ಲಕ್ಷ್ಮೀದೇವಿ ನಿಮ್ಮ ಬಳಿ ಯಾವಾಗ್ಲೂ ಇರ್ಬೇಕಾ? ಈ ಐದು ಹರಳುಗಳಲ್ಲಿದೆ ಅಂಥದ್ದೊಂದು ಶಕ್ತಿ

By Suvarna News  |  First Published Apr 13, 2024, 3:09 PM IST

ವಿವಿದ ರತ್ನಗಳು ಅಥವಾ ಹರಳುಗಳ ಪ್ರಭಾವ ಮನುಷ್ಯನ ಮೇಲೆ ಇದ್ದೇ ಇದೆ. ರತ್ನಗಳನ್ನು ನಿರ್ದಿಷ್ಟ ಗ್ರಹದೊಂದಿಗೂ ಗುರುತಿಸಲಾಗುತ್ತದೆ. ಕೆಲವು ಹರಳುಗಳನ್ನು ಧರಿಸುವುದರಿಂದ ಲಕ್ಷ್ಮೀ ದೇವಿಯ ಕೃಪೆಯಾಗುತ್ತದೆ, ಜೀವನದಲ್ಲಿ ಎಂದಿಗೂ ಹಣಕಾಸು ಸಮಸ್ಯೆ ಎದುರಾಗುವುದಿಲ್ಲ, ಆರ್ಥಿಕ ಸಮೃದ್ಧತೆ ಹೊಂದಲು ಸಾಧ್ಯವಾಗುತ್ತದೆ ಎಂದು ನಂಬಲಾಗಿದೆ. 
 


ಬಣ್ಣಬಣ್ಣದಲ್ಲಿ ಮನಸೂರೆಗೊಳ್ಳುವ ರತ್ನಗಳು ಅಥವಾ ಹರಳುಗಳು ಮನುಷ್ಯರ ಮೇಲೆ ತೀವ್ರ ಪ್ರಭಾವ ಹೊಂದಿವೆ. ಶತಶತಮಾನಗಳ ಹಿಂದಿನಿಂದಲೂ ಹರಳುಗಳು ಮಾನವನಲ್ಲಿ ಆಸಕ್ತಿಯನ್ನು ಹುಟ್ಟುಹಾಕಿವೆ, ಅವುಗಳ ಬಗ್ಗೆ ಅಧ್ಯಯನ ಮಾಡುವಂತೆ ಪ್ರೇರೇಪಿಸಿವೆ. ಅವುಗಳನ್ನು ಹೊಂದುವುದರಿಂದ ನಿಗೂಢವಾದ ಅಂಶಗಳು ನಮ್ಮ ಜೀವನಕ್ಕೆ ಸಂಬಂಧಿಸಿದ ಅನೇಕ ಅಂಶಗಳ ಮೇಲೆ ಪ್ರಭಾವ ಬೀರುವುದನ್ನು ಗುರುತಿಸಲಾಗಿದೆ. ಎಲ್ಲ ಹರಳುಗಳೂ ಒಂದೇ ರೀತಿಯ ಉದ್ದೇಶಕ್ಕಲ್ಲ ಅಥವಾ ಎಲ್ಲ ಹರಳುಗಳನ್ನೂ ಎಲ್ಲ ಉದ್ದೇಶಗಳಿಗಾಗಿ ಬಳಸಲು ಸಾಧ್ಯವಿಲ್ಲ. ಪ್ರತಿಯೊಂದು ಉದ್ದೇಶಕ್ಕೂ ಬೇರೆ ಬೇರೆ ಹರಳುಗಳನ್ನು ಧರಿಸಿದರೆ ಅದಕ್ಕೆ ಸಂಬಂಧಿಸಿದ ಎನರ್ಜಿಯೊಂದಿಗೆ ಸಾಮರಸ್ಯ ಹೊಂದುವುದು ಹರಳುಗಳ ವೈಶಿಷ್ಟ್ಯ. ಕೆಲವು ಹರಳುಗಳನ್ನು ಧರಿಸಿದರೆ ಸಂಪತ್ತು, ಸಮೃದ್ಧಿ ಪ್ರಾಪ್ತವಾಗುತ್ತದೆ ಎನ್ನುವ ನಂಬಿಕೆಯಿದೆ. ಲಕ್ಷ್ಮೀದೇವಿ ಕೆಲವು ರೀತಿಯ ರತ್ನಗಳಿಗೆ ಮನಸೋಲುತ್ತಾಳೆ. ಅವುಗಳನ್ನು ಧರಿಸುವುದರಿಂದ ಹಣಕಾಸು ಸ್ಥಿತಿ ಯಾವಾಗಲೂ ಉತ್ತಮವಾಗಿರುತ್ತದೆ. ಸಂಪತ್ತನ್ನು ನಮ್ಮತ್ತ ಸೆಳೆಯಬೇಕು ಎಂದಾದರೆ ಈ ಹರಳುಗಳನ್ನು ಧರಿಸುವುದು ಸೂಕ್ತ. ಲಕ್ಷ್ಮೀದೇವಿ ಕೃಪೆಗೆ ಪಾತ್ರರಾಗಿರುವ ಐದು ಹರಳುಗಳನ್ನು ಪ್ರಮುಖವಾಗಿ ಗುರುತಿಸಲಾಗಿದೆ. ಯಾವುದೇ ಹರಳನ್ನು ಧರಿಸುವ ಮುನ್ನ ನಿಮಗೆ ಹೊಂದಾಣಿಕೆಯಾಗುವುದೇ ಎನ್ನುವ ಬಗ್ಗೆ ವಿಚಾರಿಸಿಯೇ ಧರಿಸುವುದು ಅಗತ್ಯ.

•    ಪಚ್ಚೆ ಅಥವಾ ಎಮರಾಲ್ಡ್‌ (Emerald)
ಹಸಿರು (Green) ಬಣ್ಣದಲ್ಲಿ ಮಾಯಕದಂತೆ ಸೆಳೆಯುವ ಹರಳು (Stone) ಪಚ್ಚೆ ಕಲ್ಲು. ನಮ್ಮ ದೇಶದ ಶ್ರೀಮಂತ ಕುಟುಂಬದ ನೀತಾ ಅಂಬಾನಿ ಆಗಾಗ್ಗೆ ಹಸಿರು ಬಣ್ಣದ ಹರಳಿನಲ್ಲಿ ಮಿಂಚುತ್ತಾರೆ. ದೊಡ್ಡ ದೊಡ್ಡ ಪಚ್ಚೆಯ ಹರಳಿನ ಉಂಗುರ, ನೆಕ್ಲೇಸ್‌ ಧರಿಸುವುದು ಅವರಿಗೆ ಇಷ್ಟ. ಇದನ್ನು ಸಂಪತ್ತು (Wealth) ಮತ್ತು ಸಮೃದ್ಧಿಯೊಂದಿಗೆ (Prosperity) ಬಹಳ ಹಿಂದಿನಿಂದಲೂ ಗುರುತಿಸಲಾಗಿದೆ. ಪಚ್ಚೆಯ ಹರಳು ಹಣಕಾಸು ಅವಕಾಶಗಳ ಬಾಗಿಲು ತೆರೆಯುತ್ತದೆ ಎನ್ನುವ ನಂಬಿಕೆಯಿದೆ. ಇನ್ನೂ ಮುಖ್ಯವೆಂದರೆ, ಹಣಕಾಸು ದೃಷ್ಟಿಯಿಂದ ಬುದ್ಧಿವಂತಿಕೆಯ ನಿರ್ಧಾರಗಳನ್ನು ಕೈಗೊಳ್ಳಲು ಇದು ಪ್ರೇರೇಪಣೆ ನೀಡುತ್ತದೆ. ಜೀವನದಲ್ಲಿ ಆರ್ಥಿಕ ಯಶಸ್ಸು ಹೊಂದಲು, ಹಣಕಾಸು ಸ್ಥಿತಿಯನ್ನು ಉತ್ತಮಪಡಿಸಿಕೊಳ್ಳಲು ಪಚ್ಚೆಯನ್ನು ಧರಿಸಬೇಕು.

Tap to resize

Latest Videos

ಈ ರಾಶಿ ಹುಡುಗಿಯರು ಹೆಂಡತಿಯಾದರೆ,ಪುರುಷರಿಗೆ ಪ್ರತಿದಿನವೂ ಹಬ್ಬವೇ..

•    ಹಳದಿ ಸ್ಫಟಿಕ ಅಥವಾ ಸಿಟ್ರೀನ್ (Citrine)
ಸನ್‌ ಶೈನ್‌ ಸ್ಟೋನ್‌ ಎಂದು ಕರೆಸಿಕೊಳ್ಳುವ ಹಳದಿ ಸ್ಫಟಿಕ ಧನಾತ್ಮಕ ಎನರ್ಜಿಯೊಂದಿಗೆ (Energy) ಗುರುತಿಸಿಕೊಂಡಿದೆ. ಚಿನ್ನದ ಬಣ್ಣದ ಈ ಸ್ಫಟಿಕ ಸಂಪತ್ತು ಮತ್ತು ಹೇರಳತೆಯನ್ನು ಆಕರ್ಷಿಸುತ್ತದೆ. ಇದು ಧರಿಸುವವರ ಆತ್ಮವಿಶ್ವಾಸ, ಕ್ರಿಯಾಶೀಲತೆ, ಆರ್ಥಿಕ ಅದೃಷ್ಟ (Luck) ಹೆಚ್ಚಿಸುತ್ತದೆ ಎನ್ನುವ ನಂಬಿಕೆಯಿದೆ. ಸದಾ ಪ್ರಗತಿಶೀಲರಾಗಿರಬೇಕು ಎಂದಾದರೆ ಈ ಹಳದಿ ಸ್ಫಟಿಕವನ್ನು ಧರಿಸಬೇಕು. 

•    ಮಾಣಿಕ್ಯ ಅಥವಾ ರೂಬಿ (Ruby)
ಕಡುಕೆಂಪು ಬಣ್ಣದಲ್ಲಿ ಮಿನುಗುವ ಮಾಣಿಕ್ಯ ಶತಮಾನಗಳಿಂದಲೂ ಸಂಪತ್ತು ಮತ್ತು ಸಮೃದ್ಧಿಯೊಂದಿಗೆ ಗುರುತಿಸಿಕೊಂಡಿದೆ. ಹಣಕಾಸು (Financial) ವಿಚಾರದಲ್ಲಿ ಯಶಸ್ಸಿನ ಮಾರ್ಗ ತೆರೆಯುವ ರೂಬಿ, ವ್ಯಕ್ತಿಯಲ್ಲಿರುವ ನಾಯಕತ್ವದ ಕೌಶಲ್ಯವನ್ನು ವಿಸ್ತರಿಸುವ, ಹೆಚ್ಚಿಸುವ ಕೆಲಸ ಮಾಡುತ್ತದೆ. ಮಾಣಿಕ್ಯವನ್ನು ಧರಿಸುವುದರಿಂದ ಆಂತರಿಕ ಸಾಮರ್ಥ್ಯ (Ability) ಹೆಚ್ಚಿ, ಪ್ರಗತಿಯ ಪಥದಲ್ಲಿ ಹೆಜ್ಜೆ ಹಾಕಲು ಸಾಧ್ಯ.

•    ನೀಲಿ ನೀಲಮಣಿ ಅಥವಾ ಬ್ಲೂ ಸಪೈರ್‌ (Blue Sapphire)
ಆಳವಾದ ನೀಲಿ ಬಣ್ಣದಲ್ಲಿ ಮಿನುಗುವ ಈ ಹರಳನ್ನು ಬುದ್ಧಿವಂತಿಕೆ, ಬದ್ಧತೆ ಮತ್ತು ಹಣಕಾಸು ಪ್ರಗತಿಯೊಂದಿಗೆ ಗುರುತಿಸಲಾಗಿದೆ. ಇದನ್ನು ಧರಿಸುವುದರಿಂದ ಸಮೃದ್ಧಿ ನಿಮ್ಮದಾಗುತ್ತದೆ, ಹಣಕಾಸು ವಿಚಾರದಲ್ಲಿ ಸ್ಥಿರತೆ (Stability) ಹೊಂದಲು ಸಾಧ್ಯವಾಗುತ್ತದೆ. ಹಣಕಾಸು ಅಭಿವೃದ್ಧಿಗೆ ಪೂರಕವಾಗುವ ಅವಕಾಶಗಳು ಹೆಚ್ಚುತ್ತವೆ ಹಾಗೂ ಸಂಪತ್ತನ್ನು ಆಕರ್ಷಿಸಲು ಸಾಧ್ಯವಾಗುತ್ತದೆ.

ಮುಗಿಯದ ಸಮಸ್ಯೆಯೇ? ಮನೆ ಮುಖ್ಯದ್ವಾರದಲ್ಲಿ ಕೆಂಪು ಬಟ್ಟೇಲಿ ಉಪ್ಪು ಕಟ್ಟಿಡಿ!

•    ಪುಷ್ಯರಾಗ ಅಥವಾ ಹಳದಿ ಸಪೈರ್‌ (Yellow Sapphire)
ಪ್ರಪಂಚದ ಅಮೂಲ್ಯ ಹರಳುಗಳಲ್ಲಿ ಒಂದಾಗಿರುವ ಪುಷ್ಯರಾಗ, ಗುರು ಗ್ರಹದಿಂದ ಆಳಲ್ಪಡುತ್ತದೆ. ಉತ್ತಮ ಅದೃಷ್ಟ ಮತ್ತು ಸಂಪತ್ತನ್ನು ಆಕರ್ಷಿಸುವ ಶಕ್ತಿಯುತ ರತ್ನವಾಗಿದೆ. ಸೂರ್ಯನ ಹಳದಿ ಬಣ್ಣದಲ್ಲಿರುವ ಇವು ಧನಾತ್ಮಕ (Positive) ಎನರ್ಜಿಯನ್ನು ಸೆಳೆಯುತ್ತದೆ, ಪ್ರಗತಿಗೆ ಕಾರಣವಾಗುತ್ತದೆ. ಇದನ್ನು ಧರಿಸುವುದರಿಂದ ಜೀವನದಲ್ಲಿ ಯಶಸ್ಸು ಕಟ್ಟಿಟ್ಟ ಬುತ್ತಿ. 

click me!