ಜೀವನ ಸಂಗಾತಿ ಹೇಗಿರಬೇಕು? ವೃಷಭ ರಾಶಿಯವರ ಅಪೇಕ್ಷೆ ಹೀಗಿರುತ್ತೆ...

By Suvarna News  |  First Published Sep 20, 2021, 6:51 PM IST

ಪ್ರತಿಯೊಂದು ಜನ್ಮರಾಶಿಗೂ ತಮ್ಮ ಭಾವಿ ಸಂಗಾತಿ ಹೀಗೇ ಇರಬೇಕು ಎಂಬ ನಿರೀಕ್ಷೆ ಇರುತ್ತದೆ. ಹಾಗೇ ವೃಷಭ ರಾಶಿಯವರಿಗೆ ತಮ್ಮ ಜೀವನ ಸಂಗಾತಿ ಹೇಗಿರಬೇಕು ಎಂಬ ಇಷ್ಟ, ಇಲ್ಲಿ ತಿಳಿಯಿರಿ.


ವೃಷಭ ರಾಶಿಯವರು ಹಠಮಾರಿ, ಮೂಡಿ, ಆಕ್ರಮಣಕಾರಿ ಮತ್ತು ಬುದ್ಧಿವಂತ ಜನರು. ಅವರು ಐಷಾರಾಮಿ ವ್ಯವಸ್ಥೆ ಸವಲತ್ತುಗಳನ್ನು ಬದುಕನ್ನು ಪ್ರೀತಿಸುತ್ತಾರೆ. ದುಬಾರಿ ವಸ್ತುಗಳ ಮೇಲಿನ ಅವರ ಪ್ರೀತಿಯಿಂದಾಗಿ ಹೆಚ್ಚು ವೆಚ್ಚ ಮಾಡಲೂ ಬಹುದು. ಆದರೆ ಅವರು ತಮ್ಮ ಕೆಲಸಗಳ ಕಡೆಗೆ ನಂಬಲಾಗದಷ್ಟು ಸಮರ್ಪಿತ, ಬದ್ಧತೆಯುಳ್ಳ ಮತ್ತು ಕಷ್ಟಪಟ್ಟು ಕೆಲಸ ಮಾಡುವ ಜನರು. ಐಷಾರಾಮಿ ಜೀವನವನ್ನು ಪಡೆಯಲು ಹಗಲು ರಾತ್ರಿ ಕೆಲಸ ಮಾಡಲು ಸಿದ್ಧರಿರುತ್ತಾರೆ.
ಇವರು ಏನೇ ಮಾಡಿದರೂ ಇವರಿಗೆ ಪರಿಪೂರ್ಣತೆ ಹೊರತು ಬೇರೇನೂ ಬೇಡ. ಅವರು ನಂಬಲಾಗದಷ್ಟು ಹಠಮಾರಿ ಮತ್ತು ತೀವ್ರ ಮನಸ್ಸಿನ ಜನರು. ಸಂಬಂಧಗಳ ವಿಚಾರಕ್ಕೆ ಬಂದಾಗ, ಇವರು ವಿಶ್ವಾಸಾರ್ಹರಾಗಿರುತ್ತಾರೆ ಮತ್ತು ವಿಶ್ವಾಸಾರ್ಹ ಪಾಲುದಾರರನ್ನು ಬಯಸುತ್ತಾರೆ. ತಾವು ಬಯಸಿದ್ದನ್ನು ಪಡೆಯಲು ಸಾಕಷ್ಟು ಹೋರಾಟ ಮಾಡುತ್ತಾರೆ. ಇವರ ಜೀವನ ಸಂಗಾತಿ ಹೇಗಿರಬೇಕು ಎಂದು ಬಯಸುತ್ತಾರೆ ಎಂದು ನೋಡಿ...

ತಾಳ್ಮೆಯುಳ್ಳವರು
ವೃಷಭ ರಾಶಿಯವರು ಯಾರನ್ನಾದರೂ ಪ್ರೀತಿಸಲು ಮತ್ತು ಅವರನ್ನು ಪೂರ್ಣ ಹೃದಯದಿಂದ ನಂಬಲು ತಮ್ಮದೇ ಆದ ಸಮಯವನ್ನು ತೆಗೆದುಕೊಳ್ಳುತ್ತಾರೆ. ಅಂದರೆ ಅವರ ಜೀವನ ಸಂಗಾತಿಯು ಇವರಿಗಾಗಿ ಕಾಯುವಷ್ಟು ತಾಳ್ಮೆಯನ್ನು ಹೊಂದಿರಬೇಕು ಮತ್ತು ಅವರನ್ನು ಸಂಬಂಧಕ್ಕೆ ಒತ್ತಾಯಿಸಬಾರದು. ಇವರಲ್ಲಿ ಸಂಬಂಧಗಳ ಬಗ್ಗೆ ತಮ್ಮದೇ ಯೋಚನೆಗಳಿರುತ್ತವೆ. ಈ ಚಿಂತನೆಗಳು ನಿಖರವಾಗಿ ಪ್ರೂವ್ ಆಗುವಷ್ಟು ಕಾಲ ಇವರು ದುಡುಕುವುದಿಲ್ಲ. 

Tap to resize

Latest Videos

ನೇರತೆ
ವೃಷಭ ರಾಶಿಯವರಿಗೆ ವಿಷಯಗಳನ್ನು ವಿಚಾರಗಳನ್ನು ಸಿಹಿಯಾಗಿ ಸಕ್ಕರೆಯಂತೆ ಹೇಳುವುದು ಹೇಗೆ ಎಂದು ತಿಳಿದಿಲ್ಲ. ಇವರು ಪ್ರಾಮಾಣಿಕವಾಗಿ, ಮೊಂಡುತನದಿಂದ ಮತ್ತು ನೇರವಾಗಿ ಮಾತಾಡುತ್ತಾರೆ ಮತ್ತು ತಮ್ಮ ಜೀವನ ಸಂಗಾತಿಯಿಂದ ಅದನ್ನೇ ನಿರೀಕ್ಷಿಸುತ್ತಾರೆ. ಅವರ ಭಾವಿ ಸಂಗಾತಿ ಡಿಪ್ಲೊಮ್ಯಾಟಿಕ್ ಆಗಿರುವುದರನ್ನು ಇಷ್ಟಪಡುವುದಿಲ್ಲ. ಮತ್ತು ಅವರಂತೆ ಪ್ರಾಮಾಣಿಕ ಮತ್ತು ಸತ್ಯವಂತರಾಗಿರಬೇಕು ಎಂದು ಬಯಸುತ್ತಾರೆ. ಜೀವನ ಸಂಗಾತಿ ತಮ್ಮಿಂದ ಕದ್ದು ಹಣಕಾಸು ಕೂಡಿಟ್ಟರೆ, ಶಾಪಿಂಗ್ ಮಾಡಿದರೆ ಇವರಿಗೆ ಸಿಟ್ಟು ಬರಬಹುದು. 

ಅಪಮೃತ್ಯು ಉಂಟಾಗದಂತೆ ಯಾವ ಜನ್ಮರಾಶಿಗೆ ಯಾವ ಪರಿಹಾರ?

ಶ್ರಮಜೀವಿ
ವೃಷಭ ರಾಶಿಯವರು ಐಷಾರಾಮಿಗಳನ್ನು ಪ್ರೀತಿಸುತ್ತಾರೆ ಮತ್ತು ಆ ಐಷಾರಾಮಿಯನ್ನು ಪಡೆಯಲು ಆ ಹೆಚ್ಚುವರಿ ಕೆಲಸದ ಸಮಯವನ್ನು ಹಾಕಲು ಹಿಂಜರಿಯುವುದಿಲ್ಲ. ಅವರ ಜೀವನ ಸಂಗಾತಿಯೂ ಹಾಗೆ ಕೆಲಸ ಮಾಡಲು ಬದ್ಧರಾಗಿರಬೇಕು ಮತ್ತು ಕನಿಷ್ಠ ಕೆಲಸ ಮಾಡುವವರಾಗಿರಬಾರದು ಎಂದು ಬಯಸುತ್ತಾರೆ. ಪರಿಶ್ರಮಿಗಳನ್ನು ಇಷ್ಟಪಡುತ್ತಾರೆ. ತಾವೂ ಪರಿಶ್ರಮಿ ಆಗಿರುವುದರಿಂದಲೇ ಹಾಗೆ.

ಅವಲಂಬಿತ
ವೃಷಭ ರಾಶಿಯವರು ನಂಬಲಾಗದಷ್ಟು ವಿಶ್ವಾಸಾರ್ಹರು; ಇವರನ್ನು ಖಂಡಿತವಾಗಿಯೂ ನಂಬಬಹುದು. ಅವರ ಜೀವನ ಸಂಗಾತಿಯೂ ಅವರಂತೆ ನಂಬಲರ್ಹ ಮತ್ತು ಅವಲಂಬಿತರಾಗಿರಬೇಕು ಮತ್ತು ಸಂಬಂಧಕ್ಕೆ ಸಮರ್ಪಿಸಬೇಕು ಎಂದು ಬಯಸುತ್ತಾರೆ. ಸಂಬಂಧಗಳಲ್ಲಿ ವಿಶ್ವಾಸಾರ್ಹತೆಯಯೇ ಪ್ರಮುಖ ಗುಣ ಎಂಬ ಭಾವನೆ ಇವರದು. ಹಾಗೇ ದಾಂಪತ್ಯದಲ್ಲೂ ಅದೇ ವಿಶ್ವಾಸಾರ್ಹತೆಯನ್ನೇ ಬಯಸುತ್ತಾರೆ.

ಮೇಷ ರಾಶಿಯವರಿಗೆ ಜೀವನದ ಸಂಗಾತಿ ಹೇಗಿದ್ದರೆ ಇಷ್ಟ?
ವಂಚನೆಯನ್ನು ಇಷ್ಟಪಡುವುದಿಲ್ಲ
ಯಾವುದೇ ಬಗೆಯ ವಂಚನೆಯನ್ನು ಇವರು ಇಷ್ಟಪಡುವುದಿಲ್ಲ. ಅಂದರೆ ತಮ್ಮ ಸಂಗಾತಿಗೆ ತಮಗೆ ತಿಳಿಸದೆ ಯಾವುದಾದರೂ ವ್ಯವಹಾರಗಳನ್ನು ಮಾಡಿದರೆ ಅಷ್ಟಾಗಿ ಇವರಿಗೆ ಇಷ್ಟವಾಗುವುದಿಲ್ಲ. ಹಾಗೇ ತಾವೂ ಕೂಡ ಇತರರಿಗೆ ವಂಚನೆ ಮಾಡಲು ಇಷ್ಟಪಡುವುದಿಲ್ಲ. ಮದುವೆಯ ವ್ಯವಹಾರದಲ್ಲಿ ಇವರೇನಾದರೂ ತಮಗೆ ಮಾತು ಕೊಟ್ಟಂತೆ ವರ್ತಿಸದೇ ಹೋದರೆ ಇವರಿಗೆ ಖಂಡಿತವಾಗಿಯೂ ಸಿಟ್ಟು ಮೂಡುತ್ತದೆ.

ಹಣಕಾಸು ನೇರ
ಇವರು ಹಣಕಾಸಿನ ವ್ಯವಹಾರದಲ್ಲೂ ನೇರಾನೇರ. ಒಂದು ಪೈಸೆ ನಾಳೆ ಕೊಡುತ್ತೇನೆ ಎಂದರೆ ಕೊಡದೇ ಇರುವುದಿಲ್ಲ. ಹಾಗೇ ಹತ್ತು ರೂಪಾಯಿ ಎಂದರೆ ಒಂಬತ್ತು ರೂಪಾಯಿ ಕೊಡುವವರೂ ಅಲ್ಲ. ಇತರರೂ ತಮ್ಮಹಾಗೆ ಹಣಕಾಸಿನ ಶಿಸ್ತು ಕಾಪಾಡಿಕೊಳ್ಳಬೇಕು ಎಂದು ಬಯಸುತ್ತಾರೆ. ತಮಗೆ ಬರಬೇಕಾದ್ದನ್ನು ವಸೂಲಿ ಮಾಡದೇ ಬಿಡುವುದಿಲ್ಲ. ದಾಂಪತ್ಯದಲ್ಲೂ ಹೀಗೆ ಹಣಕಾಸು ಸಂಬಂಧವನ್ನು ನೇರಾನೇರ ಇಟ್ಟುಕೊಳ್ಳಲು ಇಷ್ಟಪಡುತ್ತಾರೆ. 

ಈ ನಾಲ್ಕು ರಾಶಿಯವರು ಮಿತವ್ಯಯಿಗಳು..

click me!