ಗ್ರಹಗಳ ರಾಶಿ ಬದಲಾವಣೆ ನಮ್ಮ ಜೀವನದ ಮೇಲೆ ಮಹತ್ವದ ಪರಿಣಾಮ ಬೀರುತ್ತದೆ. ಒಂದೊಂದು ಗ್ರಹ ರಾಶಿ ಬದಲಾವಣೆ ಮಾಡಿದಾಗ್ಲೂ ನಮ್ಮ ಜೀವನದಲ್ಲಿ ಕೆಲ ಏರಿಳಿತಗಳನ್ನು ನಾವು ಕಾಣ್ಬಹುದು. ಸದ್ಯದಲ್ಲಿಯೇ ತುಲಾ ರಾಶಿಯಲ್ಲಿ ಚತುರ್ಗ್ರಾಹಿ ಯೋಗ ಸಂಭವಿಸಲಿದ್ದು, ಇದ್ರಿಂದ ಮೂರು ರಾಶಿಯವರ ಅದೃಷ್ಟ ಬದಲಾಗಲಿದೆ.
ಗ್ರಹಗಳು ಹಾಗೂ ನಮ್ಮ ಜೀವನದ ಮಧ್ಯೆ ಗಾಢವಾದ ಸಂಬಂಧವಿದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಒಂದು ಗ್ರಹವು ರಾಶಿ ಬದಲಾಯಿಸಿದಾಗ ಅಥವಾ ಇನ್ನೊಂದು ಗ್ರಹದೊಂದಿಗೆ ಸಂವಹನ ನಡೆಸಿದಾಗ ಅದು ಎಲ್ಲಾ ರಾಶಿಗಳ ಮೇಲೆ ಪರಿಣಾಮ ಬೀರುತ್ತದೆ. ಜ್ಯೋತಿಷ್ಯದ ಲೆಕ್ಕಾಚಾರದ ಪ್ರಕಾರ ಬರುವ ಅಕ್ಟೋಬರ್ 27, 2022 ರಂದು ತುಲಾ ರಾಶಿಯಲ್ಲಿ ಚತುರ್ಗ್ರಾಹಿ ಯೋಗ ಬರಲಿದೆ. ಈ ಚತುರ್ಗ್ರಾಹಿ ಯೋಗವು ಸೂರ್ಯ, ಬುಧ, ಶುಕ್ರ ಮತ್ತು ಕೇತುಗಳ ಸಂಯೋಜನೆಯಿಂದ ಉಂಟಾಗಲಿದೆ. ಈ ಚತುರ್ಗ್ರಾಹಿ ಯೋಗದ ಪರಿಣಾಮವು ಎಲ್ಲಾ ರಾಶಿಗಳ ಮೇಲೆ ಆಗಲಿದೆ. ಆದರೆ ತುಲಾ ರಾಶಿಯಲ್ಲಿ ಸೂರ್ಯ, , ಬುಧ,ಶುಕ್ರ ಮತ್ತು ಕೇತು ಬಂದು ಸೇರುವುದ್ರಿಂದ 3 ರಾಶಿಗಳು ಅಪಾರ ಪ್ರಯೋಜನವನ್ನು ಪಡೆಯಲಿವೆ. ಚತುರ್ಗ್ರಾಹಿ ಯೋಗದಿಂದ ಯಾವ ರಾಶಿಗೆ ಹೆಚ್ಚು ಪ್ರಯೋಜನವಿದೆ ಎಂಬುದನ್ನು ನಾವಿಂದು ಹೇಳ್ತೇವೆ.
ಚತುರ್ಗ್ರಾಹಿ ಯೋಗ (Chaturgrahi Yoga) ದಿಂದ ಮೂರು ರಾಶಿಗೆ ಲಾಭ :
ಮಕರ ರಾಶಿ (Capricorn) : ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಚತುರ್ಗ್ರಾಹಿ ಯೋಗವು ಮಕರ ರಾಶಿಯವರಿಗೆ ಮಂಗಳಕರವಾಗಿರಲಿದೆ. ಈ ಯೋಗದ ಪ್ರಭಾವದಿಂದ ಒಳ್ಳೆಯ ದಿನಗಳು ಆರಂಭವಾಗಲಿವೆ. ವಾಸ್ತವವಾಗಿ ಈ ಯೋಗವು ಮಕರ ರಾಶಿಯವರ ಜಾತಕ (Horoscope) ದ 10 ನೇ ಮನೆಯಲ್ಲಿ ರೂಪುಗೊಳ್ಳಲಿದೆ. ಈ ಅವಧಿಯಲ್ಲಿ ಮಕರ ರಾಶಿಯವರಿಗೆ ಹೊಸ ಉದ್ಯೋಗ (Employment ) ಪ್ರಾಪ್ತಿಯಾಗುವ ಸಾಧ್ಯತೆಯಿದೆ. ಉದ್ಯೋಗಿಗಳಿಗೆ ಇನ್ಕ್ರಿಮೆಂಟ್ ಅಥವಾ ಬಡ್ತಿ (Promotion) ಯ ಸಾಧ್ಯತೆ ಹೆಚ್ಚು ಇರುತ್ತದೆ. ಇದರೊಂದಿಗೆ ವ್ಯಾಪಾರದಲ್ಲಿ ಹೆಚ್ಚು ಯಶಸ್ಸು ಸಿಗಲಿದೆ. ಹೆಚ್ಚಿನ ಹಣ ಗಳಿಸಲು ಅವಕಾಶವಿದೆ. ಒಟ್ಟಿನಲ್ಲಿ ತುಲಾ ರಾಶಿಯಲ್ಲಾಗುವ ಬದಲಾವಣೆ ಮಕರ ರಾಶಿಯವರಿಗೆ ದೊಡ್ಡ ಮಟ್ಟದಲ್ಲಿ ಶುಭ ಫಲ ನೀಡಲಿದೆ.
Krishna Janmashtami: ರಾಶಿಗನುಗುಣವಾಗಿ ಮಾಡಿ ದಾನ
ಕುಂಭ ರಾಶಿ (Aquarius) : ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಚತುರ್ಗ್ರಾಹಿ ಯೋಗದ ಪ್ರಭಾವದಿಂದ ಕುಂಭ ರಾಶಿಯವರಿಗೆ ಅದೃಷ್ಟ ಒಲಿದು ಬರಲಿದೆ. ಕುಂಭ ರಾಶಿಯವರ ಜಾತಕದಲ್ಲಿ ಚತುರ್ಗ್ರಾಹಿ ಯೋಗವು 9 ನೇ ಮನೆಯಲ್ಲಿ ರೂಪುಗೊಳ್ಳುತ್ತದೆ. ಇದನ್ನು ಅದೃಷ್ಟದ ಮನೆ ಮತ್ತು ವಿದೇಶಿ ಸ್ಥಳ ಎಂದು ಕರೆಯಲಾಗುತ್ತದೆ. ಚತುರ್ಗ್ರಾಹಿ ಯೋಗದ ಪ್ರಭಾವದಿಂದ ಕುಂಭ ರಾಶಿಯವರು ಮುಟ್ಟಿದ್ದೆಲ್ಲ ಚಿನ್ನವಾಗಲಿದೆ ಎಂದ್ರೆ ತಪ್ಪಾಗುವುದಿಲ್ಲ. ಈ ಸಮಯದಲ್ಲಿ ಪ್ರತಿಯೊಂದು ಕೆಲಸದಲ್ಲಿ ಅದೃಷ್ಟ ಒಲಿದು ಬರಲಿದೆ. ಅಲ್ಲದೆ, ದೀರ್ಘಕಾಲ ಬಾಕಿ ಇರುವ ಕೆಲಸಗಳು ಸರಾಗವಾಗಿ ಮುಗಿಯಲಿವೆ. ಕುಂಭ ರಾಶಿಯವರು ಈ ಸಮಯದಲ್ಲಿ ವ್ಯಾಪಾರಕ್ಕಾಗಿ ಪ್ರಯಾಣ ಬೆಳೆಸುವ ಸಾಧ್ಯತೆಯಿದೆ. ಈ ಪ್ರಯಾಣವು ಭವಿಷ್ಯಕ್ಕೆ ಪ್ರಯೋಜನಕಾರಿಯಾಗಲಿದೆ ಎಂದು ಜ್ಯೋತಿಷ್ಯ ಶಾಸ್ತ್ರದಲ್ಲಿ ಹೇಳಲಾಗಿದೆ. ಕುಂಭ ರಾಶಿಯವರಿಗೆ ಚತುರ್ಗ್ರಾಹಿ ಯೋಗ ಸಂತೋಷ ತರಲಿದೆ.
ಕನಸಲ್ಲಿ ಹಣ ನೋಡಿದ್ರೆ, ನಿಜವಾಗ್ಲೂ ಶ್ರೀಮಂತರಾಗ್ತಾರ?
ಕನ್ಯಾ ರಾಶಿ (Virgo) : ಜ್ಯೋತಿಷ್ಯದ ಪ್ರಕಾರ, ಚತುರ್ಗ್ರಾಹಿ ಯೋಗವು ಕನ್ಯಾ ರಾಶಿಯವರಿಗೆ ಪ್ರಯೋಜನಕಾರಿ ಎಂದು ಹೇಳಬಹುದು. ಕನ್ಯಾ ರಾಶಿ ಜಾತಕದ ಎರಡನೇ ಮನೆಯಲ್ಲಿ ಚತುರ್ಗ್ರಾಹಿ ಯೋಗವು ರೂಪುಗೊಳ್ಳಲಿದೆ. ಜ್ಯೋತಿಷಿಗಳು ಜಾತಕದ ಎರಡನೇ ಮನೆಯನ್ನು ಮಾತು ಮತ್ತು ಹಣ ಎಂದು ಪರಿಗಣಿಸುತ್ತಾರೆ. ಕನ್ಯಾ ರಾಶಿಯವರಿಗೆ ಚತುರ್ಗ್ರಾಹಿ ಯೋಗದ ಪ್ರಭಾವದಿಂದ ಹಠಾತ್ ಧನಲಾಭ ಉಂಟಾಗುವ ಸಾಧ್ಯತೆಯಿದೆ. ಇಷ್ಟು ದಿನಗಳ ಕಾಲ ಎಲ್ಲೋ ಸಿಕ್ಕಿಹಾಕಿ ಕೊಂಡಿದ್ದ ಹಣ ಕೂಡ ಈ ಸಂದರ್ಭದಲ್ಲಿ ವಾಪಸ್ ಸಿಗುವ ಸಾಧ್ಯತೆ ಹೆಚ್ಚಿದೆ. ಇದರೊಂದಿಗೆ ವ್ಯಾಪಾರದಲ್ಲಿ ಉತ್ತಮ ಧನ ಲಾಭವನ್ನು ಕನ್ಯಾ ರಾಶಿಯವರು ಪಡೆಯಲಿದ್ದಾರೆ. ಇದಲ್ಲದೆ ಚತುರ್ಗ್ರಾಹಿ ಯೋಗದಿಂದಾಗಿ ಕನ್ಯಾ ರಾಶಿಯವರ ವೃತ್ತಿ ಜೀವನದಲ್ಲಿ ಸಕಾರಾತ್ಮಕ ಬದಲಾವಣೆಗಳು ಕಂಡುಬರುತ್ತವೆ. ಒಟ್ಟಿನಲ್ಲಿ ಚತುರ್ಗ್ರಾಹಿ ಯೋಗ, ಕನ್ಯಾ ರಾಶಿಯವರ ಬಾಳಲ್ಲಿ ಹೊಸ ಬೆಳಕನ್ನು ತರಲಿದೆ.