Chanakya Niti: ಮಹಿಳೆ ಈ ಕೆಲಸ ಮಾಡುವಾಗ ಪುರುಷರು ನೋಡ್ಬಾರದು

By Suvarna NewsFirst Published Aug 9, 2022, 4:13 PM IST
Highlights

ಚಾಣಕ್ಯ ನೀತಿಯಲ್ಲಿ ಯಶಸ್ವಿ ಜೀವನಕ್ಕೆ ಬೇಕಾದ ಅನೇಕ ಸಂಗತಿಯನ್ನು ಹೇಳಲಾಗಿದೆ. ಹಾಗೆಯೇ ಯಾವ ಕೆಲಸ ಮಾಡ್ಬಾರದು, ಯಾವ ಕೆಲಸ ಮಾಡ್ಬೇಕು, ಮಹಿಳೆ ಯಾವ ಕೆಲಸ ಮಾಡುವಾಗ ಪುರುಷ ನೋಡಬಾರದು ಎಂಬಿತ್ಯಾದಿ ವಿಷ್ಯವನ್ನು ಚಾಣಕ್ಯ ಹೇಳಿದ್ದಾರೆ. 
 

ಚಾಣಕ್ಯ ನೀತಿಯಲ್ಲಿ ಅರ್ಥಶಾಸ್ತ್ರ, ರಾಜತಾಂತ್ರಿಕತೆ, ರಾಜಕೀಯವಲ್ಲದೆ ಸಾಮಾಜಿಕ ಜೀವನಕ್ಕೆ ಸಂಬಂಧಿಸಿದ ಅನೇಕ ಸಂಗತಿಗಳನ್ನು ಹೇಳಲಾಗಿದೆ. ಚಾಣಕ್ಯ ನೀತಿಯಲ್ಲಿ ಮನುಷ್ಯ ಯಶಸ್ವಿಯಾಗಲು ಏನು ಮಾಡಬೇಕು ಎಂಬುದರಿಂದ ಹಿಡಿದು, ಆತನ ಸ್ನೇಹಿತರು ಹೇಗಿರಬೇಕು ಎನ್ನುವವರೆಗೆ ಎಲ್ಲವನ್ನೂ ಹೇಳಲಾಗಿದೆ. ಚಾಣಕ್ಯ ಮಹಿಳೆ ಹಾಗೂ ಪುರುಷರ ಬಗ್ಗೆಯೂ ಅನೇಕ ಸಂಗತಿಗಳನ್ನು ಹೇಳಿದ್ದಾರೆ. ಚಾಣಕ್ಯ ಎಂಥ ಮಹಿಳೆಯರನ್ನು ನಂಬಬೇಕು, ಎಂಥ ಮಹಿಳೆಯರನ್ನು ನಂಬಬಾರದು ಎಂಬುದನ್ನು ಕೂಡ ಹೇಳಿದ್ದಾರೆ. ಚಾಣಕ್ಯ ನೀತಿಯಲ್ಲಿ ಮನುಷ್ಯನ ಯಶಸ್ಸಿಗೆ ಸಂಬಂಧಿಸಿದ ಅನೇಕ ಸಂಗತಿ ಇದೆ. ಚಾಣಕ್ಯ,   ಮಹಿಳೆಯರು ಕೆಲ ಕೆಲಸಗಳನ್ನು ಮಾಡುವಾಗ ಪುರುಷರು ನೋಡಬಾರದು ಎಂದು ಹೇಳಿದ್ದಾರೆ. ಮಹಿಳೆ ಮಾಡುವ ಕೆಲ ಕೆಲಸಗಳನ್ನು ಯಾರೂ ನೋಡಬಾರದು. ಮತ್ತೆ ಕೆಲ ಕೆಲಸಗಳನ್ನು ಪುರುಷರು ನೋಡ್ಲೇಬಾರದು.  ನಾವಿಂದು ಮಹಿಳೆಯರು ಯಾವ ಕೆಲಸ ಮಾಡುವಾಗ ಪುರುಷರು ನೋಡಬಾರದು ಎಂದು ಚಾಣಕ್ಯ ಹೇಳಿದ್ದಾರೆ, ಹಾಗೆ ಅದ್ರಿಂದ ಆಗುವ ಸಮಸ್ಯೆ ಏನು ಎಂಬುದನ್ನು ನಿಮಗೆ ಹೇಳ್ತೇವೆ.  

ಈ ಕೆಲಸ (Work) ಮಾಡುವಾಗ ಮಹಿಳೆ (Woman) ಯರನ್ನು ನೋಡ್ಬೇಡಿ : 

ಊಟ (Lunch) ಮಾಡುವ ಮಹಿಳೆ : ಊಟ ಮಾಡುವಾಗ ಯಾರನ್ನೂ ನೋಡಬಾರದು. ಊಟ ಮಾಡುವುದನ್ನು ಬೇರೆಯವರು ನೋಡ್ತಿದ್ದರೆ ಸರಿಯಾಗಿ ಊಟ ಸೇರುವುದಿಲ್ಲ. ಚಾಣಕ್ಯ (Chanakya) ನೀತಿಯಲ್ಲೂ ಇದನ್ನು ಹೇಳಲಾಗಿದೆ. ಚಾಣಕ್ಯರ ಪ್ರಕಾರ, ಮಹಿಳೆ ಊಟ ಮಾಡುವಾಗ ಪುರುಷನು ಅವಳನ್ನು ನೋಡಬಾರದು. ಇದು ಶಿಷ್ಟಾಚಾರಕ್ಕೆ ವಿರುದ್ಧವಾಗಿದೆ. ಮಹಿಳೆ ಊಟ ಮಾಡುವಾಗ ಪುರುಷ ನೋಡಿದ್ರೆ ಇದು ಮಹಿಳೆಯ ಮುಜುಗರಕ್ಕೆ ಕಾರಣವಾಗುತ್ತದೆ. ಇದ್ರಿಂದ ಮಹಿಳೆಗೆ ಸರಿಯಾಗಿ ತಿನ್ನಲು ಸಾಧ್ಯವಾಗುವುದಿಲ್ಲ ಎನ್ನುತ್ತದೆ ಚಾಣಕ್ಯ ನೀತಿ.  

ಸೀನು (Sneezing), ಆಕಳಿಕೆ : ಬರೀ ಊಟ ಮಾತ್ರವಲ್ಲ ಮಹಿಳೆ ಸೀನುತ್ತಿದ್ದರೆ ಆಗ ಕೂಡ ಪುರುಷ (male) ಆಕೆಯನ್ನು ನೋಡಬಾರದು ಎನ್ನುತ್ತಾರೆ ಚಾಣುಕ್ಯ. ಇಷ್ಟೇ ಅಲ್ಲ  ಮಹಿಳೆ ಆಕಳಿಸುತ್ತಿದ್ದರೂ ಸಹ  ಪುರುಷನು ಅವಳನ್ನು ನೋಡಬಾರದು ಎನ್ನುತ್ತದೆ ಚಾಣಕ್ಯ ನೀತಿ.

ಬಟ್ಟೆ (Clothes) ಸರಿಪಡಿಸುವಾಗ : ಮುಜುಗರಕ್ಕೀಡಾಗಬಾರದು ಎನ್ನುವ ಕಾರಣಕ್ಕೆ ಮಹಿಳೆ ಬಟ್ಟೆ ಸರಿಮಾಡಿಕೊಳ್ತಾಳೆ. ಆದ್ರೆ ಮಹಿಳೆ ತನ್ನ ಬಟ್ಟೆಗಳನ್ನು ಸರಿಪಡಿಸುತ್ತಿದ್ದರುವಾಗ್ಲೇ ಪುರುಷ ಅವಳನ್ನು ನೋಡಿದರೆ ಆಕೆಗೆ ಮತ್ತಷ್ಟು ಮುಜುಗರವಾಗುತ್ತದೆ. ಮಹಿಳೆ ಬಟ್ಟೆ ಸರಿ ಮಾಡಿಕೊಳ್ಳುವಾಗ ನೋಡುವುದು ತಪ್ಪು. ಮಹಿಳೆ ಬಟ್ಟೆ ಸರಿ ಮಾಡಿಕೊಳ್ತಿದ್ದಾಳೆ ಎಂಬುದು ಗೊತ್ತಾದ್ರೆ ಪುರುಷ ಎಚ್ಚೆತ್ತುಕೊಳ್ಳಬೇಕು. ಆಕೆಯನ್ನು ಅಪ್ಪಿತಪ್ಪಿಯೂ ನೋಡಬಾರದು. ಆಕೆಗೆ ಗೌರವ (Respect ) ನೀಡಿ, ಅಲ್ಲಿಂದ ಹೋಗಬೇಕು ಎನ್ನುತ್ತಾರೆ ಚಾಣಕ್ಯ.  

ಮಸಾಜ್ (Massage) : ಚಾಣಕ್ಯ ನೀತಿ ಪ್ರಕಾರ, ಮಹಿಳೆ ಎಣ್ಣೆಯಿಂದ ತನ್ನ ದೇಹವನ್ನು ಮಸಾಜ್ ಮಾಡಿಕೊಳ್ತಿದ್ದರೆ ಪುರುಷನಾದವನು ಆಕೆಯನ್ನು ನೋಡಬಾರದು. ಇದು ಆಕೆ ಗೌರವಕ್ಕೆ ಧಕ್ಕೆ ತರುತ್ತದೆ. 

Zodiac Signs: ಸಂಗಾತಿಗೆ ಸುಳ್ಳು ಹೇಳೋದ್ರಲ್ಲಿ ಈ ರಾಶಿಯವರು ನಿಸ್ಸೀಮರು

ಮಗುವಿಗೆ ಹಾಲುಣಿಸುವಾಗ : ಸ್ತನ್ಯಪಾನ (Breast Feeding) ಪುಣ್ಯದ ಕೆಲಸ. ಮಹಿಳೆ ತನ್ನ ಮಗುವಿಗೆ ಹಾಲುಣಿಸುವುದನ್ನು ಯಾವುದೇ ಪುರುಷ ನೋಡಬಾರದು. ಪುರುಷ ನೋಡಿದಾಗ ಆಕೆ ವಿಚಲಿತಳಾಗ್ತಾಳೆ. ಇದ್ರಿಂದ ಹಾಲು ಕುಡಿಯುತ್ತಿರುವ ಮಗುವಿಗೆ ತೊಂದರೆಯಾಗುತ್ತದೆ ಎನ್ನುತ್ತಾರೆ ಚಾಣಕ್ಯ.

ಮಗುವಿಗೆ ಜನ್ಮ ನೀಡುವಾಗ : ಚಾಣಕ್ಯ ನೀತಿ ಪ್ರಕಾರ, ಮಹಿಳೆ ಮಗುವಿಗೆ ಜನ್ಮ ನೀಡುವಾಗ ಪುರುಷ ನೋಡಬಾರದು.

ಸಾಲದ ಹೊರೆ ಇಳಿಸಲು ಬೆಲ್ಲವನ್ನು ಹೀಗೆ ಉಪಯೋಗಿಸಿ ನೋಡಿ

ಅಲಂಕಾರ ಮಾಡಿಕೊಳ್ಳುವಾಗ ನೋಡಬಾರದು : ಮಹಿಳೆ ತನ್ನ ಕಣ್ಣುಗಳಿಗೆ ಕಾಜಲ್ ಹಚ್ಚುವಾಗ ಅಥವಾ ಮೇಕ್ಅಪ್ ಮಾಡಿಕೊಳ್ಳುವಾಗ  ಪುರುಷನು ಅವಳನ್ನು ನೋಡಬಾರದು. ಪುರುಷ ಈ ಸಮಯದಲ್ಲಿ ಮಹಿಳೆಯನ್ನು ನೋಡಿದ್ರೆ ಅವಳ ಗಮನ ಬೇರೆಡೆಗೆ ಹೋಗುತ್ತದೆ. ಈ ಸಮಯದಲ್ಲಿ ಪುರುಷ ಅಲ್ಲಿಂದ ದೂರ ಹೋದರೆ ಒಳ್ಳೆಯದು ಎನ್ನುತ್ತಾರೆ ಚಾಣಕ್ಯರು. 

click me!