ಹುಡುಗಿಯರ ಹಸ್ತದಲ್ಲಿ ಈ ರೇಖೆಗಳಿದ್ದರೆ ಯಶಸ್ಸು ಖಚಿತ..!

By Suvarna News  |  First Published Aug 31, 2021, 4:04 PM IST

ಹಸ್ತ ಸಾಮುದ್ರಿಕಾ ಶಾಸ್ತ್ರದಲ್ಲಿ ಹಸ್ತದಲ್ಲಿರುವ ರೇಖೆಗಳು ಮತ್ತು ಚಿಹ್ನೆಗಳನ್ನು ನೋಡಿ ಭವಿಷ್ಯದ ಅನೇಕ ಅಂಶಗಳನ್ನು ತಿಳಿಸಲಾಗುತ್ತದೆ. ಇದರಲ್ಲಿ ಪುರುಷ ಮತ್ತು ಮಹಿಳೆಯರ ಹಸ್ತ ರೇಖೆಗಳ ವಿಚಾರಗಳಲ್ಲಿ ವ್ಯತ್ಯಾಸಗಳಿರುತ್ತವೆ. ಕೆಲವು ವಿಶೇಷ ಚಿಹ್ನೆಗಳು ಹುಡುಗಿಯರ ಹಸ್ತದಲ್ಲಿ ಇದ್ದರೆ ಅಂತಹವರು ಅದೃಷ್ಟವಂತರಾಗಿರುತ್ತಾರೆ ಎಂದು ಹೇಳಲಾಗುತ್ತದೆ. ಹಾಗಾದರೆ ಆ ಅದೃಷ್ಟ ಚಿಹ್ನೆಗಳು ಯಾವುವು ತಿಳಿಯೋಣ...


ಹಸ್ತ ಸಾಮುದ್ರಿಕ ಶಾಸ್ತ್ರವು ಭವಿಷ್ಯದ ವಿಚಾರಗಳನ್ನು ತಿಳಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಹಸ್ತ ಸಾಮುದ್ರಿಕಾ ಶಾಸ್ತ್ರವು ಜ್ಯೋತಿಷ್ಯ ಶಾಸ್ತ್ರದ ಒಂದು ಭಾಗವಾಗಿದೆ. ಇಲ್ಲಿ ಹಸ್ತದಲ್ಲಿರುವ ರೇಖೆಗಳನ್ನು ನೋಡಿ ವ್ಯಕ್ತಿಯ ಭವಿಷ್ಯದ ವಿಚಾರಗಳನ್ನು ತಿಳಿಸಲಾಗುತ್ತದೆ. ಹಸ್ತದಲ್ಲಿರುವ ವಿವಿಧ ರೀತಿಯ ರೇಖೆಗಳನ್ನು ನೋಡಿ ವ್ಯಕ್ತಿಯ ಬಗೆಗಿನ ಅದೃಷ್ಟದ ವಿಚಾರಗಳನ್ನು, ಸಂಪತ್ತು, ಧಾರ್ಮಿಕ ಆಸಕ್ತಿ ಮತ್ತು ಶ್ರದ್ಧೆ, ವೈವಾಹಿಕ ಜೀವನ ಹೀಗೆ ಅನೇಕ ಅಂಶಗಳನ್ನು ತಿಳಿದುಕೊಳ್ಳಲಾಗುತ್ತದೆ. 

ಹಸ್ತ ಸಾಮುದ್ರಿಕಾ ಶಾಸ್ತ್ರದಲ್ಲಿ ಹಸ್ತದಲ್ಲಿರುವ ರೇಖೆಯ ಸ್ಪಷ್ಟತೆ ಮತ್ತು ವಿವಿಧ ರೀತಿಯ ಚಿಹ್ನೆಗಳನ್ನು ನೋಡಿ ವ್ಯಕ್ತಿಯ ಭವಿಷ್ಯದ ಬಗ್ಗೆ ತಿಳಿಯಬಹುದು. ಅಷ್ಟೇ ಅಲ್ಲದೆ ಹುಡುಗಿಯರ ಹಸ್ತದಲ್ಲಿರುವ ರೇಖೆಗಳಿಂದ ಅವರು ಭವಿಷ್ಯದಲ್ಲಿ ಯಶಸ್ಸನ್ನು ಪಡೆಯುತ್ತಾರೋ ಇಲ್ಲವೋ ಎಂಬುದನ್ನು ಸಹ ತಿಳಿಯಬಹುದು. 

ಇದನ್ನು ಓದಿ: ನಿಮ್ಮ ಪಾದಾಂಕಕ್ಕೆ ಹೊಂದುವ ಉದ್ಯೋಗ ಕ್ಷೇತ್ರಗಳಿವು..!

ಹೌದು. ಕೆಲವು ರೇಖೆಗಳು ಮತ್ತು ಚಿಹ್ನೆಗಳನ್ನು ಹೊಂದಿರುವ ಹುಡುಗಿಯರು ಭಾಗ್ಯಶಾಲಿಗಳೆಂದು ಹೇಳಲಾಗುತ್ತದೆ. ಅಷ್ಟೇ ಅಲ್ಲದೆ ಜೀವನದಲ್ಲಿ ಯಶಸ್ಸನ್ನು ಪಡೆಯುತ್ತಾರೆ ಎಂದು ಸಹ ಹೇಳಲಾಗುತ್ತದೆ. ಅಂತಹ ಚಿಹ್ನೆಗಳನ್ನು ಹೊಂದಿದ್ದರೆ ಜೀವನದಲ್ಲಿ ಆರ್ಥಿಕ ಸಂಕಷ್ಟ ಉಂಟಾಗುವುದಿಲ್ಲ. ಲಕ್ಷ್ಮೀ ದೇವಿಯ ಕೃಪೆ ಇವರ ಮೇಲೆ ಸದಾ ಇರುತ್ತದೆ. ಹಸ್ತದಲ್ಲಿ ಈ ಚಿಹ್ನೆಗಳನ್ನು ಹೊಂದಿರುವ ಹುಡುಗಿಯರಿಗೆ ಸಮಾಜದಲ್ಲಿ ಗೌರವಾದರಗಳು ಸಿಗುತ್ತವೆ. ಅಷ್ಟೆ ಅಲ್ಲದೆ ಸಮಾಜದಲ್ಲಿ ಉತ್ತಮ ಹೆಸರನ್ನು ಸಹ ಸಂಪಾದಿಸುತ್ತಾರೆ. ಅಂತಹ ಚಿಹ್ನೆಗಳು ರೇಖೆಗಳು ಯಾವುದು? ಎಂಬುದನ್ನು ತಿಳಿಯೋಣ....

ಹಸ್ತದಲ್ಲಿ ಚಕ್ರದ ಚಿಹ್ನೆ ಇದ್ದರೆ ಅಂತಹವರು ಜೀವನದಲ್ಲಿ ಯಶಸ್ಸನ್ನು ಪಡೆಯುವುದು ಖಚಿತ ಮತ್ತು ಇಷ್ಟಪಟ್ಟದ್ದನ್ನು ಪಡೆಯುತ್ತಾರೆಂದು ಜ್ಯೋತಿಷ್ಯ ಶಾಸ್ತ್ರದಲ್ಲಿ  ಹೇಳಲಾಗುತ್ತದೆ. 
 

Tap to resize

Latest Videos



ಹುಡುಗಿಯರ ಹಸ್ತದಲ್ಲಿ ಎಲ್ಲ ಬೆರಳುಗಳ ತುದಿಯಲ್ಲಿ  ಚಕ್ರದ ಚಿಹ್ನೆ ಇದ್ದರೆ ಅಂತಹ ಹುಡುಗಿಯರ ಜೀವನದಲ್ಲಿ ಯಶಸ್ಸು ಕಟ್ಟಿಟ್ಟ ಬುತ್ತಿಯಾಗಿರುತ್ತದೆ ಎಂದು ಸಾಮುದ್ರಿಕಾ ಶಾಸ್ತ್ರ ಹೇಳುತ್ತದೆ. ಅಷ್ಟೇ ಅಲ್ಲದೆ ಇಷ್ಟಪಟ್ಟಿದ್ದು ಲಭಿಸುತ್ತದೆ. ಇಂತಹ ಹುಡುಗಿಯರು ಅತ್ಯಂತ ಬುದ್ಧಿವಂತರಾಗಿರುತ್ತಾರೆ. ಸಮಾಜದಲ್ಲಿ ಒಳ್ಳೆಯ ಹೆಸರನ್ನು ಗಳಿಸಿರುತ್ತಾರೆ. 

ಇದನ್ನು ಓದಿ: ಶರೀರದ ಭಾಗಗಳು ಅದುರುತ್ತಿದ್ದರೆ ಶುಭವೋ..? ಅಶುಭವೋ.. ?A

ಹಸ್ತ ಸಾಮುದ್ರಿಕಾ ಶಾಸ್ತ್ರದ ಪ್ರಕಾರ ಹುಡುಗಿಯರ ಹಸ್ತದಲ್ಲಿ ಮೀನಿನ ಚಿಹ್ನೆ ಅಥವಾ ಆಕಾರಗಳಿದ್ದರೆ ಅತ್ಯಂತ ಶುಭವೆಂದು ಹೇಳಲಾಗುತ್ತದೆ. ಯಾವ ಹುಡುಗಿಯ ಹಸ್ತದಲ್ಲಿ ಈ ರೀತಿಯ ಚಿಹ್ನೆ ಇರುತ್ತದೆಯೊ ಅಂತಹ ಹುಡುಗಿಯರು ಅತ್ಯಂತ ಅದೃಷ್ಟವಂತರೆಂದು ಹೇಳಲಾಗುತ್ತದೆ. ಅಷ್ಟೇ ಅಲ್ಲದೆ ಇಂತಹ ಹುಡುಗಿಯರ ಹತ್ತಿರದ ಸಂಬಂಧಿಗಳಿಗೆ ಸಹ ಇದರಿಂದ ಸಕಾರಾತ್ಮಕ ಪ್ರಭಾವಗಳು ಉಂಟಾಗುತ್ತವೆ. ಶ್ರೀ ಮಹಾವಿಷ್ಣುವಿನ ಅವತಾರಗಳಲ್ಲೊಂದಾದ ಮತ್ಸ್ಯ ಚಿಹ್ನೆಯು, ಹಸ್ತದ ಜೀವನ ರೇಖೆ ಮೇಲಿದ್ದರೆ ಅತ್ಯಂತ ಭಾಗ್ಯಶಾಲಿಗಳೆಂದು ಹೇಳಲಾಗುತ್ತದೆ. 

ಶ್ರೀ ಮಹಾಲಕ್ಷ್ಮೀಯು ಸದಾ ಕಮಲದ ಹೂವಿನ ಮೇಲೆ ಕುಳಿತಿರುವ ದೇವಿಯಾಗಿದ್ದಾಳೆ. ಹುಡುಗಿಯರ ಹಸ್ತದಲ್ಲಿ ಕಮಲದ ಚಿಹ್ನೆ ಇದ್ದಲ್ಲಿ ಅಂತಹವರು ಅತ್ಯಂತ ಭಾಗ್ಯವಂತರೆಂದು ಹೇಳಲಾಗುತ್ತದೆ. ಮಹಾ ಲಕ್ಷ್ಮೀಯ ಕೃಪೆ ಇವರ ಮೇಲೆ ಸದಾ ಇರುತ್ತದೆ. ಹಾಗಾಗಿ ಇವರಿಗೆ ಆರ್ಥಿಕ ಸಂಕಷ್ಟಗಳು ಎದುರಾಗುವುದಿಲ್ಲ. ಜೀವನ ರೇಖೆ, ಅದೃಷ್ಟ ರೇಖೆ, ಶನಿ ಪರ್ವತ, ಗುರು ಪರ್ವತ ಜೊತೆಗೆ ಶುಕ್ರ ಪರ್ವತದ ಮೇಲೆ ಕಮಲದ ಚಿಹ್ನೆ ಅಥವಾ ಆಕೃತಿ ಇದ್ದರೆ ಅಂಥವರು ಅತ್ಯಂತ ಅದೃಷ್ಟವಂತರೆಂಬ ಸಂಕೇತವನ್ನು ಸೂಚಿಸುತ್ತದೆ. 

ಇದನ್ನು ಓದಿ: ಈ ಮೂರು ರಾಶಿಯವರು ಲವ್ ಮ್ಯಾರೇಜೇ ಆಗೋದು, ನಿಮ್ಮದೂ ಸೇರಿದ್ಯಾ?

ಸ್ವಸ್ತಿಕ್ ಚಿಹ್ನೆಯಂತ ಆಕೃತಿಯನ್ನು ಹಸ್ತದಲ್ಲಿ ಹೊಂದಿರುವ ಹುಡುಗಿಯರು ಅತ್ಯಂತ ಭಾಗ್ಯಶಾಲಿಗಳು. ಮುಖ್ಯವಾಗಿ ಸದಾಚಾರಿಗಳು, ಸದ್ಗುಣಗಳನ್ನು ಉಳ್ಳವರು ಮತ್ತು ಧಾರ್ಮಿಕ ಕಾರ್ಯಗಳಲ್ಲಿ ಆಸಕ್ತಿ ಹೊಂದಿರುತ್ತಾರೆ. ಇಂತಹ ಹುಡುಗಿಯರು ಧಾರ್ಮಿಕ ಕಾರ್ಯಕ್ರಮಗಳಲ್ಲಿ ಅತ್ಯಂತ ಶ್ರದ್ಧೆಯಿಂದ ಸಕ್ರಿಯರಾಗಿರುತ್ತಾರೆ. ಹಾಗಾಗಿ ಧಾರ್ಮಿಕ ಕ್ಷೇತ್ರಗಳಲ್ಲಿ ಹೆಚ್ಚಿನ ಗೌರವಾದರಗಳು ದೊರಕುತ್ತವೆ. ಇಂತಹ ಹುಡುಗಿಯರು ತಮ್ಮ ಜತೆ ಜತೆಗೆ ಇತರರ ಜೀವನದ ಮೇಲೂ ಸಕಾರಾತ್ಮಕತೆಯನ್ನು ಬೀರುತ್ತಾರೆ. 

click me!