ಹೆಂಗಸರ ಬೆನ್ನಿನ ಮೇಲೆ ಹಲ್ಲಿ ಬಿದ್ರೆ ಸಾವು; ಕೆಂಡಸಂಪಿಗೆ ಸೀರಿಯಲ್ ನೋಡಿಲ್ವಾ..?

By Sushma Hegde  |  First Published Jul 20, 2023, 10:58 AM IST

ಹಲ್ಲಿಗಳ ಬಗ್ಗೆ ಸಾಕಷ್ಟು ನಂಬಿಕೆಗಳು ತಲೆತಲಾಂತರದಿಂದ ಬೆಳೆದು ಬಂದಿದೆ. ಬಹುತೇಕರಿಗೆ ಹಲ್ಲಿಗಳು ಸಾಕಷ್ಟು ಬಾರಿ ಒಳ್ಳೆಯ ಹಾಗೂ ಕೆಟ್ಟ ಸೂಚನೆ ನೀಡುತ್ತವೆ. ಹಲ್ಲಿಗಳು ಮೈ ಮೇಲೆ ಬಿದ್ದರೆ ಯಾವ ಅಂಗದ ಮೇಲೆ ಬಿತ್ತೆಂಬ ಆಧಾರದ ಮೇಲೆ ಅದು ಶುಭವೋ ಅಶುಭವೋ ಎಂದು ಹೇಳಲಾಗುತ್ತದೆ. 


ಹಲ್ಲಿಗಳ ಬಗ್ಗೆ ಸಾಕಷ್ಟು ನಂಬಿಕೆಗಳು ತಲೆತಲಾಂತರದಿಂದ ಬೆಳೆದು ಬಂದಿದೆ. ಬಹುತೇಕರಿಗೆ ಹಲ್ಲಿಗಳು ಸಾಕಷ್ಟು ಬಾರಿ ಒಳ್ಳೆಯ ಹಾಗೂ ಕೆಟ್ಟ ಸೂಚನೆ ನೀಡುತ್ತವೆ. ಹಲ್ಲಿಗಳು ಮೈ ಮೇಲೆ ಬಿದ್ದರೆ ಯಾವ ಅಂಗದ ಮೇಲೆ ಬಿತ್ತೆಂಬ ಆಧಾರದ ಮೇಲೆ ಅದು ಶುಭವೋ ಅಶುಭವೋ ಎಂದು ಹೇಳಲಾಗುತ್ತದೆ. ಅದೇ ರೀತಿ ಹಲ್ಲಿಯು ಮಹಿಳೆಯರ ಬೆನ್ನಿನ ಮೇಲೆ ಬಿದ್ದರೆ ತುಂಬಾ  ಅಪಾಯ ಎನ್ನಲಾಗಿದೆ.

ಹಲ್ಲಿ ಎಂಬ ಶಬ್ದ ಕೇಳಿದ್ರೇ ಸಾಕು ಕೆಲವರು ಹೌಹಾರಿ ಹೋಗ್ತಾರೆ. ಇನ್ನು ಅದು ಮೈಮೇಲೆ ಏನಾದ್ರೂ ಬಿದ್ರೆ ಮುಗಿತು, ಕೆಲವರಂತೂ ತುಂಬಾ ಭಯ ಪಡುತ್ತಾರೆ. ಇನ್ನೂ ಹೆಣ್ಣು ಮಕ್ಕಳು ಈ ವಿಚಾರದಲ್ಲಿ ತುಂಬಾ ಟೆಂಗ್ಶನ್ ಆಗ್ತಾರೆ. ನೀವು ನಿನ್ನೆ ಕೆಂಡಸಂಪಿಗೆ ಸೀರಿಯಲ್ ನೋಡಿರ್ಬೇಕು, ಅದರಲ್ಲಿ ಸುಮನಾಗೆ ಅಪಶಕುನ ತಂದಿಡಲು ಅವಳ ಬೆನ್ನಿನ ಮೇಲೆ ಹಲ್ಲಿ ಬೀಳಿಸುವ ಪ್ಲಾನ್‌ ಅನ್ನು ಸಾಧನಾ ಮಾಡಿ ಬಿಡ್ತಾಳೆ. ಹಾಗೇ ಇದರ ಬಗ್ಗೆ ತುಂಬಾ ಭಯಂಕರವಾಗಿ ಹೇಳ್ತಾಳೆ. 

Tap to resize

Latest Videos

ಇನ್ನು ಇದನ್ನು ಕೇಳಿದ ಅವರ ಅತ್ತೆ ಕೂಡ ಗಾಬರಿಯಾಗ್ತಾರೆ. ಪ್ರಪಂಚವೇ ಮೈ ಮೇಲೆ ಬಿದ್ದಂಗೆ ಮಾಡ್ತಾರೆ. ನಿಜ.. ಹೆಣ್ಣು ಮಕ್ಕಳು ಈ ರೀತಿ ಹೆದರುವುದಕ್ಕೂ ಕಾರಣವಿದೆ. ಯಾಕೆಂದರೆ ದೇಹದ ಕೆಲವು ಭಾಗದಲ್ಲಿ ಹಲ್ಲಿ ಬೀಳಬಾರದು. ಇದು ತುಂಬಾ ಅಪಶಕುನ, ಇದರಿಂದ ಕೆಟ್ಟ ಸಂಗತಿ ನಡೆಯುತ್ತದೆ.

ಅಧಿಕ ಶ್ರಾವಣ ಮಾಸ; ಏನು ಮಾಡಬೇಕು? ಯಾವ ದಾನ ಶ್ರೇಷ್ಠ..?

 

ಹೆಂಗಸರ ಮೇಲೆ ಬಿದ್ದರೆ ಗಂಡಾಂತರ

ದೇಹದ ಮೇಲೆ ಹಲ್ಲಿ ಬಿದ್ದರೆ ಒಮ್ಮೊಮ್ಮೆ ಶುಭ ಶಕುನವೆಂದೂ, ಇನ್ನು ಕೆಲವು ಸಲ ಕೆಟ್ಟ ಶಕುನವೆಂದೂ ಪರಿಗಣಿಸಲಾಗುತ್ತದೆ. ಆದರೆ ಶಕುನಗಳ ಪರಿಣಾಮವು ದೇಹದ ಭಾಗಗಳಿಗೆ ಅನುಗುಣವಾಗಿ ಬದಲಾಗುತ್ತದೆ. ಹಲ್ಲಿ ಬೀಳುವುದರಲ್ಲಿಯೂ ಪುರುಷರು ಮತ್ತು ಮಹಿಳೆಯರ ನಡುವೆ ವ್ಯತ್ಯಾಸವಿದೆ. ಕೆಲವೊಮ್ಮೆ ಹಲ್ಲಿ ನಮ್ಮ ಮೇಲೆ ಬಿದ್ದಾಗ ಭವಿಷ್ಯದಲ್ಲಿ ಅಪಾಯ ಕಾದಿದೆ ಎಂದು ಹಿರಿಯರು ಹೇಳುತ್ತಾರೆ. ಅದರಲ್ಲಿಯೂ ಹೆಂಗಸರ ಕೆಲವು ಭಾಗಗಳ ಮೇಲೆ ಹಲ್ಲಿ ಬಿದ್ದರೆ ಗಂಡಾಂತರ ತಪ್ಪಿದಲ್ಲ ಎನ್ನುತ್ತಾರೆ.

ಬೆನ್ನಿನ ಮೇಲೆ ಬಿದ್ದರೆ ಸಾವಿನ ಸುದ್ದಿ

ಮುಖ್ಯವಾಗಿ ಹೆಂಗಸರ ಬೆನ್ನಿನ ಮೇಲೆ ಹಲ್ಲಿ ಬೀಳಬಾರದು, ಒಂದು ವೇಳೆ ಬೆನ್ನ ಮೇಲೆ ಹಲ್ಲಿ ಬಿದ್ದರೆ ಸಾವಿನ ಸುದ್ದಿ ಕೇಳಬಹುದು. ಇದರಿಂದಾಗಿ ತುಂಬಾ ಜನರು ಹಲ್ಲಿಯ ವಿಚಾರದಲ್ಲಿ ಹೆದರುತ್ತಾರೆ. ಇನ್ನು ಕೆಂಡಸಂಪಿಗೆ ಧಾರವಾಹಿಯಲ್ಲಿ ಸುಮನಾ ಬೆನ್ನ ಮೇಲೆ ಹಲ್ಲಿ ಬೀಳುತ್ತದೆ. ಇದರಿಂದ ಅವರ ಅತ್ತೆ ತುಂಬಾ ಆತಂಕಗೊಳ್ಳುತ್ತಾರೆ. ಪ್ರತಿಯೊಬ್ಬ ಹೆಂಗಸರೂ ಕೂಡ ಈ ವಿಚಾರದಲ್ಲಿ ಅಪಶಕುನ ಎಂದು ಭಾವಿಸಿ ಭಯ ಪಡುತ್ತಾರೆ.

ಹೆಂಗಸರ ಮೇಲೆ ಹಲ್ಲಿ ಬಿದ್ದರೆ ಹೀಗೆ ನಾನಾ ರೀತಿಯಲ್ಲಿ ಹೇಳಲಾಗುತ್ತದೆ. ನಹುತೇಕ ಜನರು ಹೆಣ್ಣು ಮಕ್ಕಳ ಮೇಲೆ ಹಲ್ಲಿ ಬೀಳುವುದು ತುಂಬಾ ಅಪಶಕುನ ಎಂದು ನಂಬುತ್ತಾರೆ. ಹೆಂಗಸರ ತಲೆಯ ಮೇಲೆ ಬಿದ್ದರೆ ಸಾವಿನ ಭಯ ಕಾಡಲಿದೆಯಂತೆ. ಹಾಗೂ ಹಣೆಯ ಮೇಲೆ ಹಲ್ಲಿ ಬೀಳಬಾರದು, ಬಿದ್ದರೆ ರೋಗಗಳ ಭಯ ಶುರುವಾಗಲಿದೆ. ಇನ್ನು ಎಡಗಣ್ಣಿನ ಮೇಲೆ ಬಿದ್ದರೆ ಹಲ್ಲಿ ಬಿದ್ದರೆ, ತಮ್ಮ ಗಂಡ ಮೋಸ ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ.

ಈ ನಾಲ್ಕು ರಾಶಿಯವರಿಗೆ ಸಮೃದ್ಧಿ ತಂದ ನಾಗರ ಪಂಚಮಿ..!

 

ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣ ನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.

click me!