ಮಕರ ಅಂದರೆ ಮೇಕೆ. ಮೇಕೆಯ ಹಾಗೆ ಸದಾ ಚಟುವಟಿಕೆಯಿಂದಿದ್ದರೂ ಕೂಲ್ ಆಗಿರುವ ಇವರ ಗುಣಸ್ವಭಾವಗಳು ಹಾಗೂ ತಮ್ಮ ಬಾಳಸಂಗಾತಿಯಲ್ಲಿ ಇವರು ಕಾಣಬಯಸುವ ಗುಣಗಳು ಈ ಕೆಳಗಿನಂತಿವೆ.
ಹನ್ನೆರಡು ರಾಶಿಚಕ್ರಗಳಲ್ಲಿ (Sun Signs) 10ನೇ ರಾಶಿಯಾದ ಮಕರ ರಾಶಿಯು (Capricorn) ಮೇಲಕ್ಕೆ ಹತ್ತುವ, ಮುಂದಕ್ಕೆ ಚಲಿಸುವ ಮೇಕೆ (Sheep)ಯ ಸಂಕೇತವನ್ನು ಹೊಂದಿದೆ. ಆದರೆ ಇವರು ಮೇಕೆಯ ಹಾಗೆ ಸಂಗಾತಿ(Companion)ಗೆ, ಕುಟುಂಬದವರಿಗೆ ಯಾವತ್ತೂ ಗುಮ್ಮುತ್ತಾ ಇರುವವರಲ್ಲ. ಜವಾಬ್ದಾರಿಗಳಿಗೆ ಸದಾ ಬದ್ಧರಾಗಿರುವ ಈ ರಾಶಿಯವರು ಜೀವನದ ಕೆಲಸದ ಭಾಗವನ್ನು ಪ್ರತಿನಿಧಿಸುತ್ತಾರೆ. ಆಗಾಗ ಶಾಂತವಾಗಿ, ಕೂಲ್ (Cool) ಆಗಿ ಕಾಣುವ ಈ ರಾಶಿಯವರು ನೋಡಲು ತಟಸ್ಥರಾಗಿ, ಶಾಂತ ಮತ್ತು ಸರಳವಾಗಿ ಇರುತ್ತಾರೆ. ಇವರು ಪ್ರಾಯೋಗಿಕತೆಗೆ ಹೆಚ್ಚಿನ ಪ್ರಾಶಸ್ತ್ಯ ನೀಡುತ್ತಾರೆ ಹೊರತು ಸೌಂದರ್ಯಕ್ಕೆ ಅಲ್ಲ. ಮಕರ ರಾಶಿಯವರು ಆತ್ಮವಿಶ್ವಾಸ ಹಾಗೂ ಉನ್ನತ ಗುರಿಯನ್ನು ಹೊಂದಿರುತ್ತಾರೆ. ತಮ್ಮ ಸಾಮರ್ಥ್ಯವನ್ನು (Capacity) ಇತರರು ಗೌರವಿಸಿದಾಗ ತೃಪ್ತರಾಗುತ್ತಾರೆ. ಇವರು ಅಪಾಯಗಳನ್ನು ಸ್ವೀಕರಿಸಲು ಹಿಂಜರಿಯುವುದಿಲ್ಲ ಆದರೆ ಅಜಾಗರೂಕರಾಗಿಯೂ ಇರುವುದಿಲ್ಲ. ಎಲ್ಲಾ ಕೆಲಸಗಳನ್ನು ಕಾರ್ಯಗತಗೊಳಿಸುವ ಮೊದಲು ಪೂರ್ವತಯಾರಿಯನ್ನೂ ಮಾಡುತ್ತಾರೆ. ಇತರರೊಂದಿಗೆ ಇವರ ಸಂಬಂಧಗಳು ಸಂಕೀರ್ಣವಾಗಿರಬಹುದು. ಸ್ವಾರ್ಥಿಗಳಾಗಿರಬಹುದು ಮತ್ತು ಸಮಾಜದಲ್ಲಿ ತಮ್ಮ ಸ್ಥಾನಮಾನವನ್ನು ಪಡೆದುಕೊಳ್ಳುವ ಅಪೇಕ್ಷೆಯನ್ನು ಹೊಂದಬಹುದು. ಇವರು ಶಾಂತವಾಗಿ, ಕೂಲ್ ಆಗಿ ಕಂಡರೂ, ಒಳಗೆ ತುಂಬಾ ಭಾವುಕರು. ಇವರು ಸ್ವಯಂಪ್ರೇರಣೆಯುಳ್ಳವರು. ಅಗತ್ಯ ಬಿದ್ದಾಗ ಅವಕಾಶಗಳನ್ನು ಹುಡುಕುವಲ್ಲಿ ಯಶಸ್ವಿಯಾಗುತ್ತಾರೆ.
ಪ್ರೇಮಿಗಳನ್ನು ಪರೀಕ್ಷಿಸುತ್ತಾರೆ
ಮಕರ ರಾಶಿಯ ಪ್ರೇಮಿಗಳು ಸಾಮಾನ್ಯವಾಗಿ ಪ್ರಣಯದ ಬಗ್ಗೆ ಗಂಭೀರವಾಗಿರುವುದರಿಂದ, ದಿಢೀರ್ ನಿರ್ಧಾರಗಳನ್ನು ತೆಗದುಕೊಳ್ಳದೇ ತಮ್ಮದೇ ಆದ ಸಮಯವನ್ನು ತೆಗೆದುಕೊಳ್ಳುತ್ತಾರೆ. ಸಂಬಂಧಗಳಲ್ಲಿ (Relationships) ಒಂದು ಹೆಜ್ಜೆ ಮುಂದೆ ಇಡಲು ಅವರದೇ ದಾರಿಯಲ್ಲಿ ಯೋಚಿಸುತ್ತಾರೆ. ಪ್ರೇಮಿಗಳನ್ನು ತಮಗೆ ಹೊಂದಿಕೊಳ್ಳುವವರೇ ಅಲ್ಲವೇ ಎಂಬುದನ್ನು ಪರೀಕ್ಷಿಸಿಯೇ ಅಂಗೀಕರಿಸುತ್ತಾರೆ. ಇವರು ಉತ್ತಮ ಸಂವಹನಕಾರರಲ್ಲದಿದ್ದರೂ ಇವರ ಕಾರ್ಯಗಳು ಹೆಚ್ಚು ಮಾತಾಡುವುದು. ಕ್ರಿಯೆಗಳ ಮೂಲಕ ತಮ್ಮ ಪ್ರೀತಿ, ವಾತ್ಸಲ್ಯವನ್ನು ವ್ಯಕ್ತಪಡಿಸುತ್ತಾರೆ. ಉಡುಗೊರೆಗಳನ್ನು ನೀಡುವ ಕಲೆಯಲ್ಲಿ ಶ್ರೇಷ್ಠರು ಮತ್ತು ಅದ್ಧೂರಿಯಾಗಿ ಖರ್ಚು ಮಾಡುವುದನ್ನು ತಪ್ಪಿಸಲಾಗುವುದಿಲ್ಲ. ಆದರೂ ತಮಗೆ ಸೂಕ್ತ ಸಂಗಾತಿಯನ್ನು ಕಂಡುಹಿಡಿಯುವುದು ತುಂಬಾ ಸುಲಭದ ಕೆಲಸವಲ್ಲ.
ಸ್ನೇಹಕ್ಕೆ ಸ್ನೇಹ (Friendship)
ಸ್ನೇಹಿತರಾಗಿ ಮಕರ ರಾಶಿಯವರು ಸತ್ಯವಂತರು. ಬೆಂಬಲ ಅಗತ್ಯವಿರುವ ಸ್ನೇಹಿತರಿಗೆ ಸಹಾಯ ಮಾಡಲು ಪ್ರಯತ್ನಿಸುತ್ತಾರೆ. ಕೆಲವೊಮ್ಮೆ ಬಾಳಸಂಗಾತಿ (life parnter) ಹಾಗೂ ಸ್ನೇಹಿತರ ನಡುವೆ ಆಯ್ಕೆಯ ಪ್ರಶ್ನೆ ಬಂದಾಗ, ಸ್ನೇಹಿತರನ್ನೇ ಆಯ್ದುಕೊಳ್ಳಬಹುದು. ಇವರು ಹೆಚ್ಚಿನ ಸ್ನೇಹಿತರನ್ನು ಹೊಂದಿಲ್ಲದಿರಬಹುದು ಆದರೆ ಇರುವ ಸ್ನೇಹಿತರನ್ನು ತುಂಬಾ ಹಚ್ಚಿಕೊಂಡಿರುತ್ತಾರೆ. ಆದರೆ ಅದನ್ನು ಅಭಿವ್ಯಕ್ತ (express) ಪಡಿಸುವುದಿಲ್ಲ. ಇದು ಕೆಲವೊಮ್ಮೆ ತಪ್ಪು ತಿಳುವಳಿಕೆಗೂ ಕಾರಣವಾಗಬಹುದು.
ಪರಿಪೂರ್ಣತೆ ಬಯಸುವ ಕನ್ಯಾ ರಾಶಿಯವರು ತಮ್ಮ ಬಾಳಸಂಗಾತಿಗಳಲ್ಲಿ ಏನಿಷ್ಟಪಡುತ್ತಾರೆ ಗೊತ್ತೇ?
ಆರೋಗ್ಯವಂತ ಸಂಗಾತಿ
ಮಕರ ರಾಶಿಯವರು ಪ್ರಮುಖ ಮತ್ತು ಸಣ್ಣ ಕಾಯಿಲೆಗಳ ವಿರುದ್ಧ ಉತ್ತಮ ಪ್ರತಿರೋಧ ಶಕ್ತಿಯನ್ನು ಹೊಂದಿರುತ್ತಾರೆ. ಆದ್ದರಿಂದ ವೃದ್ದಾಪ್ಯದಲ್ಲಿ ಉತ್ತಮ ಆರೋಗ್ಯವನ್ನು ಹೊಂದುತ್ತಾರೆ. ಇವರು ವಯಸ್ಸಾದಂತೆ ಬೆಳೆಯುತ್ತಾರೆ ಮತ್ತು ಆರೋಗ್ಯಯುತವಾಗಿ ಕಾಣಿಸಿಕೊಳ್ಳುತ್ತಾರೆ. ಸಂಗಾತಿಗಳನ್ನು ಚೆನ್ನಾಗಿ ನೋಡಿಕೊಳ್ಳುತ್ತಾರೆ. ಅವರ ಆರೋಗ್ಯದ ಬಗ್ಗೆ ಕಾಳಜಿ ವಹಿಸುತ್ತಾರೆ. ಸಂಗಾತಿ ಕೂಡ ಉತ್ತಮ ಆರೋಗ್ಯವಂತರಾಗಿರಲಿ ಎಂದು ಬಯಸುತ್ತಾರೆ. ಮದ್ಯಪಾನ (boozing) ಮತ್ತು ಜಂಕ್‌ಫುಡ್‌ಗಳಿಂದ (Junk foods) ತಮ್ಮನ್ನು ದೂರವಿಡಲು ಸಹಾಯ ಮಾಡುವ ಸಂಗಾತಿಗಳನ್ನು ಇಷ್ಟಪಡುತ್ತಾರೆ.
ವೃತ್ತಿಪರತೆ ಬೇಕು (Prefessionalism)
ಮಕರ ರಾಶಿಯಲ್ಲಿ ಜನಿಸಿದವರು ವೃತ್ತಿಯನ್ನು ಗಂಭೀರವಾಗಿ ಪರಿಗಣಿಸುತ್ತಾರೆ. ಅವರಿಗೆ ಏಣಿಯ ಕೆಳ ಹಂತದಿಂದ ಮೇಲಕ್ಕೆ ಏರಬೇಕೆನ್ನುವ ಗುರಿ ಇರುತ್ತದೆ. ಒಮ್ಮೆ ಯಶಸ್ಸಿನ ಏಣಿಯನ್ನು ಹತ್ತಲಾರಂಭಿಸಿದರೆ ಹಿಂತಿರುಗಿ ನೋಡುವುದು ವಿರಳ. ಅಗತ್ಯವಿರುವಷ್ಟು ಶ್ರಮಿಸುತ್ತಾರೆ. ಗುರಿಗಳನ್ನು ಸಾಧಿಸಲು ಕಷ್ಟಪಟ್ಟು ಕೆಲಸ ಮಾಡುತ್ತಾರೆ. ಈ ಗುರಿ ಸಾಧನೆಯ ಶ್ರಮದಲ್ಲಿ ತಮ್ಮ ಕುಟುಂಬ ಹಾಗೂ ಸಂಗಾತಿಗಳನ್ನು ಮರೆತೇಬಿಡಬಹುದು. ಇವರ ವಿಶ್ಲೇಷಣಾತ್ಮಕ ಮನಸ್ಸು ಮತ್ತು ನಿರ್ವಹಣಾ ಕೌಶಲ್ಯದಿಂದಾಗಿ ಹಣಕಾಸು (finance), ನಿರ್ವಹಣೆ (management), ಬ್ಯಾಂಕಿಂಗ್ (banking), ಕಾನೂನು (law) ಮತ್ತು ಆಡಳಿತವು ಇವರ ವೃತ್ತಿಜೀವನಕ್ಕೆ ಸೂಕ್ತ. ವಿಜ್ಞಾನ (Scien) ಮತ್ತು ಔಷಧ ಕ್ಷೇತ್ರದಲ್ಲಿ ವೃತ್ತಿಜೀವನ ಹೊಂದಿರುವ ಸಂಗಾತಿಗಳು ಇವರಿಗೆ ಹೊಂದಿಕೊಳ್ಳುತ್ತಾರೆ.
ಸಾಹಸಪ್ರಿಯರಾದ ಧನುರಾಶಿಯವರಿಗೆ ಎಂಥ ಜೀವನಸಂಗಾತಿ ಸೂಕ್ತ ?
ಸಂಗಾತಿಗಳು ಹೇಗಿರಬೇಕು?
ಮಕರ ರಾಶಿಯವರು ಸಂಗಾತಿಗಳಾಗಿ ತುಂಬ ಸೂಕ್ಷ್ಮವ್ಯಕ್ತಿಗಳು, ಸಂವೇದನಾಶೀಲರು, ತಮ್ಮ ವಲಯದಲ್ಲಿ ಸುರಕ್ಷಿತವಾಗಿರಲು ಬಯಸುವವರು. ಹಠಾತ್ ನಿರ್ಧಾರಗಳನ್ನು ತೆಗೆದುಕೊಳ್ಳದವರು, ಬುದ್ಧಿವಂತಿಕೆ, ಘನತೆ, ಜಾಗರೂಕತೆ, ಪ್ರಾಯೋಗಿಕತೆ, ಚಿಂತನೆ, ರಾಜತಾಂತ್ರಿಕ ಗುಣ, ಸಕಾರಾತ್ಮಕತೆ, ಮಹಾತ್ವಾಕಾಂಕ್ಷೆ ಹೊಂದಿದವರನ್ನು ಬಯಸುತ್ತಾರೆ. ಸಂಕೋಚ, ಅಸೂಯೆ (Jealous), ಸ್ವಾರ್ಥ (Selfish), ಅನುಮಾನ, ಅಧಿಕಾರತ್ವ, ಖಿನ್ನತೆ (Depression) ಮತ್ತು ಅಸಮಾಧಾನಕ್ಕೆ ಬೇಗನೆ ಗುರಿಯಾಗುವ ಗುಣಗಳನ್ನು ಹೊಂದಿದವರನ್ನು ಇಷ್ಟಪಡುವುದಿಲ್ಲ. ಸರಳ ವ್ಯಕ್ತಿತ್ವದವರು, ಗುರಿಯನ್ನು ಆಧರಿಸಿ ಆಕ್ರಮಣಕಾರಿಯಾಗಿ ಮುಂದುವರಿಯುವವರು, ಸುರಕ್ಷತೆ, ಶಕ್ತಿ ಮತ್ತು ಪ್ರಗತಿಗಾಗಿ ಹಂಬಲಿಸುವವರು, ಹೊಸ ವಿಷಯಗಳ ಬಗ್ಗೆ ಪ್ರಯೋಗ ಮಾಡುವವರು, ನ್ಯಾಯಯುತವಾಗಿರುವವರು, ಕೌಟುಂಬಿಕ ಮೌಲ್ಯಗಳ (Family values) ಕುರಿತು ತುಂಬಾ ಕಾಳಜಿ ವಹಿಸುವವರು ಇಷ್ಟ. ಇವರು ಆತ್ಮವಿಶ್ವಾಸವನ್ನು ಹೊಂದಿರುತ್ತಾರೆ. ಮಹತ್ವಾಕಾಂಕ್ಷೆಯುಳ್ಳ ವ್ಯಕ್ತಿಗಳು ಇಷ್ಟ. ತಮ್ಮ ಕುಟುಂಬದ ಸುರಕ್ಷಿತ ಭವಿಷ್ಯವನ್ನು ಬಯಸುವವರು ಇವರಿಗೆ ಬೇಕು. ಪ್ರಬುದ್ಧರು, ಸಂವೇದನಾಶೀಲರು ಮತ್ತು ಕಲ್ಪನೆಗಳಿಂದ ದೂರವಿರದವರನ್ನು ಕಾಣಲು ಬಯಸುತ್ತಾರೆ.