ವಿಜಯಪುರ: ಇಲ್ಲಿನ ದೇವಿ ಜಾತ್ರೆ ನೋಡಲು ಬರ್ತಾರೆ ವಿವಿಧ ರಾಜ್ಯಗಳ ಸಿಎಂ, ಸಚಿವರು..!

By Girish GoudarFirst Published Jun 15, 2023, 7:59 AM IST
Highlights

ತಿಕೋಟ ತಾಲೂಕಿನ ಸೋಮದೇವರ ಹಟ್ಟಿ ಎನ್ನುವ ಚಿಕ್ಕ ತಾಂಡಾದಲ್ಲಿ ದುರ್ಗಾದೇವಿಯ ಜಾತ್ರೆ ನಡೆಯುತ್ತೆ. ಪ್ರತಿ ವರ್ಷ ನಡೆಯುವ ದುರ್ಗಾದೇವಿ ಜಾತ್ರೆ ಬಲು ವಿಶೇಷವಾಗಿ ನಡೆಯುತ್ತೆ. ಬಂಜಾರ ಸಮುದಾಯದ ಆರಾಧ್ಯ ದೇವಿಯಾಗಿರುವ ದುರ್ಗಾದೇವಿಯ ಜಾತ್ರೆಯಲ್ಲಿ ಲಕ್ಷಾಂತರ ಜನ ಸೇರ್ತಾರೆ. ಇದರ ಜೊತೆಗೆ ಇಲ್ಲಿ ದೊಡ್ಡ-ದೊಡ್ಡ ರಾಜಕಾರಣಿಗಳು, ಪ್ರಭಾವಿ ಐಎಎಸ್‌, ಐಪಿಎಸ್‌ ಅಧಿಕಾರಿಗಳು ಪಾಲ್ಗೊಳ್ತಾರೆ.

ಷಡಕ್ಷರಿ ಕಂಪೂನವರ್‌ ಏಷ್ಯಾನೆಟ್‌ ಸುವರ್ಣ ನ್ಯೂಸ್

ವಿಜಯಪುರ(ಜೂ.15):  ಹಲವೆಡೆ ಜಾತ್ರೆಗಳು ನಡೆಯೋದು ಕಾಮನ್‌, ದೇವರು-ದೇವತೆಗಳ ಜಾತ್ರೆಯನ್ನ ಜನರು ವಿಭಿನ್ನವಾಗಿ ನಡೆಸುವುದು ವಾಡಿಕೆ. ಆದ್ರೆ ಗುಮ್ಮಟನಗರಿ ವಿಜಯಪುರ ಜಿಲ್ಲೆಯ ಅದೊಂದು ಚಿಕ್ಕ ತಾಂಡಾದಲ್ಲಿ ನಡೆಯುವ ದೇವಿ ಜಾತ್ರೆ ಬಹಳಾನೇ ವಿಶೇಷ. ಈ ಜಾತ್ರೆಯನ್ನ ನೋಡೋಕೆ ಅಂತಾನೇ ದೇಶದ ನಾನಾ ರಾಜ್ಯಗಳ ಬರೀ ಜನರಲ್ಲ ಸಿಎಂ, ಡಿಸಿಎಂ, ಸಚಿವರುಗಳೇ ಬರ್ತಾರೆ. ಈ ಚಿಕ್ಕ ತಾಂಡಾದಲ್ಲಿ ಹೆಲಿಕಾಪ್ಟರ್‌ಗಳು ಇಳಿಯೋದಕ್ಕೆ ಹೆಲಿಪ್ಯಾಡ್‌ ಗಳೆ ಇವೆ ಅಂದ್ರೆ ನೀವು ನಂಬಲೇ ಬೇಕು..

Latest Videos

ಸೋಮದೇವರಹಟ್ಟಿಯಲ್ಲಿ ನಡೆಯುತ್ತೆ ವಿಶೇಷ ಜಾತ್ರೆ...!

ತಿಕೋಟ ತಾಲೂಕಿನ ಸೋಮದೇವರ ಹಟ್ಟಿ ಎನ್ನುವ ಚಿಕ್ಕ ತಾಂಡಾದಲ್ಲಿ ದುರ್ಗಾದೇವಿಯ ಜಾತ್ರೆ ನಡೆಯುತ್ತೆ. ಪ್ರತಿ ವರ್ಷ ನಡೆಯುವ ದುರ್ಗಾದೇವಿ ಜಾತ್ರೆ ಬಲು ವಿಶೇಷವಾಗಿ ನಡೆಯುತ್ತೆ. ಬಂಜಾರ ಸಮುದಾಯದ ಆರಾಧ್ಯ ದೇವಿಯಾಗಿರುವ ದುರ್ಗಾದೇವಿಯ ಜಾತ್ರೆಯಲ್ಲಿ ಲಕ್ಷಾಂತರ ಜನ ಸೇರ್ತಾರೆ. ಇದರ ಜೊತೆಗೆ ಇಲ್ಲಿ ದೊಡ್ಡ-ದೊಡ್ಡ ರಾಜಕಾರಣಿಗಳು, ಪ್ರಭಾವಿ ಐಎಎಸ್‌, ಐಪಿಎಸ್‌ ಅಧಿಕಾರಿಗಳು ಪಾಲ್ಗೊಳ್ತಾರೆ.

ಒಂದೇ ದಿನದಲ್ಲಿ ನಿರ್ಮಾಣವಾಯ್ತು ಯಾದಗಿರಿಯ ಸೂಲಧಿರೇಶ್ವರ ದೇವಸ್ಥಾನ

ತಾಂಡಾಗೆ ಬರ್ತಾರೆ ಹೊರರಾಜ್ಯಗಳ ಸಿಎಂ, ಮಂತ್ರಿಗಳು ; ಜರ್ಮನಿ ರಾಯಭಾರಿಯಿಂದಲು ಭೇಟಿ..!

ಇನ್ನು ಸೋಮದೇವರಹಟ್ಟಿ ಚಿಕ್ಕ ತಾಂಡಾ, ಇಲ್ಲಿ ದುರ್ಗಾದೇವಿಯ ಮೂಲ ದೇಗುಲ ಇರುವ ಕಾರಣ ರಾಜ್ಯ ಹೊರ ರಾಜ್ಯ ಸೇರಿದಂತೆ ದೇಶದ ಮೂಲೆ ಮೂಲೆಯಲ್ಲು ಪ್ರಸಿದ್ಧಿ ಪಡೆದಿದೆ. ಹೀಗಾಗಿ ಇಲ್ಲಿ ಜೂನ್‌ ತಿಂಗಳಲ್ಲಿ ನಡೆಯೋ ಮಾತಾ ದುರ್ಗಾದೇವಿ ಜಾತ್ರೆಯಲ್ಲಿ ವಿವಿಧ ರಾಜ್ಯಗಳ ಸಿಎಂ, ಡಿಸಿಎಂ, ಸಚಿವರು, ಶಾಸಕರು ಪಾಲ್ಗೊಳ್ತಾರೆ. ಇನ್ನು ಹಿರಿಯ ಐಎಎಸ್‌, ಐಪಿಎಸ್‌ ಅಧಿಕಾರಿಗಳು ಪಾಲ್ಗೊಳ್ತಾರೆ. ಈ ಹಿಂದೆ ಜರ್ಮನಿಯ ಭಾರತೀಯ ರಾಯಭಾರಿಯಾಗಿದ್ದ ಎಂ ಚವಲಾ ನಾಯಕ್ ಭೇಟಿ ನೀಡಿದ್ದರು. ದುರ್ಗಾದೇವಿ ದರ್ಶನದ ಜೊತೆಗೆ ಜುಗುನು ಮಹಾರಾಜರ ಭೇಟಿ ಮಾಡಿ ಆಶೀರ್ವಾದ ಪಡೆದುಕೊಂಡಿದ್ದರು‌. ಅಲ್ಲದೆ ಈ ಹಿಂದೆ ಗೋವಾ ಸಿಎಂ ಆಗಿದ್ದ ದಿಂಗಬರ್‌ ಕಾಮತ್‌, ಮಾಜಿ ಸಿಎಂ ಮನೋಹರ್‌ ಪರಿಕರ್‌, ಹೆಚ್‌ ಡಿ ಕುಮಾರಸ್ವಾಮಿ, ಮಾಜಿ ಸಿಎಂ ಸುಶೀಲ್ ಕುಮಾರ್ ಸಿಂಧೆ, ವಿಲಾಸರಾವ್‌ ದೇಶಮುಖ, ಗೋಪಿನಾಥ ಮುಂಡೆ‌ ಸೇರಿದಂತೆ ಗೋವಾ ರಾಜ್ಯದ ಸಚಿವರುಗಳು ಭೇಟಿ ನೀಡಿದ್ದರು. ಗೋವಾ ರಾಜ್ಯದ ಸಚಿವರಾಗಿದ್ದ ಶ್ರೀಪಾದ್‌ ನಾಯಕ್‌, ಮೈಕೆಲ್‌ ಲೋಬೊ, ಕೇಂದ್ರ ಸಚಿವ ಎಮ್‌ ಕೆ ಅಣ್ಣಾ ಪಾಟೀಲ್‌, ಗುಜರಾತ್‌ ರಾಜ್ಯದ ಹಿರಿಯ ಐಎಎಸ್‌ ಅಧಿಕಾರಿ ಡಿ ಜಿ ಬಂಜಾರಾ ಸೇರಿದಂತೆ ಅನೇಕ ಸಚಿವರು ಸೋಮದೇವರಹಟ್ಟಿಗೆ ಭೇಟಿ ನೀಡಿದ್ದಾರೆ..

ಚಿಕ್ಕ ತಾಂಡಾದಲ್ಲಿವೆ ಎರಡು ಹೆಲಿಪ್ಯಾಡ್..!

‌ಜಿಲ್ಲಾ ಕೇಂದ್ರಗಳಲ್ಲಿ ಒಂದೊ ಎರಡೊ ಹೆಲಿಪ್ಯಾಡ್‌ ಗಳಿದ್ದರೆ ಹೆಚ್ಚು. ಅದ್ರಲ್ಲು ಚಿಕ್ಕ ಜಿಲ್ಲೆಗಳಲ್ಲಿ ತಾತ್ಕಾಲಿಕವಾಗಿ ಹೆಲಿಪ್ಯಾಡ್‌ ಗಳನ್ನ ನಿರ್ಮಾಣ ಮಾಡಲಾಗುತ್ತೆ. ಆದ್ರೆ ಸೋಮದೇವರಹಟ್ಟಿಯಂತ ಚಿಕ್ಕ ತಾಂಡಾದಲ್ಲಿ ಎರಡು ಖಾಯಂ ಹೆಲಿಪ್ಯಾಡ್‌ ಗಳನ್ನ ನಿರ್ಮಾಣ ಮಾಡಲಾಗಿದೆ. ಹತ್ತಕ್ಕು ಅಧಿಕ ವರ್ಷಗಳ ಹಿಂದೆಯೇ ಈ ಹೆಲಿಪ್ಯಾಡ್‌ ಗಳು ನಿರ್ಮಾಣವಾಗಿವೆ. ಜಾತ್ರೆ ಸಮಯ ಅಲ್ಲದೆ ಆಗಾಗ್ಗ ಬೇರೆ ಬೇರೆ ರಾಜ್ಯಗಳ ಸಿಎಂಗಳು, ಸಚಿವರು, ಕೇಂದ್ರ ಸಚಿವರು, ಪ್ರಭಾವಿ ರಾಜಕಾರಣಿಗಳು ದೇಶದ ದೊಡ್ಡದೊಡ್ಡ ಉದ್ಯಮಿಗಳು ಬರೋದ್ರಿಂದ ಇಲ್ಲಿ ಖಾಯಂ ಹೆಲಿಪ್ಯಾಡ್‌ ಗಳನ್ನ ನಿರ್ಮಿಸಲಾಗಿದೆ.

ಮಳೆಗಾಗಿ ಹಲವೆಡೆ ನಡೀತಿದೆ ಪರ್ಜನ್ಯ ಜಪ; ಯಾರು ಈ ಪರ್ಜನ್ಯ?

ಇಲ್ಲಿಯೆ ಯಾಕೆ ಬರ್ತಾರೆ ಪ್ರಭಾವಿ ರಾಜಕಾರಣಿಗಳು..!?

ಇನ್ನು ಈ ಚಿಕ್ಕ ತಾಂಡಾಗೆ ಬೇರೆ ಬೇರೆ ರಾಜ್ಯಗಳ ಸಿಎಂ, ಡಿಸಿಎಂ, ಸಚಿವರು, ದೊಡ್ಡ-ದೊಡ್ಡ ಪ್ರಭಾವಿ ರಾಜಕಾರಣಿಗಳು ಯಾಕೆ ಬರ್ತಾರೆ ಅನ್ನೋದನ್ನ ನೋಡೊದಾದ್ರೆ, ಇಲ್ಲಿರುವ ದುರ್ಗಾದೇವಿಯ ಪ್ರಭಾವ ಎನ್ನಲಾಗುತ್ತೆ. ಸೋಮದೇವರಹಟ್ಟಿಯಲ್ಲಿ ಇರುವ ದುರ್ಗಾದೇವಿಯ ದೇಗುಲ ಜಾಗೃತ ಸ್ಥಾನವಾಗಿದ್ದು, ಇಲ್ಲಿ ಯಾರೇ ಏನೇ ಬೇಡಿಕೊಂಡರು ಅಂದುಕೊಂಡದ್ದು, ಬೇಡಿಕೊಂಡಿದ್ದು ಈಡೇರುತ್ತೆ ಎನ್ನುವ ಮಾತಿದೆ.  ಹಾಗೇ ಇಲ್ಲಿ ರಾಜಕಾರಣಿಗಳು ಭೇಟಿ ಕೊಟ್ಟರೆ, ದೇವಿಯ ಆಶೀರ್ವಾದ ಪಡೆದಲ್ಲಿ ಅವರಿಗೆ ಅಧಿಕಾರ ಸಿಗೋದು ಪಕ್ಕಾ ಎನ್ನುವ ಮಾತುಗಳಿವೆ. ಹೀಗಾಗಿ ರಾಜ್ಯ, ಹೊರ ರಾಜ್ಯ, ದೇಶದ ನಾನಾ ಕಡೆಗಳಿಂದ ರಾಜಕಾರಣಿಗಳು ಸೋಮದೇವರಹಟ್ಟಿಯ ದುರ್ಗಾದೇವಿಉ ಭೇಟಿಗೆ ಬರ್ತಾರೆ ಎನ್ನಲಾಗಿದೆ..

ಜೂನ್‌ 18 ರಂದು ನಡೆಯಲಿದೆ ದುರ್ಗಾದೇವಿ ಜಾತ್ರೆ..!

ಬರುವ ಜೂನ್‌ 18 ರಂದು ದುರ್ಗಾದೇವಿ ಜಾತ್ರೆ ನಡೆಯಲಿದೆ. ದುರ್ಗಾದೇವಿ ಆರಾಧಕರಾದ ಜುಗನು ಮಹಾರಾಜರು ಜಾತ್ರೆಯ ಎಲ್ಲ ಸಿದ್ಧತೆಗಳನ್ನ ಮಾಡಿಕೊಂಡಿದ್ದಾರೆ. ಈ ಬಾರಿಯು ಹೊರ ರಾಜ್ಯಗಳಿಂದ ಬರುವ ಸಚಿವರು, ಶಾಸಕರು, ಐಎಎಸ್‌ ಅಧಿಕಾರಿಗಳು ಪಾಲ್ಗೊಳ್ಳಲಿದ್ದಾರೆ. ಕೇಂದ್ರ ಪ್ರವಾಸೋಧ್ಯಮ ಸಚಿವ ಶ್ರೀಪಾದ್‌ ನಾಯಕ್‌, ಮಹಾರಾಷ್ಟ್ರದ ಆರೋಗ್ಯ ಸಚಿವ ತಾನಾಜಿ ಸಾವಂತ, ಮಹಾರಾಷ್ಟ್ರದ ಗ್ರಾಮೀಣಾಭಿವೃದ್ಧಿ ಸಚಿವ ಗಿರೀಶ ಮಹಾಜನ್‌, ಗೋವಾ ಸಮಾಜ ಕಲ್ಯಾಣ ಸಚಿವ ಸುಭಾಷ ಫಲದೇಸಾಯಿ ಸೇರಿದಂತೆ ನೆರೆ ರಾಜ್ಯಗಳ ಅನೇಕ ಶಾಸಕರು ಪಾಲ್ಗೊಳ್ಳಲಿದ್ದಾರೆ. ಜೊತೆಗೆ ಸಚಿವ ಎಂ ಬಿ ಪಾಟೀಲ್‌, ಶಿವಾನಂದ ಪಾಟೀಲ್‌ ಸೇರಿದಂತೆ ರಾಜ್ಯ ಸಂಪುಟದ ಹಲವು ಸಚಿವರು ಪಾಲ್ಗೊಳ್ಳಲಿದ್ದಾರೆ ಎಂದು ಜುಗನು ಮಹಾರಾಜರು ಮಾಹಿತಿ ನೀಡಿದ್ದಾರೆ.

click me!