ಲಕ್ಷ್ಮಿಯನ್ನು ಮನೆಗೆ ಆಹ್ವಾನಿಸೋದು ಕಷ್ಟದ ಕೆಲಸ. ಹಾಗೆ ಆಕೆಯನ್ನು ಮನೆಯಲ್ಲಿ ನೆಲೆ ನಿಲ್ಲುವಂತೆ ಮಾಡೋದು ಕೂಡ ಸುಲಭವಲ್ಲ. ಲಕ್ಷ್ಮಿ ಒಲಿಸಿಕೊಳ್ಳಲು ಅನೇಕ ಪ್ರಯತ್ನ ನಡೆಸಬೇಕು. ಲಕ್ಷ್ಮಿ ಪೂಜೆ ದಿನ ಯಾವುದೇ ತಪ್ಪಾಗದಂತೆ ನೋಡಿಕೊಳ್ಳಬೇಕು.
ನಮ್ಮ ದೇಶದ ಅತಿ ದೊಡ್ಡ ಹಬ್ಬವೆಂದ್ರೆ ದೀಪಾವಳಿ. ಸಡಗರ – ಸಂಭ್ರಮದಿಂದ ಆಚರಿಸುವ ಹಬ್ಬವಿದು. ದೀಪಾವಳಿಯ ಲಕ್ಷ್ಮಿ ಪೂಜೆಯನ್ನು ಭಕ್ತರು ಶ್ರದ್ಧೆಯಿಂದ ಆಚರಿಸುತ್ತಾರೆ. ದೀಪಾವಳಿಯಲ್ಲಿ ಪ್ರತಿಯೊಬ್ಬರ ಮನೆಯಲ್ಲೂ ಲಕ್ಷ್ಮಿ ಮತ್ತು ಗಣಪತಿ ಪೂಜೆ ಮಾಡಬೇಕೆಂದು ಶಾಸ್ತ್ರಗಳಲ್ಲಿ ಹೇಳಲಾಗಿದೆ. ಸಂಪತ್ತು, ಸಂತೋಷಕ್ಕಾಗಿ ದೀಪಾವಳಿಯಲ್ಲಿ ಜನರು ಲಕ್ಷ್ಮಿ ಪೂಜೆಯನ್ನು ಮಾಡ್ತಾರೆ. ತಾಯಿ ಲಕ್ಷ್ಮಿ ಮನೆಯಲ್ಲಿ ಸದಾ ನೆಲೆಸಲಿ ಎಂದು ಎಲ್ಲರು ಬಯಸ್ತಾರೆ.
ದೀಪಾವಳಿ (Diwali) ಯ ಲಕ್ಷ್ಮಿ (Lakshmi) ಪೂಜೆ ವೇಳೆ ಏನೆಲ್ಲ ವಸ್ತುಗಳನ್ನು ಬಳಸಬೇಕು ಎಂದು ನಾವು ಈಗಾಗಲೇ ಹೇಳಿದ್ದೇವೆ. ಲಕ್ಷ್ಮಿ ಪೂಜೆ ದಿನ ಶಂಖ, ಶ್ರೀಚಕ್ರ, ಗಣೇಶ, ಕುಬೇರರ ಪೂಜೆ ಕೂಡ ನಡೆಯುತ್ತದೆ. ಹಾಗೆಯೇ ಇಡೀ ಮನೆ ದೀಪಗಳಿಂದ ಕಂಗೊಳಿಸುತ್ತಿರುತ್ತದೆ. ತಾಯಿ ಲಕ್ಷ್ಮಿಗೆ ಖೀರ್ ನೀಡಿ ಭಕ್ತರು ಆಕೆ ಆರಾಧನೆ ಮಾಡ್ತಾರೆ. ಚಿನ್ನಾಭರಣ (Gold jewelry)ಗಳ ವೃದ್ಧಿಗೆ ಪ್ರಾರ್ಥನೆ ಮಾಡ್ತಾರೆ. ಲಕ್ಷ್ಮಿ ಪೂಜೆ ದಿನ, ಲಕ್ಷ್ಮಿ ಮನೆಗೆ ಬರಬೇಕೆಂದ್ರೆ ಕೆಲ ಕೆಲಸಗಳನ್ನು ಭಕ್ತರು ಅಪ್ಪಿತಪ್ಪಿಯೂ ಮಾಡಬಾರದು. ಮರೆತು ಮಾಡಿದ್ರೂ ಲಕ್ಷ್ಮಿ ಕೋಪಗೊಳ್ತಾಳೆ. ನಿಮ್ಮ ಕಡೆ ತಿರುಗಿ ಕೂಡ ನೋಡೋದಿಲ್ಲ. ದಾರಿದ್ರ್ಯ ಬರಬಾರದು, ಲಕ್ಷ್ಮಿ ಸಂತೋಷಗೊಳ್ಳಬೇಕೆಂದ್ರೆ ಈ ಕೆಲಸಗಳನ್ನು ಲಕ್ಷ್ಮಿ ಪೂಜೆ ದಿನ ಮಾಡಬೇಡಿ.
ಈ ನಾಲ್ಕು ರಾಶಿಯ ಮಹಿಳೆಯರು ಪತಿಗೆ ಆರ್ಥಿಕವಾಗಿ ನೆರವಾಗಲು ಟ್ರೈ ಮಾಡ್ತಾರೆ!
ದೀಪಾವಳಿ ಲಕ್ಷ್ಮಿ ಪೂಜೆ ದಿನ ಈ ಕೆಲಸ ಮಾಡಬೇಡಿ :
ಸ್ವಚ್ಛತೆ (Clean) : ಲಕ್ಷ್ಮಿ ಪೂಜೆಯನ್ನು ಸಾಮಾನ್ಯವಾಗಿ ಸಂಜೆ ಮಾಡಲಾಗುತ್ತದೆ. ನೀವು ಈ ಸಂದರ್ಭದಲ್ಲಿ ಯಾವುದೇ ಕಾರಣಕ್ಕೂ ಮನೆ ಸ್ವಚ್ಛಗೊಳಿಸಲು ಹೋಗ್ಬೇಡಿ. ಲಕ್ಷ್ಮಿ ಪೂಜೆಯ ದಿನ ಬೆಳಿಗ್ಗೆಯೇ ಮನೆಯನ್ನು ಸ್ವಚ್ಛಗೊಳಿಸಿ. ಕೊಳಕಾದ ಜಾಗದಲ್ಲಿ ಲಕ್ಷ್ಮಿ ನೆಲೆಸುವುದಿಲ್ಲ. ಹಾಗಾಗಿ ಮನೆಯ ಪ್ರತಿ ಮೂಲೆಯನ್ನು ಸ್ವಚ್ಛಗೊಳಿಸಲು ಮರೆಯಬೇಡಿ. ವಸ್ತುಗಳನ್ನು ಚೆಲ್ಲಾಪಿಲ್ಲಿಯಾಗಿ ಇಡಬೇಡಿ.
ಈ ವಸ್ತುಗಳನ್ನು ಮನೆಯಲ್ಲಿಡಬೇಡಿ : ದೀಪಾವಳಿ ದಿನ ಲಕ್ಷ್ಮಿ ಪೂಜೆ ಮಾಡುವ ಸಂದರ್ಭದಲ್ಲಿ ಮನೆಯಲ್ಲಿ ಮುರಿದ, ಹಾಳಾದ, ಒಡೆದ ವಸ್ತುಗಳು ಇರಬಾರದು. ನೀವು ಮನೆಯಲ್ಲಿ ಕೆಟ್ಟ ಗಡಿಯಾರ, ಖಾಲಿ ಬಾಟಲಿ (bottle) ಅಥವಾ ಹರಿದ ಹಾಳೆ ಸೇರಿದಂತೆ ಒಡೆದ ಗ್ಲಾಸ್ (Glass) ಗಳನ್ನು ಮನೆಯಲ್ಲಿ ಇಡಬೇಡಿ. ಲಕ್ಷ್ಮಿ ಪೂಜೆಗೆ ಮೊದಲು ಮನೆ ಸ್ವಚ್ಛಗೊಳಿಸುವಾಗ್ಲೇ ಈ ವಸ್ತುಗಳನ್ನು ಮನೆಯಿಂದ ಹೊರಗೆ ಹಾಕಿ.
ಆಹಾರದ ಬಗ್ಗೆ ಇರಲಿ ಎಚ್ಚರ : ಬರೀ ಮನೆ ಸ್ವಚ್ಛವಾದ್ರೆ ಸಾಲದು, ದೇಹ ಕೂಡ ಸ್ವಚ್ಛವಾಗ್ಬೇಕು. ಲಕ್ಷ್ಮಿ ಪೂಜೆ ಸಂದರ್ಭದಲ್ಲಿ ನೀವು ಆಹಾರದ ಬಗ್ಗೆಯೂ ವಿಶೇಷ ಕಾಳಜಿವಹಿಸಬೇಕು. ಯಾವುದೇ ಕಾರಣಕ್ಕೂ ಈ ಸಮಯದಲ್ಲಿ ನೀವು ಮಾಂಸ (Non-Veg), ಮದ್ಯಸೇವನೆ ಮಾಡಬೇಡಿ. ವೃತ ಮಾಡುವವರು ಈರುಳ್ಳಿ (Onion), ಬೆಳ್ಳುಳ್ಳಿ (Garlic) ಸೇವನೆ ಕೂಡ ಮಾಡಬಾರದು. ಆದಷ್ಟು ಹೊರಗಿನ ತಿಂಡಿಗಳನ್ನು ಸೇವಿಸಬೇಡಿ.
ಲಕ್ಷ್ಮಿ ಪೂಜೆ ವೇಳೆ ಈ ಬಟ್ಟೆ ಧರಿಸಬೇಡಿ : ಲಕ್ಷ್ಮಿ ಸಂಪತ್ತಿನ ದೇವತೆ. ಆಕೆ ಪೂಜೆ ಮಾಡುವ ವೇಳೆ ನಮ್ಮ ಬಟ್ಟೆ ಕೂಡ ಮಹತ್ವಪಡೆಯುತ್ತದೆ. ನೀವು ಲಕ್ಷ್ಮಿ ಪೂಜೆ ಮಾಡುವ ಸಂದರ್ಭದಲ್ಲಿ ಹರಿದ ಬಟ್ಟೆಯನ್ನು ಧರಿಸಬೇಡಿ. ಹರಿದ ಬಟ್ಟೆ ಬಡತನದ ಸಂಕೇತವಾಗಿದೆ. ನೀವು ಈ ಸಂದರ್ಭದಲ್ಲಿ ಕಪ್ಪು ಬಟ್ಟೆ ಕೂಡ ಹಾಕಿಕೊಳ್ಳಬಾರದು.
ಲಕ್ಷ್ಮಿ ಪೂಜೆ ವೇಳೆ ಈ ಟ್ರಿಕ್ಸ್ ಬಳಸಿದ್ರೆ ಹಣದ ಹೊಳೆ ಹರಿಯುತ್ತೆ!
ಮನೆಯಲ್ಲಿರಲಿ ಬೆಳಕು : ದೀಪಗಳ ಹಬ್ಬ ದೀಪಾವಳಿ. ಈ ದಿನ ನೀವು ಮನೆಯಲ್ಲಿ ಸದಾ ಬೆಳಕಿರುವಂತೆ ನೋಡಿಕೊಳ್ಳಬೇಕು. ದೀಪಾವಳಿ ದಿನ ಸಂಜೆ ಮನೆಗೆ ಬರುವ ಲಕ್ಷ್ಮಿ ಎಲ್ಲರನ್ನು ಆಶೀರ್ವದಿಸುತ್ತಾಳೆ. ಆದ್ರೆ ಮನೆಯಲ್ಲಿ ಕತ್ತಲು ಆವರಿಸಿದ್ದರೆ ಆಕೆ ಮನೆಯೊಳಗೆ ಕಾಲಿಡುವುದಿಲ್ಲ. ಹಾಗಾಗಿ ರಾತ್ರಿ ಕೂಡ ದೀಪ ಉರಿಯುವಂತೆ ನೋಡಿಕೊಳ್ಳಿ.