
ಯಾರಿಗೆ ಕಷ್ಟ (Problems) ಇರುವುದಿಲ್ಲ ಹೇಳಿ. ಎಲ್ಲರಿಗೂ ಒಂದಲ್ಲಾ ಒಂದು ರೀತಿಯ ಕಷ್ಟಗಳು ಎದುರಾಗಿರುತ್ತವೆ. ಕಷ್ಟವೇ ಬಾರದ ಜೀವನ (Life) ಬಹುಶಃ ಇಲ್ಲದಿಲ್ಲ. ಯಾವುದಾದರೂ ಒಂದು ರೂಪದಲ್ಲಿ ಒಮ್ಮೆಯಾದರೂ ಕಷ್ಟವನ್ನು ನಾವು ಅನುಭವಿಸಿಯೇ ಇರುತ್ತೇವೆ. ಹೀಗಾದಾಗ ಭಯಗೊಳ್ಳುವುದು, ಆತಂಕದಲ್ಲೇ ಜೀವನ ಸಾಗಿಸುವುದು ಸಹಜ ಕೂಡ. ಅಲ್ಲದೆ ದೇವರ ಮೊರೆಯನ್ನೂ ನಾವು ಹೋಗುತ್ತೇವೆ. ಹಾಗಾದರೆ, ಈ ಕಷ್ಟಗಳನ್ನು ಬಂದಾಗ ಸಹಿಸಿಕೊಳ್ಳುವುದಷ್ಟೇ ಮಾರ್ಗವೇ ಎಂದು ಕೇಳಿದರೆ, ಇಲ್ಲ ಎಂದು ಹೇಳುತ್ತದೆ ಜ್ಯೋತಿಷ್ಯ ಶಾಸ್ತ್ರ (Astrology). ಅಂದರೆ ಆಯಾ ವ್ಯಕ್ತಿಗಳ ರಾಶಿಗಳಿಗೆ (Zodiac Sign) ಅನುಸಾರವಾಗಿ ಆಗಿನ ಗ್ರಹಗತಿಗಳು ಯಾವ ರೀತಿ ಇವೆ ಎಂಬುದರ ಮೇಲೆ ಸಮಸ್ಯೆಗಳು ಎದುರಾಗುತ್ತವೆ. ಪ್ರತಿ ರಾಶಿಗೂ ಅಧಿಪತಿ ಗ್ರಹ (Planet) ಇರುತ್ತದೆ. ಆ ಗ್ರಹದ ಕೃಪೆ ಇದ್ದರೆ ತೊಂದರೆಗಳು ಬಹುಬೇಗ ನಿವಾರಣೆಯಾಗುತ್ತದೆ. ಹೀಗಾಗಿ ರಾಶಿಗಳಿಗೆ ಅನುಸಾರವಾಗಿ ಮಂತ್ರಗಳಿದ್ದು (Mantra), ಆಯಾ ರಾಶಿಯವರು ಅದನ್ನು ಪಠಿಸಿದರೆ (Chant) ಕಷ್ಟಗಳು ದೂರಾಗುತ್ತವೆ ಎನ್ನುವುದರಲ್ಲಿ ಅನುಮಾನವಿಲ್ಲ. ಹಾಗಾದರೆ ಯಾವ ರಾಶಿಯವರು ಯಾವ ಮಂತ್ರಗಳನ್ನು ಜಪಿಸಬೇಕು ಎಂಬುದನ್ನು ನೋಡೋಣ...
ಮೇಷ ರಾಶಿ (Aries)
ಮಂಗಳ (ಕುಜ) (Mars) ಗ್ರಹವು ಮೇಷ ರಾಶಿಯ ಅಧಿಪತಿ ಗ್ರಹವಾಗಿದೆ. ಈ ರಾಶಿಯವರು ಹನುಮಂತನನ್ನು (Hanuman) ಪ್ರಾರ್ಥಿಸಿಕೊಂಡು “ಓಂ ಹನುಮತೇ ನಮಃ” ಎಂಬ ಮಂತ್ರವನ್ನು ಜಪಿಸಬೇಕು.
ವೃಷಭ ರಾಶಿ (Taurus)
ಶುಕ್ರ ಗ್ರಹವು (Planet Venus) ಈ ರಾಶಿಗೆ ಅಧಿಪತಿ ಗ್ರಹವಾಗಿದೆ. ಹೀಗಾಗಿ ಈ ರಾಶಿಯ ವ್ಯಕ್ತಿಗಳು ದುರ್ಗಾ ದೇವಿಯನ್ನು (Goddess Durga) ಆರಾಧನೆ ಮಾಡಿ, “ಓಂ ದುರ್ಗಾದೇವ್ಯೈ ನಮಃ” ಎಂಬ ಮಂತ್ರವನ್ನು ಭಕ್ತಿಪೂರ್ವಕವಾಗಿ ಪಠಣೆ ಮಾಡಬೇಕು.
ಮಿಥುನ ರಾಶಿ (Gemini)
ಬುಧಗ್ರಹವು ಈ ರಾಶಿಗೆ ಅಧಿಪತಿ ಗ್ರಹವಾಗಿದೆ. ಬುಧನ ಆರಾಧನೆ ಮಾಡಬೇಕೆಂದರೆ ಗಣಪತಿಯನ್ನು (Lord Ganesha) ಪ್ರಾರ್ಥಿಸಬೇಕು. “ಓಂ ಗಂ ಗಣಪತಯೇ ನಮಃ” ಎಂಬ ಮಂತ್ರವನ್ನು ಜಪಿಸಿ, ದೇವರ ಕೃಪೆಗೆ ಪಾತ್ರರಾಗಬಹುದು.
ಕರ್ಕಾಟಕ ರಾಶಿ (Cancer)
ಕರ್ಕಾಟಕ ರಾಶಿಗೆ ಚಂದ್ರ ಅಧಿಪತಿ (Moon Planet) ಗ್ರಹವಾಗಿದೆ. ಶಿವನ (Lord Shiva) ಶಿರದ ಮೇಲೆ ಕುಳಿತಿರುವ ಚಂದ್ರನ ಕೃಪೆಗಾಗಿ ಶಿವನನ್ನು ಆರಾಧಿಸಬೇಕು. ಹಾಗಾಗಿ “ಓಂ ನಮಃ ಶಿವಾಯ” ವನ್ನು ಜಪಿಸಬೇಕು.
ಸಿಂಹ ರಾಶಿ (Leo)
ರಾಶಿಯ ಅಧಿಪತಿ ಗ್ರಹ ಸೂರ್ಯದೇವ (Sun Planet). ಸಿಂಹ ರಾಶಿಯವರು ಸೂರ್ಯನನ್ನು ಪ್ರಸನ್ನಗೊಳಿಸ ಬೇಕೆಂದರೆ “ಓಂ ಸೂರ್ಯಾಯ ನಮಃ” ಮಂತ್ರದ ಜಪಿಸಬೇಕು.
ಇದನ್ನು ಓದಿ : Relationship Tips: ಹೀಗಿದ್ದರೆ ಸತಿ ಪತಿ, ಸಂಬಂಧ ಅಧೋಗತಿ; ಇದು ಚಾಣಕ್ಯ ನೀತಿ
ಕನ್ಯಾ ರಾಶಿ (Virgo)
ಈ ರಾಶಿಯ ಅಧಿಪತಿ ಗ್ರಹ ಬುಧ (Mercury Planet). ಇವರ ಜಾತಕದ (Horoscope) ದೋಷಗಳು ನಿವಾರಣೆಯಾಗಿ ಒಳಿತಾಗಬೇಕೆಂದರೆ ಗಣಪತಿಯನ್ನು ಆರಾಧಿಸಬೇಕು “ಓಂ ಗಂ ಗಣಪತಯೇ ನಮಃ” ಮಂತ್ರವನ್ನು ಪಠಿಸಬೇಕು.
ತುಲಾ ರಾಶಿ (Libra)
ಶುಕ್ರ ಗ್ರಹವು ತುಲಾ ರಾಶಿಯ ಅಧಿಪತಿ ಗ್ರಹವಾಗಿದೆ. ಧನಲಕ್ಷ್ಮೀಯನ್ನು (Goddess Laxmi) ಆರಾಧಿಸಬೇಕು. ಕಷ್ಟಗಳ ನಿವಾರಣೆಯಾಗಬೇಕೆಂದರೆ ಲಕ್ಷ್ಮೀ ಮಂತ್ರವಾದ “ಓಂ ಮಹಾಲಕ್ಷ್ಮ್ಯೈ ನಮಃ” ಜಪವನ್ನು ಮಾಡಬೇಕು.
ವೃಶ್ಚಿಕ ರಾಶಿ (Scorpio)
ಮಂಗಳನ ಅಧಿಪತ್ಯದಲ್ಲಿರುವ ಈ ರಾಶಿಯವರು ಹನುಮಂತನನ್ನು ಆರಾಧಿಸಬೇಕು. ಸಕಲ ಕಷ್ಟಗಳ ನಿವಾರಿಸುವ ಹನಮಂತನನ್ನು “ಓಂ ಹನುಮತೇ ನಮಃ” ಎಂಬ ಮಂತ್ರದ ಮೂಲಕ ಜಪಿಸಬೇಕು.
ಧನು ರಾಶಿ (Sagittarius)
ಗುರುಗ್ರಹವು ಧನು ರಾಶಿಯ ಅಧಿಪತಿ ಗ್ರಹವಾಗಿದೆ. ಈ ರಾಶಿಯವರು ಶ್ರೀ ವಿಷ್ಣುವನ್ನು (Lord Vishnu) ಆರಾಧಿಸಬೇಕು. “ಓಂ ಶ್ರೀ ವಿಷ್ಣವೇ ನಮಃ” ಮಂತ್ರವನ್ನು ಜಪಿಸಬೇಕು.
ಮಕರ ರಾಶಿ (Capricorn)
ಶನಿ ಗ್ರಹವು (Planet Saturn) ಮಕರ ರಾಶಿಯ ಅಧಿಪತಿ ಗ್ರಹವಾಗಿದೆ. ಶನಿದೇವರ ಜೊತೆ ಹನುಮಂತನನ್ನು ಆರಾಧಿಸಬೇಕು. ಆಗ ಕಷ್ಟಗಳು ಬೇಗ ಪರಿಹಾರವಾಗುತ್ತದೆ. “ಓಂ ಶನಿಶ್ವರಾಯೇ ನಮಃ” ಎಂಬ ಮಂತ್ರವನ್ನು ಪಠಿಸಬೇಕು.
ಕುಂಭ ರಾಶಿ (Aquarius)
ಕುಂಭರಾಶಿಗೂ ಅಧಿಪತಿ ಶನಿದೇವ. ಶನಿದೇವರ ಕೃಪೆಗೆ ಈಶ್ವರನನ್ನು (Lord Shiva) ಪೂಜಿಸಬೇಕು. “ಓಂ ಮಹಾಮೃತ್ಯುಂಜಯಾಯ ನಮಃ” ಮಂತ್ರವನ್ನು ಪಠಿಸಬೇಕು.
ಇದನ್ನು ಓದಿ : Aries Character Traits: ಮೇಷ ರಾಶಿಯ ಹುಡುಗ ನಿಮ್ಮವನಾದರೆ ಅವನ ಕುರಿತ ಈ 9 ವಿಷಯಗಳು ತಿಳಿದಿರಲಿ..
ಮೀನ ರಾಶಿ (Pisces)
ಗುರುಗ್ರಹವು ಈ ರಾಶಿಯ ಅಧಿಪತಿ ಗ್ರಹವಾಗಿದೆ. ಈ ರಾಶಿಯ ವ್ಯಕ್ತಿಗಳು ವಿಷ್ಣುವಿನ ಕೃಪೆಗಾಗಿ ಪ್ರಾರ್ಥನೆ ಮಾಡಬೇಕು. “ಓಂ ನಾರಾಯಣಾಯ ನಮಃ” ಅಥವಾ “ಓಂ ಗುರವೇ ನಮಃ” ಮಂತ್ರವನ್ನು ಪಠಿಸಿ ದೇವರ ಕೃಪೆಗೆ ಪಾತ್ರರಾಗಬೇಕು.