ಒಬ್ಬ ವ್ಯಕ್ತಿ ತನ್ನ ಜೀವನದಲ್ಲಿ ಚಂದ್ರಗುಪ್ತ ಮೌರ್ಯನ ಪ್ರಧಾನ ಕಾರ್ಯದರ್ಶಿ ಮತ್ತು ಗುರು ಚಾಣಕ್ಯನ ನೀತಿಗಳನ್ನು ಅಳವಡಿಸಿಕೊಳ್ಳಬೇಕು. ಆಧುನಿಕ ಯುಗದಲ್ಲೂ ಚಾಣಕ್ಯನ ನೀತಿ ಯಶಸ್ಸು ಮತ್ತು ಸುಖವನ್ನು ತಂದುಕೊಡುತ್ತದೆ. ನೀವೂ ಸಂತೋಷವಾಗಿರಬೇಕೆಂದ್ರೆ ವಧು ಆಯ್ಕೆ ಮುನ್ನ ಇದನ್ನೋದಿ.
ಹಿಂದೆ ಹಿರಿಯರು ಹೆಣ್ಣುಮಕ್ಕಳ ಜಾತಕ ಹಿಡಿದು ಗಂಡ್ಮಕ್ಕಳ ಮನೆ ಮನೆ ತಿರುಗ್ತಿದ್ದರು. ಮಗಳಿಗೆ ಒಂದು ಮದುವೆ ಆದ್ರೆ ಸಾಕು ಎನ್ನುವ ಸ್ಥಿತಿ ಇತ್ತು. ಈಗ ಕಾಲ ಬದಲಾಗಿದೆ. ಹೆಣ್ಮಕ್ಕಳ ಮನೆಗೆ ಗಂಡಿನ ಕಡೆಯವರು ಜಾತಕ ಹಿಡಿದು ಬರುವ ಸ್ಥಿತಿ ನಿರ್ಮಾಣವಾಗಿದೆ. ಅನೇಕ ಯುವಕರಿಗೆ ಮದುವೆಯಾಗಲು ಹುಡುಗಿ ಸಿಗ್ತಿಲ್ಲ. ಒಂದು ಮದುವೆಯಾದ್ರೆ ಸಾಕು ಅಂತಾ ಹರಕೆ ಹೊತ್ತುಕೊಳ್ಳುವವರ ಸಂಖ್ಯೆ ಕೂಡ ಸಾಕಷ್ಟಿದೆ. ಅದೆಷ್ಟೋ ಯುವಕರು ಒಂಡಿಯಾಗಿಯೇ ಜೀವನ ಮುಂದುವರೆಸುತ್ತಿದ್ದಾರೆ. ಇಂಥ ಸಮಯದಲ್ಲಿ ಯಾವುದೋ ಒಂದು ಹುಡುಗಿ ಓಕೆ ಅಂದ್ರೆ ಹುಡುಗನ ಬಾಳಲ್ಲಿ ಬಂಗಾರದ ಮಳೆಯಾಗುತ್ತದೆ. ಖುಷಿಯಲ್ಲಿ ತೇಲಾಡುವ ಹುಡುಗ ಎಲ್ಲವನ್ನು ಮರೆಯುತ್ತಾನೆ. ಮದುವೆಗೆ ಸಿದ್ಧತೆ ನಡೆಸುತ್ತಾನೆ. ಮದುವೆಗೆ ಹುಡುಗಿ ಸಿಕ್ಕಿರೋದೇ ಹೆಚ್ಚು ಹಾಗಿರುವಾಗ ನೋಡೋಕೆ ಚೆನ್ನಾಗಿಲ್ಲ, ಸ್ವಭಾವ ಇಷ್ಟವಾಗಿಲ್ಲ ಅಂತ ತಿರಸ್ಕರಿಸಿದ್ರೆ ಮೂರ್ಖತನ ಅಂತಾ ಜನರು ಅಂದುಕೊಳ್ಳೋದಿದೆ. ಹುಡುಗಿ ಸಿಕ್ಕಿಲ್ಲ ಎನ್ನುವ ಕಾರಣಕ್ಕೆ ಯಾವ್ ಯಾವುದೋ ಹುಡುಗಿ ಕೈ ಹಿಡಿದ್ರೆ ಜೀವನ ನರಕವಾಗುತ್ತದೆ. ಅರ್ಥಶಾಸ್ತ್ರಜ್ಞ ಚಾಣಕ್ಯ ಮದುವೆ ಬಗ್ಗೆ ಸಾಕಷ್ಟು ವಿಷ್ಯಗಳನ್ನು ಹೇಳಿದ್ದಾರೆ. ಅವರ ಪ್ರಕಾರ ಮದುವೆ ಆಗುವ ಹುಡುಗಿಗೆ ಕೆಲ ಅರ್ಹತೆ ಇರಬೇಕು. ಹಾಗೆ ಕೆಲ ಸ್ವಭಾವದ ಹುಡುಗಿಯನ್ನು ಎಂದಿಗೂ ಮದುವೆ ಆಗ್ಬಾರದು. ಅಪ್ಪಿತಪ್ಪಿ ಮದುವೆ ಆದ್ರೆ ಮುಂದೆ ಮಾರಿಹಬ್ಬ ಗ್ಯಾರಂಟಿ. ನಾವಿಂದು ಚಾಣುಕ್ಯ ಎಂಥ ಸ್ವಭಾವದ ಹುಡುಗಿ ಮದುವೆ ಆಗ್ಬೇಡಿ ಎಂದಿದ್ದಾರೆ ಎಂಬುದನ್ನು ನಿಮಗೆ ಹೇಳ್ತೇವೆ.
ಸೌಂದರ್ಯ (Beauty) ದ ಬಗ್ಗೆ ದುರಹಂಕಾರ : ಯಾವ ಹುಡುಗಿ ತಮ್ಮ ಬುದ್ಧಿವಂತಿಕೆ ಮತ್ತು ಸೌಂದರ್ಯಕ್ಕೆ ಹೆಚ್ಚು ಮಹತ್ವ ನೀಡ್ತಾಳೋ, ಅದಕ್ಕೆ ಮೊದಲ ಆದ್ಯತೆ ನೀಡ್ತಾಳೋ ಅವಳನ್ನು ವಿವಾಹ (Marriage) ವಾಗಬೇಡಿ ಎನ್ನುತ್ತಾರೆ ಚಾಣಕ್ಯ. ಅವರು ತಮ್ಮ ಸೌಂದರ್ಯ ಹಾಗೂ ಬುದ್ಧಿವಂತಿಕೆ ಬಗ್ಗೆ ದುರಹಂಕಾರ ಹೊಂದಿರುತ್ತಾರೆ. ಅವರು ಅತೃಪ್ತರಾಗಿರುವುದಲ್ಲದೆ ಬೇರೆಯವರ ಸಂತೋಷದ ಬಗ್ಗೆ ಕಿಂಚಿತ್ತೂ ಆಲೋಚನೆ ಮಾಡುವುದಿಲ್ಲ. ಆಕೆಗೆ ಭೌತಿಕ ವಸ್ತುಗಳ ಮೇಲೆ ಅಪಾರ ಪ್ರೀತಿ ಇರುತ್ತದೆ. ಮದುವೆಯಾದ್ರೂ ಗಂಡ (Husband), ಕುಟುಂಬಸ್ಥರ ಯೋಗಕ್ಷೇಮವನ್ನು ಗಮನಿಸೋದಿಲ್ಲ ಎನ್ನುತ್ತಾರೆ ಚಾಣಕ್ಯ.
ಈ ರಾಶಿ ಹುಡುಗಿಯರು ಹೆಂಡತಿಯಾದರೆ,ಪುರುಷರಿಗೆ ಪ್ರತಿದಿನವೂ ಹಬ್ಬವೇ..
ಅವಮಾನ – ಅಗೌರವ : ಯಾವ ಯುವತಿ ಬೇರೆಯವರಿಗೆ ಗೌರವ ನೀಡುವುದಿಲ್ಲವೋ, ಬೇರೆಯವರನ್ನು ಅವಮಾನ ಮಾಡಲು ಭಯಪಡುವುದಿಲ್ಲವೋ ಅಂಥವರಿಂದ ದೂರವಿರುವುದು ಒಳ್ಳೆಯದು ಎನ್ನುತ್ತಾರೆ ಚಾಣಕ್ಯ. ಅಂಥವರು ಪತಿ ಮತ್ತು ಕುಟುಂಬದ ಸದಸ್ಯರಿಗೆ ಎಂದಿಗೂ ಗೌರವ ನೀಡುವುದಿಲ್ಲ. ಸದಾ ನಕಾರಾತ್ಮಕ ಮಾತುಗಳನ್ನು ಆಡುವ ಆಕೆ ಮನೆಯಲ್ಲಿ ಕಲಹ, ಗಲಾಟೆಗೆ ಕಾರಣವಾಗ್ತಾಳೆ.
ಸುಳ್ಳುಗಾರ್ತಿ : ಸಣ್ಣಪುಟ್ಟ ವಿಷ್ಯದಿಂದ ಹಿಡಿದು ದೊಡ್ಡ ಘಟನೆಯವರೆಗೆ ಸದಾ ಸುಳ್ಳು ಹೇಳುವ ಹುಡುಗಿಯನ್ನು ನೀವು ಮದುವೆ ಆಗಬೇಡಿ. ಆಕೆ ಸುಳ್ಳಿನಲ್ಲಿಯೇ ಮನೆ ಕಟ್ಟುವ ಹಾಗೂ ಮನೆ ಒಡೆಯುವ ಕೆಲಸ ಮಾಡುತ್ತಾಳೆ. ಆಕೆ ಸುಳ್ಳು ಇಡೀ ಕುಟುಂಬದ ಸರ್ವನಾಶಕ್ಕೆ ಕಾರಣವಾಗುತ್ತದೆ. ಆಕೆಗೆ ಸುಳ್ಳು ಹೇಳೋದು ತಪ್ಪು ಎಂಬುದು ಗೊತ್ತಿದ್ದರೂ ತನ್ನನ್ನು ಸುಧಾರಿಸಿಕೊಳ್ಳುವ ಪ್ರಯತ್ನ ನಡೆಸೋದಿಲ್ಲ. ಇದು ನಿಮ್ಮ ದಾಂಪತ್ಯ ನಾಶಕ್ಕೂ ಕಾರಣವಾಗುತ್ತದೆ.
ನೀವೇನ್ ಕೆಲ್ಸ ಮಾಡಿದ್ರೂ ಯಾರೂ ಗುರುತಿಸೋಲ್ವಾ? ಹಾಗಿದ್ರೆ ನಿಮ್ಮ ರಾಶಿ ಈ 4ರಲ್ಲಿ ಒಂದಿರ್ಬೇಕು..
ಮೋಸ : ಮೋಸ ಮಾಡುವ ಸ್ವಭಾವದ ಹುಡುಗಿಯನ್ನೂ ಮದುವೆ ಆಗ್ಬೇಡಿ ಎನ್ನುತ್ತಾರೆ ಚಾಣಕ್ಯ. ಮೋಸ ಮಾಡುವ ಹುಡುಗಿಯಿಂದ ಪ್ರಾಮಾಣಿಕತೆ ನಿಮಗೆ ಸಿಗೋದಿಲ್ಲ. ತನ್ನ ಅನುಕೂಲಕ್ಕಾಗಿ ಆಕೆ ಎಷ್ಟೇ ಆಪ್ತರಿದ್ದರೂ ಅವರಿಗೆ ಮೋಸ ಮಾಡ್ತಾಳೆ. ಅದ್ರಲ್ಲಿ ನೀವೂ ಒಬ್ಬರಾಗಿರಬಹುದು. ಇಂಥ ಹುಡುಗಿಯರು ನಿಮ್ಮ ಜೀವನದಲ್ಲಿ ಪ್ರವೇಶ ಮಾಡುವ ಪ್ರಯತ್ನ ನಡೆಸಿದ್ರೆ ಅಲ್ಲಿಗೇ ಸಂಬಂಧ ಕತ್ತರಿಸಿಕೊಳ್ಳಿ ಎನ್ನುತ್ತಾರೆ ಚಾಣಕ್ಯ.