ಈ ಮರಗಿಡಗಳಿಗೆ ರಕ್ಷಾಸೂತ್ರ ಕಟ್ಟಿದರೆ, ಅದೃಷ್ಟ ಬದಲಾಗೋದ್ರಲ್ಲಿ ಅನುಮಾನವೇ ಇಲ್ಲ!

By Suvarna News  |  First Published Jun 14, 2023, 5:51 PM IST

ಹಿಂದೂ ಧರ್ಮದಲ್ಲಿ ರಕ್ಷಾ ಸೂತ್ರಕ್ಕೆ ವಿಶೇಷ ಮಹತ್ವವಿದೆ. ಕೈಗೆ ಕಟ್ಟುವುದರಿಂದ ರಕ್ಷೆ, ಗ್ರಹದೋಷದಿಂದ ಮುಕ್ತಿ ಇತ್ಯಾದಿ ಪ್ರಯೋಜನಗಳು ದೊರೆಯುತ್ತವೆ. ಅಷ್ಟೇ ಅಲ್ಲ, ಈ ದಾರವನ್ನು ಮರಗಳಿಗೆ ಕಟ್ಟುವುದರಿಂದ ಕೂಡಾ ಅನೇಕ ಪ್ರಯೋಜನಗಳನ್ನು ಪಡೆಯಬಹುದು. 


ಹಿಂದೂ ಧರ್ಮದಲ್ಲಿ ಪ್ರತಿ ಪೂಜೆಯ ನಂತರ ರಕ್ಷಾ ಸೂತ್ರವನ್ನು ಕಟ್ಟಲಾಗುತ್ತದೆ. ಕೆಲವನ್ನು ಧೈರ್ಯಕ್ಕಾಗಿ, ಕೆಲವನ್ನು ದುಷ್ಟ ಶಕ್ತಿಗಳಿಂದ ರಕ್ಷಣೆಗಾಗಿ, ಮತ್ತೆ ಕೆಲವನ್ನು ಆಯಾ ದೇವರ ಆಶೀರ್ವಾದಕ್ಕಾಗಿ ಕಟ್ಟಲಾಗುತ್ತದೆ. ಕೈಗೆ, ಕಾಲಿಗೆ, ಕತ್ತಿಗೆ, ಸೊಂಟಕ್ಕೆ ಕೂಡಾ ಈ ರಕ್ಷಾ ಸೂತ್ರ ಕಟ್ಟುವ ಅಭ್ಯಾಸ ಬಹಳ ಸಾಮಾನ್ಯವಾಗಿದೆ. ಇದೇ ಅಲ್ಲದೆ, ಹಲವು ಮರಗಳಿಗೆ ಕೂಡಾ ಈ ಕಲವಾ ಅಂದರೆ ರಕ್ಷಾ ಸೂತ್ರ ಕಟ್ಟಲಾಗುತ್ತದೆ. ವಟ ಸಾವಿತ್ರಿ ವ್ರತ ಸಮಯದಲ್ಲಿ, ಮಕ್ಕಳ ಹರಕೆ ಇತ್ಯಾದಿಗಳಿಗಾಗಿ ದೇವಸ್ಥಾನದ ಸುತ್ತ ಇರುವ ಕೆಲ ಮರಗಳಿಗೆ ಈ ರೀತಿ ರಕ್ಷಾಸೂತ್ರ ಕಟ್ಟಿರುವುದನ್ನು ನೀವೂ ನೋಡಿರಬಹುದು. 

ಹಾಗಂಥ ಯಾವುದೆಂದರೆ ಆ ಗಿಡ ಮರಕ್ಕೆ ರಕ್ಷಾ ಸೂತ್ರ ಕಟ್ಟುವುದಿಲ್ಲ. ಜ್ಯೋತಿಷ್ಯದಲ್ಲಿ ಈ ಐದು ಮರಗಳಿಗೆ ರಕ್ಷಾ ಸೂತ್ರ ಕಟ್ಟುವುದರಿಂದ ಉತ್ತಮ ಫಲಗಳನ್ನು ಪಡೆಯಬಹುದೆಂದು ಹೇಳಲಾಗಿದೆ. ಅಂಥ ಐದು ಪವಿತ್ರ ಗಿಡ ಮರಗಳು ಯಾವೆಲ್ಲ ನೋಡೋಣ. 

Tap to resize

Latest Videos

undefined

ಶಮಿ: ಶಮಿ ಗಿಡವು ಶಿವನಿಗೆ ಬಹಳ ಪ್ರಿಯವಾಗಿದೆ. ಇದಲ್ಲದೇ ಶಮಿಯ ಗಿಡವೂ ಶನಿ ದೇವನಿಗೆ ಪ್ರಿಯವಾಗಿದೆ. ಶಮಿಯ ಗಿಡವನ್ನು ಬೆಳೆಸಿದ ಮನೆ, ಶನಿದೇವ ಮತ್ತು ಶಿವನ ಆಶೀರ್ವಾದ ಯಾವಾಗಲೂ ಇರುತ್ತದೆ. ಶನಿ ಮತ್ತು ಶಿವನ ಆಶೀರ್ವಾದಕ್ಕಾಗಿ ಶನಿವಾರ ಶಮಿಯ ಗಿಡಕ್ಕೆ ಕಪ್ಪು ರಕ್ಷಾ ಸೂತ್ರವನ್ನು ಕಟ್ಟಬೇಕು.  ಇದರೊಂದಿಗೆ ರಾಹು-ಕೇತು ಮತ್ತು ಶನಿಯ ದೋಷಗಳು ಜಾತಕದಿಂದ ದೂರವಾಗುತ್ತವೆ.

ಮಳೆಗಾಗಿ ಹಲವೆಡೆ ನಡೀತಿದೆ ಪರ್ಜನ್ಯ ಜಪ; ಯಾರು ಈ ಪರ್ಜನ್ಯ?

ತುಳಸಿ: ಹಿಂದೂ ಧರ್ಮದಲ್ಲಿ ತುಳಸಿ ಗಿಡಕ್ಕೆ ವಿಶೇಷ ಮಹತ್ವವಿದೆ. ಅದರಲ್ಲಿ ಲಕ್ಷ್ಮಿ ದೇವಿ ನೆಲೆಸಿದ್ದಾಳೆ ಎಂದು ನಂಬಲಾಗಿದೆ. ನಂಬಿಕೆಯ ಪ್ರಕಾರ ತುಳಸಿ ಗಿಡವನ್ನು ನೆಟ್ಟರೆ ಮನೆಯ ವಾಸ್ತು ದೋಷ ನಿವಾರಣೆಯಾಗುತ್ತದೆ. ಅದಕ್ಕಾಗಿಯೇ ಪ್ರತಿ ಹಿಂದೂ ಮನೆಯಲ್ಲಿ ತುಳಸಿ ಗಿಡವಿರುತ್ತದೆ ಮತ್ತು ಅದನ್ನು ನಿಯಮಿತವಾಗಿ ಪೂಜಿಸಲಾಗುತ್ತದೆ. ತುಳಸಿ ಗಿಡಕ್ಕೆ ಕಲವಾವನ್ನು ಕಟ್ಟುವುದರಿಂದ ಆರ್ಥಿಕ ಸ್ಥಿತಿ ಸದೃಢವಾಗುತ್ತದೆ ಹಾಗೂ ಹಣಕ್ಕೆ ಸಂಬಂಧಿಸಿದ ಸಮಸ್ಯೆಗಳು ದೂರವಾಗುತ್ತವೆ.

ಬಾಳೆ ಗಿಡ: ಬಾಳೆಗಿಡವನ್ನು ಪೂಜಿಸುವುದರಿಂದ ಭಗವಂತ ವಿಷ್ಣು ಪ್ರಸನ್ನನಾಗುತ್ತಾನೆ. ಗುರುವಾರದಂದು ಬಾಳೆ ಗಿಡವನ್ನು ಪೂಜಿಸುವುದರ ಜೊತೆಗೆ ಹಳದಿ ಬಣ್ಣದ ಕಲವಾವನ್ನು ಕಟ್ಟುವುದರಿಂದ ವಿಷ್ಣು ಮತ್ತು ಬೃಹಸ್ಪತಿಯ ಆಶೀರ್ವಾದವನ್ನು ಪಡೆಯುಬಹುದು. ಈ ಕಾರಣದಿಂದಾಗಿ, ವೈವಾಹಿಕ ಜೀವನದಲ್ಲಿ ಸಂತೋಷವು ಉಳಿಯುತ್ತದೆ.

ಆಲದ ಮರ: ವಿವಾಹಿತ ಸ್ತ್ರೀಯರು ಆಲದ ಮರವನ್ನು ಪೂಜಿಸುವುದರಿಂದ ಅಖಂಡ ಸೌಭಾಗ್ಯ ಲಭಿಸುತ್ತದೆ ಮತ್ತು ದಾಂಪತ್ಯ ಜೀವನದಲ್ಲಿ ನೆಮ್ಮದಿ ನೆಲೆಸುತ್ತದೆ. ವಟ ಸಾವಿತ್ರಿ ವ್ರತದ ಸಮಯದಲ್ಲಿ ಮಹಿಳೆಯರು ಆಲದ ಮರವನ್ನು ಪೂಜಿಸುತ್ತಾರೆ. ಆಲದ ಮರಕ್ಕೆ ಕೆಂಪು ರಕ್ಷಾ ಸೂತ್ರ ಕಟ್ಟುವುದರಿಂದ ಅಕಾಲಿಕ ಮರಣದ ಭಯವಿರುವುದಿಲ್ಲ ಎಂಬ ನಂಬಿಕೆ ಇದೆ.

ಕಷ್ಟದ ಮೇಲೆ ಕಷ್ಟ ಬರಲಿ, ಗೆದ್ದೇಗೆಲ್ತೀವಿ ಅನ್ನೋ ಛಲದಂಕ ಮಲ್ಲರು ಈ ರಾಶಿಯವ್ರು; ಅವರಿಗೆ ಗೆಲುವು ಶತಸಿದ್ಧ

ಅಶ್ವತ್ಥ ಮರ: ಹಿಂದೂ ಧರ್ಮದಲ್ಲಿ ಅಶ್ವತ್ಥ ಮರವನ್ನು ಪವಿತ್ರ ಮರವೆಂದು ಪರಿಗಣಿಸಲಾಗಿದೆ. ಬ್ರಹ್ಮ, ವಿಷ್ಣು ಮತ್ತು ಶಿವ ಅಶ್ವತ್ಥ ಮರದಲ್ಲಿ ನೆಲೆಸಿದ್ದಾರೆ ಎಂದು ನಂಬಲಾಗಿದೆ. ಇದಲ್ಲದೆ, ಎಲ್ಲಾ ದೇವತೆಗಳು ಮತ್ತು ಪಿತೃದೇವತೆಗಳು ಕೂಡಾ ಈ ಮರದಲ್ಲಿ ನೆಲೆಸಿರುತ್ತಾರೆ.  ಹಿಂದೂ ಧಾರ್ಮಿಕ ಗ್ರಂಥಗಳಲ್ಲಿ ಅಶ್ವತ್ಥ ಮರವನ್ನು ಪೂಜಿಸುವ ವಿಧಾನವನ್ನು ಸಹ ನೀಡಲಾಗಿದೆ. ಒಬ್ಬ ವ್ಯಕ್ತಿಯು ಮಂಗಳವಾರ ಮತ್ತು ಶುಕ್ರವಾರದಂದು ಈ ಮರವನ್ನು ಪೂಜಿಸಿ ಅದಕ್ಕೆ ರಕ್ಷಾಸೂತ್ರ ಕಟ್ಟಿದರೆ, ಮನೆಯಲ್ಲಿ ಸಕಾರಾತ್ಮಕತೆ ಬರುತ್ತದೆ.

click me!