ಅಳಿಯ ಅಭಿಮನ್ಯುವನ್ನು ಶ್ರೀಕೃಷ್ಣ ಯಾಕೆ ಉಳಿಸಿಕೊಳ್ಳಲಿಲ್ಲ?

By Suvarna News  |  First Published Aug 20, 2021, 3:22 PM IST

ಮಹಾಭಾರತದ ಮಹಾವೀರ ಅಭಿಮನ್ಯುವಿನ ಕತೆ ನಿಮಗೆ ಗೊತ್ತಿಲ್ಲದ್ದೇನಲ್ಲ. ಆದರೆ ಶ್ರೀಕೃಷ್ಣನಂಥ ಮಹಮಾನ್ವಿತ, ಎಲ್ಲವನ್ನೂ ಬಲ್ಲವನು ಇದ್ದರೂ ತನ್ನ ಅಳಿಯನಾದ ಅಭಿಮನ್ಯುವನ್ನು ಅವನು ಯಾಕೆ ಉಳಿಸಿಕೊಳ್ಳಲಿಲ್ಲ? ಇದೊಂದು ಯಕ್ಷಪ್ರಶ್ನೆ. ಅದಕ್ಕೆ ಉತ್ತರ ಇಲ್ಲಿದೆ.  
 


ಮಹಾಭಾರತದ ಅಭಿಮನ್ಯುವಿನ ಶೌರ್ಯ ಹಾಗೂ ಪರಾಕ್ರಮ ಯುಗ ಯುಗಗಳ ವರೆಗೂ ಚಿರಸ್ಥಾಯಿಯಾಗಿರುವಂಥದ್ದು. ಕುರುಕ್ಷೇತ್ರದಲ್ಲಿ ಚಕ್ರವ್ಯೂಹದಲ್ಲಿ ಅಭಿಮನ್ಯು ಸಾಯುವ ಗಳಿಗೆಯಲ್ಲಿ ಕರ್ಣ ಹೇಳಿದ್ದು ಕೂಡ ಇದೇ ಮಾತು- ಈ ಜಗತ್ತಲ್ಲಿ ವೀರಯೋಧ ಎಂದು ಯಾರಾದರೂ ಇದ್ದಲ್ಲಿ ಅದು ನೀನು ಮಾತ್ರವೇ ಆಗಿರಲು ಸಾಧ್ಯ, ನಾನೂ ಅಲ್ಲ ಹಾಗೂ ಅರ್ಜುನನೂ ಅಲ್ಲ ಎಂದಿದ್ದ ಕರ್ಣ. ಆದರೆ ಸಾಕ್ಷಾತ್ ಭಗವಂತ ಶ್ರೀಕೃಷ್ಣನೇ ಅಭಿಮನ್ಯವಿನ ಸೋದರಮಾವ ಆಗಿದ್ದರೂ ಸಹ ರಣರಂಗದಲ್ಲಿ ಅಭಿಮನ್ಯುವಿನ ಸಾವನ್ನು ತಪ್ಪಿಸಲು ಆಗಲಿಲ್ಲ. ಅಭಿಮನ್ಯು ಆತನ ಸ್ವಂತ ತಂಗಿಯ ಮಗನೇ ಆಗಿದ್ದ. ಅಷ್ಟು ಚಿಕ್ಕ ವಯಸ್ಸಿನಲ್ಲಿ ಅವನಿಗೆ ಸಾವು ಬರುವುದು ಎಂದು ಅವನಿಗೆ ತಿಳಿದಿತ್ತು. ಆದರೂ ಆತ ಅದನ್ನು ತಪ್ಪಿಸಲಿಲ್ಲ. ಅದಕ್ಕೆ ಹಲವು ಕಾರಣಗಳಿವೆ.

ಕಾರಣ ಒಂದು
ಕೌರವರ ಭಾವ, ದುರ್ಯೋಧನನ ತಂಗಿ ದುಶ್ಶಲೆಯ ಗಂಡ ಜಯದ್ರಥ ಹಿಂದೆ ಪಾಂಡವರು ವನವಾಸದಲ್ಲಿದ್ದಾಗ, ದ್ರೌಪದಿಯ ಮೈಮೇಲೆ ಕೈಹಾಕಲು ಹೋಗಿ, ಪಾಂಡವರಿಂಧ ಏಟು ತಿಂದು ಅವಮಾನಿತನಾಗಿರುತ್ತಾನೆ. ಆ ಅಪಮಾನಕ್ಕೆ ಪ್ರತೀಕಾರ ತೀರಿಸಲು ಆತ ಶಿವನ ಕುರಿತು ಘೋರ ತಪಸ್ಸು ಮಾಡುತ್ತಾನೆ. ಶಿವನನ್ನು ಮೆಚ್ಚಿಸಿ, ಆತನಿಂದ, ಪಾಂಡವರ ಸೇನೆಯನ್ನು ಒಂದು ದಿನದ ಮಟ್ಟಿಗೆ ಪೂರ್ಣವಾಗಿ ಸೋಲಿಸುವ ವರವನ್ನು ಪಡೆಯುತ್ತಾನೆ. ಮುಂದೆ ಕುರುಕ್ಷೇತ್ರ ಯುದ್ಧದಲ್ಲಿ, ಆ ಒಂದು ದಿನದ ಮಟ್ಟಿಗೆ ಪಾಂಡವರನ್ನು ಸೋಲಿಸಲು ಸಂಕಲ್ಪ ಮಾಡುತ್ತಾನೆ. ಅದೇ ದಿನ ಗುರು ದ್ರೋಣಾಚಾರ್ಯರು ಚಕ್ರವ್ಯೂಹ ರಚಿಸುತ್ತಾರೆ. ಅಂದು ಎಲ್ಲಿಯಾದರೂ ಅರ್ಜುನ ಮತ್ತು ಶ್ರೀಕೃಷ್ಣ ಅಲ್ಲೇ ಇದ್ದು, ಚಕ್ರವ್ಯೂಹದ ಒಳಗೆ ಹೋಗಬೇಕಾಗಿ ಬಂದಿದ್ದರೆ, ಶಿವನ ವರದಿಂದಾಗಿ ಅವರೂ ಸೋಲಬೇಕಾಗಿತ್ತು. ಹೀಗಾಗಿ ಶ್ರೀಕೃಷ್ಣ ಮತ್ತು ಅರ್ಜುನ ಅಲ್ಲಿ ಇಲ್ಲದಂತೆ, ಸಮಸಪ್ತಕರೆಂಬ ರಾಕ್ಷಸರೊಂದಿಗೆ ಹೋರಾಡುತ್ತಾ ಕುರುಕ್ಷೇತ್ರದಿಂದ ದೂರ ಹೋಗುವಂತೆ ಕೃಷ್ಣ ಮಾಡುತ್ತಾನೆ. ಅರ್ಜುನನ ಬದಲು ಚಕ್ರವ್ಯೂಹದ ಒಳಬಂದ ಅಭಿಮನ್ಯು, ಗೆಲ್ಲಲಾಗದೆ, ಶಿವನ ವರಕ್ಕೆ ಬಲಿಯಾಗಬೇಕಾಗುತ್ತದೆ.
 

Tap to resize

Latest Videos

ಕಾರಣ ಎರಡು
ಮಹಾಭಾರತದ ಒಂದು ಧರ್ಮಯುದ್ಧ. ಈ ಧರ್ಮಯುದ್ಧದಲ್ಲಿ ನಡೆದದ್ದು ದೇವಾಸುರರ ಕಾಳಗ. ಮಹಾಭಾರತದಲ್ಲಿ ಧರ್ಮದ ರಕ್ಷಣೆಗಾಗಿ ಹೇಗೆ ಭಗವಾನ್ ವಿಷ್ಣು ಶ್ರೀಕೃಷ್ಣನ ಅವತಾರ ದಲ್ಲಿ ಭೂಮಿಗೆ ಬಂದಿದ್ದ ಅದೇ ರೀತಿಯಲ್ಲಿ ಇನ್ನು ಹಲವಾರು ದೇವತೆಗಳು ಬೇರೆ ಬೇರೆ ಅವತಾರದಲ್ಲಿ ಬಂದಿದ್ದರು. ಯಮ ಧರ್ಮರಾಯನಾಗಿ, ವಾಯು ಭೀಮನಾಗಿ, ಇಂದ್ರ ಅರ್ಜುನನನಾಗಿ- ಹೀಗೆ. ಧರ್ಮ ಸಂಸ್ಥಾಪನೆಯ ಕಾರ್ಯದಲ್ಲಿ ಎಲ್ಲ ದೇವತೆಗಳು ಕೂಡ ಶ್ರೀಕೃಷ್ಣನಿಗೆ ಬೆನ್ನೆಲುಬಾಗಿ ಇರುತ್ತಾರೆ. ಆದಿಶೇಷ ಬಲರಾಮನಾಗಿರುತ್ತಾನೆ. ದೇವ ಮಾಯೆಯೆ ಕೃಷ್ಣನ ಸಹೋದರಿ ಸುಭದ್ರ ಆಗಿ ಜನ್ಮತಾಳಿರುತ್ತಾಳೆ. ಸುಭದ್ರೆಯ ಪುತ್ರನಾಗಿ ಜನಿಸುವವ ಕೂಡ ಓರ್ವ ದೇವತೆಯಾದ, ಚಂದ್ರದೇವನ ಪುತ್ರನಾದ ವರ್ಚಸ್ ಎಂಬವನು. ಆದರೆ ಚಂದ್ರದೇವನಿಗೆ ಪುತ್ರನನ್ನು ತುಂಬಾ ದಿನ ಬಿಟ್ಟಿರಲು ಸಾಧ್ಯವಿಲ್ಲ ಎಂಬಂತಹ ಪ್ರೀತಿ. ಚಂದ್ರದೇವ ಒಂದು ಶರತ್ತನ್ನು ಹಾಕುತ್ತಾನೆ. ಕೇವಲ ಹದಿನಾರು ವರ್ಷ ಮಾತ್ರ ಅವನನ್ನು ಬಿಟ್ಟಿರುತ್ತೇನೆ, ಅಷ್ಟರಲ್ಲಿ ಅವನು ನನ್ನ ಲೋಕಕ್ಕೆ ಹಿಂದಿರುಗಬೇಕು ಎಂದು. ಆಗ ಭಗವಾನ್ ವಿಷ್ಣು ಚಂದ್ರನ ಮಾತಿಗೆ ಒಪ್ಪಿಕೊಂಡು ಅಭಿಮನ್ಯುವಿನ ಅವತಾರದಲ್ಲಿ ಚಂದ್ರದೇವನ ಮಗನಿಗೆ ಕೇವಲ ಹದಿನಾರು ವರ್ಷ ಮಾತ್ರ ಆಯಸ್ಸು ನೀಡುತ್ತಾನೆ. ಹಾಗಾಗಿ ಅಭಿಮನ್ಯವಿನ ಸಾವಿನ ವಿಷಯ ತನಗೆ ಮೊದಲೇ ತಿಳಿದಿದ್ದರೂ ಕೂಡ ಶ್ರೀಕೃಷ್ಣ ಮಧ್ಯ ಪ್ರವೇಶಿಸಲಿಲ್ಲ.

ಮಹಾಭಾರತದಲ್ಲಿ ಕೃಷ್ಣನ 80 ಮಕ್ಕಳು ಏನಾದವು?

ಕಾರಣ ಮೂರು
ಮಹಾಭಾರತದಲ್ಲಿ ಯುದ್ಧವನ್ನು ಗೆಲ್ಲಿಸುವ ಹೊಣೆ ಮಧ್ಯಮ ಪಾಂಡವ ಎನಿಸಿಕೊಂಡ ಅರ್ಜುನನ ಮೇಲೆ ಇರುತ್ತದೆ. ಇಂಥ ಅರ್ಜುನ ಮನಸ್ಫೂರ್ತಿಯಾಗಿ ಯುದ್ಧ ಮಾಡಲು ಸಾಧ್ಯವಾಗುವುದಿಲ್ಲ. ಯಾಕೆಂದರೆ ತನ್ನ ಗುರು ದ್ರೋಣ, ಅಜ್ಜ ಭೀಷ್ಮಾಚಾರ್ಯ ಮುಂತಾದವರು  ಶತ್ರುಪಕ್ಷದಲ್ಲಿ ಇರುವುದರಿಂದ. ಇಂಥ ಅರ್ಜುನನಲ್ಲಿ ದ್ವೇಷಾಗ್ನಿ ಪ್ರಜ್ವಲಿಸುವಂತೆ ಮಾಡಿ, ಶತ್ರುಗಳ ನಾಶವನ್ನು ತ್ವರಿತ ಮಾಡುವ ಅಗತ್ಯ ಕೃಷ್ಣನಿಗೆ ಇರುತ್ತದೆ. ಈ ಕಾರಣಕ್ಕಾಗಿ ಯುದ್ಧದ ವೇಗವನ್ನು ಹೆಚ್ಚಿಸಲು ಶ್ರೀಕೃಷ್ಣ ಅಭಿಮನ್ಯುವಿನ ಸಾವನ್ನು ತಡೆಯುವುದಿಲ್ಲ.

ಪಾಂಡವರ ಕಡೆ ನಿಂತು ಹೋರಾಡಿದ ಏಕೈಕ ಕೌರವನೀತ

ಕಾರಣ ನಾಲ್ಕು
ಅಭಿಮನ್ಯುವಿನ ಸಾವಿನ ಕುರಿತಾಗಿ ಇನ್ನೊಂದು ಕಥೆ ಕೂಡ ಇದೆ. ಅಭಿಮನ್ಯು ಅವನ ಹಿಂದಿನ ಜನ್ಮದಲ್ಲಿ ಒಬ್ಬ ಅಸುರನಾಗಿರುತ್ತಾನೆ. ಕೃಷ್ಣನ ಸೋದರ ಮಾವ ಕಂಸನ ಸೇವಕನಾಗಿ ಅವಿಕಾಸುರ ಎಂಬ ಹೆಸರಿನಲ್ಲಿ ಜನಿಸಿರುತ್ತಾನೆ. ಕಂಸನನ್ನು ಸಂಹಾರ ಮಾಡಿದ ಕೃಷ್ಣನ ಮೇಲೆ ಸೇಡು ತೀರಿಸಿಕೊಳ್ಳಬೇಕು ಎಂದುಕೊಂಡಿರುತ್ತಾನೆ ಅವೀಕಾಸುರ. ಕೃಷ್ಣ ಇದನ್ನೆಲ್ಲ ಮೊದಲೇ ತಿಳಿದು ಅವಿಕಾಸುರನನ್ನು ಒಂದು ಹುಳುವನ್ನಾಗಿಸಿ ಬಂಧಿಸಿಡುತ್ತಾನೆ. ಸುಭದ್ರ ಹಾಗೂ ಅರ್ಜುನರ ವಿವಾಹವಾದ ಸಂದರ್ಭದಲ್ಲಿ ಹುಳುವಿನ ರೂಪದಲ್ಲಿದ್ದ ಅಸುರ ಬಿಡುಗಡೆ ಹೊಂದಿ ಸುಭದ್ರೆಯ ಮಡಿಲು ಸೇರುತ್ತಾನೆ. ಅದೇ ಸಮಯದಲ್ಲಿ ಅರ್ಜುನ ಹೇಳುವ ಚಕ್ರವ್ಯೂಹದ ಕಥೆಯನ್ನು ಈ ಅಸುರ ಸುಭದ್ರೆಯ ಹೊಟ್ಟೆಯಲ್ಲಿ ಇದ್ದುಕೊಂಡು ಕೇಳಿಕೊಳ್ಳುತ್ತಾನೆ. ಇದೇ ಕಾರಣಕ್ಕಾಗಿ ಚಕ್ರವ್ಯೂಹ ಭೇದಿಸುವ ಕಲೆಯನ್ನು ಕಲಿಯುತ್ತಾನೆ. ಆದರೆ ಹೊರಗೆ ಬರುವುದು ಗೊತ್ತಿರುವುದಿಲ್ಲ. ಮುಂದೆ ಅಭಿಮನ್ಯು ಮಾವ ಶ್ರೀಕೃಷ್ಣನಿಂದಲೇ ಯುದ್ಧವಿದ್ಯೆಗಳನ್ನೆಲ್ಲ ಕಲಿಯುತ್ತಾನೆ. ಆದರೆ ಅವನಲ್ಲಿ ಇರುವ ಅಸುರ ಗುಣ ಹೊರಬಂದರೆ ಇಡೀ ಜಗತ್ತಿಗೆ ಮಾರಕ ಎಂಬುದನ್ನು ಅರಿತ ಶ್ರೀ ಕೃಷ್ಣ, ರಣರಂಗದಲ್ಲಿ ಅಭಿಮನ್ಯುವಿನ ಮರಣವಾಗುವುದನ್ನು ದಿವ್ಯದೃಷ್ಟಿಯಿಂದ ತಿಳಿದಿದ್ದರೂ ತಡೆಯಲು ಹೋಗಲಿಲ್ಲ. 

ಶ್ರೀ ಕೃಷ್ಣ ಲೀಲೆ ಹಾಗೂ ಅದರ ಮಹತ್ವ

click me!