ಉತ್ತರ ಕನ್ನಡದಲ್ಲಿ ಹೊಸ್ತಿನ ಹಬ್ಬ ಆಚರಿಸಿದ ರೈತರು: ಭತ್ತದ ಪೈರಿಗೆ ಪೂಜೆ ಸಲ್ಲಿಕೆ

By Govindaraj S  |  First Published Oct 23, 2024, 10:32 PM IST

ಜಿಲ್ಲೆಯ ಕುಮಟಾ ತಾಲೂಕಿನ ಬರ್ಗಿ‌ಯಲ್ಲಿ ಹೊಸ್ತಿನ ಹಬ್ಬವನ್ನು ವಿಶೇಷವಾಗಿ ಆಚರಿಸಲಾಗುತ್ತದೆ. ಈ ಹಬ್ಬದ ಹಿನ್ನೆಲೆ ಇಡೀ ಊರಿಗೆ ಊರೇ ಗ್ರಾಮಗಳ ಗದ್ದೆಗೆ ತೆರಳಿ, ಅಲ್ಲಿ ಪೂಜೆ ಮಾಡಿದ ಬಳಿಕ ಕದರು ತರುವ ಸಂಪ್ರದಾಯವಿದೆ. 


ಉತ್ತರ ಕನ್ನಡ (ಅ.23): ಜಿಲ್ಲೆಯ ಕುಮಟಾ ತಾಲೂಕಿನ ಬರ್ಗಿ‌ಯಲ್ಲಿ ಹೊಸ್ತಿನ ಹಬ್ಬವನ್ನು ವಿಶೇಷವಾಗಿ ಆಚರಿಸಲಾಗುತ್ತದೆ. ಈ ಹಬ್ಬದ ಹಿನ್ನೆಲೆ ಇಡೀ ಊರಿಗೆ ಊರೇ ಗ್ರಾಮಗಳ ಗದ್ದೆಗೆ ತೆರಳಿ, ಅಲ್ಲಿ ಪೂಜೆ ಮಾಡಿದ ಬಳಿಕ ಕದರು ತರುವ ಸಂಪ್ರದಾಯವಿದೆ. ಬರ್ಗಿ ಗ್ರಾಮದಲ್ಲಿ ಇಡೀ ಊರಿನ ಜನರು ಒಟ್ಟು ಸೇರಿ ವಿಶೇಷ ಹೊಸ್ತಿನ ಹಬ್ಬವನ್ನು ಆಚರಿಸಿದ್ದಾರೆ. ನೂರಾರು ವರ್ಷಗಳಿಂದ ಈ ಭಾಗದ ರೈತರು ಈ ಹಬ್ಬವನ್ನು ಆಚರಿಸಿಕೊಂಡು ಬರುತ್ತಿದ್ದು, ಇದನ್ನು ಹರಣ ಮುಹೂರ್ತ, ಹೊಸ ಧಾನ್ಯ ಮುಂತಾದ ಹೆಸರುಗಳಿಂದ ಕರೆಯಲಾಗುತ್ತದೆ. 

ಹಬ್ಬದ ದಿನದಂದು ವಾದ್ಯ ಮೇಳದೊಂದಿಗೆ ಭಕ್ತರು ಹಾಗೂ ಅರ್ಚಕರು ಈ ಹಬ್ಬಕ್ಕಾಗಿಯೇ ಮೀಸಲಾಗಿಡುವ ಗದ್ದೆಗೆ ಹೋಗಿ ವಿಶೇಷ ಪೂಜೆ ಸಲ್ಲಿಸಿ, ಭತ್ತದ ತೆನೆ ಹೊತ್ತು ತರುತ್ತಾರೆ. ಈ ಹಬ್ಬದಂದು ಗ್ರಾಮ ದೇವತೆಗಳಾದ ಯಜಮಾನ, ಘಟಭೀರ ದೇವರ ಕಳಸ ಹೊತ್ತು ನೂರಾರು ಭಕ್ತರು ಮೆರವಣಿಗೆಯಲ್ಲಿ ಸಾಗಿ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ತೆರಳುತ್ತಾರೆ. ಬಳಿಕ ಹೊಸ್ತಿನ ಹಬ್ಬಕ್ಕೆ ಮೀಸಲಾಗಿಡುವ ಗದ್ದೆಗೆ ಆರ್ಚಕರು ಹಾಗೂ ಗ್ರಾಮದ ಜನರು ತೆರಳಿ ಕದಿರು ಕೊಯ್ಯಲಾಗುತ್ತದೆ. 

Latest Videos

undefined

ಮತ್ತೊಮ್ಮೆ ರಿಯಾಯ್ತಿ ದರದ ಬೀಜ ವಿತರಿಸಲು ಪ್ರಸ್ತಾವನೆ ಸಲ್ಲಿಸಿ: ಸಚಿವ ಸಂತೋಷ್ ಲಾಡ್‌

ನಂತರ ಪ್ರತಿಯೊಬ್ಬರು ತಲೆಯ ಮೇಲೆ ಕದಿರು ಹೊತ್ತು ಅವರವರ ಮನೆಗೆ ತೆರಳಿದ್ದು, ಮನೆಯಲ್ಲಿ ಸದಾ ಧಾನ್ಯ ಲಕ್ಷ್ಮಿ ನೆಲೆಸಬೇಕು ಅನ್ನೋ ಪ್ರಾರ್ಥನೆಯೊಂದಿಗೆ ದೇವಸ್ಥಾನದಿಂದ ಮನೆಗೆ ತರಲಾದ ಕದಿರನ್ನು ತಮ್ಮ ತಮ್ಮ ಮನೆಯ ಬಾಗಿಲು, ಕೃಷಿ ಕಾರ್ಯಕ್ಕೆ ಬಳಸುವ ನೇಗಿಲು, ಪಿಕಾಸು, ಕತ್ತಿ, ಕೊಡಲಿ ಮೊದಲಾದ ಕೃಷಿ ಉಪಕರಣಗಳಿಗೆ ಕಟ್ಟಿ ಹಬ್ಬವನ್ನು ಆಚರಿಸಿದ್ದಾರೆ. ಭೂಮಿ ತಾಯಿಗೆ ಗೌರವಿಸುವ ಮತ್ತು ಆಹಾರ ಧಾನ್ಯಗಳಿಗೆ ಮುಖ್ಯವಾಗಿ ಭತ್ತದ ಫಸಲಿಗೆ ಕೃತಜ್ಞತೆ ಸಲ್ಲಿಸುವ ಆಚರಣೆ ಇದಾಗಿದೆ. ಅಲ್ಲದೇ, ಮನೆಯಲ್ಲಿ ಧಾನ್ಯ ಲಕ್ಷ್ಮೀ ನೆಲೆಸಬೇಕು ಎನ್ನುವುದು ಕರಾವಳಿ ಜನರ ಈ ಆಚರಣೆಯ ಉದ್ದೇಶವಾಗಿದೆ.

click me!