಗಳು, ವಿಷ ಭಯ, ಮಾಟ ಮಂತ್ರಗಳ ಭಯ, ಮುಖ್ಯವಾಗಿ ಅಪಘಾತಗಳು (Accidents), ರಕ್ತಸ್ರಾವ (Bleeding), ದ್ವೇಷ ವೈಷಮ್ಯಗಳು, ದಾಯಾದಿ ಕಲಹಗಳು, ಕೋರ್ಟು ಕಚೇರಿಯಂಥ ಸಮಸ್ಯೆಗಳು ಇಂಥ ತೊಡಕು ಪೀಡೆಗಳಿಗೆ ಅವನೇ ಕಾರಕ. ಈ ಕಾರಣಕ್ಕಾಗಿಯೇ ಕುಜ ಅಂದ್ರೆ ಭಯ.

Chandra Dosha: ಕುಜದೋಷದಂತೆ ಚಂದ್ರದೋಷವೂ ಇದೆ: ಅದೇಕೆ ಬರುತ್ತೆ? ನಿವಾರಣೆ ಹೇಗೆ?

ಇಂಥ ಉಗ್ರ ಕುಜನಿಂದ ವಿವಾಹಕ್ಕೂ ಪ್ರತಿಬಂಧಕಗಳುಂಟಾಗುತ್ತವೆ. ಸಪ್ತಮ ಸ್ಥಾನದಲ್ಲಿ ಕುಜನಿದ್ದರೆ ವಿವಾಹ ಬಾಂಧವ್ಯವ ಮುರಿದು ಬೀಳುವ ಸಾಧ್ಯತೆಯೂ ಹೆಚ್ಚು. ಹೀಗಾಗಿ ಕುಜ ಹಲವು ಬಗೆಗಳಲ್ಲಿ ಘನಘೋರವಾಗಿ ಕಾಡುತ್ತಾನೆ.

ಇಂಥ ಕುಜನ ತೊಡಕಿನಿಂದ ಬಿಡಿಸಿಕೊಳ್ಳುವುದು ಹೇಗೆ..? ಇಲ್ಲಿದೆ ಸರಳ ಮಾರ್ಗಗಳು :
ಮುಖ್ಯವಾಗಿ ಕುಜನ ಮಂತ್ರಗಳನ್ನು ಪಠಿಸಬೇಕು ಅಥವಾ ಕೇಳಿಸಿಕೊಳ್ಳಬೇಕು.

'ಭೂಮಿಪುತ್ರೋ ಮಹಾತೇಜಾ: ಜಗತಾಂ ಭಯಕೃತ್ಸದಾ
ವೃಷ್ಟಿಕೃದ್ವೃಷ್ಟಿಹರ್ತಾ ಚ ಪೀಡಾಂ ಹರತು ಮೇ ಬುಧ:'

ಮತ್ತು

'ಧರಣೀ ಗರ್ಭ ಸಂಭೂತಂ ವಿದ್ಯುತ್ಕಾಂತಿಸಮಪ್ರಭಮ್
ಕುಮಾರಂ ಶಕ್ತಿಹಸ್ತಂ ತಂ ಮಂಗಲಂ ಪ್ರಣಮಾಮ್ಯಹಮ್'

ಈ ಮಂತ್ರಗಳನ್ನು ಪಠಿಸಬಹುದು

ದಾನ ರೂಪದ ಪರಿಹಾರಗಳು :
- ಕೆಂಪು ವಸ್ತ್ರ ದಾನ
- ತೊಗರಿ ದಾನ ( ದೇಹ ತೂಕದ್ದೂ ಆಗಬಹುದು ) ಸಾಮರ್ಥ್ಯಾನುಸಾರ.
- ಛಾಗ ದಾನ
- ಜೇನುತುಪ್ಪ ಸಹಿತ ಪಾತ್ರೆ ದಾನ
- ಕಂದು ಬಣ್ಣದ ಎತ್ತು ದಾನ
- ಬೆಲ್ಲ ದಾನ
- ಕಲ್ಸಕ್ರೆ-ಕೊಬ್ಬರಿ ದಾನ
- ಕುಜ ಪ್ರತಿಮಾ ದಾನ
- ಕೆಂಪು ಹಸುವಿಗೆ ಗ್ರಾಸ ಕೊಡುವುದು
- ಸಾಲಿಗ್ರಾಮದ ಮೇಲೆ ನಾಗ ಪ್ರತಿಮೆ ಇಟ್ಟು ದಾನ (ವಿವಾಹಕ್ಕೆ)

ಕುಜ ಗ್ರಹ ದೋಷ ತರುತ್ತೆ ತಡೆಯಲಾಗದ ನೋವು, ಸಂಕಟ: ಪರಿಹಾರ ಹೇಳ್ತಾರೆ ಶ್ರೀಕಂಠ ಶಾಸ್ತ್ರಿಗಳು

ಜಪ ಪರಿಹಾರ:
- ಕುಜ ಮಂತ್ರ ಜಪ 10000
- ಸುಬ್ರಹ್ಮಣ್ಯ ಜಪ
- ದುರ್ಗಾ ಸಹಸ್ರನಾಮ ಪಠಣ
- ಕುಜ ಕವಚ ಪಾರಾಯಣ
- ಕುಜ ಅಷ್ಟೋತ್ತರ ಪಠಣ

ಹೀಗೆ ಹಲವು ಮಾರ್ಗಗಳಲ್ಲಿ ಕುಜ ದೋಷವನ್ನು ಪರಿಹರಿಸಿಕೊಳ್ಳಬಹುದಾಗಿದೆ.

click me!