Latest Videos

ಚಾರ್ ಧಾಮ್ ಯಾತ್ರೆಯಿಂದ ಪಾಪ ನಾಶ; ಹಿಂದೂಗಳಿಗೆ ಇದು ಏಕೆ ಮಹತ್ವ?

By Sushma HegdeFirst Published Jul 6, 2023, 12:34 PM IST
Highlights

ಹಿಂದೂ ಧರ್ಮದಲ್ಲಿ ನಾಲ್ಕು ಧಾಮಗಳಿಗೆ ಬಹಳ ಪ್ರಾಮುಖ್ಯತೆ ಇದೆ. ಒಂದೊಂದು ಧಾಮಗಳಿಗೂ ವಿಭಿನ್ನವಾದ ಇತಿಹಾಸ (history) ವಿದೆ. ಈ ಕುರಿತು ವಿವರವಾದ ಮಾಹಿತಿ ಇಲ್ಲಿದೆ.

ಹಿಂದೂ ಧರ್ಮದಲ್ಲಿ ನಾಲ್ಕು ಧಾಮಗಳಿಗೆ ಬಹಳ ಪ್ರಾಮುಖ್ಯತೆ ಇದೆ. ಒಂದೊಂದು ಧಾಮಗಳಿಗೂ ವಿಭಿನ್ನವಾದ ಇತಿಹಾಸ (history) ವಿದೆ. ಈ ಕುರಿತು ವಿವರವಾದ ಮಾಹಿತಿ ಇಲ್ಲಿದೆ.

ನೀವು ಚಾರ್ ಧಾಮ್ ಯಾತ್ರೆಯ ಬಗ್ಗೆ ಕೇಳಿರಬೇಕು. ಹಿಂದೂ ಧರ್ಮದಲ್ಲಿ ಚಾರ್ ಧಾಮ್ ಯಾತ್ರೆ (Char Dham Yatra) ಗೆ ವಿಶೇಷ ಮಹತ್ವವಿದೆ. ಭಾರತದಲ್ಲಿ ನೆಲೆಗೊಂಡಿರುವ ನಾಲ್ಕು ಧಾಮಗಳು ನಾಲ್ಕು ದಿಕ್ಕುಗಳಲ್ಲಿವೆ. 

ಚಾರ್ ಧಾಮ್ ಈ ತೀರ್ಥಯಾತ್ರೆಯ ಪರಿಕಲ್ಪನೆಯು, ಗುರು ಆದಿ ಶಂಕರಾಚಾರ್ಯರಿಂದ ಹೊರ ಹೊಮ್ಮಿದೆ. ಹಾಗಾದರೆ ಹಿಂದೂ ಧರ್ಮದಲ್ಲಿ ಚಾರ್ ಧಾಮ್‌ನ ಮಹತ್ವ (Significance) ವನ್ನು ತಿಳಿಯೋಣ.

ಬದರಿನಾಥ್ ಧಾಮ

ಬದರಿನಾಥ ಧಾಮ (Badrinath Temple) ವು ವಿಷ್ಣುವಿಗೆ ಸಮರ್ಪಿತವಾಗಿದೆ. ಇದನ್ನು ರಾಮನು ಸ್ಥಾಪಿಸಿದನೆಂದು ನಂಬಲಾಗಿದೆ. ಬದರಿನಾಥ್ ಧಾಮದ ದ್ವಾರಗಳನ್ನು ಏಪ್ರಿಲ್  (April) ಕೊನೆಯ ತಿಂಗಳು ಅಥವಾ ಮೇ ಆರಂಭದಲ್ಲಿ ತೆರೆಯಲಾಗುತ್ತದೆ ಮತ್ತು ನವೆಂಬರ್ (november)  ಎರಡನೇ ವಾರದಲ್ಲಿ ಮುಚ್ಚಲಾಗುತ್ತದೆ.

ರಾಮೇಶ್ವರ ಧಾಮ

ರಾಮೇಶ್ವರ ಧಾಮ (Rameshwar Dham) ವು ತಮಿಳುನಾಡಿನ ರಾಮನಾಥಪುರಂ ಜಿಲ್ಲೆಯ ಸಮುದ್ರ ತೀರದಲ್ಲಿರುವ ಭೋಲೆನಾಥನಿಗೆ ಸಮರ್ಪಿತವಾಗಿದೆ. ಈ ಧಾಮವನ್ನು 12 ಜ್ಯೋತಿರ್ಲಿಂಗ (Jyotirlinga) ಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ.

ಪುರಿ ಧಾಮ

ಪುರಿ ಧಾಮ (Puri Dhama) ವು ಭಗವಾನ್ ವಿಷ್ಣುವಿನ ಅವತಾರವಾದ ಭಗವಾನ್ ಕೃಷ್ಣನಿಗೆ ಸಮರ್ಪಿತವಾಗಿದೆ. ಈ ಧಾಮವು ಒಡಿಶಾ (Odisha) ದ ಪುರಿ ನಗರದಲ್ಲಿದೆ. ಈ ದೇವಾಲಯದ ಪವಿತ್ರ ರಥಯಾತ್ರೆ ವಿಶ್ವವಿಖ್ಯಾತವಾಗಿದೆ. ಈ  ದೇವಾಲಯ (temple) ದ ಮುಖ್ಯ ದೇವತೆಗಳೆಂದರೆ ಜಗನ್ನಾಥ, ಅವನ ಅಣ್ಣ ಬಲಭದ್ರ ಮತ್ತು ಸಹೋದರಿ ಸುಭದ್ರ.

ಈ ದೇಶಗಳ ಮೂಢನಂಬಿಕೆ ನಿಜಕ್ಕೂ ವಿಚಿತ್ರ; ನೀವು ಕೇಳಿದ್ರೆ ಬೆರಗಾಗೋದು ಗ್ಯಾರಂಟಿ..!

 

ದ್ವಾರಕಾ ಧಾಮ

ದ್ವಾರಕಾ ಧಾಮ (Dwarka Dham) ವು ಭಗವಾನ್ ಕೃಷ್ಣನಿಗೆ ಸಮರ್ಪಿತವಾದ ಪವಿತ್ರ ನಿವಾಸವಾಗಿದೆ. ಇದು ಗುಜರಾತ್‌ (Gujarat) ನ ಪಶ್ಚಿಮ ತುದಿಯಲ್ಲಿದೆ. ತೀರ್ಥ ಪುರಾಣದ ಪ್ರಕಾರ, ದ್ವಾರಕಾ ಧಾಮವನ್ನು ಮೋಕ್ಷವನ್ನು ನೀಡುವ ಏಳು ಪುರಿಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ.

ಚಾರ್ ಧಾಮ್ ಯಾತ್ರೆಯನ್ನು ವೇದಗಳು ಮತ್ತು ಪುರಾಣಗಳಲ್ಲಿ ಬಹಳ ಮಂಗಳಕರವೆಂದು ಪರಿಗಣಿಸಲಾಗಿದೆ. ಚಾರ್ ಧಾಮಕ್ಕೆ ಭೇಟಿ ನೀಡುವ ವ್ಯಕ್ತಿಯು ಎಲ್ಲಾ ಪಾಪ (sin) ಗಳಿಂದ ಮುಕ್ತನಾಗುತ್ತಾನೆ ಎಂದು ನಂಬಲಾಗಿದೆ. ಇದರೊಂದಿಗೆ, ಜೀವನದಲ್ಲಿ ಎಲ್ಲಾ ಸಮಸ್ಯೆ (problem) ಗಳು ದೂರವಾಗುತ್ತವೆ. ಹಿಂದೂ ಧರ್ಮದಲ್ಲಿ ಎರಡು ರೀತಿಯ ಚಾರ್ ಧಾಮ್ ಯಾತ್ರೆಗಳಿವೆ.
ಒಂದು ಬದರಿನಾಥ, ಕೇದಾರನಾಥ, ಗಂಗೋತ್ರಿ ಮತ್ತು ಯಮುನೋತ್ರಿ ಮತ್ತು ಇನ್ನೊಂದು ಬದರಿನಾಥ್, ಜಗನ್ನಾಥ, ರಾಮೇಶ್ವರಂ ಮತ್ತು ದ್ವಾರಕಾ ಧಾಮ. ಈ ಎಲ್ಲಾ ಪವಿತ್ರ ಸ್ಥಳಗಳು ದೇಶದ ವಿವಿಧ ಭಾಗಗಳಲ್ಲಿ ನೆಲೆಗೊಂಡಿವೆ. ಆದ್ದರಿಂದ ಇದನ್ನು ಬಡಾ ಚಾರ್ ಧಾಮ್ ಯಾತ್ರೆ (char dham yatra) ಎಂದೂ ಕರೆಯುತ್ತಾರೆ.

ಈ ಮೂರು ರಾಶಿಯ ಹುಡುಗಿಯರು ಅದೃಷ್ಟ ಲಕ್ಷ್ಮಿಯರು..!

 

ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣ ನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.

click me!