ಈ ಜನ್ಮರಾಶಿಯ ವ್ಯಕ್ತಿಗಳನ್ನು ನಂಬಿದರೆ ಎಂದಿಗೂ ಕೈ ಬಿಡೋಲ್ಲ!

By Suvarna News  |  First Published Aug 31, 2021, 5:07 PM IST

ಕೆಲವರನ್ನು ನೋಡಿದ ಕೂಡಲೇ ಇವರು ನಂಬಿಕೆಗೆ ಅರ್ಹರಾದ ವ್ಯಕ್ತಿಗಳು ಎಂದು ಹೇಳಿಬಿಡಬಹುದು. ಈ ಕೆಳಗಿನ ಐದು ಜನ್ಮರಾಶಿಗಳ ವ್ಯಕ್ತಿಗಳು ನೀವು ಸದಾ ನಂಬಿಕೆ ಇಡಬಹುದಾದ ವ್ಯಕ್ತಿಗಳು.


ನಂಬಿಕೆಯು ಆರೋಗ್ಯಕರ ಮತ್ತು ಸಂತೋಷಕರ ಸಂಬಂಧಗಳ ಬೆನ್ನೆಲುಬು. ಅದು ರೊಮ್ಯಾಂಟಿಕ್ ಆಗಿರಲಿ ಅಥವಾ ಇಲ್ಲದಿರಲಿ, ನಿಮ್ಮನ್ನು ಗೌರವಿಸುವ ಮತ್ತು ಪ್ರೀತಿಸುವ ವ್ಯಕ್ತಿಯನ್ನು ನೀವು ನಂಬಿದಾಗ, ನೀವು ಬಾಳಿನಲ್ಲಿ ಸಂತೋಷವಾಗಿರುತ್ತೀರಿ. ಇದು ದುರ್ಬಲತೆ ಅಲ್ಲ. ಇದು ನಿಜವಾದ ಮತ್ತು ನಿಕಟ ಸಂಪರ್ಕಗಳನ್ನು ಬೆಳೆಸುತ್ತದೆ. ನಂಬಿಕೆಯಿರುವವರ ಜೊತೆಗೆ ಪ್ರಯಾಣಿಸುವುದು ಗುರಿಯನ್ನು ತಲುಪುವ ಪ್ರಯಾಣವನ್ನು ಆನಂದಮಯ ಆಗಿಸುತ್ತದೆ. ಒಬ್ಬ ವ್ಯಕ್ತಿಯನ್ನು ನಂಬಬೇಕೋ ಬೇಡವೋ ಎಂಬ ಸಂದಿಗ್ಧತೆಯನ್ನು ನಮ್ಮಲ್ಲಿ ಅನೇಕರು ಪದೇ ಪದೇ ಅನುಭವಿಸುತ್ತಾರೆ. ಜ್ಯೋತಿಷ್ಯವು ಇದರಲ್ಲಿ ನಿಮಗೆ ಸಹಾಯ ಮಾಡುತ್ತದೆ. ಐದು ಅತ್ಯಂತ ನಂಬಲರ್ಹ ರಾಶಿಚಕ್ರ ಚಿಹ್ನೆಗಳ ನೋಟ ಇಲ್ಲಿದೆ.

ಕರ್ಕಾಟಕ ರಾಶಿ
ಕರ್ಕಾಟಕ ರಾಶಿಯವರು ತಮ್ಮ ಮೇಲೆ ನಂಬಿಕೆ ಇಟ್ಟ ಜನರಿಗೆ ಹೆಚ್ಚು ಕೊಡುವ, ಅವರಲ್ಲಿ ಭರವಸೆ ಇಡುವ ಪ್ರವೃತ್ತಿಯನ್ನು ಹೊಂದಿರುತ್ತಾರೆ ಮತ್ತು ಅವರಿಗೆ ಏನನ್ನಾದರೂ ಮಾಡುತ್ತಾರೆ. ಅವರಿಗೆ ಯಾವುದು ಸರಿ ಮತ್ತು ಯಾವುದು ತಪ್ಪು ಎಂಬ ಬಲವಾದ ನಿರ್ಧಾರವಿದೆ. ಆದ್ದರಿಂದ, ಅವರು ತಮ್ಮ ಜೀವನವನ್ನು ನೈತಿಕವಾಗಿ ಮತ್ತು ಪ್ರಾಮಾಣಿಕವಾಗಿ ಬದುಕಲು ಪ್ರಯತ್ನಿಸುತ್ತಾರೆ. ನಂಬಿಕೆ ಇದರಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಇವರು ಪ್ರಾಮಾಣಿಕವಾಗಿ ಪ್ರೀತಿಸುತ್ತಾರೆ ಮತ್ತು ನಂಬಿಕೆಯಿಟ್ಟಿರುವ ಕಾಳಜಿ ವಹಿಸುವ ಯಾರನ್ನೇ ಆದರೂ ಕುಟುಂಬದಂತೆ ನೋಡಿಕೊಳ್ಳುತ್ತಾರೆ.

Tap to resize

Latest Videos

ವೃಷಭ ರಾಶಿ 
ಈ ರಾಶಿಯವರು ಸ್ಥಿರ, ಆಧಾರ, ವಿಶ್ವಾಸಾರ್ಹ ಮತ್ತು ಪ್ರಾಯೋಗಿಕ ವ್ಯಕ್ತಿಗಳು. ಅವರು ಸಂಬಂಧ ಅಥವಾ ಸ್ನೇಹದಲ್ಲಿ ಬಂಡೆಯ ಹಾಗೆ. ವೃಷಭ ರಾಶಿಯವರನ್ನು ನಂಬುವಂತೆ ಮಾಡುವುದು ಅವರ ನಿಷ್ಠೆ. ಅವರು ಅತ್ಯಂತ ನಿಷ್ಠಾವಂತ ಮತ್ತು ಬದ್ಧ ರಾಶಿಚಕ್ರ ಚಿಹ್ನೆಗಳಲ್ಲಿ ಒಬ್ಬರು. ಅವರು ತಮಗೆ ಹತ್ತಿರವಿರುವ ಜನರಿಗಾಗಿ ಏನನ್ನೂ ಮಾಡುತ್ತಾರೆ. ಅಲ್ಲದೆ ಅವರು ಹಠಮಾರಿ, ಮತ್ತು ಅವರು ಪ್ರೀತಿಸುವ ಜನರ ವಿಚಾರದಲ್ಲಿ ಇದು ಸತ್ಯವಾಗಿದೆ. ಇವರು ಯಾರನ್ನು ಪ್ರೀತಿಸಬೇಕು ಮತ್ತು ತಮ್ಮ ಸಮಯವನ್ನು ಅವರ ಜೊತೆ ಕಳೆಯಬೇಕು ಎಂಬುದರ ಬಗ್ಗೆ ನಿರ್ದಿಷ್ಟವಾಗಿರುತ್ತಾರೆ.

ನಿಮ್ಮ‌ ಮನೆಯಲ್ಲಿ ಪೂಜಾ ಮಂದಿರ ಇಲ್ಲವೇ? ದೇವರ ಪೂಜೆಗೆ ಹೀಗೆ ಮಾಡಿ

ಕನ್ಯಾ ರಾಶಿ
ಕನ್ಯಾ ರಾಶಿಯವರು ಸದೃಢ, ವಿಶ್ವಾಸಾರ್ಹ ಮತ್ತು ಪ್ರಾಮಾಣಿಕರಾಗಿದ್ದು, ಇದು ಅವರನ್ನು ವಿಶ್ವಾಸಾರ್ಹತೆಯ ಪ್ರತಿರೂಪವಾಗಿಸುತ್ತದೆ. ಅವರದು ವಿವರ-ಆಧಾರಿತ ಮತ್ತು ಅತ್ಯಂತ ಸಮಯಪ್ರಜ್ಞೆಯ ವ್ಯಕ್ತಿತ್ವ. ನೀವು ಅವರಿಗೆ ಹೇಳುವ ಎಲ್ಲವನ್ನೂ ನೆನಪಿಟ್ಟುಕೊಳ್ಳಲು ಇದು ಅವರಿಗೆ ಸಹಾಯ ಮಾಡುತ್ತದೆ. ಅವರು ಯಾವಾಗಲೂ ನಿಮಗೆ ಸತ್ಯವನ್ನು ಹೇಳಲು ಬಯಸುತ್ತಾರೆ. ಇದು ಕೆಲವೊಮ್ಮೆ ಸ್ವಲ್ಪ ಕಠಿಣವಾಗಿರಬಹುದು. ಆದರೂ ಅವರು ನಿಮಗೆ ಸಹಾಯ ಮಾಡಲು ಪ್ರಯತ್ನಿಸುತ್ತಾರೆ. ಒಟ್ಟಾರೆಯಾಗಿ ಇವರು ವಿಶ್ವಾಸಾರ್ಹ ಸ್ನೇಹಿತರು ಮತ್ತು ಸಹೋದ್ಯೋಗಿಗಳು. 
 

ವೃಶ್ಚಿಕ ರಾಶಿ
ವೃಶ್ಚಿಕ ರಾಶಿಯವರು ಹಲವಾರು ಆಳವಾದ ಸಾಮರ್ಥ್ಯಗಳನ್ನು ಹೊಂದಿರುತ್ತಾರೆ ಮತ್ತು ಇಡೀ ರಾಶಿಚಕ್ರದಲ್ಲಿ ಅತ್ಯಂತ ನಿಷ್ಠಾವಂತ ಚಿಹ್ನೆಗಳಲ್ಲಿ ಇವರದು ಒಂದು. ವೃಶ್ಚಿಕ ರಾಶಿಯವರು ನಿಮ್ಮ ಬಗ್ಗೆ ಕಾಳಜಿ ವಹಿಸಿದರೆ ನಿಮಗಾಗಿ ಸದಾ ಇರುತ್ತಾರೆ ಎಂದು ನೀವು ನಂಬಬಹುದು. ಅವರನ್ನು ಕೇವಲ ಪರಿಚಯಸ್ಥರು ಎಂದು ಹೇಳಲು ಸಾಧ್ಯವಿಲ್ಲ. ಪ್ರೀತಿ, ಉತ್ಸಾಹದ, ನಂಬಿಕೆಯ ಸಂಬಂಧಗಳಿಗೆ ಮಾತ್ರ ಅವರು ಬದ್ಧರಾಗಿ ವರ್ತಿಸುತ್ತಾರೆ.

ಈ ರಾಶಿಯವರ ಮನಸ್ಸಿಗೆ ಎಂದೂ ನೋವು ಮಾಡಬೇಡಿ, ಸೇಡು ತೀರಿಸಿಕೊಳ್ತಾರೆ!

ಮಕರ ರಾಶಿ
ನೀವು ಮಕರ ರಾಶಿಯ ಬಳಿ ಏನನ್ನಾದರೂ ರಹಸ್ಯವಾಗಿಡಲು ಕೇಳಿದರೆ, ಅವರು ಅದನ್ನು ತಮ್ಮ ಜೊತೆಗೇ ಮಣ್ಣಿಗೂ ತೆಗೆದುಕೊಂಡು ಹೋಗುತ್ತಾರೆ. ಅವರು ಮಾತು ಕೊಟ್ಟರೆ, ಅದನ್ನು ಅನುಸರಿಸಲು ಏನು ಬೇಕಿದ್ದರೂ ಮಾಡುತ್ತಾರೆ. ನಿಮ್ಮ ನಂಬಿಕೆಯಲ್ಲಿ ಎಂದೂ ಟೇಕನ್ ಫಾರ್ ಗ್ರಾಂಟೆಡ್ ಆಗಿ ತೆಗೆದುಕೊಳ್ಳುವುದಿಲ್ಲ. ಅವರಿಗೆ ಸರಿಯಾದದ್ದನ್ನು ನೀವು ಮಾಡುತ್ತಿರುವಾಗ ಅವರು ಅತ್ಯಂತ ಆರಾಮದಾಯಕವಾಗಿ ಇರುತ್ತಾರೆ. ಇದು ಅವರನ್ನು ಅತ್ಯಂತ ವಿಶ್ವಾಸಾರ್ಹ ವ್ಯಕ್ತಿಗಳನ್ನಾಗಿ ಮಾಡುತ್ತದೆ.

click me!