ಕಟಕ ರಾಶಿಯಲ್ಲಿ ಸೂರ್ಯ ಗೋಚರ; ಈ ಮೂರು ರಾಶಿಗಳಿಗೆ ಅದೃಷ್ಟ

Published : Jul 19, 2023, 06:00 PM IST
ಕಟಕ ರಾಶಿಯಲ್ಲಿ ಸೂರ್ಯ ಗೋಚರ; ಈ ಮೂರು ರಾಶಿಗಳಿಗೆ ಅದೃಷ್ಟ

ಸಾರಾಂಶ

ಸೂರ್ಯನ ಸಂಚಾರವು ಪ್ರಪಂಚದ ಮೇಲೆ ಪರಿಣಾಮ ಬೀರುತ್ತದೆ. ಹಾಗೆಯೇ ಇದು ರಾಶಿಚಕ್ರದ ಆರೋಗ್ಯ ಪರಿಸ್ಥಿತಿಯ ಮೇಲೆ ಕೂಡ ಪ್ರಭಾವ ಬೀರಲಿದೆ. ಕಟಕ ರಾಶಿಯಲ್ಲಿ ಸೂರ್ಯನ ಸಂಕ್ರಾಂತಿಯು, ಯಾವ ರಾಶಿಯವರಿಗೆ ಲಾಭ ತರಲಿದೆ ಎಂಬುದರ ಮಾಹಿತಿ ಇಲ್ಲಿದೆ.

ಸೂರ್ಯನ ಸಂಚಾರವು ಪ್ರಪಂಚದ ಮೇಲೆ ಪರಿಣಾಮ ಬೀರುತ್ತದೆ. ಹಾಗೆಯೇ ಇದು ರಾಶಿಚಕ್ರದ ಆರೋಗ್ಯ ಪರಿಸ್ಥಿತಿಯ ಮೇಲೆ ಕೂಡ ಪ್ರಭಾವ ಬೀರಲಿದೆ. ಕಟಕ ರಾಶಿ (Cancer ) ಯಲ್ಲಿ ಸೂರ್ಯನ ಸಂಕ್ರಾಂತಿಯು, ಯಾವ ರಾಶಿಯವರಿಗೆ ಲಾಭ ತರಲಿದೆ ಎಂಬುದರ ಮಾಹಿತಿ ಇಲ್ಲಿದೆ.

ಸೂರ್ಯನು ಕಟಕ ರಾಶಿಯನ್ನು ಪ್ರವೇಶಿಸಿದ್ದು, ಆಗಸ್ಟ್‌ 17ರವರೆಗೆ ಇರುತ್ತಾನೆ. ಕಟಕ ರಾಶಿಯನ್ನು ಚಂದ್ರನು ಆಳುತ್ತಾನೆ. ಜ್ಯೋತಿಷ್ಯ ಶಾಸ್ತ್ರ (Astrology) ದ ಪ್ರಕಾರ ಸೂರ್ಯ ಮತ್ತು ಚಂದ್ರನ ನಡುವೆ ಸ್ನೇಹದ ಭಾವನೆ ಇದೆ. ಕಟಕ ರಾಶಿಯಲ್ಲಿ ಸೂರ್ಯನ ಸಂಚಾರವು, ಏಕ ರಾಶಿಚಕ್ರ ಚಿಹ್ನೆಗಳ ವ್ಯಕ್ತಿಗಳ ಮೇಲೆ ಪರಿಣಾಮ ಬೀರುತ್ತದೆ. ಆದಾಗ್ಯೂ ಕೆಲವು ರಾಶಿಚಕ್ರ ಚಿಹ್ನೆಗಳು ಈ ಸಂಚಾರದಿಂದ ವಿಶೇಷ ಪ್ರಯೋಜನಗಳನ್ನು ಪಡೆಯುತ್ತವೆ. ಈ ಕುರಿತು ಇಲ್ಲಿದೆ ಮಾಹಿತಿ.

ಸಿಂಹ ರಾಶಿ (Leo)

ಸೂರ್ಯನ ರಾಶಿ ಬದಲಾವಣೆಯಿಂದ ಸಿಂಹ ರಾಶಿಯವರಿಗೆ ವರದಾನಕ್ಕೆ ಏನು ಕೊರತೆಯಿಲ್ಲ. ಈ ಬದಲಾವಣೆಯು ಸಿಂಹ ರಾಶಿಯವರಿಗೆ ಆರ್ಥಿಕ ಲಾಭ (Financial benefit) ವನ್ನು ತರುವ ಸಾಧ್ಯತೆಯಿದೆ. ನಿಮ್ಮ ಕೆಲಸದ ವೇಗವು ಹೆಚ್ಚಲಿದೆ. ಮತ್ತು ಸ್ಥಗಿತಗೊಂಡ ಕೆಲಸವು ಶೀಘ್ರದಲ್ಲೇ ಪೂರ್ಣಗೊಳ್ಳುತ್ತದೆ. ನಿಮ್ಮ ವೃತ್ತಿ ಮತ್ತು ವ್ಯವಹಾರಕ್ಕೆ ಸಂಬಂಧಿಸಿದ ಕೆಲವು ಸಕಾರಾತ್ಮಕ ಸುದ್ದಿಗಳನ್ನು ಕೇಳುವಿರಿ. ನೀವು ಸಮಾಜದಲ್ಲಿ ಮನ್ನಣೆ ಪಡೆಯಬಹುದು ಮತ್ತು ವಿದ್ಯಾರ್ಥಿಗಳು ಸೂರ್ಯ ಸಂಕ್ರಮಣದ ಮಂಗಳಕರ ಪರಿಣಾಮಗಳನ್ನು ಅನುಭವಿಸುತ್ತಾರೆ. ಉದ್ಯೋಗಾಕಾಂಕ್ಷಿಗಳು ಉತ್ತಮ ಉದ್ಯೋಗಾವಕಾಶಗಳನ್ನು ಪಡೆಯಬಹುದು.

ಜೀವನ ಯಾರಿಗೂ ಹೂವಿನ ಹಾಸಿಗೆಯಲ್ಲ; ಕರ್ಣನಿಗೆ ಭಗವಾನ್ ಕೃಷ್ಣ ಹೇಳಿದ ಮಾತು ಯಾವುದು..?

ತುಲಾ ರಾಶಿ (Libra)

ಸೂರ್ಯ ಬದಲಾವಣೆಯು ತುಲಾ ರಾಶಿಯವರಿಗೆ ತುಂಬಾ ಪ್ರಯೋಜನಕಾರಿಯಾಗಿದೆ. ಸೂರ್ಯನು ನಿಮ್ಮ ವ್ಯಾಪಾರದ ಮನೆಯಲ್ಲಿ ಸಂಚರಿಸುತ್ತಿದ್ದಾನೆ. ಈ ಸಾಗಾಣೆಯು ವ್ಯಾಪಾರ ಹಾಗೂ ಉದ್ಯಮಗಳಲ್ಲಿ ಉತ್ತಮ ಲಾಭವನ್ನು ಸೂಚಿಸುತ್ತದೆ. ವ್ಯವಹಾರ (business) ದಲ್ಲಿ ನೀವು ಮಾಡುವ ಯಾವುದೇ ಪ್ರಯೋಗ ಅಥವಾ ಪ್ರಯತ್ನವು ಯಶಸ್ವಿಯಾಗುತ್ತೆ. ಪ್ರಸ್ತುತ ನಿರುದ್ಯೋಗಿಗಳು ಮತ್ತು ಹೊಸ ಉದ್ಯೋಗವನ್ನು ಹುಡುಕುತ್ತಿರುವವರು ಶೀಘ್ರದಲ್ಲೇ ಯಶಸ್ಸು ಪಡೆಯಬಹುದು. ನಿಮ್ಮ ನಿರ್ಧಾರಗಳನ್ನು ನಿಮ್ಮ ಕುಟುಂಬವು ಪ್ರಶಂಸಿಸುತ್ತದೆ. ಯಾವುದೇ ಆರೋಗ್ಯ ಸಮಸ್ಯೆ ಬಗ್ಗೆ ಚಿಂತಿಸಬೇಕಾಗಿಲ್ಲ.

ಧನು ರಾಶಿ (Sagittarius)

ಈ ತಿಂಗಳು  ಕಟಕ ರಾಶಿಯಲ್ಲಿ ಸೂರ್ಯನ ಸಂಕ್ರಮಣವು ಧನು ರಾಶಿಯವರಿಗೆ ತುಂಬಾ ಮಂಗಳಕರವಾಗಿದೆ. ನಿಮ್ಮ ಆದಾಯದಲ್ಲಿ ಗಮನಾರ್ಹ ಹೆಚ್ಚಳವನ್ನು ನೀವು ನೋಡುತ್ತೀರಿ. ಅದೃಷ್ಟವು ನಿಮಗೆ ಬರಲಿದೆ. ಇದರಿಂದ ನಿಮ್ಮ ಕಾರ್ಯಗಳು ತ್ವರಿತವಾಗಿ ಪೂರ್ಣಗೊಳ್ಳುತ್ತದೆ. ಈ ಸಮಯದಲ್ಲಿ ನಿಮ್ಮ ಜೀವನದಲ್ಲಿ ಮಹತ್ವದ ಬದಲಾವಣೆಯನ್ನು ತರುವ ವ್ಯಕ್ತಿಯನ್ನು   ನೀವು ಭೇಟಿಯಾಗುತ್ತೀರಿ. ಧಾರ್ಮಿಕ ಕಾರ್ಯ (Religious work) ಗಳಲ್ಲಿ ನಿಮ್ಮ ಭಾಗವಹಿಸುವಿಕೆ ಹೆಚ್ಚಾಗುತ್ತೆ. ವಿದ್ಯಾರ್ಥಿಗಳು ಸಮಯವು ಅತ್ಯಂತ ಅನೂಕೂಲಕರವಾಗಿರುತ್ತದೆ ಎಂದು ನಿರೀಕ್ಷಿಸಬಹುದು.

30 ವರ್ಷಗಳ ನಂತರ ಯೋಗ ತಂದ ಶನಿದೇವ; ಈ ಮೂರು ರಾಶಿಯವರು ಇದೀಗ ರಾಜರು..!

ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣ ನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.

PREV
Read more Articles on
click me!

Recommended Stories

Baba Vanga Prediction: 2026ರಿಂದ 5079 ರವರೆಗಿನ ಬಾಬಾ ವಂಗಾ ಭವಿಷ್ಯವಾಣಿ ಇಲ್ಲಿದೆ!
ಲಕ್ಷ್ಮಿ ಪೂಜೆ ಫಲಕ್ಕೆ ಅಡ್ಡಿಯಾಗುತ್ತೆ ಶುಕ್ರವಾರ ಮಾಡುವ ಈ ತಪ್ಪು