
ಪವಿತ್ರ ವಿಷ್ಣು ಸಹಸ್ರನಾಮದ (Vishnu sahasranama) ಮಹತ್ವದ ಬಗ್ಗೆ ಹಲವರಿಗೆ ತಿಳಿದಿದೆ. ಬೇಡಿದ್ದನ್ನು ಕೊಡುವ ಕಾಮಧೇನು ಎಂದೇ ಕರೆಯುವ ಈ ವಿಷ್ಣು ಸಹಸ್ರನಾಮವು ಅತ್ಯಂತ ಶಕ್ತಿಯುತ (Powerful) ಮಂತ್ರವಾಗಿದೆ. ಮನೆಯಲ್ಲಿ ನೆಮ್ಮದಿ ಇಲ್ಲವಾದರೆ, ಕಷ್ಟಗಳೇ ಕಾಡುತ್ತಿದ್ದರೆ, ಕೆಲಸ ಕೈ ಗೂಡುತ್ತಿಲ್ಲ, ಹಿಡಿದ ಕೆಲಸ ಪೂರ್ಣವಾಗುತ್ತಿಲ್ಲವೆಂದಾದರೆ ಜ್ಯೋತಿಷ್ಯ ಶಾಸ್ತ್ರದಲ್ಲಿ (Astrology) ಅತ್ಯುತ್ತಮವಾದ ಪರಿಹಾರವಿದೆ.
ಕಷ್ಟ (Difficulties) ಬಂದಾಗ ಜ್ಯೋತಿಷಿಗಳ ಬಳಿ ಹೋಗಲು ಸಹ ಭಯವಾಗುತ್ತದೆ. ಜಾತಕ (Horoscope) ನೋಡಿ ಯಾವುದಾದರೂ ಪೂಜೆ, ಹವನ, ದೇವಾಲಯ ಪರ್ಯಟನೆ ಹೀಗೆ ಇತರ ಪರಿಹಾರಗಳನ್ನು (Solution) ತಿಳಿಸಿದರೆ ಹೇಗೆ ಮಾಡುವುದು ಎಂಬ ಚಿಂತೆ ಕಾಡುತ್ತದೆ. ಹಾಗಾಗಿ ಯಾವುದೂ ತಿಳಿಯದೇ ಕಷ್ಟದಲ್ಲೇ ಕಾಲ ಕಳೆಯುತ್ತಿರುವವರಿಗೆ ಜ್ಯೋತಿಷ್ಯ ಶಾಸ್ತ್ರದಲ್ಲಿ ಅತ್ಯುತ್ತಮ ಪರಿಹಾರವಿದೆ. ಎಲ್ಲ ಸಮಸ್ಯೆಗಳನ್ನು ಮನೆಯಲ್ಲಿದ್ದುಕೊಂಡೇ ಪರಿಹರಿಸಿಕೊಳ್ಳಬಹುದಾದ ಸಿದ್ಧ ಮಂತ್ರ ಒಂದಿದೆ. ಅದೇ ವಿಷ್ಣು ಸಹಸ್ರನಾಮ.
ಹೌದು. ವಿಷ್ಣು ಸಹಸ್ರನಾಮವನ್ನು ಪಠಿಸುವುದರಿಂದ ಸಕಲ ಸಂಕಷ್ಟಗಳು ದೂರವಾಗಿ ಜೀವನದಲ್ಲಿ ಸುಖ ಶಾಂತಿ ನೆಲೆಸುತ್ತದೆ. ಅಂದುಕೊಂಡದ್ದು ನೆರವೇರಬೇಕೆಂಬ ದೃಢ ಸಂಕಲ್ಪವನ್ನು ಮಾಡಿ ಪಠಿಸಿದರೆ (Chanting) ಸಾಕು, ಇದಕ್ಕೆ ಬೇರೆ ಯಾವುದೇ ಪರಿಹಾರಗಳ ಅಗತ್ಯವೇ ಇಲ್ಲ. ಹಾಗಾದರೆ ವಿಷ್ಣು ಸಹಸ್ರನಾಮದ ಬಗ್ಗೆ ಇನ್ನಷ್ಟು ತಿಳಿಯೋಣ...
ಭೀಷ್ಮರು ಬಾಣದ ಹಾಸಿಗೆ ಮೇಲೆ ಮಲಗಿದ್ದ ಸಂದರ್ಭದಲ್ಲಿ ಅವರ ಬಳಿ ಬಂದ ಧರ್ಮರಾಜ ಹೀಗೆ ಕೇಳುತ್ತಾನೆ, ಎಲ್ಲರಿಗೂ ಸರ್ವೋಚ್ಛ ಆಶ್ರಯ ಕೊಡುವವನು ಯಾರು? ಆತನಿಗೆ ಶಾಂತಿ (Peace) ಸಿಗಬೇಕು. ಎಲ್ಲ ಭವಸಾಗರಗಳನ್ನು ದಾಟಿ ಕಷ್ಟಗಳಿಂದ ಮುಕ್ತಿ ಪಡೆಯಬೇಕೆಂದರೆ ಯಾರ ಮೊರೆಹೋಗಬೇಕು? ಎಂಬುದನ್ನು ತಿಳಿಸಿ ಎಂದು ಕೇಳುತ್ತಾನೆ. ಆದಕ್ಕೆ ಭೀಷ್ಮರು ಉತ್ತರಿಸುತ್ತಾ, ವಿಷ್ಣುವಿನ ನಾಮ ಸ್ಮರಣೆಯೇ ಇದಕ್ಕೆ ಪರಿಹಾರವಾಗಿದೆ. ಹಾಗಾಗಿ ವಿಷ್ಣು ಸಹಸ್ರನಾಮವನ್ನು ಜಪಿಸುವುದರಿಂದ ಎಲ್ಲ ಸಂಕಷ್ಟಗಳೂ ದೂರವಾಗಿ ನೆಮ್ಮದಿ ಮತ್ತು ವಿಜಯ ಲಭಿಸುತ್ತದೆ ಎಂದು ಹೇಳಲಾಗುತ್ತದೆ.
ಶಂಕರಾಚಾರ್ಯರು ಹೇಳಿದ್ದೇನು ?
ವಿಷ್ಣು ಸಹಸ್ರನಾಮವನ್ನು ಪಠಿಸಿವುದರಿಂದ ಆಗುವ ಪ್ರಯೋಜನದ (Benefit) ಬಗ್ಗೆ ಶಂಕರಾಚಾರ್ಯರು ತಮ್ಮ ಸ್ವ ಅನುಭವವನ್ನು ಹಂಚಿಕೊಂಡಿದ್ದಲ್ಲದೇ ಅದರ ಬಗ್ಗೆ ಟಿಪ್ಪಣಿಯನ್ನೂ ಬರೆದಿದ್ದಾರೆ. ಹಲವಾರು ವಿದ್ವಾಂಸರು ಸಹ ಈ ಮಂತ್ರದ ಮಹಿಮೆಯನ್ನು ಉಲ್ಲೇಖಿಸಿದ್ದಾರೆ, ಕಲಿಯುಗದಲ್ಲಿ ವಿಷ್ಣುಸಹಸ್ರನಾಮವನ್ನು ಏಕಾಗ್ರತೆಯಿಂದ ಓದಿದವರಿಗೆ ಎಲ್ಲ ಕಷ್ಟಗಳೂ ನಿವಾರಣೆ ಆಗುತ್ತದೆ. ಮನೆಯಲ್ಲಿಯೇ ಕುಳಿತು ಏಕಾಗ್ರ ಚಿತ್ತರಾಗಿ ಭಕ್ತಿಯಿಂದ ವಿಷ್ಣು ಸಹಸ್ರನಾಮವನ್ನ ಪಠಿಸಿದರೆ ಸಕಲವೂ ದೊರಕುತ್ತದೆ ಎಂದು ಹೇಳಲಾಗಿದೆ.
ಇದನ್ನು ಓದಿ: ಶಿವಮಂದಿರದಲ್ಲಿ ಹೀಗೆ ಪೂಜೆ ಮಾಡಿದ್ರೆ ಕಷ್ಟಗಳೆಲ್ಲ ದೂರ ದೂರ
ಈ ಜಪ ಪಠಿಣೆಯಿಂದಾಗುವ ಲಾಭವೇನು?
ವಿಷ್ಣು ಸಹಸ್ರನಾಮವನ್ನು ಪಠಿಸುವುದರಿಂದ ಮನೆ-ಮನದಲ್ಲಿ ಶಾಂತಿ ನೆಲೆಸುವುದರ ಜೊತೆಗೆ ಸುಖ – ಸಮೃದ್ಧಿ ದೊರಕುತ್ತದೆ. ಮೋಕ್ಷ ಪಡೆಯಬೇಕೆಂದವರು ಈ ಮಂತ್ರವನ್ನು ಪಠಿಸಲೇಬೇಕೆಂದು ಸಹ ಹೇಳಲಾಗುತ್ತದೆ. ಈ ಮಂತ್ರದಲ್ಲಿ ಶ್ರೀ ಮಹಾವಿಷ್ಣುವಿನ ಸಾವಿರ ಹೆಸರು ಇರುತ್ತದೆ. ಜೀವನದಲ್ಲಿ (Life) ಕಷ್ಟಗಳೇ ಎದುರಾಗುತ್ತಿದ್ದರೆ, ಸಂಸಾರ ಸಾಗರದಲ್ಲಿ ಸಾಗಲು ಕಷ್ಟವಾಗುತ್ತದೆ ಎಂದಾದರೆ, ಆರ್ಥಿಕ ಸಮಸ್ಯೆಯಲ್ಲಿ ಸಿಕ್ಕಿಕೊಂಡಿದ್ದರೆ, ವಾಮಾಚಾರದ ಪ್ರಯೋಗ ನಿಮ್ಮ ಮೇಲಾಗಿದ್ದರೆ, ಕುಟುಂಬಕ್ಕೆ ಯಾರದ್ದಾದರೂ ಕೆಟ್ಟ ದೃಷ್ಟಿ ತಾಗಿದ್ದರೆ ಅಂಥಹ ಸಮಯದಲ್ಲಿ ವಿಷ್ಣುಸಹಸ್ರನಾಮವನ್ನು ಅವಶ್ಯಕವಾಗಿ ಪಠಿಸಲೇಬೇಕು. ಇದರಿಂದ ಎಲ್ಲ ಸಮಸ್ಯೆಗಳು ಸುಲಭವಾಗಿ ನಿವಾರಣೆಯಾಗುತ್ತವೆ.
ವಿಷ್ಣುಸಹಸ್ರನಾಮದ ವಿಶೇಷತೆಗಳು (Specialty) ಹೀಗಿವೆ..
- ವಿಷ್ಣುಸಹಸ್ರನಾಮವನ್ನು ಪಠಿಸುವ ವ್ಯಕ್ತಿಯ ಜಾತಕದ ಮೇಲೆ ವಿಷ್ಣು ಹಾಗೂ ಶಿವ (Shiva) ಎರಡೂ ದೇವರ ವಿಶೇಷ ಕೃಪೆಯೂ ಪ್ರಾಪ್ತವಾಗುತ್ತದೆ.
- ಇದರ ಪಠಣೆಯು ಜಾತಕದ (Horoscope) ಮೇಲೆ ಉತ್ತಮ ಪ್ರಭಾವವನ್ನು ಬೀರುವುದಲ್ಲದೇ ಮತ್ತಷ್ಟು ಶಕ್ತಿಯನ್ನು ನೀಡುತ್ತದೆ.
- ಅಂದುಕೊಂಡ ಕೆಲಸ ಕೈಗೂಡಲು ಈ ಮಂತ್ರ (Mantra) ಸಹಕಾರಿಯಾಗುತ್ತದೆ.
- ಯಾರದ್ದಾದರೂ ಕೆಟ್ಟ ದೃಷ್ಟಿ ತಾಗಿದ್ದರೆ, ಅದರಿಂದ ಹೊರಬರಲು ಈ ಮಂತ್ರ ಸಹಾಯಕವಾಗುತ್ತದೆ.
- ವಿಷ್ಣು ಸಹಸ್ರನಾಮವನ್ನು ಪಠಿಸುವುದರಿಂದ ಇದು ರಕ್ಷಾಕವಚವಾಗಿ ಕೆಲಸ ಮಾಡುವುದಲ್ಲದೇ, ಸದಾಕಾಲ ಕೆಟ್ಟದ್ದರಿಂದ ರಕ್ಷಿಸುತ್ತದೆ (Protect).
- ಶ್ರೀ ಮಹಾ ವಿಷ್ಣುವನ್ನು ಪಾಲಕ ಎಂದು ಕರೆಯಲಾಗುತ್ತದೆ. ವಿಷ್ಣು ಸಹಸ್ರನಾಮ ಪಠಣೆಯಿಂದ ಸಂಸಾರದಲ್ಲಿ ಸುಖ-ಸಮೃದ್ಧಿ ನೆಲೆಸುತ್ತದೆ.
- ವಿವಾಹಿತ (Married) ಮಹಿಳೆಯರು ವಿಷ್ಣು ಸಹಸ್ರನಾಮವನ್ನು ಜಪಿಸಿದರೆ ಸಂತಾನ ಪ್ರಾಪ್ತಿಯಾಗುತ್ತದೆ, ಪರಿವಾರದಲ್ಲಿ ಕಲಹಗಳಿದ್ದರೆ ಅದು ನಿವಾರಣೆ ಆಗುತ್ತದೆ. ಸುಖ-ಶಾಂತಿ ವೃದ್ಧಿಯಾಗುತ್ತದೆ.
ಇದನ್ನು ಓದಿ: ಈ 4 ರಾಶಿಯವರಿಗೆ ಜೂನ್‌ನಲ್ಲಿ ಹರಿಯುತ್ತೆ ಹಣದ ಹೊಳೆ!
ಇದರ ಜೊತೆಗೆ ಮನೆಯ ಕುಲದೇವರನ್ನು ಪ್ರಾರ್ಥನೆ ಮಾಡಲೇಬೇಕು. ಅಷ್ಟೇ ಅಲ್ಲದೇ ವಿಷ್ಣುಸಹಸ್ರನಾಮವನ್ನು ನಿಯಮಿತವಾಗಿ ಜಪಿಸುವುದು ಸೂಕ್ತ. ಆಗ ಸರ್ವರಿಗೂ ಒಳಿತಾಗುತ್ತದೆ (Good) ಎಂಬುದು ಅನೇಕ ಜ್ಯೋತಿಷಿಗಳ ಸಹಿತ ಅನೇಕ ವಿದ್ವಾಂಸರ ಸಲಹೆಯಾಗಿದೆ