ಜ್ಯೋತಿಷ್ಯ ಶಾಸ್ತ್ರದಲ್ಲಿ ಜಾತಕವನ್ನು ನೋಡಿ ಅನೇಕ ವಿಚಾರಗಳನ್ನು ತಿಳಿದುಕೊಳ್ಳಬಹುದಾಗಿದೆ. ವ್ಯಕ್ತಿಯು ಭವಿಷ್ಯದಲ್ಲಿ ಎಷ್ಟು ಧನವಂತನಾಗುತ್ತಾನೆ ಎಂಬುದರ ಬಗ್ಗೆ ಜಾತಕದ ಯೋಗಗಳನ್ನು ನೋಡಿ ತಿಳಿದುಕೊಳ್ಳಬಹುದಾಗಿದೆ. ಹಾಗಾಗಿ ಜಾತಕದಲ್ಲಿ ಯಾವ ಗ್ರಹಗಳು ಯಾವ ಸ್ಥಾನದಲ್ಲಿದ್ದರೂ ಧನಯೋಗ ಪ್ರಾಪ್ತವಾಗುತ್ತದೆ ಎಂಬುದರ ಬಗ್ಗೆ ತಿಳಿಯೋಣ .....
ಜ್ಯೋತಿಷ್ಯ ಶಾಸ್ತ್ರದಲ್ಲಿ ಜಾತಕವನ್ನು ನೋಡಿ ಎಲ್ಲ ವಿಚಾರಗಳನ್ನು ತಿಳಿಯಬಹುದಾಗಿದೆ. ವ್ಯಕ್ತಿಯ ಸ್ವಭಾವ, ವ್ಯಕ್ತಿತ್ವ, ಅದೃಷ್ಟ ಮತ್ತು ಯೋಗಗಳನ್ನು ತಿಳಿದುಕೊಳ್ಳಬಹುದು. ಅಷ್ಟೇ ಅಲ್ಲದೆ ಜಾತಕದಿಂದ ವ್ಯಕ್ತಿಯು ಎಷ್ಟು ಧನಸಂಪತ್ತನ್ನು ಹೊಂದುತ್ತಾನೆ ಎಂಬ ಬಗ್ಗೆ ಸಹ ಅರಿಯಬಹುದು. ಹಣವಿಲ್ಲದೆ ಬದುಕು ಸಾಧ್ಯವಿಲ್ಲ. ಕೆಲವರು ಹೆಚ್ಚು ಧನ ಸಂಪತ್ತನ್ನು ಹೊಂದಿದ್ದರೆ ಮತ್ತೆ ಕೆಲವರಿಗೆ ಹಣ ಸಂಪಾದನೆ ಅತ್ಯಂತ ಕಷ್ಟಕರವಾಗಿರುತ್ತದೆ. ಜಾತಕದಲ್ಲಿ ಗ್ರಹಗಳ ಸ್ಥಿತಿ -ಗತಿಗಳನ್ನು ಪರಿಶೀಲಿಸಿ ವ್ಯಕ್ತಿಯ ಅದೃಷ್ಟದ ಬಗ್ಗೆ ತಿಳಿಯಬಹುದು. ಜಾತಕದಲ್ಲಿ ಹೆಚ್ಚು ಹಣ ಗಳಿಸುವ ಯೋಗ ಇದೆಯೇ ಅಥವಾ ಇಲ್ಲವೇ ಎಂಬುದನ್ನು ಸಹ ತಿಳಿಯಬಹುದು. ಹಾಗಾಗಿ ಜಾತಕದಲ್ಲಿ ಯಾವ ರೀತಿ ಯೋಗಗಳಿದ್ದರೆ ವ್ಯಕ್ತಿಯು ಹಣವಂತನಾಗಿರುತ್ತಾನೆ ಎಂಬುದರ ಬಗ್ಗೆ ತಿಳಿಯೋಣ....
ಜಾತಕದಲ್ಲಿ ಹೀಗಿದ್ದರೆ ಲಕ್ಷ್ಮೀ ಯೋಗ:
ಜಾತಕದಲ್ಲಿ ಲಗ್ನೇಶ (ಲಗ್ನದ ಅಧಿಪತಿ) ಬಲವಾಗಿದ್ದು ಮತ್ತು 9ನೇ ಮನೆಯಲ್ಲಿರುವ ಗ್ರಹವು ಉಚ್ಛವಾಗಿದ್ದರೆ, ಇಲ್ಲವೇ ಸ್ವರಾಶಿಯಲ್ಲಿದ್ದು ಕೇಂದ್ರ ಅಥವಾ ತ್ರಿಕೋನ ಸ್ಥಿತಿ ಉಂಟಾದರೆ ಇದನ್ನು ಲಕ್ಷ್ಮೀ ಯೋಗವೆಂದು ಕರೆಯುತ್ತಾರೆ.
undefined
ಲಗ್ನದ ಅಧಿಪತಿ ಅಥವಾ ನವಮ ಸ್ಥಾನದಲ್ಲಿರುವ ಗ್ರಹಗಳ ಯುತಿಯಾದಾಗ ಅಥವಾ ಪರಸ್ಪರ ಸ್ಥಾನ ಪರಿವರ್ತನೆಯಾದಾಗ ಸಹ ಲಕ್ಷ್ಮೀ ಯೋಗ ಉಂಟಾಗುತ್ತದೆ.
ನವಮ ಸ್ಥಾನದಲ್ಲಿರುವ ಗ್ರಹದ ಜೊತೆಗೆ ಶುಕ್ರಗ್ರಹವು ಉಚ್ಛ ಸ್ಥಿತಿಯಲ್ಲಿದ್ದು, ಸ್ವ ರಾಶಿಯಲ್ಲಿ ಕೇಂದ್ರ ಅಥವಾ ತ್ರಿಕೋನ ಸ್ಥಿತಿಯಲ್ಲಿದ್ದರೆ ಈ ಯೋಗ ಉಂಟಾಗುತ್ತದೆ. ಜಾತಕದಲ್ಲಿ ಈ ಯೋಗಗಳನ್ನು ಹೊಂದಿರುವ ವ್ಯಕ್ತಿಯು ಹಣವಂತನಾಗುವುದಲ್ಲದೆ, ಸಕಲ ಭೌತಿಕ ಸುಖಗಳನ್ನು ಪಡೆಯುತ್ತಾನೆ.
ಇದನ್ನು ಓದಿ: ವೃತ್ತಿ ಕ್ಷೇತ್ರದ ಅನುಸಾರ ಅದೃಷ್ಟ ಬದಲಾಯಿಸುವ ರತ್ನಗಳಿವು...
ಮಹಾ ಧನಯೋಗ:
ದಶಮ ಸ್ಥಾನದಲ್ಲಿರುವ ಅಂದರೆ ಹತ್ತನೇ ಮನೆಯಲ್ಲಿರುವ ಗ್ರಹದ ಜೊತೆ ಏಕಾದಶ ಸ್ಥಾನದಲ್ಲಿರುವ ಅಂದರೆ ಹನ್ನೊಂದನೇ ಮನೆಯಲ್ಲಿರುವ ಗ್ರಹಗಳ ಯುತಿಯು ಹತ್ತನೇ ಮನೆಯಲ್ಲಿ ಆದಾಗ ಈ ಯೋಗ ಉಂಟಾಗುತ್ತದೆ. ಈ ಯೋಗ ಜಾತಕದಲ್ಲಿದ್ದಾಗ ಗ್ರಹಗಳ ದೆಸೆ ಅಂತರ್ - ದೆಸೆಯಿಂದಾಗಿ ವ್ಯಕ್ತಿಯು ಭೌತಿಕ ಸುಖವನ್ನು ಮತ್ತು ಧನಸಂಪತ್ತನ್ನು ಹೊಂದುತ್ತಾನೆ.
ಧನ ಮಾಲಿಕಾ ಯೋಗ:
ಜಾತಕದಲ್ಲಿ ಎರಡನೇ ಮನೆಯಿಂದ ಸೂರ್ಯಾದಿ ಏಳು ಗ್ರಹಗಳು ಏಳು ರಾಶಿಗಳಲ್ಲಿ ಸ್ಥಿತವಾಗಿದ್ದರೆ ಈ ಯೋಗ ಉಂಟಾಗುತ್ತದೆ. ಇದರಿಂದ ವ್ಯಕ್ತಿಯು ಹೆಚ್ಚು ಧನ ಸಂಪತ್ತನ್ನು ಹೊಂದುತ್ತಾನೆ.
ಇದನ್ನು ಓದಿ: ಶನಿ ದೋಷದಿಂದ ಮುಕ್ತಿ ಪಡೆಯೋಕೆ ಇಲ್ಲಿದೆ ವಾಸ್ತು ಟಿಪ್ಸ್...!
ಅತಿ ಧನಲಾಭ ಯೋಗ:
ಲಗ್ನಾಧಿಪತಿಯು ಎರಡನೇ ಮನೆಯಲ್ಲಿ ಸ್ಥಿತನಾಗಿದ್ದು, ಧನಾಧಿಪತಿಯು ಹನ್ನೆರಡನೇ ಮನೆಯಲ್ಲಿ ಸ್ಥಿತನಾಗಿದ್ದರೆ ಮತ್ತು ಹನ್ನೊಂದನೇ ಮನೆಯ ಅಧಿಪತಿಯು ಲಗ್ನದಲ್ಲಿ ಸ್ಥಿತನಾಗಿದ್ದರೆ ಅಂಥವರು ಕಡಿಮೆ ಪ್ರಯಾಸದಿಂದ ಹೆಚ್ಚು ಹಣವನ್ನು ಗಳಿಸುತ್ತಾರೆ. ಜಾತಕದಲ್ಲಿ ಇಂತಹ ಯೋಗವನ್ನು ಹೊಂದಿದವರು ಬೇಗ ಧನವಂತರಾಗುತ್ತಾರೆ.
ಬಹು ಧನಲಾಭ ಯೋಗ:
ಜಾತಕದಲ್ಲಿ ಲಗ್ನಾಧಿಪತಿಯು ಎರಡನೇ ಮನೆಯಲ್ಲಿ ಮತ್ತು ಎರಡನೇ ಮನೆಯ ಅಧಿಪತಿಯು ಲಗ್ನದಲ್ಲಿ ಸ್ಥಿತನಾಗಿದ್ದರೆ ಅಥವಾ ಈ ಎರಡೂ ಮನೆಯ ಗ್ರಹಗಳು ಶುಭ ಸ್ಥಾನದಲ್ಲಿ ಒಂದೇ ಸಮಯದಲ್ಲಿ ಸ್ಥಿತವಾಗಿದ್ದರೆ ಅಂತಹ ವ್ಯಕ್ತಿಗಳು ಬಹು ಧನವನ್ನು ಗಳಿಸುತ್ತಾರೆ.
ಆಜೀವನ ಧನಲಾಭ:
ಒಂದಕ್ಕಿಂತ ಹೆಚ್ಚು ಗ್ರಹಗಳು ಜಾತಕದ ಎರಡನೇ ಮನೆಯಲ್ಲಿ ಸ್ಥಿತವಾಗಿದ್ದರೆ ಮತ್ತು 2ನೇ ಮನೆಯ ಅಧಿಪತಿ ಹಾಗೂ ಗುರು ಗ್ರಹವು ಬಲವಾಗಿದ್ದು, ಸ್ವ ರಾಶಿಯಲ್ಲಿ ಸ್ಥಿತವಾಗಿದ್ದರೆ ಅಂತಹ ಜಾತಕದವರು ಜೀವನಪರ್ಯಂತ ಹೆಚ್ಚು ಹಣವನ್ನು ಗಳಿಸುತ್ತಾರೆ.
ಧನ ಪ್ರಾಪ್ತಿ ಯೋಗ:
2ನೇ ಮನೆಯ ಅಧಿಪತಿಯ ಹನ್ನೊಂದನೇ ಮನೆಯಲ್ಲಿ ಮತ್ತು ಹನ್ನೊಂದನೇ ಮನೆಯ ಅಧಿಪತಿಯು ಎರಡನೇ ಮನೆಯಲ್ಲಿ ಸ್ಥಿತವಾಗಿದ್ದರೂ ಅಂಥವರಿಗೆ ಹೆಚ್ಚು ಧನವು ಪ್ರಾಪ್ತವಾಗುತ್ತದೆ.ವಿಷ್ಣು ಯೋಗ:
ನವಮಾಧಿಪತಿ, ದಶಮಾಧಿಪತಿ ಮತ್ತು ಜಾತಕದ ನವಾಂಶದಲ್ಲಿನ ನವಮಾಧಿಪತಿಯು ಎರಡನೇ ಮನೆಯಲ್ಲಿ ಸ್ಥಿತವಾಗಿದ್ದರೆ ಅಂಥ ವ್ಯಕ್ತಿಯು ಹೆಚ್ಚು ಧನವನ್ನು ಗಳಿಸುತ್ತಾನೆ.
ವಾಸುಮತಿ ಯೋಗ :
ಗುರು, ಶುಕ್ರ, ಬುಧ ಅಥವಾ ಚಂದ್ರ ಗ್ರಹಗಳು ಲಗ್ನದಿಂದ ಮೂರನೇ, ಆರನೇ, ಜೊತೆಗೆ ಹನ್ನೊಂದನೆ ಮನೆಯಲ್ಲಿ ಸ್ಥಿತವಾಗಿದ್ದರೆ ಅಂತಹ ಜಾತಕವನ್ನು ಹೊಂದಿದವರು ಹೆಚ್ಚು ಧನವನ್ನು ಹೊಂದುತ್ತಾರೆ.
ಇದನ್ನು ಓದಿ: ಈ ಮೂರು ರಾಶಿ ಹುಡುಗರು ಕೇರಿಂಗ್ –ರೊಮ್ಯಾಂಟಿಕ್!
ಧನ ಯೋಗ :
ಜಾತಕದಲ್ಲಿ ಚಂದ್ರ ಮತ್ತು ಮಂಗಳ ಗ್ರಹಗಳ ಯುತಿ ಶುಭ ರಾಶಿಯಲ್ಲಿ ಆದಾಗ ಅಂಥ ವ್ಯಕ್ತಿಗಳು ಹೆಚ್ಚೆಚ್ಚು ಧನ ಪ್ರಾಪ್ತಿಗೊಳಿಸಿಕೊಳ್ಳುತ್ತಾರೆ.
ಶುಭ ಕರ್ತರಿ ಯೋಗ :
ಶುಭ ಗ್ರಹಗಳು ಎರಡನೇ ಮತ್ತು ಹನ್ನೆರಡನೇ ಮನೆಯಲ್ಲಿ ಸ್ಥಿತವಾಗಿದ್ದರೆ ಅಂತಹ ಜಾತಕ ಉಳ್ಳವರು ನೆಮ್ಮದಿಯ ಜೊತೆ ಹೆಚ್ಚು ಹಣವನ್ನು ಹೊಂದುತ್ತಾರೆ.
ಜಾತಕದಲ್ಲಿ ಈ ಎಲ್ಲ ಯೋಗಗಳನ್ನು ಹೊಂದಿದವರು ಜೀವನದಲ್ಲಿ ಭೌತಿಕ ಸುಖದ ಜೊತೆಗೆ ಹೆಚ್ಚು ಧನ ಸಂಪಾದನೆಯನ್ನು ಹೊಂದುತ್ತಾರೆ.