
ಹಿಂದೂ ಧರ್ಮದಲ್ಲಿ ರಾಮಾಯಣ ಪವಿತ್ರ ಗ್ರಂಥವಾದರೆ, ಶ್ರೀರಾಮ ಇಷ್ಟ ದೇವನಾಗಿದ್ದಾನೆ. ಮರ್ಯಾದಾ ಪುರುಷೋತ್ತಮನೆಂದು ಕರೆಸಿಕೊಳ್ಳುವ ಶ್ರೀರಾಮಚಂದ್ರ ಪಿತೃವಾಕ್ಯ ಪರಿಪಾಲಕನಾಗಿದ್ದಾನೆ. ವಿಷ್ಣುವಿನ ಅವತಾರವಾಗಿರುವ ಶ್ರೀರಾಮನು ಭಕ್ತರ ಇಷ್ಟಾರ್ಥಗಳನ್ನು ಪೂರೈಸುವ ದೇವನಾಗಿದ್ದಾನೆ. ಶ್ರೀರಾಮನ ಕೃಪೆಗೆ ಪಾತ್ರರಾಗಲು ಶ್ರೀ ರಾಮರಕ್ಷಾ ಸ್ತೋತ್ರವನ್ನು ಪಠಣೆ ಮಾಡಿದರೆ ಸಾಕೆಂದು ಹಲವಾರು ಗ್ರಂಥಗಳಲ್ಲಿನ ಉಲ್ಲೇಖ ಮಾಡಲಾಗಿದೆ.
ಶ್ರೀರಾಮನ ವಿವಿಧ ನಾಮಗಳ ಸ್ಮರಣೆಯೇ ಶ್ರೀ ರಾಮರಕ್ಷಾ ಸ್ತೋತ್ರ ವಾಗಿದೆ. ಶ್ರೀ ರಾಮರಕ್ಷಾ ಸ್ತೋತ್ರ ಪಠಣ ಮಾಡುವವರಿಗೆ ಶ್ರೀ ರಾಮನ ರಕ್ಷಣೆ ಸಿಗುತ್ತದೆ ಎಂದು ಹೇಳಲಾಗುತ್ತದೆ. ಶ್ರೀ ರಾಮರಕ್ಷಾ ಸ್ತೋತ್ರವನ್ನು ನಿತ್ಯ ಪಠಣ ಮಾಡುವುದರಿಂದ ಜೀವನದಲ್ಲಿ ಸುಖ ಸಮೃದ್ಧಿ ಮತ್ತು ನೆಮ್ಮದಿ ನೆಲೆಸುತ್ತದೆ. ಅಷ್ಟೇ ಅಲ್ಲದೆ ಸಕಲ ಕಷ್ಟ ಕಾರ್ಪಣ್ಯಗಳು ದೂರವಾಗಿ, ಇಷ್ಟಾರ್ಥ ಸಿದ್ಧಿಸುತ್ತದೆ. ಹಾಗಾಗಿ ರಾಮರಕ್ಷಾ ಸ್ತೋತ್ರವನ್ನು ಪಠಿಸುವುದರಿಂದ ಆಗುವ ಲಾಭಗಳ ಬಗ್ಗೆ ತಿಳಿಯೋಣ ....
- ಧಾರ್ಮಿಕ ನಂಬಿಕೆಗಳ ಪ್ರಕಾರ ಮಹಾದೇವನು ಬುದ್ಧ ಕೌಶಿಕ ಋಷಿಗೆ ಕನಸಿನಲ್ಲಿ ದರ್ಶನ ನೀಡಿ ಈ ಸ್ತೋತ್ರವನ್ನು ತಿಳಿಸಿ, ಅದನ್ನು ಜಗತ್ತಿಗೇ ಸಾರುವಂತೆ ಆದೇಶಿಸಿರುತ್ತಾನೆ ಎಂದು ಹೇಳಲಾಗುತ್ತದೆ.
ಇದನ್ನು ಓದಿ: ಹುಡುಗಿಯರ ಹಸ್ತದಲ್ಲಿ ಈ ರೇಖೆಗಳಿದ್ದರೆ ಯಶಸ್ಸು ಖಚಿತ..!
- ಬುಧಕೌಶಿಕ ಋಷಿಗಳು ಮುಂಜಾನೆ ಈ ಸ್ತೋತ್ರವನ್ನು ರಚಿಸುತ್ತಾರೆ. ಪ್ರತಿನಿತ್ಯ ಇದರ ಪಠಣೆ ಮಾಡುವುದರಿಂದ ಶ್ರೀರಾಮನು ಎಲ್ಲ ವಿಧದಲ್ಲಿ ಭಕ್ತರ ರಕ್ಷಣೆ ಮಾಡುತ್ತಾನೆ ಎಂಬ ನಂಬಿಕೆ ಇದೆ.
- ಪ್ರತಿನಿತ್ಯ ಶ್ರೀ ರಾಮರಕ್ಷಾ ಸ್ತೋತ್ರವನ್ನು ಪಠಿಸುವುದರಿಂದ ವ್ಯಕ್ತಿಗೆ ದೀರ್ಘಾಯಸ್ಸು ಮತ್ತು ಸರ್ವ ಕಾರ್ಯಗಳಲ್ಲಿ ವಿಜಯ ಪ್ರಾಪ್ತವಾಗುತ್ತದೆ ಎಂದು ಹೇಳಲಾಗುತ್ತದೆ.
- ಪ್ರತಿನಿತ್ಯ ರಾಮರಕ್ಷಾ ಸ್ತೋತ್ರವನ್ನು ಪಠಿಸುವುದರಿಂದ ಹನುಮಂತನ ಕೃಪೆ ಸಹ ಪ್ರಾಪ್ತವಾಗುತ್ತದೆ. ಇದರಿಂದ ರಾಮ ಭಕ್ತರ ಮನೋಕಾಮನೆಗಳನ್ನು ಆಂಜನೇಯ ಸ್ವಾಮಿಯು ಈಡೇರಿಸುತ್ತಾನೆ ಎಂದು ಹೇಳಲಾಗುತ್ತದೆ.
- ಈ ಸ್ತೋತ್ರವನ್ನು ನಿತ್ಯವೂ ಪಠಿಸುವುದರಿಂದ ವ್ಯಕ್ತಿಗೆ ಯಾವುದೇ ರೀತಿಯ ಭಯವಿದ್ದರೂ ದೂರವಾಗುತ್ತದೆ. ಅಷ್ಟೇ ಅಲ್ಲದೆ ಸಕಲ ಸಂಕಷ್ಟಗಳು ದೂರವಾಗುತ್ತವೆ.
- ಯಾವ ಮನೆಯಲ್ಲಿ ಶ್ರೀ ರಾಮರಕ್ಷಾ ಸ್ತೋತ್ರವನ್ನು ಪ್ರತಿನಿತ್ಯ ಪಠಿಸುತ್ತಾರೋ, ಅಂತಹ ಮನೆಯಲ್ಲಿ ಸುಖ - ಸಮೃದ್ಧಿ ಸದಾ ನೆಲೆಸಿರುತ್ತದೆ.
- ಪ್ರತಿದಿನ ಈ ಸ್ತೋತ್ರವನ್ನು ಪಠಿಸುವುದರಿಂದ ವ್ಯಕ್ತಿಯಲ್ಲಿ ಸಕಾರಾತ್ಮಕ ಭಾವನೆಗಳು ಹೆಚ್ಚುತ್ತವೆ. ಅಷ್ಟೇ ಅಲ್ಲದೆ ಈ ಸ್ತೋತ್ರವನ್ನು ಪಠಿಸುವ ವ್ಯಕ್ತಿಗೆ ರಕ್ಷಾ ಕವಚವಾಗಿ ಸದಾ ಕಾಯುತ್ತದೆ.
ಇದನ್ನು ಓದಿ: ನಿಮ್ಮ ಪಾದಾಂಕಕ್ಕೆ ಹೊಂದುವ ಉದ್ಯೋಗ ಕ್ಷೇತ್ರಗಳಿವು..!
- ಈ ಸ್ತೋತ್ರವನ್ನು ನಿತ್ಯ ಪಠಣ ಮಾಡುವುದರಿಂದ ಕೆಟ್ಟದೃಷ್ಠಿ ಮತ್ತು ದುಷ್ಟಶಕ್ತಿಗಳಿಂದ ರಕ್ಷಣೆ ಸಿಗುತ್ತದೆ.
- ರಾಮರಕ್ಷಾ ಸ್ತೋತ್ರವನ್ನು ಕಾಗದದ ಮೇಲೆ ಕೆಂಪು ಅಕ್ಷರದಲ್ಲಿ ಬರೆದು, ಅದನ್ನು ತಾಯತ ಮಾಡಿಸಿಕೊಂಡು ಕಟ್ಟಿಕೊಳ್ಳುವುದರಿಂದ ಕೆಟ್ಟ ಶಕ್ತಿಗಳಿಂದ ಮತ್ತು ದೃಷ್ಟಿದೋಷಗಳಿಂದ ಪಾರಾಗಬಹುದಾಗಿದೆ.
- ಈ ಸ್ತೋತ್ರವನ್ನು ನಿತ್ಯವೂ ಪಡಿಸುವುದರಿಂದ ಅನೇಕ ಸಮಸ್ಯೆಗಳಿಂದ ಸುಲಭದಲ್ಲಿ ಪಾರಾಗಬಹುದಾಗಿದೆ. ಶ್ರೀ ರಾಮನ ಕೃಪೆಗೆ ಪಾತ್ರರಾಗಬಹುದು.
- ಈ ಸ್ತೋತ್ರವನ್ನು ಪಠಿಸುವುದರಿಂದ ಗ್ರಹದೋಷಗಳಿಂದ ಸಹ ಮುಕ್ತಿ ಪಡೆಯಬಹುದಾಗಿದೆ. ಅದರಲ್ಲೂ ಮುಖ್ಯವಾಗಿ ಮಂಗಳ ಗ್ರಹದ ಅಶುಭ ಪ್ರಭಾವಗಳಿಗೆ ಒಳಗಾದವರು ರಾಮರಕ್ಷಾ ಸ್ತೋತ್ರವನ್ನು ನಿತ್ಯವೂ ಪಠಿಸುವುದರಿಂದ ಕೆಟ್ಟ ಪ್ರಭಾವಗಳಿಂದ ರಕ್ಷಣೆಯನ್ನು ಪಡೆಯಬಹುದಾಗಿದೆ.
- ಈ ಸ್ತೋತ್ರವನ್ನು ಪಠಿಸುವುದರಿಂದ ವಾಹನ ಅಪಘಾತಗಳ ಭಯ ಇದ್ದಲ್ಲಿ ನಿವಾರಣೆಯಾಗುತ್ತದೆ. ಅಷ್ಟೇ ಅಲ್ಲದೆ ರಾಮರಕ್ಷಾ ಸ್ತೋತ್ರವನ್ನು ಕಾಗದದ ಮೇಲೆ ಕೆಂಪು ಅಕ್ಷರದಲ್ಲಿ ಬರೆದು, ಅದನ್ನು ತಾಯತ ಮಾಡಿಸಿ ವಾಹನಕ್ಕೆ ಕಟ್ಟುವುದರಿಂದ ಇದರಿಂದ ಅಪಘಾತಗಳ ಭಯ ಇರುವುದಿಲ್ಲ .
ಪಠಿಸುವ ವಿಧಾನ:
ಸಾಮಾನ್ಯವಾಗಿ ಶ್ರೀ ರಾಮರಕ್ಷಾ ಸ್ತೋತ್ರವನ್ನು ಯಾವ ವ್ಯಕ್ತಿ, ಯಾವ ಸಮಯದಲ್ಲಿ ಬೇಕಾದರೂ ಪಠಿಸಬಹುದು. ಇದರಿಂದ ಶ್ರೀ ರಾಮನ ಕೃಪೆ ಮತ್ತು ರಕ್ಷಣೆ ಸಿಗುತ್ತದೆ. ಅಷ್ಟೇ ಅಲ್ಲದೆ ಸ್ತೋತ್ರವು ಶೀಘ್ರವಾಗಿ ಫಲ ನೀಡಬೇಕು ಎಂದಿದ್ದರೆ ಅಂಥವರು ಜ್ಯೋತಿಷ್ಯ ಶಾಸ್ತ್ರದಲ್ಲಿ ತಿಳಿಸಿದಂತೆ ವಿಧಿ ವಿಧಾನಗಳಿಂದ ಶ್ರೀರಾಮನನ್ನು ಪೂಜಿಸಬೇಕು.
ಇದನ್ನು ಓದಿ: ಶರೀರದ ಭಾಗಗಳು ಅದುರುತ್ತಿದ್ದರೆ ಶುಭವೋ..? ಅಶುಭವೋ.. ?
ಗುರುವಾರ ಶ್ರೀರಾಮನನ್ನು ಭಕ್ತಿಯಿಂದ ಪೂಜಿಸಿ ಈ ಸ್ತೋತ್ರವನ್ನು ಹನ್ನೊಂದು ಬಾರಿ ಪಠಿಸಿದರೆ ಇಷ್ಟಾರ್ಥ ಸಿದ್ಧಿಸುತ್ತದೆ ಎಂದು ಹೇಳಲಾಗುತ್ತದೆ.