Holi 2022: ಅದೃಷ್ಟ ಬದಲಾಗ್ಬೇಕೆಂದ್ರೆ ರಾಶಿಗನುಗುಣವಾಗಿ ಬಳಸಿ ಬಣ್ಣ

By Suvarna News  |  First Published Mar 16, 2022, 10:16 AM IST

ಈ ಬಾರಿ ಮಾರ್ಚ್ 17 ಮತ್ತು 18ರಂದು ಹೋಳಿ ಹಬ್ಬವನ್ನು ಆಚರಿಸಲಾಗ್ತಿದೆ. ಮೊದಲ ದಿನ ಕಾಮ ದಹನವಾದ್ರೆ ಎರಡನೇ ದಿನ ಬಣ್ಣದೋಕುಳಿ. ನೀವೂ ಬಣ್ಣದಲ್ಲಿ ಮಿಂದೇಳುವ ಪ್ಲಾನ್ ಮಾಡ್ತಿದ್ದರೆ ಜ್ಯೋತಿಷ್ಯ ಶಾಸ್ತ್ರ ಏನು ಹೇಳುತ್ತೆ ಎಂಬುದನ್ನು ತಿಳಿಯಿರಿ.
 


ಬಣ್ಣ (Color) ಗಳ ಹಬ್ಬ (Festival) ಹೋಳಿ (Holi ) ಬಂದಿದೆ. ಜನರು ಈ ಹಬ್ಬವನ್ನು ಉತ್ಸವದ ರೀತಿಯಲ್ಲಿ ಆಚರಿಸುತ್ತಾರೆ. ಬಗೆ ಬಗೆಯ ಬಣ್ಣಗಳ ಜೊತೆ ಹಬ್ಬವನ್ನು ಸಂಭ್ರಮಿಸುತ್ತಾರೆ. ಈ ಹಬ್ಬ ಕೇವಲ ಮನರಂಜನೆಗೆ ಸೀಮಿತವಾಗಿಲ್ಲ. ಹಬ್ಬದ ಬಗ್ಗೆ ಜ್ಯೋತಿಷ್ಯ ಶಾಸ್ತ್ರ, ವಾಸ್ತು ಶಾಸ್ತ್ರದಲ್ಲೂ ಹೇಳಲಾಗಿದೆ. ಹೋಳಿ ಸದಾ ಖುಷಿ, ಸಂತೋಷ, ಶಾಂತಿ, ಸಂಪತ್ತು ನೀಡಬೇಕೆಂದ್ರೆ ಶಾಸ್ತ್ರದಲ್ಲಿ ಹೇಳಿದ ಕೆಲ ನಿಯಮಗಳನ್ನು ಪಾಲಿಸಬೇಕಾಗುತ್ತದೆ. ಹಾಗೆ ಅದೃಷ್ಟಕ್ಕೂ ಬಣ್ಣಕ್ಕೂ ಸಂಬಂಧವಿದೆ. ಹೋಳಿ ಹಬ್ಬದಂದು ಯಾವುದೋ ಬಣ್ಣದಲ್ಲಿ ಓಕಳಿ ಆಡುವ ಬದಲು ರಾಶಿಗನುಗುಣವಾಗಿ ಬಣ್ಣದ ಜೊತೆ ಹಬ್ಬ ಆಚರಿಸಿದ್ರೆ ಇಷ್ಟಾರ್ಥಗಳು ಈಡೇರುತ್ತವೆ. ಇಂದು ಯಾವ ರಾಶಿಯವರಿಗೆ ಯಾವ ಬಣ್ಣ ಒಳ್ಳೆಯದು ಎಂಬುದನ್ನು ತಿಳಿಯಿರಿ.

ರಾಶಿಗನುಗುಣವಾಗಿ ಬಣ್ಣ 

Tap to resize

Latest Videos

ಮೇಷ(Aries) : ಮೇಷ ರಾಶಿಯ ಜನರು ಸದಾ ಉತ್ಸಾಹದಲ್ಲಿರುತ್ತಾರೆ. ಹಾಗಾಗಿ ಈ ರಾಶಿಯ ಜನರು ಈ ಬಾರಿ ಹೋಳಿ ಹಬ್ಬದಂದು ಕೆಂಪು(red) ಮತ್ತು ಗುಲಾಬಿ ಬಣ್ಣಗಳನ್ನು ಬಳಸಿದರೆ ಅದೃಷ್ಟ ಒಲಿದುಬರುತ್ತದೆ.

ವೃಷಭ(Taurus): ವೃಷಭ ರಾಶಿಯವರಿಗೆ ಅನುಕೂಲಕರವಾದ ಬಣ್ಣವೆಂದ್ರೆ ತಿಳಿ ನೀಲಿ(blue) ಮತ್ತು ಆಕಾಶ ಬಣ್ಣ. ಈ ಬಣ್ಣವು ವೃಷಭ ರಾಶಿಯವರ ಜೀವನದಲ್ಲಿ ಸ್ಥಿರತೆ ಮತ್ತು ಸಾಮರಸ್ಯವನ್ನು ತರುತ್ತದೆ.

ಮಿಥುನ(Gemini): ಮಿಥುನ ರಾಶಿಯ ಜನರು ಈ ಹೋಳಿಯಲ್ಲಿ ತಿಳಿ ಹಸಿರು ಬಣ್ಣವನ್ನು ಬಳಸಿದ್ರೆ ಒಳ್ಳೆಯದು. ಕಿತ್ತಳೆ ಮತ್ತು ಗುಲಾಬಿ ಬಣ್ಣಗಳನ್ನು ಸಹ ಬಳಸಬಹುದು. ಈ ಬಣ್ಣಗಳು ಉತ್ಸಾಹ, ಶಕ್ತಿಯನ್ನು ತುಂಬುವುದು ಮಾತ್ರವಲ್ಲದೆ ಸಮೃದ್ಧಿಯನ್ನು ನೀಡುತ್ತವೆ. 

ಕರ್ಕಾಟಕ ರಾಶಿ(Cancer): ಕರ್ಕಾಟಕ ರಾಶಿಯ ಜನರು ಭಾವುಕ ಸ್ವಭಾವದವರು. ಇವರು ಹೋಳಿ ಹಬ್ಬವನ್ನು ತಿಳಿ ನೀಲಿ,  ಬಿಳಿ ಬಣ್ಣಗಳೊಂದಿಗೆ ಆಚರಿಸಬೇಕು. ಇದು ಅವರಿಗೆ ಶಾಂತಿ ಮತ್ತು ತಾಳ್ಮೆಯನ್ನು ನೀಡುತ್ತದೆ.

ಸಿಂಹ(Leo): ಸಿಂಹ ರಾಶಿಯ ಜನರು ತುಂಬಾ ಶಕ್ತಿವಂತರು. ಕೋಪ ನಿಯಂತ್ರಣ ಹಾಗೂ ದುಃಖ ನಿಯಂತ್ರಣಕ್ಕೆ ಇವರು ಬಂಗಾರದ ಬಣ್ಣ ಮತ್ತು ತಾಮ್ರದ ಬಣ್ಣಗಳನ್ನು ಬಳಸುವುದು ಒಳ್ಳೆಯದು. 

ಕನ್ಯಾ(Virgo): ಕನ್ಯಾ ರಾಶಿಯವರಿಗೆ ಕಡು ಹಸಿರು ಬಣ್ಣವು ಶುಭಕರವಾಗಿರುತ್ತದೆ. ಈ ಬಣ್ಣದಲ್ಲಿ ಹಬ್ಬ ಆಚರಿಸುವುದ್ರಿಂದ ಹೊಸ ಶಕ್ತಿ, ಹೊಸ ಉತ್ಸಾಹ ನಿಮ್ಮದಾಗುತ್ತದೆ. 

ತುಲಾ(Libra): ಬಿಳಿಯ ಹೊರತಾಗಿ ತುಲಾ ರಾಶಿಯವರು ನೇರಳೆ, ಕಂದು ಮತ್ತು ನೀಲಿ ಬಣ್ಣವನ್ನು ಬಳಸಬಹುದು. ತಾಳ್ಮೆ ಹಾಗೂ ಶಾಂತವಾಗಿರಲು ನೀವು ತಿಳಿ ನೀಲಿ ಬಟ್ಟೆಗಳನ್ನು ಧರಿಸಬಹುದು.

ವೃಶ್ಚಿಕ(Scorpio): ಕಡು ಕೆಂಪು, ಕಂದು ಬಣ್ಣಗಳು ವೃಶ್ಚಿಕ ರಾಶಿಯ ಮೇಲೆ ಉತ್ತಮ ಪರಿಣಾಮ ಬೀರುತ್ತವೆ. ಗಾಢ ಕೆಂಪು ಬಣ್ಣದ ಆಯ್ಕೆ ಒಳ್ಳೆಯದು. ಈ ಬಣ್ಣವು ನಿಮ್ಮ ವ್ಯಕ್ತಿತ್ವವನ್ನು ಎತ್ತಿ ತೋರಿಸುತ್ತದೆ.

Holi 2022: ಬಣ್ಣದೋಕುಳಿಯಲ್ಲಿ ಕಣ್ಣುಗಳನ್ನು ರಕ್ಷಿಸುವುದು ಹೇಗೆ ?

ಧನು(Sagittarius): ಈ ಹೋಳಿಯಲ್ಲಿ ಧನು ರಾಶಿಯವರಿಗೆ ಹಳದಿ ಮತ್ತು ಕಿತ್ತಳೆ ಬಣ್ಣಗಳು ತುಂಬಾ ಒಳ್ಳೆಯದು. ಈ ರಾಶಿಯ ಜನರು ತುಂಬಾ ಉತ್ಸಾಹದಿಂದಿರುತ್ತಾರೆ. ಆದ್ದರಿಂದ ಈ ಬಣ್ಣಗಳು ಅವರಿಗೆ ತುಂಬಾ ಉಪಯುಕ್ತ.  

ಮಕರ(Capricorn): ಈ ರಾಶಿಯ ಜನರು ತಿಳಿ ನೀಲಿ ಬಣ್ಣವನ್ನು ಬಳಸಬೇಕು. ಈ ಬಣ್ಣ ಧನಾತ್ಮಕ ಶಕ್ತಿ ಹರಿಯಲು ಮತ್ತು ವ್ಯಕ್ತಿತ್ವದಲ್ಲಿ ಸ್ಥಿರತೆ ಕಾಪಾಡಿಕೊಳ್ಳಲು ನೆರವಾಗುತ್ತದೆ.

ಕುಂಭ(Aquarius): ಈ ರಾಶಿಯ ಜನರಿಗೆ ಕಡು ನೀಲಿ ಬಣ್ಣ ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಕುಂಭ ರಾಶಿಯವರು ಯಾವಾಗಲೂ ಹೊಸದನ್ನು ಮಾಡಲು ಪ್ರಯತ್ನಿಸುತ್ತಿರುತ್ತಾರೆ. ಆದ್ದರಿಂದ, ಇದು ಅವರಿಗೆ ಶಕ್ತಿಯನ್ನು ತುಂಬುವುದಲ್ಲದೆ, ಬಿಡುವಿಲ್ಲದ ಜೀವನದಲ್ಲಿ ಶಾಂತಿ ಮತ್ತು ವಿಶ್ರಾಂತಿಯನ್ನು ತರುತ್ತದೆ.

PANCHANGA: ಇಂದು ಬುಧವಾರ, ನಾರಾಯಣ ಸ್ಮರಣೆ, ಪುಷ್ಪಾರ್ಚನೆಯಿಂದ ವಿಷ್ಣುವಿನ ಅನುಗ್ರಹವಾಗುವುದು

ಮೀನ(Pisces): ಮೀನ ರಾಶಿಯವರಿಗೆ ಗಾಢ ಬಣ್ಣಗಳು ಭಾವನಾತ್ಮಕವಾಗಿ ಉತ್ತಮ ಪ್ರಭಾವ ಬೀರುತ್ತವೆ. ಹಳದಿ ಅಥವಾ ತಿಳಿ ಹಳದಿ ಬಣ್ಣವನ್ನು ಬಳಸುವುದರಿಂದ ಉತ್ಸಾಹ ಹೆಚ್ಚುತ್ತದೆ. 

click me!