ಈ ಹಳದಿ ಕಲ್ಲು ಧರಿಸಿದರೆ ನಿಮ್ಮಲ್ಲೂ ಬದಲಾವಣೆ ಕಾಣಬಹುದು!

Published : Jun 07, 2022, 05:54 PM ISTUpdated : Jun 08, 2022, 03:46 PM IST
ಈ ಹಳದಿ ಕಲ್ಲು ಧರಿಸಿದರೆ ನಿಮ್ಮಲ್ಲೂ ಬದಲಾವಣೆ ಕಾಣಬಹುದು!

ಸಾರಾಂಶ

ಸ್ಪಟಿಕ ಶಿಲೆಯ(Quartz) ಜಾತಿಗೆ ಸೇರಿದ ಸಿಟ್ರಿನ್ ಕಲ್ಲು(Citrine Stone) ಸಾವಿರಾರು ವರ್ಷಗಳ ಇತಿಹಾಸ ಹೊಂದಿದೆ. ಸಿಟ್ರಿನ್ ನಮ್ಮ ಆರೋಗ್ಯದ ಮೇಲೆ ದೈಹಿಕವಾಗಿ(Physically) ಹಾಗೂ ಮಾನಸಿಕವಾಗಿ(Mentally) ಬಹಳ ಪರಿಣಾಮ ಬೀರುತ್ತದೆ.

ಸ್ಪಟಿಕ ಶಿಲೆಯ(Quartz) ಜಾತಿಗೆ ಸೇರಿದ ಸಿಟ್ರಿನ್ ಕಲ್ಲು(Citrine Stone) ಸಾವಿರಾರು ವರ್ಷಗಳ ಇತಿಹಾಸ ಹೊಂದಿದೆ. ಇದನ್ನು ವ್ಯಾಪರದ ಕಲ್ಲಾಗಿ ಉಪಯೋಗಿಸಲಾಗುತ್ತಿತ್ತು. ಸಿಟ್ರಿನ್ ಕಲ್ಲಿನಂತೆ ಹಲವು ರೀತಿಯ ಕಲ್ಲುಗಳಿವೆ. ಸಿಟ್ರಿನ್ ಹಳದಿ(Yellow) ಬಣ್ಣದಲ್ಲಿದ್ದಂತೆ ಬೇರೆ ಬೇರೆ ಬಣ್ಣದಲ್ಲಿ ಕಲ್ಲುಗಳಿವೆ. ಗುಲಾಬಿ ಬಣ್ಣದಲ್ಲಿ ರೋಸ್ ಕ್ವಾರ್ಟ್ಜ್(Rose Quartz), ಸ್ಮೋಕಿ ಕ್ವಾರ್ಟ್ಜ್(Smokey Quartz), ಕ್ಲಿಯರ್ ಕ್ವಾರ್ಟ್ಜ್(Clear Quartz) ಸಹ ಇವೆ. 

ಸಿಟ್ರಿನ್ ಕಲ್ಲು ಯಶಸ್ಸಿನ ಸಂಕೇತ ಎಂದು ಹೇಳಲಾಗುತ್ತದೆ. ಇದನ್ನು ಇಟ್ಟುಕೊಂಡರೆ ಸಂಬAಧ, ಆರೋಗ್ಯ, ಲಾಭ, ಸಂಪತ್ತನ್ನು ದೀರ್ಘಕಾಲದವರೆಗೂ ಕಾಯ್ದುಕೊಳ್ಳಲು ನೆರವಾಗುತ್ತದೆ ಎಂದು ಹೇಳಲಾಗುತ್ತದೆ.

 ಸಾವಿರಾರು ವರ್ಷಗಳ ಇತಿಹಾಸವಿದೆ
ಸಿಟ್ರಿನ್ ಎಂಬ ಪದವು ಫ್ರೆಂಚ್‌ನ(French) ಸಿಟ್ರೊನ್‌ನಿಂದ(Citrons) ಬಂದಿದೆ. ಅಂದರೆ ಲಿಂಬೆಹಣ್ಣು(Lemon) ಎಂದರ್ಥ. ಸಾವಿರಾರು ವರ್ಷಗಳ ಹಿಂದೆ ನಮ್ಮ ಪೂರ್ವಜರು(Elders) ಇದನ್ನು ಬಳಸುತ್ತಿದ್ದರು. ಗ್ರೀಕ್‌ನ(Greek) ಜನರು 300BCಯಲ್ಲಿ ಇದನ್ನು ಬಳಸುತ್ತಿದ್ದು, ಇದಕ್ಕೆ ಅವರು ಗೋಲ್ಡ್ ಟೊಪಾಜ್(Gold Topaz) ಎಂದು ಕರೆಯುತ್ತಿದ್ದರು. ಕಾಲ ಕ್ರಮೇಣ ಇದನ್ನು ಜ್ಯುವೆಲ್ಲರಿ ಹಾಗೂ ಅಲಂಕಾರಿಕ(Decorative) ವಸ್ತುವಾಗಿ ಉಪಯೋಗಿಸುತ್ತಿದ್ದರು.

ಈ ರತ್ನಗಳನ್ನು ತಪ್ಪಿಯೂ ಜೊತೆಯಾಗಿ ಧರಿಸಬೇಡಿ!

ಆರೋಗ್ಯದ ಮೇಲೆ ಸಿಟ್ರಿನ್ ಪರಿಣಾಮ
ಆರೋಗ್ಯದ ಮೇಲೆ ಸಿಟ್ರಿನ್ ಪಾತ್ರ ಬಹಳ ಪರಿಣಾಮಬೀರುತ್ತದೆ. ದೇಹದಲ್ಲಿನ ಹಲವು ರೋಗಗಳನ್ನು ನಿವಾರಿಸುವ ಶಕ್ತಿ ಈ ಕಲ್ಲಿಗಿದೆ. ಪ್ಯಾಂಕ್ರಿಯಾಸ್(Pancreas), ಜೀರ್ಣಶಕ್ತಿ(Digestive System), ಇಮ್ಯೂನ್ ಸಿಸ್ಟಮ್(Immune System), ಲಿವರ್(Liver), ಹೊಟ್ಟೆ(Stomach), ಕರಳು ಸಂಬAಧಿ(Intestaine Problems) ಖಾಯಿಲೆಗಳನ್ನು ನಿವಾರಿಸುತ್ತದೆ. ರಕ್ತದ ಟಾಕ್ಸಿಕ್(Blood Toxic) ಅಂಶವನ್ನು ಕಡಿಮೆ ಮಾಡಿ ರಕ್ತ ಸಂಚಾರ(Blood Flow) ಸುಗಮಗೊಳಿಸುತ್ತದೆ. 

ಪ್ರಯೋಜನಗಳು
ಸಿಟ್ರಿನ್ ನಮ್ಮ ಆರೋಗ್ಯದ ಮೇಲೆ ದೈಹಿಕವಾಗಿ(Physically) ಹಾಗೂ ಮಾನಸಿಕವಾಗಿ(Mentally) ಬಹಳ ಪರಿಣಾಮ ಬೀರುತ್ತದೆ. ಇದರಿಂದ ಆರೋಗ್ಯದ ದೃಷ್ಟಿಯಿಂದಷ್ಟೇ ಅಲ್ಲದೆ ಬಹಳಷ್ಟು ಪ್ರಯೋಜನಗಳನ್ನು ಪಡೆಯಬಹುದು.

1. ನಮ್ಮಲ್ಲಿನ ಋಣಾತ್ಮಕ ಚಿಂತನೆಯನ್ನು(Negetive Thinking) ಹೋಗಲಾಡಿಸುತ್ತದೆ. ಆಧ್ಯಾತ್ಮಿಕ ಲಕ್ಷಣಗಳನ್ನು ಹೊಂದಿದ್ದು, ಧನಾತ್ಮಕ ಶಕ್ತಿಯನ್ನು(Positive Energy) ಪ್ರೇರೇಪಿಸುತ್ತದೆ. ಇದನ್ನು ದಿನವೂ ಧರಿಸಿದರೆ ಜೀವನದಲ್ಲಿ ಖಿನ್ನತೆಯನ್ನು ಕಡಿಮೆ ಮಾಡುತ್ತದೆ.
2. ಸಿಟ್ರಿನ್ ಕಲ್ಲನ್ನು ಪರ್ಸ್ನಲ್ಲಿ(Purse) ಇಟ್ಟುಕೊಂಡಲ್ಲಿ ಖರ್ಚಿನ ಪ್ರಮಾಣ ಕುಗ್ಗಿಸುತ್ತದೆ. 
3. ಈ ಕಲ್ಲು ವಯಕ್ತಿಕ ಶಕ್ತಿ ಮತ್ತು ಉದ್ದೇಶವನ್ನು ವರ್ಧಿಸುತ್ತದೆ ಮತ್ತು ಧರಿಸಿದಲ್ಲಿ ಸ್ಟಾಮೀನ(Stamina) ಹೆಚ್ಚುತ್ತದೆ.

ಈ ರಾಶಿಯವರು ಧರಿಸಬಹುದು
ವೇದ ಶಾಸ್ತçದ ಪ್ರಕಾರ ಧನಸ್ಸು(Dhanu) ಹಾಗೂ ಮೀನ(Meena) ರಾಶಿಯವರು ಈ ಸಿಟ್ರಿನ್ ಕಲ್ಲನ್ನು ಧರಿಸಿದರೆ ಶ್ರೇಷ್ಠ ಎಂದು. ಅಲ್ಲದೆ ಸಿಂಹ(Lio), ಮೇಷ, ಕರ್ಕಾಟಕ, ವೃಶ್ಚಿಕ(Scorpio) ರಾಶಿಯವರೂ ಇದನ್ನು ಧರಿಸಬಹುದಾಗಿದೆ. ಜ್ಯುವೆಲ್ಲರಿ(Jwellery) ರೂಪದಲ್ಲಿ ಇದನ್ನು ಹಾಕಿಕೊಳ್ಳುವುದರಿಂದ ಸಂತೋಷ(Happiness), ಯಶಸ್ಸು(Success), ಉತ್ಸಾಹ ಹೆಚ್ಚುತ್ತದೆ.

ಸಿಟ್ರಿನ್ ಧರಿಸುವುದರಿಂದ ಕಡು ಕತ್ತಲೆ(Darkness) ಹಾಗೂ ರಾತ್ರಿ ಭಯವನ್ನು(Night Fear) ಹೋಗಲಾಡಿಸುತ್ತದೆ. ಅಲ್ಲದೆ ಕೆಟ್ಟ ಜನರಿಂದ ದೂರ ಇರಲು ಸಹಕರಿಸುತ್ತದೆ. ಆತ್ಮಧೈರ್ಯ ತುಂಬುವುದರ ಜೊತೆಗೆ ಆತಂಕವನ್ನು(Anxiety) ದೂರ ಮಾಡುವ ಶಕ್ತಿ ಇದರಲ್ಲಿದೆ. ದೇಹದಲ್ಲಿ ಏಳು(Seven) ಚಕ್ರಗಳಿದ್ದು(Chakra) ಮಣಿಪುರ ಚಕ್ರದ(Maneepra Chakra) ಆಯಕ್ಟಿವೇಟ್ ಮಾಡುತ್ತದೆ.

Gemology: ಪರ್ಲ್ ಧರಿಸಿದರೆ ಹಣಕಾಸಿನ ಸಮಸ್ಯೆ ಇರಲ್ಲ

ಹೀಗೆ ಸಿಟ್ರಿನ್ ಆಕ್ಟಿವೇಟ್ ಮಾಡಬೇಕು
ಸಿಟ್ರಿನ್ ಕಲ್ಲು ಬ್ರೇಸ್‌ಲೆಟ್(Bracelet) ರೂಪದಲ್ಲಿ ಹಾಕಿಕೊಂಡರೆ ಸಾಲದು. ಅದು ಸರಿಯಾಗಿ ತನ್ನ ಕಾರ್ಯ ನಿರ್ವಹಿಸಬೇಕೆಂದಲ್ಲಿ ಕೆಲ ಕ್ರಮಗಳನ್ನು ಮೊದಲು ಮಾಡಬೇಕು.
1.ಪ್ರತೀ ದಿನ 20 ನಿಮಷಗಳ ಕಾಲ ಸಿಟ್ರಿನ್ ಕಲ್ಲು ಹಾಕಿಕೊಂಡು ಧ್ಯಾನ(Meditation) ಮಾಡಬೇಕು. 
2. ಕೆಲಸ ಮಾಡುವ ಜಾಗದ(Working Place) ಬಳಿ ಸಿಟ್ರಿನ್ ಇಟ್ಟುಕೊಳ್ಳುವುದು. ಇದರಿಂದ ಕೆಲಸದಲ್ಲಿ ಕಾನ್ಸಟ್ರೇಷನ್(Concentrate) ಜೊತೆಗೆ ಕೆಲಸದಲ್ಲಿ ಪ್ರಗತಿಯನ್ನು ಕಾಣಬಹುದು.
3. ಇದನ್ನು ಎಲ್ಲಿಬೇಕೆಂದಲ್ಲಿ, ಹೇಗೆ ಬೇಕೋ ಹಾಗೆ ಇಡುವುದಲ್ಲ. ಧನಾತ್ಮಕ ಶಕ್ತಿ(Positive energy) ಇರುವ ಕಡೆ ಅಂದರೆ ದೇವರ ಕೋಣೆಯಲ್ಲಿ ಇದನ್ನು ಉಪಯೋಗಿಸಿದ ನಂತರ ಇಡುವುದು ಒಳ್ಳೆಯದು. 

PREV
Read more Articles on
click me!

Recommended Stories

ಈ 4 ರಾಶಿಯವರಲ್ಲಿ ಒಳ್ಳೆಯದಕ್ಕಿಂತ ಕೆಟ್ಟ ಗುಣಗಳೇ ಹೆಚ್ಚು, ದ್ವೇಷ ಸಾಧಿಸೋದ್ರಲ್ಲಿ ನಿಸ್ಸೀಮರು
ಹೊಸ ವರ್ಷದಲ್ಲಿ 3 ರಾಜಯೋಗ, 3 ರಾಶಿಗೆ ಬಹಳಷ್ಟು ಹಣ