ನೀವು ನಿಮ್ಮ ಮಗುವಿಗೆ Sನಿಂದ ಪ್ರಾರಂಭವಾಗುವ ವಿಶಿಷ್ಟವಾದ ಹೆಸರನ್ನು ಹುಡುಕುತ್ತಿದ್ದೀರಾದರೆ ಇಲ್ಲಿವೆ ಹೊಸತಾದ, ಅರ್ಥಬದ್ಧ ಹೆಸರುಗಳು..
ಯಾವುದೇ ದಂಪತಿಗೆ ಮಗು ಹೊಟ್ಟೆಯಲ್ಲಿದೆ ಎಂದು ತಿಳಿದಾಗಿನಿಂದಲೇ ಅದಕ್ಕೆ ಇಡುವ ಹೆಸರುಗಳ ಹುಡುಕಾಟ ಆರಂಭವಾಗುತ್ತದೆ. ಗಂಡಾದರೆ ಇಂಥ ಹೆಸರು, ಹೆಣ್ಣಾದರೆ ಇಂಥ ಹೆಸರೆಂದು ಹುಡುಕಿಟ್ಟುಕೊಂಡಿರುತ್ತಾರೆ. ಮತ್ತೆ ಕೆಲವರು, ಮಗು ಹುಟ್ಟಿದ ಮೇಲೆ ಜನ್ಮ ನಕ್ಷತ್ರಕ್ಕೆ ಹೊಂದುವ ಅಕ್ಷರದಿಂದಲೇ ಹೆಸರಿಡಬೇಕೆಂದು ಉತ್ಸುಕರಾಗಿರುತ್ತಾರೆ. ಆದರೆ ಹೆಸರನ್ನು ಆಯ್ಕೆ ಮಾಡುವುದು ಅಷ್ಟು ಸುಲಭವಲ್ಲ. ಹೆಸರು ವಿಶಿಷ್ಠವಾಗಿರುವ ಜೊತೆಗೆ ಕೇಳಲು ಹಿತವಾಗಿರಬೇಕು, ಕರೆಯಲು ಸುಲಭವಾಗಿರಬೇಕು. ಅರ್ಥವೂ ಚೆನ್ನಾಗಿರಬೇಕು. ಏಕೆಂದರೆ, ಅದು ಮಗುವಿನ ಜೀವನಪೂರ್ತಿ ಅದರ ಗುರುತಾಗಿ ಉಳಿಯುತ್ತದೆ.
ಹಿಂದೂ ಧರ್ಮದಲ್ಲಿ ಹೆಸರಿಡುವ ನಾಮಕರಣ ಸಮಾರಂಭವು ಹಿಂದೂಗಳಿಂದ ಆಚರಿಸಲಾಗುವ 16 ಸಂಸ್ಕಾರಗಳ ಪೈಕಿ ಐದನೆಯದು. ಅದನ್ನು ಮಗುವಿನ ಜನನದ ನಂತರ ಹತ್ತನೇ ಅಥವಾ ಹನ್ನೆರಡನೇ ದಿನ ಆಚರಿಸಬೇಕು. ಮಗುವಿನ ಹೆಸರು ಮಗುವಿನ ಸ್ವಭಾವ, ಭವಿಷ್ಯ ಎಲ್ಲದರ ಮೇಲೂ ಪರಿಣಾಮ ಬೀರುತ್ತದೆ ಎನ್ನುತ್ತದೆ ಜ್ಯೋತಿಷ್ಯ ಶಾಸ್ತ್ರ. ಹಿಂದೆಲ್ಲ ದೇವರ ಹೆಸರನ್ನು ಮಕ್ಕಳಿಗಿಡಲಾಗುತ್ತಿತ್ತು. ಆಗ ಮಗುವಿನ ಹೆಸರನ್ನು ಕರೆದಾಗಲೆಲ್ಲ ದೇವರ ನಾಮಸ್ಮರಣೆಯ ಪುಣ್ಯ ಫಲವೂ ಲಭಿಸುತ್ತಿತ್ತು. ನಮ್ಮ ಒಬ್ಬೊಬ್ಬ ದೇವರಿಗೆ ಸಾವಿರಾರು ಹೆಸರುಗಳಿವೆ. ಹಾಗಾಗಿ, ಈಗ ಹೊಸ ಹೆಸರು ಬೇಕೆಂದರೂ ಯಾವುದೇ ದೇವರ ಹೆಸರಿನಲ್ಲೇ ಹುಡುಕಿ ಇಡಬಹುದು. ಇದೇ ಕಾರಣಕ್ಕೆ ಹಲವಾರು ಜನರು ವಿಷ್ಣು ಸಹಸ್ರನಾಮ, ಲಲಿತಾ ಸಹಸ್ರನಾಮ ಮುಂತಾದ ಪುಸ್ತಕಗಳಲ್ಲಿ ಹೆಸರು ಹುಡುಕುತ್ತಾರೆ. ಇದಲ್ಲದೆ, ಮಧುರ ಅರ್ಥದ ಯಾವುದೇ ಹೆಸರೂ ಚೆನ್ನವೇ.
ನಿಮಗೆ ಹೊಸ ಹೆಸರನ್ನು ಹುಡುಕಲು ನಾವು ಸಹಾಯ ಮಾಡುತ್ತೇವೆ.
ಮಗುವಿಗೆ ನಾಮಕರಣ ಮಾಡುವಾಗ, ಪೋಷಕರು ನಿರ್ದಿಷ್ಟ ಅಕ್ಷರಕ್ಕೆ ಹೋಗುವುದು ಸಂಪ್ರದಾಯವಾಗಿದೆ. ಇಂದಿನ ಹೆಸರ ಸರಣಿಯಲ್ಲಿ 'ಎಸ್' ಅಕ್ಷರದಿಂದ ಆರಂಭವಾಗುವ ಗಂಡು ಮತ್ತು ಹೆಣ್ಣು ಮಕ್ಕಳ ಕೆಲ ವಿಶಿಷ್ಠ ಹಾಗೂ ಚೆಂದದ ಹೆಸರನ್ನು ನೋಡೋಣ.
ಎಸ್‌ನಿಂದ ಪ್ರಾರಂಭವಾಗುವ ಹೆಣ್ಣು ಮಗುವಿನ ಹೆಸರುಗಳು
ಸಂಜನಾ
ಅರ್ಥ: ಸೌಮ್ಯ
ಸಮೃದ್ಧಿ
ಅರ್ಥ: ಶ್ರೀಮಂತಿಕೆ
ಸುಮೈರಾ
ಅರ್ಥ: ಯಶಸ್ವಿ, ಆಚರಣೆ
ಸಿಯಾ
ಅರ್ಥ: ಸೀತಾ ದೇವಿ
ಸಾಚಿ
ಅರ್ಥ: ಸತ್ಯ
ಶಿವಾಂಶಿ
ಅರ್ಥ: ಶಿವನ ಒಂದು ಭಾಗ
ಸಯೇಶಾ
ಅರ್ಥ: ದೇವರ ನೆರಳು
ಸ್ತುತಿ
ಅರ್ಥ: ದೇವರನ್ನು ಸ್ಮರಿಸುವಿಕೆ
ಸ್ಮನ
ಅರ್ಥ: ದೈವಿಕ ಆತ್ಮ
ಸಾಗರಿಕಾ
ಅರ್ಥ: ಸಮುದ್ರಕ್ಕೆ ಸೇರಿದವಳು
ಶಿಚಿ
ಅರ್ಥ: ಹೊಳಪು
ಸನಾ
ಅರ್ಥ: ಪ್ರಾರ್ಥನೆ
ಸೌರಭಿ
ಅರ್ಥ: ಪರಿಮಳ
ಗಣೇಶ ಚತುರ್ಥಿ ದಿನ ಇದನ್ನು ಧರಿಸಿದ್ರೆ ನಿಮ್ಮೆಲ್ಲ ಕಷ್ಟಗಳು ಕರಗುತ್ವೆ..
ಎಸ್‌ನೊಂದಿಗೆ ಗಂಡು ಮಗುವಿನ ಹೆಸರುಗಳು
ಶ್ರೇಯಸ್
ಅರ್ಥ: ಶ್ರೇಷ್ಠ, ಮಂಗಳಕರ
ಶೌರ್ಯ
ಅರ್ಥ: ಶೌರ್ಯ, ಶಕ್ತಿ
ಶ್ವಂತ್
ಅರ್ಥ: ಶಾಂತ
ಶ್ರೀಯಾಂಶ್
ಅರ್ಥ: ಗಂಡು ಮಗುವಿಗೆ 'ಸಂಪತ್ತನ್ನು' ಸೂಚಿಸುತ್ತದೆ
ಶಿವಾಂಕ್
ಅರ್ಥ: ಶಿವನ ಗುರುತು, ಶಿವನ ಅಂಶ, ದೈವಸ್ವರೂಪಿ
ಸೂರ್ಯಾಂಶ್
ಅರ್ಥ: ಸೂರ್ಯನ ಭಾಗ, ಹೊಳಪುಳ್ಳವನು
ಶೇನ್
ಅರ್ಥ: ದೇವರ ಕೊಡುಗೆ
ಶಾಶ್ವತ್
ಅರ್ಥ: ಸ್ಥಿರ
ಸುಫ್ಯಾನ್
ಅರ್ಥ: ಹಳೆಯ ಅರೇಬಿಕ್ ಹೆಸರು
ಸಹಿಷ್ಣು
ಅರ್ಥ: ವಿಷ್ಣು, ತಾಳ್ಮೆಯುಳ್ಳವನು
ಸ್ಕಂದ
ಅರ್ಥ: ಕಾರ್ತಿಕೇಯ, ಬುದ್ಧಿವಂತ
ಸುಕೇತು
ಅರ್ಥ: ವಿಷ್ಣುವಿನ ಹೆಸರು, ಬಹಳ ಪ್ರಕಾಶಮಾನವಾದವನು
ಅವಾಸ್ತವ, ಅತಿ ರೊಮ್ಯಾಂಟಿಕ್ ಪ್ರೀತಿಗಾಗಿ ಹಂಬಲಿಸೋ ಮಂದಿ ಇವ್ರು
ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.