ಚಾಣಕ್ಯ ನೀತಿ; ಈ ಮೂವರು ಹಾವಿಗಿಂತಲೂ ವಿಷಕಾರಿ, ಎಂದಿಗೂ ಅವರ ಬಳಿ ಸಹಾಯ ಕೇಳಬೇಡಿ

By Mahmad RafikFirst Published Oct 24, 2024, 12:11 PM IST
Highlights

ಕೌಟಿಲ್ಯ ಅವರ ನೀತಿಗಳಲ್ಲಿ ಮೂರು ಜನರಿಂದ ಯಾವುದೇ ಸಮಯದಲ್ಲಿ ಸಹಾಯ ಪಡೆದುಕೊಳ್ಳುಬಾರದು. ಆ ಮೂವರಿಂದ ಸಹಾಯ ಪಡೆದುಕೊಂಡರೆ ಏನಾಗುತ್ತೆ ಎಂಬುದರ ಮಾಹಿತಿ ಇಲ್ಲಿದೆ.

ಚಾರ್ಯ ಚಾಣಕ್ಯರು ತಮ್ಮ ನೀತಿ ಶಾಸ್ತ್ರಗಳಲ್ಲಿ ಜೀವನಕ್ಕೆ ಸಂಬಂಧಿಸಿದ ಹಲವು ವಿಷಯಗಳ ಬಗ್ಗೆ ಹೇಳಿದ್ದಾರೆ. ಜೀವನದ ಪ್ರತಿಯೊಂದು ಹಂತದ ಬಗ್ಗೆಯೂ ಚಾಣಕ್ಯ ನೀತಿಗಳಲ್ಲಿ ವಿವರವಾಗಿ ವಿವರಿಸಲಾಗಿದೆ. ಆಚಾರ್ಯ ಚಾಣಕ್ಯರು ಹೇಳಿರುವ ನೀತಿಗಳನ್ನು ಅಳವಡಿಸಿಕೊಂಡ ಅಥವಾ ಅಳವಡಿಸಿಕೊಳ್ಳುವ ವ್ಯಕ್ತಿ ಜೀವನದಲ್ಲಿ ಯಶಸ್ಸು ಕಾಣುತ್ತಾನೆ. ಹಾಗೆಯೇ ಆತ ಯಾರಿಂದಲೂ ಮೋಸಕ್ಕೆ ಒಳಗಾಗುವುದಿಲ್ಲ. ಕೌಟಿಲ್ಯ ಅವರ ನೀತಿಗಳಲ್ಲಿ ಮೂರು ಜನರಿಂದ ಯಾವುದೇ ಸಮಯದಲ್ಲಿ ಸಹಾಯ ಪಡೆದುಕೊಳ್ಳುಬಾರದು. ಒಂದು ವೇಳೆ ಸಹಾಯ ಪಡೆದುಕೊಂಡರೆ ಆತ ಸ್ವತಃ ತನ್ನ ಕಾಲಿನ ಮೇಲೆ ಕೊಡಲಿ ಏಟು ಹಾಕಿಕೊಂಡಂತೆ ಎಂದು ಹೇಳಿದ್ದಾರೆ. ಹಾಗಾದ್ರೆ ಆ ಮೂರು ವ್ಯಕ್ತಿಗಳು ಯಾರು ಎಂಬುದನ್ನು ಈ ಲೇಖನದಲ್ಲಿ ತಿಳಿದುಕೊಳ್ಳೋಣ

1.ದುಃಖದಲ್ಲಿರುವ ವ್ಯಕ್ತಿ
ಆಚಾರ್ಯ ಚಾಣಕ್ಯರ ನೀತಿ ಪ್ರಕಾರ, ಯಾವಾಗಲೂ ದುಃಖದಲ್ಲಿರುವ ವ್ಯಕ್ತಿ ಸದಾ ಅಳುತ್ತಲೇ ಇರುತ್ತಾನೆ. ಇಂತಹವರ ಬಳಿ ಸಹಾಯ ಬಯಸಿ ಎಂದಿಗೂ ಹೋಗಬಾರದು. ಇಂತಹ ಜನರು ಬೇರೆಯವರ ಏಳಿಗೆಯನ್ನು ಕಂಡು ಅಸೂಯೆಪಟ್ಟುಕೊಳ್ಳುತ್ತಾರೆ. ತಮ್ಮ ಜೊತೆಯಲ್ಲಿದ್ದವರು ಜೀವನದಲ್ಲಿ ಚೆನ್ನಾಗಿ ಆಗುತ್ತಿದ್ದರೆ ಅವರ ವಿರುದ್ಧ ಷಡ್ಯಂತ್ರ, ಪಿತೂರಿ ಮಾಡುತ್ತಾರೆ. ತಮ್ಮ ಜೊತೆಯಲ್ಲಿದ್ದವರನ್ನು ಹಾಳು ಮಾಡುವ ಮನಸ್ಥಿತಿಯನ್ನು ಹೊಂದಿರುತ್ತಾರೆ. ಹಾಗಾಗಿ ಇಂತಹ ವ್ಯಕ್ತಿಗಳ ಬಳಿ ಎಂದಿಗೂ ಸಹಾಯ ಪಡೆದುಕೊಳ್ಳಬಾರದು ಮತ್ತು ಭವಿಷ್ಯ ಯೋಜನೆಗಳನ್ನು ಹಂಚಿಕೊಳ್ಳಬಾರದು.  

Latest Videos

ಸಹಾಯ ಪಡೆದುಕೊಂಡರೆ ಅದು ನಿಮ್ಮ ಜೀವನದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಇನ್ನೊಂದು ವಿಷಯ ಏನು ಅಂದ್ರೆ ಇವರು ಜನರ ಮುಂದೆ ದುಃಖದಲ್ಲಿದ್ದಂತೆ ನಟಿಸುತ್ತಿರುತ್ತಾರೆ. ಆದ್ರೆ ನಿಜ ಜೀವನದಲ್ಲಿ ಚೆನ್ನಾಗಿಯೇ ಇದ್ದು, ಮುಖವಾಡ ಹಾಕಿಕೊಂಡು ಬದುಕುತ್ತಿರುತ್ತಾರೆ. 

ಇದನ್ನೂ ಓದಿ: ಹಣ, ಸಂಪತ್ತು, ಸಮಾಜದಲ್ಲಿ ಗೌರವ ಸಿಗಬೇಕಾದ್ರೆ ಚಾಣಕ್ಯ ಹೇಳಿದ 'ತ್ರಿ ಸೂತ್ರ' ಪಾಲಿಸಿ

2.ಸೊಕ್ಕಿನ ವ್ಯಕ್ತಿ
ಆಚಾರ್ಯ ಚಾಣಕ್ಯರ ಪ್ರಕಾರ, ಸೊಕ್ಕು ಅಥವಾ ಅಹಂಕಾರದ ವ್ಯಕ್ತಿ ಬಳಿಯೂ ಯಾವುದೇ ಸಹಾಯ ಪಡೆದುಕೊಳ್ಳಬಾರದು. ಅಹಂಕಾರವುಳ್ಳ ವ್ಯಕ್ತಿಗಳು ಮೂರ್ಖರಾಗಿರುತ್ತಾರೆ. ಮೂರ್ಖರ ಜೊತೆಗಿನ ಸ್ನೇಹ ಸಹ ಒಳ್ಳೆಯದಲ್ಲ. ಸೊಕ್ಕಿನ ವ್ಯಕ್ತಿತ್ವ ಹೊಂದಿರುವ ವ್ಯಕ್ತಿಗಳು ಸಹಾಯ ಮಾಡಿ ಬಳಿಕ ನಿಮ್ಮನ್ನು ಅವಮಾನ ಮಾಡಲು ಪ್ಯಯತ್ನಿಸುತ್ತಾರೆ. ಎಂದಿಗೂ ನಿಮ್ಮ ಏಳಿಗೆಯನ್ನು ಸಹಿಸದ ಇವರು, ತುಳಿಯುವ ಕೆಲಸ ಮಾಡುವ ಕೆಟ್ಟ ಗುಣವನ್ನು ಹೊಂದಿರುತ್ತಾರೆ. ಸಹಾಯ ಮಾಡುತ್ತಿದ್ದರೂ ಯಾವಾಗಲೂ ನಿಮ್ಮ ಬಗ್ಗೆ ಕೆಟ್ಟ ಅಭಿಪ್ರಾಯಗಳನ್ನು ಹೊಂದಿರುತ್ತಾರೆ. ಇಂತಹ ಜನರಿಂದ ಸಹಾಯ ಪಡೆದುಕೊಳ್ಳುವುದು ರಾತ್ರಿ ಕಂಡ ಬಾವಿಯಲ್ಲಿ ಹಗಲು ಬೀಳೋದು ಎಂಬಂತೆ ಆಗುತ್ತದೆ.

3.ಚಾರಿತ್ರ್ಯಹೀನ ಮಹಿಳೆ 
ಆಚಾರ್ಯ ಚಾಣಕ್ಯ ನೀತಿಗಳ ಪ್ರಕಾರ, ಚಾರಿತ್ರ್ಯಹೀನ ಮಹಿಳೆಯ ಸಹವಾಸ ಸಹ ತುಂಬಾ ಅಪಾಯಕಾರಿ. ಚಾರಿತ್ರ್ಯಹೀನ ಮಹಿಳೆ ದುಷ್ಟ ಮತ್ತು ನೀಚ ಬುದ್ಧಿಯನ್ನು ಹೊಂದಿರುತ್ತಾಳೆ. ಒಂದು ವೇಳೆ ಇಂತಹ ಮಹಿಳೆ ಬಳಿ ಸಹಾಯ ಪಡೆದುಕೊಂಡ್ರೆ ಆಕೆಯ ಜಾಲದಿಂದ ಹೊರ ಬರೋದು ತುಂಬಾ ಕಷ್ಟವಾಗುತ್ತದೆ. ಇಂತಹ ಮಹಿಳೆಯರು ತಮ್ಮ ಲಾಭಕ್ಕಾಗಿ ತಮ್ಮಿಂದ ಸಹಾಯ ಪಡೆದುಕೊಂಡವರನ್ನು ಬಳಸಿಕೊಳ್ಳುತ್ತಾರೆ. ಇಂತಹ ಮಹಿಳೆಯರು ಹಣದ ಮೇಲೆ ವಿಪರೀತ ಮೋಹ ಹೊಂದಿದ್ದು, ಅದಕ್ಕಾಗಿ  ಏನು ಬೇಕಾದ್ರೂ ಮಾಡಲು ಸಿದ್ಧರಾಗಿರುತ್ತಾರೆ. ಹಾಗಾಗಿ ಇಂತಹವರ ಜೊತೆ ವ್ಯವಹರಿಸುವಾಗ ತುಂಬಾ ಎಚ್ಚರಿಕೆಯಿಂದಿರಬೇಕು ಎಂದು ಆಚಾರ್ಯ ಚಾಣಕ್ಯರು ಹೇಳುತ್ತಾರೆ.

ಇದನ್ನೂ ಓದಿ: ಚಾಣಕ್ಯ ನೀತಿಯಲ್ಲಿನ ಉತ್ತಮ ಪತ್ನಿಯ ಗುಣಗಳ ಪಟ್ಟಿ ಇಲ್ಲಿದೆ ನೋಡಿ

ಸಮಾಜದ ಕಟ್ಟುಪಾಡುಗಳು, ವೃತ್ತಿ, ಬಾಂಧವ್ಯ ಸೇರಿದಂತೆ ಮಾನವೀಯ ಮೌಲ್ಯಗಳ ಬಗ್ಗೆ ಚಾಣಕ್ಯರು ತಮ್ಮ ನೀತಿಗಳಲ್ಲಿ ಉಲ್ಲೇಖಿಸಿದ್ದಾರೆ. ಜೀವನದಲ್ಲಿ ಸಂಪತ್ತು, ಯಶಸ್ಸು ಹಾಗೂ ಸಮಾಜದಲ್ಲಿ ಗೌರವ ಸಿಗಬೇಕಾದ್ರೆ ನೀವು ಚಾಣಕ್ಯ ಹೇಳಿರುವ ಮೂರು ಸೂತ್ರಗಳನ್ನು ಪಾಲಿಸಬೇಕು.

click me!