ಚಂದ್ರ ಗ್ರಹಣ: ನ.8ರಂದು ಧರ್ಮಸ್ಥಳ, ಕುಕ್ಕೆಯಲ್ಲಿ ಸಮಯ ಬದಲಾವಣೆ

By Suvarna NewsFirst Published Nov 5, 2022, 11:03 AM IST
Highlights

ನ.8ರಂದು ಖಗ್ರಾಸ ಚಂದ್ರಗ್ರಹಣ ಹಿನ್ನೆಲೆ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ದೇವರ ದರ್ಶನ ‌ಸಮಯದಲ್ಲಿ ಬದಲಾವಣೆ ಮಾಡಲಾಗಿದೆ. 

ಭರತ್ ರಾಜ್, ಏಷ್ಯಾನೆಟ್ ಸುವರ್ಣ ನ್ಯೂಸ್, ಮಂಗಳೂರು

ನ.8ರಂದು ಖಗ್ರಾಸ ಚಂದ್ರಗ್ರಹಣ ಹಿನ್ನೆಲೆ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ದೇವರ ದರ್ಶನ ‌ಸಮಯದಲ್ಲಿ ಬದಲಾವಣೆ ಮಾಡಲಾಗಿದೆ. 
ಮ.1.30ರಿಂದ ರಾ.7ರವರೆಗೆ ಧರ್ಮಸ್ಥಳದಲ್ಲಿ ‌ದೇವರ ದರ್ಶನ ಬಂದ್ ಆಗಲಿದ್ದು, ಅಂದು ಮಧ್ಯಾಹ್ನದಿಂದ ಸಂಜೆಯವರೆಗೆ ದರ್ಶನ ಮತ್ತು ಸೇವೆಗಳು ಬಂದ್ ಆಗಲಿದೆ. ಮಧ್ಯಾಹ್ನ 1.30ರವರೆಗೆ ಮಾತ್ರ ಭೋಜನ ವ್ಯವಸ್ಥೆ ಇರಲಿದ್ದು, ಮತ್ತೆ ರಾ.7 ಗಂಟೆಯ ಬಳಿಕವಷ್ಟೇ ಭೋಜನ ವ್ಯವಸ್ಥೆ ಇರಲಿದೆ. ದೂರದ ಊರಿನಿಂದ ಬರುವ ಭಕ್ತರು ಬದಲಾವಣೆ ಗಮನಿಸಲು ಶ್ರೀಕ್ಷೇತ್ರ ಧರ್ಮಸ್ಥಳದ ಆಡಳಿತ ‌ಮಂಡಳಿ ಪ್ರಕಟಣೆ ತಿಳಿಸಿದೆ. 

Latest Videos

ಕುಕ್ಕೆಯಲ್ಲೂ ಸೇವೆಗಳು ಬಂದ್
ನಾಗಾರಾಧನೆಯ ಪುಣ್ಯ ತಾಣ ಮಹತೋಭಾರ ಕುಕ್ಕೆ ಶ್ರೀಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಚಂದ್ರಗ್ರಹಣದ ದಿನವಾದ ನ.8ರಂದು ಯಾವುದೇ ಸೇವೆಗಳು ನೆರವೇರುವುದಿಲ್ಲ‌. ಅಲ್ಲದೆ ಭೋಜನ ಪ್ರಸಾದ ವಿತರಣೆ ಕೂಡ ಇರುವುದಿಲ್ಲ. ಆದರೆ ಶ್ರೀದೇವಳದ ಪ್ರಧಾನ ಅರ್ಚಕರ ನಿರ್ದೇಶನದಂತೆ ದೇವರ ದರ್ಶನದ ಸಮಯದಲ್ಲಿ ವ್ಯತ್ಯಯಗಳನ್ನು ಮಾಡಲಾಗಿದೆ. ಬೆಳಗ್ಗೆ 9ಗಂಟೆಯಿಂದ 11.30ರ ತನಕ, ಗ್ರಹಣ ಸ್ಪರ್ಶ ಸಮಯವಾದ 2.39ರಿಂದ ಗ್ರಹಣ ಮೋಕ್ಷ ಸಮಯವಾದ 6.19ರ ತನಕ ಹಾಗೂ ರಾತ್ರಿ 7.30ರಿಂದ 9 ರ ತನಕ ಶ್ರೀ ದೇವರ ದರ್ಶನಕ್ಕೆ ಭಕ್ಕರಿಗೆ ಅವಕಾಶ ಕಲ್ಪಿಸಲಾಗಿದೆ ಎಂದು ಶ್ರೀ ದೇವಳದ ಪ್ರಕಟಣೆ ತಿಳಿಸಿದೆ.

click me!