Astrology Tips : ಬೆಡ್ ರೂಮಲ್ಲಿ ನಡೆಯೋ ಪತಿ-ಪತ್ನಿ ಜಗಳಕ್ಕುಂಟು ಜ್ಯೋತಿಷ್ಯದ ನಂಟು

Suvarna News   | Asianet News
Published : Feb 18, 2022, 06:24 PM IST
Astrology Tips : ಬೆಡ್ ರೂಮಲ್ಲಿ ನಡೆಯೋ ಪತಿ-ಪತ್ನಿ  ಜಗಳಕ್ಕುಂಟು ಜ್ಯೋತಿಷ್ಯದ ನಂಟು

ಸಾರಾಂಶ

ದಂಪತಿ ಮಧ್ಯೆ ಸಾಮರಸ್ಯ ಇತ್ತೀಚಿನ ದಿನಗಳಲ್ಲಿ ಬಹಳ ಕಷ್ಟ. ಸಣ್ಣ ವಿಷ್ಯಕ್ಕೂ ಬೇರೆಯಾಗುವ ದಂಪತಿ ಸಾಕಷ್ಟಿದ್ದಾರೆ. ಅನೇಕರು ಗ್ರಹ,ದೋಷ,ಜಾತಕವನ್ನು ನಂಬುವುದಿಲ್ಲ. ಆದ್ರೆ ಬಲು ಪ್ರೀತಿಯಿಂದಿದ್ದ ದಂಪತಿ ದೂರವಾಗಲು ಅನೇಕ ಬಾರಿ ಈ ಗ್ರಹದೋಷಗಳೇ ಕಾರಣವಾಗುತ್ತವೆ.   

ಪತಿ (Husband )-ಪತ್ನಿ (Wife )ಯರ ನಡುವಿನ ಸಂಬಂಧ (Relationship) ಅತ್ಯಂತ ಪವಿತ್ರವಾದುದಲ್ಲದೆ ಅದು ಅತ್ಯಂತ ಸೂಕ್ಷ್ಮವಾದುದು ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ. ಇಬ್ಬರ ಮಧ್ಯೆ ಸಣ್ಣ ವಾಗ್ವಾದವೂ ದೊಡ್ಡ ಬಿರುಕಿಗೆ ಕಾರಣವಾಗಬಹುದು. ಅನೇಕ ಬಾರಿ ದಂಪತಿ ಮಧ್ಯೆ ಯಾವುದೇ ದೊಡ್ಡ ಗಲಾಟೆಯೇ ನಡೆದಿರುವುದಿಲ್ಲ. ಆದ್ರೂ ಇಬ್ಬರ ಮನಸ್ಸು ಮುರಿದಿರುತ್ತದೆ. ಇಬ್ಬರು ಬೆಡ್ ರೂಮಿ (Bedroom)ನಲ್ಲಿ ದೂರ ಮಲಗುತ್ತಾರೆ. ಇಬ್ಬರ ಮಧ್ಯೆ ಪ್ರೀತಿ ಮಾಸಿಹೋಗಿ ದ್ವೇಷ,ಅಸೂಯೆ ಮೂಡಿರುತ್ತದೆ. ಪರಸ್ಪರ ಬೇರೆಯಾಗುವ ನಿರ್ಧಾರಕ್ಕೂ ಬರುವುದುಂಟು. ಕುಳಿತು ಆಲೋಚನೆ ಮಾಡಿದ್ರೆ ಇಬ್ಬರ ಮಧ್ಯೆ ಅಂಥ ದೊಡ್ಡ ಸಮಸ್ಯೆಯೇನೂ ಇರುವುದಿಲ್ಲ. ಇದಕ್ಕೆ ಅನೇಕ ಕಾರಣಗಳಿವೆ ಎಂದು ತಜ್ಞರು ಹೇಳ್ತಾರೆ. ಇಂದು ಬೆಡ್ ರೂಮಿನಲ್ಲಿ ಪತಿ-ಪತ್ನಿ ಜಗಳಕ್ಕೆ ಕಾರಣವಾಗುವ ಸಂಗತಿ ಯಾವುದು ಎಂಬುದನ್ನು ನಾವು ಹೇಳ್ತೇವೆ.

ನಿಮಗೆ ಇದು ವಿಚಿತ್ರವೆನಿಸಬಹುದು. ವಿದ್ಯಾಭ್ಯಾಸ (Education) ದಂಪತಿ ಜಗಳಕ್ಕೆ ಕಾರಣವಾಗುತ್ತಾ ಎಂದು ನೀವು ಪ್ರಶ್ನೆ ಮಾಡಬಹುದು. ಇಬ್ಬರಿಗೂ ಸಾಕಷ್ಟು ಜ್ಞಾನವಿರುವ ಕಾರಣ ಅವರು ಅವರದೇ ವಿಷ್ಯವನ್ನು ಮಂಡಿಸುತ್ತಾರೆ. ಇಬ್ಬರ ಮಧ್ಯೆ ಕೆಲ ವಿಷ್ಯದಲ್ಲಿ ಸಾಮರಸ್ಯವಿರುವುದಿಲ್ಲ.ಆಗ ಜಗಳ ಶುರುವಾಗುತ್ತದೆ. ಆದ್ರೆ ಸಾರ್ವಜನಿಕವಾಗಿ ದಂಪತಿ ಜಗಳವಾಡುವುದಿಲ್ಲ. ಈ ಗಲಾಟೆ,ಕೋಪ ಬೆಡ್ ರೂಮಿಗೆ ಶಿಪ್ಟ್ ಆಗುತ್ತದೆ. ಕೆಲವರ ಜಗಳ ಸ್ವಲ್ಪ ದಿನದಲ್ಲೇ ಅಥವಾ ಸ್ವಲ್ಪ ಸಮಯದಲ್ಲಿಯೇ ಮುಗಿದ್ರೆ ಮತ್ತೆ ಕೆಲವರ ಜಗಳ ಜೀವನ ಪರ್ಯಂತ ಮುಂದುವರೆದಿರುತ್ತದೆ. ಇದಕ್ಕೆ ಅನೇಕ ಕಾರಣಗಳಿವೆ. 

ಹೆಸರು ಗುಣಲಕ್ಷಣ ಹೊಂದಾಣಿಕೆ: ಮದುವೆಗೆ ಮೊದಲು ಜಾತಕ ನೋಡಲಾಗುತ್ತದೆ. ಅಲ್ಲಿ ವರ ಹಾಗೂ ವಧುವಿನ ಹೆಸರಿನ ಗುಣಗಳು ಹೊಂದುತ್ತವೆಯೇ ಎಂದು ನೋಡಲಾಗುತ್ತದೆ. ಸುಖ ದಾಂಪತ್ಯಕ್ಕೆ 18 ಗುಣಗಳು ಹೊಂದಾಣಿಕೆಯಾಗಬೇಕು ಎನ್ನಲಾಗಿದೆ. ಒಂದು ವೇಳೆ ಗುಣಗಳಲ್ಲಿ ಹೊಂದಾಣಿಕೆಯಿಲ್ಲದೆ ಹೋದ್ರೆ ಅಥವಾ ಜಾತಕದಲ್ಲಿ ದೋಷವಿದ್ದರೆ ಇಬ್ಬರ ಧ್ಯೆ ಜಗಳ ಶುರುವಾಗುತ್ತದೆ.ಇದರಲ್ಲಿ ಅನೇಕ ದೋಷಗಳಿವೆ. ಗಣ ದೋಷ, ಭಕೂಟ ದೋಷ, ನಾಡಿ ದೋಷ, ದ್ವಿದ್ವಾದಶ ದೋಷ ಎಲ್ಲವನ್ನೂ ನೋಡಬೇಕಾಗುತ್ತದೆ. ಮೇಲ್ಕಂಡ ದೋಷಗಳ ಪರಿಣಾಮಗಳು ಸಹಜವಾಗಿದ್ದರೂ ಪತಿ-ಪತ್ನಿ ಮಧ್ಯೆ ಆಗಾಗ ಜಗಳವಾಗ್ತಿರುತ್ತದೆ ಎಂದು ಶಾಸ್ತ್ರದಲ್ಲಿ ಹೇಳಲಾಗಿದೆ.

Personality Traits: ಏಕಾಂತವನ್ನು ಪ್ರೀತಿಸೋ ನಾಲ್ಕು ರಾಶಿಗಳಿವು..

ಮಂಗಳ ದೋಷ : ದಂಪತಿ (Couple) ಮಧ್ಯೆ ಮಂಗಳ ದೋಷವಿದ್ದರೂ ಅದು ಜಗಳ,ಗಲಾಟೆಗೆ ಕಾರಣವಾಗುತ್ತದೆ. ಮಂಗಳ ಗ್ರಹ ಯಾವ ಸ್ಥಾನದಲ್ಲಿದ್ದಾನೆ ಎಂಬುದು ಇಲ್ಲಿ ಮುಖ್ಯವಾಗುತ್ತದೆ. ಮುಖ್ಯವಾಗಿ ಹನ್ನೆರಡನೇ ಲಗ್ನದಲ್ಲಿ, ನಾಲ್ಕನೇ ಸ್ಥಾನದಲ್ಲಿ ಮಂಗಳನಿದ್ದರೆ ದಂಪತಿ ನಡುವೆ ಜಗಳವಾಗುವುದು ಸಾಮಾನ್ಯವೆಂದು ಜ್ಯೋತಿಷ್ಯದಲ್ಲಿ ಹೇಳಲಾಗುತ್ತದೆ. ಮಂಗಳವು ಹನ್ನೆರಡನೇ ಮತ್ತು ನಾಲ್ಕನೇ ಮನೆಯಲ್ಲಿದ್ದಾಗ,ಮಂಗಳ ಏಳನೇ ಮನೆಯ ಮೇಲೆ ಪರಿಣಾಮ ಬೀರುತ್ತಾನೆ. ಏಳನೇ ಮನೆಯನ್ನು ಬೆಡ್ ರೂಮಿನ ಸುಖದೊಂದಿಗೆ ಹೋಲಿಕೆ ಮಾಡಲಾಗುತ್ತದೆ.

ಶುಕ್ರನ ಸ್ಥಾನ : ಜ್ಯೋತಿಷ್ಯದಲ್ಲಿ (Astroogy) ಶುಕ್ರನ ಸ್ಥಾನವನ್ನು ಶುಭವೆನ್ನಲಾಗುತ್ತದೆ.ಶುಕ್ರನ ಸ್ಥಾನಕ್ಕೆ ಅನುಗುಣವಾಗಿಯೇ ಪತಿ-ಪತ್ನಿ ಮಧ್ಯೆ ಸುಖ ಪ್ರಾಪ್ತಿಯಾಗುತ್ತದೆ. ಶುಕ್ರನು ದುರ್ಬಲನಾಗಿದ್ದರೆ ಅಥವಾ ಎಂಟನೇ ಮನೆಯಲ್ಲಿದ್ದರೆ ಬೆಡ್ ರೂಮಿನಲ್ಲಿ ಜಗಳವಾಗುವ ಸಾಧ್ಯತೆ ಹೆಚ್ಚಿರುತ್ತದೆ, ಶುಕ್ರ ಹನ್ನೆರಡನೇ ಮನೆಯಲ್ಲಿದ್ದರೆ ಧರ್ಮಪತ್ನಿಗೆ ಸುಖ ಪ್ರಾಪ್ತಿಯಾಗುವುದಿಲ್ಲ ಎನ್ನಲಾಗಿದೆ. ಇದು ಮೇಷ ಲಗ್ನದ ಜಾತಕದಲ್ಲಿ ಹೆಚ್ಚಾಗಿ ಕಾಣಿಸುತ್ತದೆ. ಅದೇ ಕಾರಣಕ್ಕೆ ಅವರ ದಾಂಪತ್ಯದಲ್ಲಿ ಜಗಳಗಳನ್ನು ಹೆಚ್ಚಾಗಿ ಕಾಣಬಹುದಾಗಿದೆ.

Extramarital affair: ಈ ರಾಶಿಯವರು ದಾಂಪತ್ಯದಾಚೆಗೂ ಜಿಗಿಯಬಲ್ಲರು, ಹುಷಾರಾಗಿರಿ!

ಗ್ರಹಗಳು ದಾಂಪತ್ಯ ಸುಖದ ಮೇಲೆ ಪರಿಣಾಮ ಬೀರುತ್ತವೆ. ಗ್ರಹವು ವೈವಾಹಿಕ ಸಂತೋಷದಲ್ಲಿ ತನ್ನದೇ ಆದ ಪ್ರಾಮುಖ್ಯತೆಯನ್ನು ಹೊಂದಿದೆ. ಎಲ್ಲಾ ಗ್ರಹಗಳು ಚಲನೆಯಲ್ಲಿರುತ್ತವೆ. ರಾಶಿಚಕ್ರವನ್ನು ಬದಲಾಯಿಸುತ್ತಿರುತ್ತವೆ. ಅವು ಬದಲಿಸುವ ರಾಶಿಗೆ ತಕ್ಕಂತೆ ಸಂತೋಷ ಅಥವಾ ಅತೃಪ್ತಿ ಪ್ರಾಫ್ತವಾಗುತ್ತದೆ. ವೈವಾಹಿಕ ಜೀವನದ ಮೇಲೆ ಪ್ರತಿ ಗ್ರಹದ ಧನಾತ್ಮಕ ಪರಿಣಾಮವು ಸಂತೋಷವನ್ನು ತರುತ್ತದೆ. ಆದರೆ ನಕಾರಾತ್ಮಕ ಪ್ರಭಾವ ಸಂತೋಷವನ್ನು ನಾಶಪಡಿಸುತ್ತದೆ.

PREV
Read more Articles on
click me!

Recommended Stories

ಈ 4 ರಾಶಿಯವರಲ್ಲಿ ಒಳ್ಳೆಯದಕ್ಕಿಂತ ಕೆಟ್ಟ ಗುಣಗಳೇ ಹೆಚ್ಚು, ದ್ವೇಷ ಸಾಧಿಸೋದ್ರಲ್ಲಿ ನಿಸ್ಸೀಮರು
ಹೊಸ ವರ್ಷದಲ್ಲಿ 3 ರಾಜಯೋಗ, 3 ರಾಶಿಗೆ ಬಹಳಷ್ಟು ಹಣ