ವಾದಿರಾಜರ ಪಾದುಕೆಗೆ 500 ವರ್ಷ, ಯತಿಗಳು ಪಾದುಕೆ ಧರಿಸುವುದು ಯಾಕೆ ಗೊತ್ತಾ?

Published : Jun 07, 2022, 05:44 PM IST
ವಾದಿರಾಜರ ಪಾದುಕೆಗೆ 500 ವರ್ಷ, ಯತಿಗಳು ಪಾದುಕೆ ಧರಿಸುವುದು ಯಾಕೆ ಗೊತ್ತಾ?

ಸಾರಾಂಶ

* ವಾದಿರಾಜ ಗುರುಸಾರ್ವಭೌಮರ ಪಾದುಕೆಗೆ 5 ಶತಮಾನ * ಯತಿಗಳು ಪಾದುಕೆ ಧರಿಸುವುದು ಯಾಕೆ ಗೊತ್ತಾ? * ವಾದಿರಾಜ ಗುರುಸಾರ್ವಭೌಮರ ಪಾದುಕೆಗೆ ನಿತ್ಯ ಪೂಜೆ

ವರದಿ -ಶಶಿಧರ ಮಾಸ್ತಿಬೈಲು ಏಷ್ಯಾನೆಟ್ ಸುವರ್ಣ ನ್ಯೂಸ್

ಉಡುಪಿ, (ಜೂನ್.07):
ಎಂಟು ಶತಮಾನಗಳ ಇತಿಹಾಸವಿರುವ ಉಡುಪಿಯ ಶ್ರೀಕೃಷ್ಣ ಮಠದಲ್ಲಿ, ಅಪರೂಪದ ಅಷ್ಟಮಠಗಳ ಪರಂಪರೆ ಇದೆ. ಅಷ್ಟಮಠಗಳ ಪೈಕಿ ಒಂದಾದ ಸೋದೆಮಠದಲ್ಲಿ, ಸರ್ವ ಶ್ರೇಷ್ಠ ಯತಿ ಗಳಾಗಿ ಮೆರೆದ ವಾದಿರಾಜ ಗುರುಸಾರ್ವಭೌಮರ ಪಾದುಕೆಗೆ 5 ಶತಮಾನ ಪೂರ್ಣಗೊಂಡಿದೆ.

ವಾದಿರಾಜ ಗುರುಸಾರ್ವಭೌಮರ ಪಾದುಕೆಗೆ ನಿತ್ಯ ಪೂಜೆ ನಡೆಸಲಾಗುತ್ತದೆ. ಉಡುಪಿಯಲ್ಲಿ ಯತಿಗಳು ಧರಿಸುವ ಪಾದುಕೆ ಗೆ ವಿಶೇಷ ಮಹತ್ವವಿದೆ. ಅವರು ಧರಿಸುವ ಮರದ ಪಾದುಕೆ ಬ್ರಹ್ಮಚರ್ಯದ ಸಂಕೇತವಾಗಿದೆ. ಯತಿಗಳು ಆಚರಿಸುವ ಮಡಿ, ಸಂಪ್ರದಾಯಕ್ಕೂ ಈ ಪಾದುಕೆಗಳು ಪೂರಕವಾಗಿದೆ.

Paryaya mahotsava 2022: ಉಡುಪಿ ಪರ್ಯಾಯೋತ್ಸವದ ಬಗ್ಗೆ ನಿಮಗೆಷ್ಟು ಗೊತ್ತು?

ದ್ವಾರಕೆಯಿಂದ ಕರೆತಂದ ಕೃಷ್ಣನನ್ನು ಉಡುಪಿಯಲ್ಲಿ ನಿತ್ಯವೂ ಅಷ್ಟಮಠಗಳು ಪೂಜಿಸುತ್ತಾ ಬಂದಿವೆ. ಅಷ್ಟಮಠಗಳ ಇತಿಹಾಸ ಒಂದುಕಡೆಯಾದರೆ, ಈ ಪರಂಪರೆಯಲ್ಲಿ ಆಗಿ ಹೋದ ನೂರಾರು ಸನ್ಯಾಸಿಗಳ ಅನೇಕ ದಂತಕಥೆಗಳನ್ನು ಕೇಳಿದ್ದೇವೆ. ಅಷ್ಟ ಮಠಾಧೀಶರಲ್ಲೇ ಪವಾಡ ಪುರುಷರಾಗಿ ಶ್ರೇಷ್ಠರಾಗಿ ಮೆರೆದ, ವಾದಿರಾಜಸ್ವಾಮಿಗಳು ಧರಿಸುತ್ತಿದ್ದ ಪಾದುಕೆ ಗೆ ಕಳೆದ ಐನೂರು ವರ್ಷಗಳಿಂದ ನಿತ್ಯ ಪೂಜೆ ನೈವೇದ್ಯಗಳು ಸಲ್ಲುತ್ತಿವೆ.

ಹಿಂದೂ ಪರಂಪರೆಯ ಆರಾಧನಾ ಪದ್ಧತಿಗಳಲ್ಲಿ ಪಾದುಕೆ ಪೂಜೆಗೆ ವಿಶೇಷ ಗೌರವ ಇದೆ. ಶ್ರೀರಾಮಚಂದ್ರನ ಅನುಪಸ್ಥಿತಿಯಲ್ಲಿ ರಾಮನ ಪಾದುಕೆ ಇಟ್ಟು ಅಧಿಕಾರ ನಡೆಸಿದ ಭರತನ ಕಥೆ ಕೇಳಿದ್ದೆವೆ. ಚಿಕ್ಕಮಗಳೂರಿನಲ್ಲಿ ಪ್ರತಿವರ್ಷ ಗುರು ದತ್ತಾತ್ರೇಯರ ಪಾದುಕೆ ದರ್ಶನ ನಡೆಯುತ್ತೆ. ಮಂತ್ರಾಲಯದಲ್ಲಿ ಶ್ರೀರಾಘವೇಂದ್ರಸ್ವಾಮಿಗಳ ಪಾದುಕೆ ಗೆ ಪೂಜೆ ಇದೆ. 

ತಮ್ಮ ಸುಧಾರಣಾವಾದ ಮತ್ತು ಪವಾಡಗಳ ಮೂಲಕ ಹೆಸರಾದ ಯತಿಗಳು, ಸ್ವಾಮಿಗಳು ಕಾಲವಾದ ನಂತರ ಅವರ ಪಾದುಕೆಯನ್ನು ಆರಾಧಿಸುವ ಪರಂಪರೆಯೊಂದು ನಡೆದುಬಂದಿದೆ.

ಬಡಗಿ ಗಳಿಂದ ಆಯಾ ಮಠದ ಯತಿಗಳಿಗೆ ಅನುಕೂಲವಾಗುವಂತೆ ಪಾದುಕೆಗಳನ್ನು ಮಾಡಿಸಲಾಗುತ್ತದೆ. ಸಾಗುವಾನಿ, ಶ್ರೀಗಂಧದ ಮರವನ್ನು ಹೆಚ್ಚಾಗಿ ಪಾದುಕೆ ನಿರ್ಮಾಣಕ್ಕೆ ಬಳಸಲಾಗುತ್ತದೆ. ಯತಿಗಳು ಧರಿಸುವ ಪಾದುಕೆಗಳಿಗೆ ಇರುವ ಮಹತ್ವವನ್ನು ತಿಳಿಯಲು ಸೋದೆ ವಾದಿರಾಜ ತೀರ್ಥ ಶ್ರೀಪಾದರ ಪಾದುಕೆಯೇ ಸಾಕ್ಷಿ. ಈಗಲೂ ಪ್ರತಿನಿತ್ಯ ಈ ಪಾದುಕೆ ಗೆ ಎರಡು ಪೂಜೆ, ಮಂಗಳಾರತಿ ,ನೈವೇದ್ಯವನ್ನು ಸಮರ್ಪಿಸಲಾಗುತ್ತದೆ.

ಅಷ್ಟಮಠಾಧೀಶರು ಕೃಷ್ಣ ದೇವರ ಪೂಜೆಗೆಂದೆ ನಿಯೋಜಿತ ರಾಗಿದ್ದಾರೆ, ಶ್ರೀಕೃಷ್ಣ ಪೂಜೆಯ ನಿಟ್ಟಿನಲ್ಲಿ ಪೀಠಿಕೆ ಮಡಿ ಹಾಗೂ ಕೃಷ್ಣಜಿನ ಅಳವಡಿಸಿ ಕೂರುವ ಹದ ಮಡಿ ಪರಂಪರೆ ಇಲ್ಲಿದೆ. ಯತಿಗಳು ತಮ್ಮ ಲೌಕಿಕ ತಿರುಗಾಟಗಳ ವೇಳೆ ಮರದಿಂದ ತಯಾರಿಸಿದ ಪಾದುಕೆಯನ್ನು ಧರಿಸುವ ಸಂಪ್ರದಾಯ ಈಗಲೂ ಮುಂದುವರಿದಿದೆ.

PREV
Read more Articles on
click me!

Recommended Stories

ಇಂದು ಶನಿವಾರ ಈ ರಾಶಿಗೆ ಶುಭ, ಅದೃಷ್ಟ
ಮೆಹಂದಿ ಗಿಡ ಪೂಜಿಸಿದರೆ ಇಷ್ಟೆಲ್ಲಾ ಲಾಭವಿದೆಯೇ?: ಪೂಜೆಗೆ ಇದೇ ಸರಿಯಾದ ದಿನ!